ಎಕ್ಸ್‌ಪಲ್ಸ್ 200 ಬೈಕ್ ಬಿಡುಗಡೆಯ ಬಗ್ಗೆ ಸುಳಿವು ನೀಡಿದ ಹೀರೋ ಮೋಟೊಕಾರ್ಪ್..

ವಿಶ್ವದ ಅತಿದೊಡ್ದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಲ್ಲಿ ಒಂದಾದ ಹೀರೋ ಮೋಟೊಕಾರ್ಪ್ ತಮ್ಮ ಎಕ್ಸ್‌ಪಲ್ಸ್ 200 ಬೈಕ್ ಅನ್ನು ಮೊದಲ ಬಾರಿಗೆ ಇಟಾಲಿಯಲ್ಲಿ ನಡೆದ 2017ರ ಇಐಸಿಎಮ್‍ಎ ಮೋಟರ್‍‍ಸೈಕಲ್ ಮೇಳದಲ್ಲಿ ಪ್ರದರ್ಶನಗೊಳಿಸಿದ್ದು, ಭಾರತದಲ್ಲಿ 20

By Rahul Ts

ವಿಶ್ವದ ಅತಿದೊಡ್ದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಲ್ಲಿ ಒಂದಾದ ಹೀರೋ ಮೋಟೊಕಾರ್ಪ್ ತಮ್ಮ ಎಕ್ಸ್‌ಪಲ್ಸ್ 200 ಬೈಕ್ ಅನ್ನು ಮೊದಲ ಬಾರಿಗೆ ಇಟಾಲಿಯಲ್ಲಿ ನಡೆದ 2017ರ ಇಐಸಿಎಮ್‍ಎ ಮೋಟರ್‍‍ಸೈಕಲ್ ಮೇಳದಲ್ಲಿ ಪ್ರದರ್ಶನಗೊಳಿಸಿದ್ದು, ಭಾರತದಲ್ಲಿ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಕಾಣಿಸಿಕೊಂಡಿತ್ತು.

ಎಕ್ಸ್‌ಪಲ್ಸ್ 200 ಬೈಕ್ ಬಿಡುಗಡೆಯ ಬಗ್ಗೆ ಸುಳಿವು ನೀಡಿದ ಹೀರೋ ಮೋಟೊಕಾರ್ಪ್..

ಹೀರೋ ಮೋಟೊಕಾರ್ಪ್ ಸಂಸ್ಥೆಯು ಇದೀಗ ಎಕ್ಸ್‌ಪಲ್ಸ್ 200 ಅಡ್ವೆಂಚರ್ ಬೈಕಿನ ಟೀಸರ್ ಅನ್ನು "ಗೇರ್ ಅಪ್ ಅನದರ್ ಅಡ್ವೆಂಚರ್ ಅವೈಟ್ ಯೂ" ಎಂಬ ಸಾಲುಗಳನ್ನು ಹೇಳುವುದರೊಂದಿಗೆ, ಶೀಘ್ರವೇ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿರುವುರದ ಬಗ್ಗೆ ಸುಳಿವು ನೀಡಿದೆ.

ಎಕ್ಸ್‌ಪಲ್ಸ್ 200 ಬೈಕ್ ಬಿಡುಗಡೆಯ ಬಗ್ಗೆ ಸುಳಿವು ನೀಡಿದ ಹೀರೋ ಮೋಟೊಕಾರ್ಪ್..

ಅಲ್ಲದೆ ಈ ಹಿಂದೆಯೆ ಸಂಸ್ಥೆಯು ತಮ್ಮ ಎಕ್ಸ್‌ಪಲ್ಸ್ 200 ಅಡ್ವೆಂಚರ್ ಬೈಕಿನ ಅಧಿಕೃತ ಚಿತ್ರಗಳು ಬಹಿರಂಗಗೊಳಿಸಿದ್ದು, ಮೋಟರ್‍‍ಸೈಕಲ್ ದೊಡ್ಡ ಮುಂಭಾಗದ ಚಕ್ರದೊಂದಿಗೆ ಎತ್ತರದ ನಿಲುವನ್ನು ಹೊಂದಿದ್ದು ಜೊತೆಗೆ ಕ್ಲಾಸಿಕ್ ರೌಂಡ್ ಎಲ್ಇಡಿ ಡಿಆರ್‍ಎಲ್ ಹೊಂದಿದ ಹೆಡ್‍‍ಲ್ಯಾಂಪ್ ಅನ್ನು ಪಡೆದಿದೆ.

ಎಕ್ಸ್‌ಪಲ್ಸ್ 200 ಬೈಕ್ ಬಿಡುಗಡೆಯ ಬಗ್ಗೆ ಸುಳಿವು ನೀಡಿದ ಹೀರೋ ಮೋಟೊಕಾರ್ಪ್..

ಸದ್ಯ ಮಾರುಕಟ್ಟೆಯಲ್ಲಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಹೊರತುಪಡಿಸಿ ಯಾವುದೇ ಬೈಕ್ ಮಾದಿರಯು ಕಡಿಮೆ ಬೆಲೆಯಲ್ಲಿ ಲಭ್ಯವಿಲ್ಲದ ಹಿನ್ನೆಲೆ ಹೀರೋ ಎಕ್ಸ್‌ಪಲ್ಸ್ 200 ಭಾರೀ ಜನಪ್ರಿಯತೆ ಪಡೆಯಲಿದ್ದು, ಬೈಕಿನ ಬೆಲೆಯನ್ನು 1 ಲಕ್ಷದೊಳಗೆ ನಿರ್ಧರಿಸುವ ಬಗ್ಗೆ ಇರಾದೆಯಲ್ಲಿದೆ.

ಎಕ್ಸ್‌ಪಲ್ಸ್ 200 ಬೈಕ್ ಬಿಡುಗಡೆಯ ಬಗ್ಗೆ ಸುಳಿವು ನೀಡಿದ ಹೀರೋ ಮೋಟೊಕಾರ್ಪ್..

ಇನ್ನು ಹೀರೋ ಎಕ್ಸ್‌ಪಲ್ಸ್ 200 ಬಗ್ಗೆ ಹೇಳುವುದಾದರೇ, ಫುಲ್ ಎಲ್ಇಡಿ ಹೆಡ್ ಲೈಟ್, ಲಗೆಜ್ ರಾಕ್, ಧೀರ್ಘ ಕಾಲದ ಸವಾರಿಗೆ ಅನೂಕಲವಾಗುವಂತಹ ನಾಕಲ್ ಗಾರ್ಡ್ಸ್ ಹೊಂದಿದ್ದು, ವಿಂಡ್ ಶೀಲ್ಡ್ ಅನ್ನು ಬಳಸಲಾಗಿದೆ. ಜೊತೆಗೆ ಎಕ್ಸ್‌ಪಲ್ಸ್ ಸೆಗ್ಮೆಂಟ್ ನಲ್ಲಿ ಮೊದಲ ಬಾರಿಗೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸಿಸ್ಟಮ್ ಪಡೆದ ಮೊದಲ ಬೈಕ್ ಇದಾಗಿದೆ.

ಎಕ್ಸ್‌ಪಲ್ಸ್ 200 ಬೈಕ್ ಬಿಡುಗಡೆಯ ಬಗ್ಗೆ ಸುಳಿವು ನೀಡಿದ ಹೀರೋ ಮೋಟೊಕಾರ್ಪ್..

ಬೈಕಿನಲ್ಲಿ ಹೆಚ್ಚಿನ ಸಾಮರ್ಥ್ಯ ಮತ್ತು ಚುರುಕುತನವನ್ನು ನೀಡುವ ಹೆಚ್ಚಿನ ಟೆನ್ಸೈಲ್ ಡೈಮೆಂಡ್ ಫ್ರೇಮ್ ಅನ್ನು ಆಧರಿಸಿದ್ದು, ಈ ಬೈಕಿನ ಎಂಜಿನ್ ಮತ್ತು ಇಂಧನ ಕಾರ್ಯಕ್ಷಮತೆ ಕಾಪಾಡಲು ಅಲ್ಯುಮಿನಿಯಂ ಸ್ಕಿಡ್ ಪ್ಲೇಟ್ ಅನ್ನು ಕೂಡ ಬಳಸಲಾಗಿದೆ. ಇದು ಆಫ್ ಸ್ವೆಫ್ಟ್ ಎಕ್ಸಾಸ್ಟ್ ವಾಟರ್ ವೇಡಿಂಗ್ ಸಾಮರ್ಥ್ಯವನ್ನು ತಗ್ಗಿಸಲು ಸಹಕಾರಿಯಾಗಲಿದೆ.

ಎಕ್ಸ್‌ಪಲ್ಸ್ 200 ಬೈಕ್ ಬಿಡುಗಡೆಯ ಬಗ್ಗೆ ಸುಳಿವು ನೀಡಿದ ಹೀರೋ ಮೋಟೊಕಾರ್ಪ್..

ಹೊಸ ಬೈಕಿನಲ್ಲಿ 200-ಸಿಸಿ ಏರ್ ಕೂಲ್ಡ್, ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಒದಗಿಸಲಾಗಿದ್ದು, 5-ಸ್ಪೀಡ್ ಗೇರ್ ಬಾಕ್ಸ್ ಸೇರಿಸಲಾಗಿದೆ. ಇದು 18.1-ಬಿಹೆಚ್ ಪಿ ಮತ್ತು 17.2-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಒಟ್ಟಾರೆ ಈ ಬೈಕಿನ ಡಿಸೈನ್ ಸರಳವಾಗಿದ್ದು, ಧೀರ್ಘ ಪ್ರಮಾಣದ ಸಸ್ಪೆಂಷನ್ ಸೆಟಪ್ ಅನ್ನು ಪಡೆದಿದೆ.

ಎಕ್ಸ್‌ಪಲ್ಸ್ 200 ಬೈಕ್ ಬಿಡುಗಡೆಯ ಬಗ್ಗೆ ಸುಳಿವು ನೀಡಿದ ಹೀರೋ ಮೋಟೊಕಾರ್ಪ್..

ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಸಸ್ಪೆಷನ್ ಡ್ಯೂಟಿಗೆ 190-ಎಮ್ಎಮ್ ಪ್ರಮಾಣ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು 180-ಎಂಎಂ ಪ್ರಮಾಣದ ಹತ್ತು ಹಂತದ ಹೊಂದಾಣಿಕೆಯ ಗ್ಯಾಸ್-ಚಾರ್ಜ್ಡ್ ಮೋನೋಶಾಕ್ ಸಸ್ಪೆಷನ್ ಜೋಡಣೆ ಹೊಂದಿದೆ.

ಎಕ್ಸ್‌ಪಲ್ಸ್ 200 ಬೈಕ್ ಬಿಡುಗಡೆಯ ಬಗ್ಗೆ ಸುಳಿವು ನೀಡಿದ ಹೀರೋ ಮೋಟೊಕಾರ್ಪ್..

ಇದಲ್ಲದೇ ಈ ಬೈಕಿನ ಮುಂಭಾಗದಲ್ಲಿ 21 ಇಂಚಿನ ಚಕ್ರಗಳನ್ನು ಒದಗಿಸಲಾಗಿದ್ದು, ಮುಂಭಾಗದ 18 ಇಂಚಿನ ಚಕ್ರಗಳನ್ನು ಹೊಂದಿದೆ. ಜೊತೆಗೆ ಆಪ್ ರೋಡಿಂಗ್‌ಗೆ ಸಹಕಾರಿಯಾಗಲು 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ.

ಎಕ್ಸ್‌ಪಲ್ಸ್ 200 ಬೈಕ್ ಬಿಡುಗಡೆಯ ಬಗ್ಗೆ ಸುಳಿವು ನೀಡಿದ ಹೀರೋ ಮೋಟೊಕಾರ್ಪ್..

ಪ್ರಯಾಣಿಕರ ಸುರಕ್ಷತೆಗಾಗಿ ಈ ಬೈಕಿನ ಎರಡು ಚಕ್ರಗಳಿಗೆ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ಕೇವಲ ಸಿಂಗಲ್ ಚಾನಲ್ ಎಬಿಎಸ್ ಅನ್ನು ಪದೆದುಕೊಂಡಿದೆ. ಇದಲ್ಲದೆ ಬೈಕಿನ ಬೆಲಯನ್ನು ಕಡಿತಗೊಳಿಸಲು ಬೈಕಿನಲ್ಲಿ ಟ್ಯೂಬ್ ಟೈರ್ ಅನ್ನು ಬಳಸಲಾಗಿದ್ದು, ಹೊಸ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಕೂಡಾ ಪಡೆದಿದೆ.

Most Read Articles

Kannada
Read more on hero motocorp
English summary
Hero XPulse 200 Teased Ahead Of Launch.
Story first published: Wednesday, August 1, 2018, 16:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X