ಹೋಂಡಾ ಗೋಲ್ಡ್ ವಿಂಗ್ ಐಷಾರಾಮಿ ಬೈಕ್‌ಗಳ ವಿತರಣೆಗೆ ಗ್ರೀನ್ ಸಿಗ್ನಲ್

ಹೋಂಡಾ ಗೋಲ್ಡ್ ವಿಂಗ್ ಐಷಾರಾಮಿ ಬೈಕ್‌ಗಳ ವಿತರಣೆಗೆ ಸಿಕ್ತು ಗ್ರೀನ್ ಸಿಗ್ನಲ್.

By Praveen Sannamani

ಜನಪ್ರಿಯ ಹೋಂಡಾ ಸಂಸ್ಥೆಯ ಐಷಾರಾಮಿ ಬೈಕ್ ಮಾದರಿಯಾದ ಗೋಲ್ಡ್ ವಿಂಗ್ ಸದ್ಯ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿದ್ದು, ಹತ್ತು ಹಲವು ವಿಶೇಷತೆಗಳಿಂದಾಗಿ ಭಾರೀ ಪ್ರಮಾಣದ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಜೊತೆಗೆ ಹೊಸ ಬೈಕ್‌ಗಳಲ್ಲಿ ವಿಶ್ವಾದ್ಯಂತ ಸಾವಿರಾರು ಗ್ರಾಹಕರು ಹೊಸ ಬೈಕಿಗಾಗಿ ಬುಕ್ ಮಾಡಿದ್ದು, ಇದೀಗ ಬುಕ್ ಮಾಡಿದ್ದ ಗ್ರಾಹಕರಿಗೆ ಹೊಸ ಬೈಕ್ ವಿತರಣೆಗೆ ಚಾಲನೆ ನೀಡಲಾಗಿದೆ.

ಹೋಂಡಾ ಗೋಲ್ಡ್ ವಿಂಗ್ ಐಷಾರಾಮಿ ಬೈಕ್‌ಗಳ ವಿತರಣೆಗೆ ಗ್ರೀನ್ ಸಿಗ್ನಲ್

ಕಳೆದ ನವೆಂಬರ್‌ನಲ್ಲಿ 2018ರ ಗೋಲ್ಡ್ ವಿಂಗ್ ಮಾದರಿಯನ್ನು ಅನಾವರಣ ಮಾಡಿದ್ದ ಹೋಂಡಾ ಸಂಸ್ಥೆಯು ಕಳೆದ ಕೆಲ ದಿನಗಳ ಹಿಂದಷ್ಟೇ ಹೊಸ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿತ್ತು. ಭಾರತದಲ್ಲೂ 150ಕ್ಕೂ ಹೆಚ್ಚು ಗ್ರಾಹಕರು ಈಗಾಗಲೇ ಹೊಸ ಬೈಕ್ ಖರೀದಿಸಲು ತುದಿಗಾಲಿನ ಮೇಲೆ ನಿಂತಿದ್ದು, ನಿನ್ನೆಯಷ್ಟೇ ರಾಜಸ್ತಾನದ ಜೈಪುರ್‌ಗೆ ಮೊದಲ ಮೊದಲ ಬೈಕ್ ವಿತರಣೆ ಮಾಡಲಾಗಿದೆ.

ಹೋಂಡಾ ಗೋಲ್ಡ್ ವಿಂಗ್ ಐಷಾರಾಮಿ ಬೈಕ್‌ಗಳ ವಿತರಣೆಗೆ ಗ್ರೀನ್ ಸಿಗ್ನಲ್

ಇದರೊಂದಿಗೆ ಬೆಂಗಳೂರು ಮೂಲದ ಗ್ರಾಹಕರೊಬ್ಬರು ಕೂಡಾ 2018ರ ಗೋಲ್ಡ್ ವಿಂಗ್ ಬೈಕ್ ಖರೀದಿಗಾಗಿ ಬುಕ್ ಮಾಡಿದ್ದು, ಅದು ಕೂಡಾ ನಿನ್ನೆಯಷ್ಟೇ ಹೋಂಡಾ ಶೋರಂ ಒಂದರಲ್ಲಿ ಕಾಣಿಸಿಕೊಂಡಿದೆ. ಒಟ್ಟಿನಲ್ಲಿ ಐಷಾರಾಮಿ ಬೈಕಿಗಾಗಿ ಕಾಯ್ದು ಕುಳಿತಿರುವ ಗ್ರಾಹಕರಿಗೆ ಹೋಂಡಾ ಸಂಸ್ಥೆಯು ನಿಗದಿ ಪಡಿಸಿದ ಅವಧಿಗೂ ಮುನ್ನವೇ ವಿತರಣೆ ಮಾಡುತ್ತಿರುವುದು ಖುಷಿಯ ವಿಚಾರ.

ಹೋಂಡಾ ಗೋಲ್ಡ್ ವಿಂಗ್ ಐಷಾರಾಮಿ ಬೈಕ್‌ಗಳ ವಿತರಣೆಗೆ ಗ್ರೀನ್ ಸಿಗ್ನಲ್

ಹೋಂಡಾ ಡೀಲರ್ಸ್‌ನಲ್ಲಿ ಕಂಡ ಹೋಂಡಾ ಗೋಲ್ಡ್ ವಿಂಗ್ ಬೈಕ್ ಕ್ಯಾಂಡಿ ಆರ್ಡೆಂಟ್ ರೆಡ್ ಬಣ್ಣವನ್ನು ಹೊಂದಿದ್ದು, ಹಲವು ವಿಶೇಷ ತಾಂತ್ರಿಕ ಅಂಶಗಳನ್ನು ಹೊಂದಿರುವ ಈ ಬೈಕಿನ ಬೆಲೆಯನ್ನ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 26.85 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ಹೋಂಡಾ ಗೋಲ್ಡ್ ವಿಂಗ್ ಐಷಾರಾಮಿ ಬೈಕ್‌ಗಳ ವಿತರಣೆಗೆ ಗ್ರೀನ್ ಸಿಗ್ನಲ್

ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಲಭ್ಯವಿರುವ ಹೋಂಡಾ ಗೋಲ್ಡ್ ವಿಂಗ್ ಬೈಕ್‌ಗಳು ಸ್ಟ್ಯಾಂಡರ್ಡ್ ಮತ್ತು ಟೂರ್ ಎಂಬ ಆಯ್ಕೆಯನ್ನು ಹೊಂದಿದ್ದು, ಬೈಕ್ ಸವಾರರು ತಮ್ಮ ಬೇಡಿಕೆಗೆ ತಕ್ಕಂತೆ ಸ್ಟ್ಯಾಂಡರ್ಡ್ ಮತ್ತು ಟೂರ್ ವೆರಿಯೆಂಟ್ ಖರೀದಿಸಬಹುದಾಗಿದೆ.

ಹೋಂಡಾ ಗೋಲ್ಡ್ ವಿಂಗ್ ಐಷಾರಾಮಿ ಬೈಕ್‌ಗಳ ವಿತರಣೆಗೆ ಗ್ರೀನ್ ಸಿಗ್ನಲ್

ಸದ್ಯ ಭಾರತೀಯ ಗ್ರಾಹಕರ ಖರೀದಿ ಮಾಡಿರುವ ಬೈಕ್ ಮಾದರಿಗಳಲ್ಲಿ ಗೋಲ್ಡ್ ವಿಂಗ್ ಟೂರ್ ಮಾದರಿಗಳೇ ಹೆಚ್ಚಿದ್ದು, 7-ಸ್ಪೀಡ್ ಡಿಸಿಟಿ ಟ್ರಾನ್‌ಮಿಷನ್, ಎಲೆಕ್ಟ್ರಿಕ್ ರಿವರ್ಸ್ ಗೇರ್ ಸೇರಿದಂತೆ ಹಲವು ಐಷಾರಾಮಿ ಸೌಲಭ್ಯಗಳು ಈ ಬೈಕಿನಲ್ಲಿವೆ.

ಹೋಂಡಾ ಗೋಲ್ಡ್ ವಿಂಗ್ ಐಷಾರಾಮಿ ಬೈಕ್‌ಗಳ ವಿತರಣೆಗೆ ಗ್ರೀನ್ ಸಿಗ್ನಲ್

ಎಂಜಿನ್ ಸಾಮರ್ಥ್ಯ

1,883 ಸಿಸಿ ಫ್ಯಾಟ್ ಸಿಕ್ಸ್ ಸಿಲಿಂಡರ್ ಎಂಜಿನ್ ಹೊಂದಿರುವ ಹೋಂಡಾ ಗೋಲ್ಡ್ ವಿಂಗ್ ಬೈಕ್‌ಗಳು 125-ಬಿಎಚ್‌ಪಿ ಮತ್ತು 170-ಎನ್ಎಂ ಟಾರ್ಕ್ ಉತ್ಪಾದಿಸುವ ಗುಣಹೊಂದಿದ್ದು, ಸುರಕ್ಷತೆಗಾಗಿ 320 ಎಂಎಂ ಡ್ಯುಯಲ್ ಹೈಡ್ರಾಲಿಕ್ ಡಿಸ್ಕ್ ಬ್ರೇಕ್ ಬಳಕೆ ಮಾಡಲಾಗಿದೆ.

ಹೋಂಡಾ ಗೋಲ್ಡ್ ವಿಂಗ್ ಐಷಾರಾಮಿ ಬೈಕ್‌ಗಳ ವಿತರಣೆಗೆ ಗ್ರೀನ್ ಸಿಗ್ನಲ್

ಜೊತೆಗೆ ಹೊಸ ಬೈಕ್ ಮಾದರಿಯಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಕೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಮಲ್ಟಿಪಲ್ ರೈಡ್ ಮೂಡ್, ಎಬಿಎಸ್, ಇನ್ಪೋಟೈನ್‌ಮೆಂಟ್ ಸಿಸ್ಟಂ ಸೇರಿದಂತೆ ಹಲವು ವಿಶೇಷ ಸೌಲಭ್ಯಗಳ ಆಯ್ಕೆ ಹೊಂದಿದೆ.

ಹೋಂಡಾ ಗೋಲ್ಡ್ ವಿಂಗ್ ಐಷಾರಾಮಿ ಬೈಕ್‌ಗಳ ವಿತರಣೆಗೆ ಗ್ರೀನ್ ಸಿಗ್ನಲ್

ಇನ್ನು ಹೋಂಡಾ ಗೋಲ್ಡ್ ವಿಂಗ್ ಬೈಕ್‌ಗಳು 379 ಕೆ.ಜಿ ತೂಕ ಪಡೆದುಕೊಂಡಿದ್ದು, ಇದು ಹಳೆಯ ಮಾದರಿಗಿಂತ 40 ಕೆ.ಜಿ ತೂಕ ಕಡಿಮೆ ಮಾಡಲಾಗಿದೆ. ಇದರಿಂದ ಬೈಕಿನ ಇಂಧನ ಕಾರ್ಯಕ್ಷಮತೆಗೆ ಪೂರಕವಾಗಿದ್ದು, ಈ ಬೈಕಿನಲ್ಲಿ ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಅನ್ನು ಅಳವಡಿಕೆಯಾಗಿದೆ.

ಹೋಂಡಾ ಗೋಲ್ಡ್ ವಿಂಗ್ ಐಷಾರಾಮಿ ಬೈಕ್‌ಗಳ ವಿತರಣೆಗೆ ಗ್ರೀನ್ ಸಿಗ್ನಲ್

ಇದರಿಂದ ಹೊಸ ಬೈಕ್ ಹಾರ್ಲೇ ಡೇವಿಡ್‌ಸನ್ ಸಂಸ್ಥೆಯ ಸಿವಿಒ ಲಿಮಿಟೆಡ್ ಮತ್ತು ಇಂಡಿಯನ್ ರೋಡ್ ಮಾಸ್ಟರ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ 2018ರ ಹೋಂಡಾ ಗೋಲ್ಡ್ ವಿಂಗ್ ಬೈಕ್‌ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ನ್ಯಾವಿಗೆಷನ್, ಕ್ರೂಸರ್ ಕಂಟ್ರೋಲರ್, ಎಲೆಕ್ಟ್ರಿಕ್ ವಿಂಡ್ ಸ್ಕ್ರೀನ್, ಎಲ್ಇಡಿ ಲೈಟಿಂಗ್, ಬ್ಲ್ಯೂ‌ಟೂಥ್ ಕನೆಕ್ಟಿವಿಟಿ, ಆ್ಯಪಲ್ ಕಾರ್ ಸೇರಿದಂತೆ ಹಲವು ಮುಂದುವರಿದ ತಾಂತ್ರಿಕ ಅಂಶಗಳು ಇದರಲ್ಲಿವೆ.

ಹೋಂಡಾ ಗೋಲ್ಡ್ ವಿಂಗ್ ಐಷಾರಾಮಿ ಬೈಕ್‌ಗಳ ವಿತರಣೆಗೆ ಗ್ರೀನ್ ಸಿಗ್ನಲ್

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

ಬಡ ವಿದ್ಯಾರ್ಥಿ ತಯಾರಿಸಿದ ಡ್ರೈವರ್ ಲೆಸ್ ಟ್ರ್ಯಾಕ್ಟರ್ ಹೇಗಿದೆ ನೋಡಿ..

ಹೊಸ ಬಿಎಂಡಬ್ಲ್ಯು ಕಾರಿನೊಂದಿಗೆ ತಂದೆಯ ಶವಸಂಸ್ಕಾರ ಮಾಡಿದ ಪುಣ್ಯಾತ್ಮ

ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್....

Most Read Articles

Kannada
Read more on honda super bikes
English summary
2018 Honda Goldwing India Deliveries Begin; First Motorcycle Delivered To Jaipur Customer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X