ಹೊಸ ಸ್ಕೂಟರ್‌ಗಳಲ್ಲಿ ತಾಂತ್ರಿಕ ದೋಷ- ಗ್ರಾಜಿಯಾ, ಆಕ್ಟಿವಾ 125 ಹಿಂಪಡೆದ ಹೋಂಡಾ

ಹೋಂಡಾ ಸಂಸ್ಥೆಯು ತನ್ನ ಬಹುಬೇಡಿಕೆಯ ಆಕ್ಟಿವಾ 125, ಗ್ರಾಜಿಯಾ ಮತ್ತು ಎವಿಯೆಟರ್ ಸ್ಕೂಟರ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಸುಮಾರು 56,194 ಸ್ಕೂಟರ್‌ಗಳನ್ನು ಹಿಂಪಡೆದಿದೆ.

By Praveen Sannamani

ಕಮ್ಯುಟರ್ ಸ್ಕೂಟರ್‌ಗಳು ಮತ್ತು ಬೈಕ್‌ಗಳ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸಿರುವ ಹೋಂಡಾ ಸಂಸ್ಥೆಯು ತನ್ನ ಬಹುಬೇಡಿಕೆಯ ಆಕ್ಟಿವಾ 125, ಗ್ರಾಜಿಯಾ ಮತ್ತು ಎವಿಯೆಟರ್ ಸ್ಕೂಟರ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಸುಮಾರು 56,194 ಸ್ಕೂಟರ್‌ಗಳನ್ನು ಹಿಂಪಡೆದಿದೆ.

ಹೊಸ ಸ್ಕೂಟರ್‌ಗಳಲ್ಲಿ ತಾಂತ್ರಿಕ ದೋಷ- ಗ್ರಾಜಿಯಾ, ಆಕ್ಟಿವಾ 125 ಹಿಂಪಡೆದ ಹೋಂಡಾ

ಹೊಸದಾಗಿ ಬಿಡುಗಡೆಯಾಗಿರುವ ಆಕ್ಟಿವಾ 125, ಗ್ರಾಜಿಯಾ ಮತ್ತು ಎವಿಯೆಟರ್ ಸ್ಕೂಟರ್‌ಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಈ ಹಿನ್ನೆಲೆ ತಾಂತ್ರಿಕ ದೋಷ ಸರಿಪಡಿಸುವ ಸಂಬಂಧ ಮಾರಾಟವಾಗಿರುವ 56,194 ಸ್ಕೂಟರ್‌ಗಳನ್ನು ಹಿಂಪಡೆದಿದೆ.

ಹೊಸ ಸ್ಕೂಟರ್‌ಗಳಲ್ಲಿ ತಾಂತ್ರಿಕ ದೋಷ- ಗ್ರಾಜಿಯಾ, ಆಕ್ಟಿವಾ 125 ಹಿಂಪಡೆದ ಹೋಂಡಾ

ಆಕ್ಟಿವಾ 125, ಗ್ರಾಜಿಯಾ ಮತ್ತು ಎವಿಯೆಟರ್ ಸ್ಕೂಟರ್‌ಗಳ ಫ್ರಂಟ್ ಫೋರ್ಕ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಗ್ರಾಹಕರ ದೂರಿನ್ವಯ ಹೋಂಡಾ ಸಂಸ್ಥೆಯು ಸಮಸ್ಯೆ ಬಗೆಹರಿಸಲು ಮುಂದಾಗಿದೆ.

ಹೊಸ ಸ್ಕೂಟರ್‌ಗಳಲ್ಲಿ ತಾಂತ್ರಿಕ ದೋಷ- ಗ್ರಾಜಿಯಾ, ಆಕ್ಟಿವಾ 125 ಹಿಂಪಡೆದ ಹೋಂಡಾ

ಇನ್ನು ಆಕ್ಟಿವಾ 125, ಗ್ರಾಜಿಯಾ ಮತ್ತು ಎವಿಯೆಟರ್ ಸ್ಕೂಟರ್‌ಗಳ ಆವೃತ್ತಿಯಲ್ಲಿ ಮಾತ್ರವೇ ಫ್ರಂಟ್ ಫೋರ್ಕ್ ದೋಷ ಕಂಡುಬಂದಿದ್ದು, ಇನ್ನುಳಿದ ಸ್ಕೂಟರ್ ಮಾದರಿಗಳಲ್ಲಿ ಯಾವುದೇ ರೀತಿಯ ದೋಷವಿಲ್ಲ ಎನ್ನಲಾಗಿದೆ.

ಹೊಸ ಸ್ಕೂಟರ್‌ಗಳಲ್ಲಿ ತಾಂತ್ರಿಕ ದೋಷ- ಗ್ರಾಜಿಯಾ, ಆಕ್ಟಿವಾ 125 ಹಿಂಪಡೆದ ಹೋಂಡಾ

ಫ್ರಂಟ್ ಫೋರ್ಕ್ ದೋಷದಿಂದಾಗಿ ಸ್ಕೂಟರ್ ಚಾಲನೆಯು ಕಷ್ಟಕರವಾಗುತ್ತಿದ್ದು, ಈ ಬಗ್ಗೆ ಸಾಕಷ್ಟು ಗ್ರಾಹಕರು ಹೋಂಡಾ ಸಂಸ್ಥೆಗೆ ದೂರು ನೀಡಿದ್ದರು. ಇದಕ್ಕೆ ಸ್ಪಂದಿಸಿರುವ ಹೋಂಡಾ, ಕೂಡಲೇ ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದೆ.

ಹೊಸ ಸ್ಕೂಟರ್‌ಗಳಲ್ಲಿ ತಾಂತ್ರಿಕ ದೋಷ- ಗ್ರಾಜಿಯಾ, ಆಕ್ಟಿವಾ 125 ಹಿಂಪಡೆದ ಹೋಂಡಾ

ಹೀಗಾಗಿ ಸುಖಕರ ಚಾಲನೆಗೆ ಅಡ್ಡಿಯಾಗುತ್ತಿರುವ ಫ್ರಂಟ್ ಫೋರ್ಕ್ ಕಿಟ್ ಅನ್ನು ಸಂಪೂರ್ಣ ಬದಲಾವಣೆ ಮಾಡಲಿದ್ದು, ಇದಕ್ಕಾಗಿ ಆಕ್ಟಿವಾ 125, ಗ್ರಾಜಿಯಾ ಮತ್ತು ಎವಿಯೆಟರ್ ಗ್ರಾಹಕರು ಯಾವುದೇ ಶುಲ್ಕ ಪಾವತಿಸಬೇಕಿಲ್ಲ.

ಹೊಸ ಸ್ಕೂಟರ್‌ಗಳಲ್ಲಿ ತಾಂತ್ರಿಕ ದೋಷ- ಗ್ರಾಜಿಯಾ, ಆಕ್ಟಿವಾ 125 ಹಿಂಪಡೆದ ಹೋಂಡಾ

ಜೊತೆಗೆ ತಾಂತ್ರಿಕ ದೋಷಗಳನ್ನು ಹೊಂದಿರುವ ಸ್ಕೂಟರ್‌ ಮಾಲೀಕರನ್ನು ಹೋಂಡಾ ಸಂಸ್ಥೆಯೇ ಸಂಪರ್ಕಿಸಲಿದ್ದು, ಹೊಸ ಫ್ರಂಟ್ ಫೋರ್ಕ್ ಜೋಡಣೆಗಾಗಿ ಸದ್ಯದಲ್ಲೇ ದಿನಾಂಕ ನಿಗದಿ ಮಾಡಲಿದೆ. ಹೀಗಾಗಿ ಹೊಸದಾಗಿ ಆಕ್ಟಿವಾ 125, ಗ್ರಾಜಿಯಾ ಮತ್ತು ಎವಿಯೆಟರ್ ಖರೀದಿಸಿರುವ ಗ್ರಾಹಕರು ಸ್ಕೂಟರ್ ಚಾಲನೆ ವೇಳೆ ಎಚ್ಚರಿಕೆ ವಹಿಸುವುದು ಒಳಿತು.

ಹೊಸ ಸ್ಕೂಟರ್‌ಗಳಲ್ಲಿ ತಾಂತ್ರಿಕ ದೋಷ- ಗ್ರಾಜಿಯಾ, ಆಕ್ಟಿವಾ 125 ಹಿಂಪಡೆದ ಹೋಂಡಾ

ಉತ್ಪಾದನಾ ಸಂದರ್ಭದಲ್ಲಿ ತಾಂತ್ರಿಕ ದೋಷಗಳು ಕಂಡುಬರುವುದು ಸಾಮಾನ್ಯ ವಿಚಾರವಾಗಿದ್ದು, ಒಂದು ವೇಳೆ ನೀವು ಕೂಡಾ ಆಕ್ಟಿವಾ 125, ಗ್ರಾಜಿಯಾ ಮತ್ತು ಎವಿಯೆಟರ್ ಖರೀದಿ ಮಾಡಿದ್ದಲ್ಲಿ ಈ ಕೂಡಲೇ ನಿಮ್ಮ ಹತ್ತಿರದ ಶೋರಂಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಮಂಗಳೂರಿಗೆ ಬಂದ ಭಾರತದ ಮೊದಲ ಕವಾಸಕಿ ಜೆಡ್900ಆರ್‍ಎಸ್ ಬೈಕ್..

ವಾಹನ ಸವಾರರ ಜೀವಕ್ಕೆ ಕುತ್ತು ತರುತಂತೆ ಟೈರ್ ಕಿಲ್ಲರ್ ಹಂಪ್?

ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

ಉಡುಪಿಯಲ್ಲಿ ಭೀಕರ ಅಪಘಾತ- ಇನೋವಾ ಗುದ್ದಿದ ರಭಸಕ್ಕೆ ಗಾಳಿಯಲ್ಲಿ ತೂರಿ ಹೋದ ಪಲ್ಸರ್ ಬೈಕ್...

ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Most Read Articles

Kannada
Read more on honda scooter
English summary
Honda Activa 125, Grazia And Aviator Recalled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X