ಆಟೋ ಎಕ್ಸ್‌ಪೋ 2018: ಪ್ರದರ್ಶನಗೊಂಡ ಹೊಂಡಾ ಸಿಬಿಆರ್1000 ಆರ್‌ಆರ್ ಫೈರ್ ಬ್ಲೇಡ್ ಎಸ್‌ಪಿ

ಜಪಾನ್ ಮೂಲದ ಹೊಂಡಾ ಸಂಸ್ಥೆಯು ತನ್ನ ಹೊಸ ಸಿಬಿಅರ್1000 ಆರ್‌ಆರ್ ಫೈರ್ ಬ್ಲೇಡ್ ಎಸ್‌ಪಿ ಸೂಪರ್ ಬೈಕ್‌ನ್ನು 2018 ಆಟೋ ಎಕ್ಸ್‌ಪೋನಲ್ಲಿ ಪ್ರದರ್ಶಿಸಲಾಗಿದೆ.

By Rahul

ಜಪಾನ್ ಮೂಲದ ಹೊಂಡಾ ಸಂಸ್ಥೆಯು ತನ್ನ ಹೊಸ ಸಿಬಿಅರ್1000 ಆರ್‌ಆರ್ ಫೈರ್ ಬ್ಲೇಡ್ ಎಸ್‌ಪಿ ಸೂಪರ್ ಬೈಕ್‌ನ್ನು 2018 ಆಟೋ ಎಕ್ಸ್‌ಪೋನಲ್ಲಿ ಪ್ರದರ್ಶಿಸಲಾಗಿದ್ದು, ಇದರ ಜೊತೆಗೆ ಇನ್ನು 11 ವಿವಿಧ ಮಾದರಿಯ ಸ್ಕೂಟರ್ ಮತ್ತು ಬೈಕ್‌ ಪರಿಕಲ್ಪನೆಯನ್ನು ಕೂಡಾ ಅನಾವರಣಗೊಳಿಸಲಾಗಿದೆ.

ಆಟೋ ಎಕ್ಸ್‌ಪೋ 2018: ಪ್ರದರ್ಶನಗೊಂಡ ಹೊಂಡಾ ಸಿಬಿಆರ್1000 ಆರ್‌ಆರ್ ಫೈರ್ ಬ್ಲೇಡ್ ಎಸ್‌ಪಿ

ಸಿಬಿಅರ್1000 ಆರ್‌ಆರ್ ಫೈರ್ ಬ್ಲೇಡ್ ಎಸ್‌ಪಿಯು ಹೊಂಡಾ ಸಂಸ್ಥೆಯ ಮೊದಲ ಸೆಮಿ-ಆಕ್ಟಿವ್(S-EC) ಸಸ್ಪೆಷನ್ ಬೈಕ್ ಆಗಿದ್ದು, ಲಿಥಿಯಂ ಐಯಾನ್ ಬ್ಯಾಟರಿ, ಕ್ವಿಕ್ ಶಿಫ್ಟರ್ ನೊಂದಿದೆ ಕ್ಲಚ್ ಮತ್ತು ಬಿರೆಂಬೊ ಫ್ರಂಟ್ ಕಾಲಿಪರ್ಸ್ ಹೊಂದಿದೆ.

ಆಟೋ ಎಕ್ಸ್‌ಪೋ 2018: ಪ್ರದರ್ಶನಗೊಂಡ ಹೊಂಡಾ ಸಿಬಿಆರ್1000 ಆರ್‌ಆರ್ ಫೈರ್ ಬ್ಲೇಡ್ ಎಸ್‌ಪಿ

ಸಿಆರ್‌ಬಿ1000ಆರ್‌ಆರ್ ಫೈರ್ ಬ್ಲೇಡ್ ಎಸ್ ಪಿ ನೋಡಲು ಸಣ್ಣ ಗಾತ್ರ, ಕಮ್ಮಿ ತೂಕ ಹೊಂದಿರುವ ಬೈಕ್ ಮಾದರಿಯಾಗಿದ್ದು, ಈ ಬೈಕ್ ಹಿಂದಿನ ಆವೃತ್ತಿಗಿಂತ 11ಬಿಹೆಚ್ ಪಿಯಷ್ಟು ಹೆಚ್ಚು ಪವರ್, ತೂಕದಲ್ಲಿ 2 ಕಿಲೋಗ್ರಾಂಗಷ್ಟು ಕಡಿಮೆ ತೂಕ ಹೊಂದಿದೆ.

ಆಟೋ ಎಕ್ಸ್‌ಪೋ 2018: ಪ್ರದರ್ಶನಗೊಂಡ ಹೊಂಡಾ ಸಿಬಿಆರ್1000 ಆರ್‌ಆರ್ ಫೈರ್ ಬ್ಲೇಡ್ ಎಸ್‌ಪಿ

ಎಂಜಿನ್ ಸಾಮರ್ಥ್ಯ

999 ಸಿಸಿ ಇನ್ ಲೈನ್ 4, ಲಿಕ್ವಿಡ್ ಕೂಲ್ಡ್ ಎಂಜಿನ್ ಎಂಜಿನ್ ಹೊಂದಿರುವ ಹೊಸ ಬೈಕ್ 189 ಬಿಹೆಚ್ ಪಿ ಮತ್ತು 114 ಟಾರ್ಕ್‌ನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2018: ಪ್ರದರ್ಶನಗೊಂಡ ಹೊಂಡಾ ಸಿಬಿಆರ್1000 ಆರ್‌ಆರ್ ಫೈರ್ ಬ್ಲೇಡ್ ಎಸ್‌ಪಿ

CBR1000RR ಫೈರ್ ಬ್ಲೇಡ್SP ಸೆಮಿ ಆಕ್ಟಿವ್ ಒಹ್ಲಿನ್ಸ್ ಸ್ಟೆಪ್ ಮೋಟರ್ ಟೈಪ್, ಎಲೆಕ್ಟ್ರಾನಿಕ್ ಕಂಟ್ರೋಲ್ ಸಸ್ಪೆಷನ್, ಹೊಂಡಾ ಟಾರ್ಕ್ ಕಂಟ್ರೋಲರ್, ಎಂಜಿನ್ ಬ್ರೇಕ್, ಹೊಸ ಎಬಿಎಸ್, ರೈಡಿಂಗ್ ಮೋಡ್ ಸೆಲೆಕ್ಟ್ ಸಿಸ್ಟಂ ಮತ್ತು ಪವರ್ ಸೆಲೆಕ್ಟರ್ ಆಯ್ಕೆಗಳನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2018: ಪ್ರದರ್ಶನಗೊಂಡ ಹೊಂಡಾ ಸಿಬಿಆರ್1000 ಆರ್‌ಆರ್ ಫೈರ್ ಬ್ಲೇಡ್ ಎಸ್‌ಪಿ

CBR1000RR ಫೈರ್ ಬ್ಲೇಡ್ SP ಹೊಸ ರೈಡಿಂಗ್ ಅನುಭೂತಿಗಾಗಿ 5 ರೈಡಿಂಗ್ ಮೋಡ್ ಗಳನ್ನು ಹೊಂದಿರಲಿದ್ದು, ಮೊದಲನೆಯ ರೈಡಿಂಗ್ ಮೋಡ್ ನಯವಾದ ಮತ್ತು ಲೀನಿಯರ್ ಥ್ರೋಟಲ್ ರೆಸ್ಪಾನ್ಸ್, ಎರಡನೇ ಮೋಡ್‌ನಲ್ಲಿ ಮಧ್ಯಮ ಹೆಚ್ಎಸ್ ಟಿಸಿ ಸಸ್ಪೆಷನ್ ಹೊಂದಿದೆ.

ಆಟೋ ಎಕ್ಸ್‌ಪೋ 2018: ಪ್ರದರ್ಶನಗೊಂಡ ಹೊಂಡಾ ಸಿಬಿಆರ್1000 ಆರ್‌ಆರ್ ಫೈರ್ ಬ್ಲೇಡ್ ಎಸ್‌ಪಿ

ಈ ಮೂಲಕ ಎಂಜಿನ್ ಬ್ರೇಕ್ ಮತ್ತು ಡ್ಯಾಂಪಿಂಗ್ ಶಕ್ತಿ ಹೊಂದಾಣಿಕೆಗಳನ್ನು ಮೊದಲ ಮೂರು ಗೇರ್ ಮೂಲಕ ವಿದ್ಯುತ್ ಉತ್ಪಾದನೆ ನಿಯಂತ್ರಿಸುವುದಲ್ಲದೇ ಸೂಪರ್ ಬೈಕ್ ಪ್ರಿಯರಿಗೆ ಹೊಸ ರೈಡಿಂಗ್ ಅನುಭವ ಒದಗಿಸಲಿದೆ.

ಆಟೋ ಎಕ್ಸ್‌ಪೋ 2018: ಪ್ರದರ್ಶನಗೊಂಡ ಹೊಂಡಾ ಸಿಬಿಆರ್1000 ಆರ್‌ಆರ್ ಫೈರ್ ಬ್ಲೇಡ್ ಎಸ್‌ಪಿ

ಮೂರನೇ ಮೋಡ್ ನಾಲ್ಕನೇ ಮೋಡ್ ಗೆ ಟಾಪ್ ಗೇರ್ ಔಟ್ ಪುಟ್ ಗಳನ್ನು ವಿಶ್ಲೇಷಿಸುವುದಲ್ಲದೇ HSTC ಎನ್ ಪುಟ್ ಉತ್ತಮ ಟ್ರಾಕ್ಷನ್ ಮತ್ತು ಸ್ಟೆಬಿಲಿಟಿನೊಂದಿಗೆ ಎಂಜಿನ್ ಬ್ರೇಕಿಂಗ್ ಅನ್ನು ಉತ್ತಮಗೊಳಿಸುತ್ತದೆ. ಇನ್ನು ಕೊನೆಯ ಎರಡು ಮೋಡ್ ಗಳು ಯೂಸರ್ ಮೋಡ್ ಗಳಾಗಿದ್ದು, ಮೊದಲ ಮೂರು ಮೋಡ್‌ಗಳು ಚಾಲಕನಿಂದ, ಚಾಲಕನ ಸ್ಟೈಲ್, ತೂಕ ಟ್ರಾಕ್ ಲೇಔಟ್ ಮತ್ತು ಕಂಡಿಷನ್ ಗಳನ್ನು ನಿಯಂತ್ರಿಬಲ್ಲದು.

ಆಟೋ ಎಕ್ಸ್‌ಪೋ 2018: ಪ್ರದರ್ಶನಗೊಂಡ ಹೊಂಡಾ ಸಿಬಿಆರ್1000 ಆರ್‌ಆರ್ ಫೈರ್ ಬ್ಲೇಡ್ ಎಸ್‌ಪಿ

ಹೀಗಾಗಿ ಹೊಸ CBR1000RR ಫೈರ್ ಬ್ಲೇಡ್ SP ಪರ್ಫಾಮೆನ್ಸ್ ಬೈಕ್ ಆಗಿದ್ದು, ಹೊಂಡಾ ಸಂಸ್ಥೆಯು ಈ ಬೈಕನ್ನು ಭಾರತಕ್ಕೆ ಯಾವಾಗ ಬಿಡುಗಡೆ ಮಾಡಲಿದೆ ಎಂಬ ಯಾವುದೇ ಮಾಹಿತಿಗಳನ್ನು ಬಹಿರಂಗಗೊಳಿಸಿಲ್ಲ.

Most Read Articles

Kannada
Read more on auto expo 2018 honda
English summary
Honda CBR1000RR Fireblade SP Showcased; Specs, Features, Images & More.
Story first published: Wednesday, February 14, 2018, 18:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X