Just In
- 7 hrs ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 7 hrs ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 8 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 8 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫಸ್ಟ್ ಲುಕ್ ರಿವ್ಯೂ: ಹೀರೋ ಮೊದಲ ಅಡ್ವೆಂಚರ್ ಬೈಕ್ ಎಕ್ಸ್ ಪಲ್ಸ್
ಜಗತ್ತಿನ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಹೀರೋ ಮೋಟೋಕಾರ್ಪ್ 2018ರ ಆಟೋ ಎಕ್ಸ್ ಪೊ ಮೇಳದಲ್ಲಿ ತನ್ನ ಹೊಸ ಎಕ್ಸ್ ಪಲ್ಸ್ ಬೈಕ್ನ್ನು ಅನಾವರಣಗೊಳಿಸಿದೆ.
ಜಗತ್ತಿನ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಹೀರೋ ಮೋಟೋಕಾರ್ಪ್ 2018ರ ಆಟೋ ಎಕ್ಸ್ ಪೊ ಮೇಳದಲ್ಲಿ ತನ್ನ ಹೊಸ ಎಕ್ಸ್ ಪಲ್ಸ್ ಬೈಕ್ನ್ನು ಅನಾವರಣಗೊಳಿಸಿದ್ದು, ಇದು ಭಾರತದ ಮೊದಲ 200ಸಿಸಿ ಡ್ಯುಯಲ್ ಟಾರ್ಗೆಟ್ಡ್ ಮೋಟರ್ ಸೈಕಲ್ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.
ಅಡ್ವೆಂಚರ್ ಪ್ರಿಯರಿಗಾಗಿಯೇ ಈ ಬೈಕ್ ಅನ್ನು ನಿರ್ಮಾಣ ಮಾಡಲಾಗಿದ್ದು, ಭವಿಷ್ಯದಲ್ಲಿ ಉತ್ತಮ ಬೇಡಿಕೆ ಹೊಂದಲಿರುವ ಈ ಬೈಕಿನ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳನ್ನು ನಡೆಯುತ್ತಿವೆ. ಹೀಗಾಗಿ ಡ್ರೈವ್ ಸ್ಪಾರ್ಕ್ ತಂಡ ಕೂಡಾ ಎಕ್ಸ್ಪಲ್ಸ್ ಬಗೆಗೆ ಗ್ರೌಂಡ್ ರೀಪೋರ್ಟ್ ಸಿದ್ದಪಡಿಸಿದೆ.
ಎಕ್ಸ್ಪಲ್ಸ್ ಡಿಸೈನ್
ಹೀರೋ ಎಕ್ಸ್ಪಲ್ಸ್ ಬೈಕಿನ ಒಟ್ಟಾರೆ ವಿನ್ಯಾಸವು ಒಂದು ವಿಶಿಷ್ಟವಾದ ಸಾಹಸ ಬೈಕಾಗಿದ್ದು, ಎತ್ತರದ ನಿಲುವು ಮತ್ತು ಕನಿಷ್ಠ ದೇಹದ ಪ್ಯಾನೆಲ್ಗಳನ್ನು ಹೊಂದಿದೆ.
ಹೀರೋ ಎಕ್ಸ್ ಪಲ್ಸ್ ಫುಲ್ ಎಲ್ಇಡಿ ಹೆಡ್ ಲೈಟ್, ಲಗೆಜ್ ರಾಕ್, ಧೀರ್ಘ ಕಾಲದ ಸವಾರಿಗೆ ಅನೂಕಲವಾಗುವಂತಹ ನಾಕಲ್ ಗಾರ್ಡ್ಸ್ ಹೊಂದಿದ್ದು, ವಿಂಡ್ ಶೀಲ್ಡ್ ಅನ್ನು ಬಳಸಲಾಗಿದೆ. ಜೊತೆಗೆ ಎಕ್ಸ್ಪಲ್ಸ್ ಸೆಗ್ಮೆಂಟ್ ನಲ್ಲಿ ಮೊದಲ ಬಾರಿಗೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸಿಸ್ಟಮ್ ಪಡೆದ ಮೊದಲ ಬೈಕ್ ಇದಾಗಿದೆ.
ಇನ್ನು ಈ ಬೈಕ್ ಸರಳವಾದ ಫ್ಯುಯಲ್ ಟ್ಯಾಂಕ್ ಹೊಂದಿದ್ದು, ಹೆಚ್ಚು ದೇಹ ಫಲಕಗಳು (body pannels) ಇಲ್ಲ, ಮತ್ತು ಕಲ್ಸ್ಟರ್ ಫ್ರೀ ಆಗಿದೆ. ಸಿಂಗಲ್-ಪೀಸ್ ಸೀಟ್ ಕಡಿಮೆ ಸವಾರಿ ಎತ್ತರಕ್ಕೆ ಕೆತ್ತಲ್ಪಟ್ಟಿದೆ ಮತ್ತು ಮುಂಭಾಗದ ಫೂಟ್ ಪೆಗ್ಸ್ ಸಾಹಸಮಯ ಮೋಟಾರ್ ಸೈಕಲ್ ಗೆ ಉತ್ತಮವಾದ ಭಂಗಿಗಳನ್ನು ಸವಾರಿ ಮಾಡುವ ಪ್ರಯಾಣಿಕರನ್ನು ನೀಡುತ್ತದೆ.
ಹೀಗಾಗಿ ಎಂಡ್ಯೂರೋ ಶೈಲಿಯ ಪಾದದ ತುದಿಗಳು ಹೀರೋ ಎಕ್ಸ್ಪಲ್ಸ್ ಹೊಸ ನೋಟ ಸೇರಿಸಲಾಗಿದ್ದು, ಎಲ್ಇಡಿ ಟೈಲ್ ಲೈಟ್ ಅನ್ನು ಹೊಂದಿದ್ದು, ದೊಡ್ಡದಾದ ಪ್ಲ್ಯಾಸ್ಟಿಕ್ ಹಿಂಭಾಗದ ಮುಡ್ಗಾರ್ಡ್ ಮತ್ತು ಸಾಹಸ ಶೈಲಿಯನ್ನು ಪಡೆದಿದೆ.
ಅಪ್ಪಳಿಸಿದ ನಿಷ್ಕಾಸವು ಮೋಟಾರ್ ಸೈಕಲ್ ನೋಟವನ್ನು ಹೆಚ್ಚಿಸುತ್ತದೆ ಮತ್ತು ಆಕರ್ಷಕ ವಾಟರ್ ಎಕ್ಸಾಸ್ಟ್ ಸಾಮರ್ಥ್ಯವನ್ನು ಸಹ ಹೊಂದಿದೆ. XPulse ಬೈಕ್ ಹಿಂಭಾಗದ ಲಗೇಜ್ ರ್ಯಾಕ್ ಅನ್ನು ಪಡೆಯುತ್ತದೆ. ಆಫ್-ರೋಡಿಂಗ್ನಲ್ಲಿ ಇಂಜಿನ್ ಅನ್ನು ರಕ್ಷಿಸಲು ಹೊಸ ಸಾಧನಗಳನ್ನು ನೀಡಲಾಗಿದೆ.
ಎಂಜಿನ್ ಸಾಮರ್ಥ್ಯ
ಹೊಸ ಬೈಕಿನಲ್ಲಿ 200-ಸಿಸಿ ಏರ್ ಕೂಲ್ಡ್, ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಒದಗಿಸಲಾಗಿದ್ದು, 5-ಸ್ಪೀಡ್ ಗೇರ್ ಬಾಕ್ಸ್ ಸೇರಿಸಲಾಗಿದೆ. ಇದು 18.1-ಬಿಹೆಚ್ ಪಿ ಮತ್ತು 17.2-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದೇ ಎಂಜಿನನ್ನು ಇತ್ತೀಚಿಗೆ ಅನಾವರಣಗೊಂಡ ಎಕ್ಸ್ಟ್ರೀಮ್ 200ಆರ್ ಬೈಕಿನಲ್ಲು ಸಹ ಬಳಸಲಾಗಿತ್ತು.
ಹೀರೋ ಎಕ್ಸ್ ಪಲ್ಸ್ ಬೈಕಿನ ಸಸ್ಪೆಷನ್ ಡ್ಯೂಟಿಗೆ 190-ಎಮ್ಎಮ್ ಪ್ರಮಾಣ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು 170-ಎಂಎಂ ಪ್ರಮಾಣದ ಹತ್ತು ಹಂತದ ಹೊಂದಾಣಿಕೆಯ ಗ್ಯಾಸ್-ಚಾರ್ಜ್ಡ್ ಮೋನೋಶಾಕ್ ಸಸ್ಪೆಷನ್ ಜೋಡಣೆ ಹೊಂದಿದೆ.
ಜೊತೆಗೆ 21 ಇಂಚಿನ ಫ್ರಂಟ್ ವೀಲ್ ಮತ್ತು 18 ಇಂಚನ ಬ್ಯಾಕ್ ವೀಲ್ ನೊಂದಿಗೆ 220ಎಂಎಂ ಗ್ರೌಂದ್ ಕ್ಲಿಯರೆನ್ಸ್ ಹಾಗೆಯೆ ಎರಡು ಬದಿಯಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಬಳಸಲಾಗಿದೆ.
ಹೀರೊ ಎಕ್ಸ್ ಪಲ್ಸ್ ಮೋಟಾರ್ ಸೈಕಲ್ನ್ನು 2018 ಕೊನೆಯಲ್ಲಿ ಅಥವಾ 2019ರ ಆರಂಭದಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದ್ದು, ಬೈಕಿನ ಬೆಲೆಯನ್ನು 1.20 ಲಕ್ಷದಿಂದ 1.30 ಲಕ್ಷದ ವರೆಗೆ ನಿಗದಿ ಮಾಡಲಿದ್ದಾರೆ.
ಇನ್ನು ಎಕ್ಸ್ ಪಲ್ಸ್ ಬೈಕ್ ಮಾದರಿಗಳು ಥ್ರಿಲ್ಲಿಂಗ್ ರೈಡಿಂಗ್ ಅನುಭವಕ್ಕೆ ಹೇಳಿ ಮಾಡಿಸಿದ ಬೈಕ್ ಇದಾಗಿದ್ದು, ದುಬಾರಿಯ ಬೆಲೆಯ ರಾಯಲ್ ಎನ್ಫೀಲ್ಡ್ ಹಿಮಾಲಯನ್ ಆವೃತ್ತಿಗಳಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.