ಹೋಂಡಾ ಸಿಬಿ ಶೈನ್ ಮಾಡಿಫೈ ಕಫೆ ರೇಸರ್ ಸೈಬರ್‌ಟ್ರಾನ್..

ಮಾಡಿಫೈ ಇಲ್ಲದ ಬೈಕ್‌ಗಳನ್ನು ಚಾಲನೆ ಮಾಡುವುದು ಒಂದು ಥರಾ ಅಲರ್ಜಿ ಇದ್ದಂತೆ. ಇದೇ ಕಾರಣಕ್ಕೆ ಇರೋ ಬರೋ ಬೈಕ್ ಮಾದರಿಗಳಲ್ಲೇ ಒಂದೋಳ್ಳೆ ಡಿಸೈನ್ ಮಾಡಿಸಿಕೊಂಡು ಪೋಸ್ ಕೊಡೊದು ಅಂದ್ರೆ ಅವರಿಗೆ ಎಲ್ಲಿಲ್ಲದ ಹೆಮ್ಮೆ ಅಂದ್ರೆ ತಪ್ಪಾಗುವುದಿಲ್ಲ.

By Praveen Sannamani

ಈಗಿನ ಯುವಕರಿಗೆ ಮಾಡಿಫೈ ಇಲ್ಲದ ಬೈಕ್‌ಗಳನ್ನು ಚಾಲನೆ ಮಾಡುವುದು ಒಂದು ಥರಾ ಅಲರ್ಜಿ ಇದ್ದಂತೆ. ಇದೇ ಕಾರಣಕ್ಕೆ ಇರೋ ಬರೋ ಬೈಕ್ ಮಾದರಿಗಳಲ್ಲೇ ಒಂದೋಳ್ಳೆ ಡಿಸೈನ್ ಮಾಡಿಸಿಕೊಂಡು ಪೋಸ್ ಕೊಡೊದು ಅಂದ್ರೆ ಅವರಿಗೆ ಎಲ್ಲಿಲ್ಲದ ಹೆಮ್ಮೆ ಅಂದ್ರೆ ತಪ್ಪಾಗುವುದಿಲ್ಲ. ಇದೇ ಉದ್ದೇಶದಿಂದ ಇಲ್ಲೊಂದು ಮಾಡಿಫೈ ಸಂಸ್ಥೆಯು ಜನಪ್ರಿಯ ಹೋಂಡಾ ಶೈನ್ ಬೈಕಿನ ಮೂಲವನ್ನು ತಿರುಚಿ ಕಫೆ ರೇಸರ್ ಟಚ್ ನೀಡಿದೆ.

ಹೋಂಡಾ ಸಿಬಿ ಶೈನ್ ಮಾಡಿಫೈ ಕಫೆ ರೇಸರ್ ಸೈಬರ್‌ಟ್ರಾನ್..

ಮುಂಬೈ ಮೂಲದ ಫೀಲ್ ಆನ್ ವೀಲ್ಹ್ ಎನ್ನುವ ಬೈಕ್ ಮಾಡಿಫೈ ಸಂಸ್ಥೆಯು ಹೋಂಡಾ ಸಿಬಿ ಶೈನ್ ಎಂಜಿನ್ ಬಳಕೆಯೊಂದಿಗೆ ಕಫೆ ರೇಸರ್ ವಿನ್ಯಾಸವನ್ನು ನೀಡುವ ಮೂಲಕ ಬೈಕ್ ಪ್ರಿಯರ ಆಕರ್ಷಣೆ ಕಾರಣವಾಗಿದ್ದು, ವಿನೂತನ ಡಿಸೈನ್ ಹೊಂದಿರುವ ಈ ಬೈಕಿಗೆ ಸೈಬರ್‌ಟ್ರಾನ್ ಎಂದು ನಾಮಕರಣ ಮಾಡಲಾಗಿದೆ.

ಹೋಂಡಾ ಸಿಬಿ ಶೈನ್ ಮಾಡಿಫೈ ಕಫೆ ರೇಸರ್ ಸೈಬರ್‌ಟ್ರಾನ್..

ಮಾಡಿಫೈಗೊಂಡಿದ್ದರು ಕಫೆ ರೇಸರ್ ಡಿಸೈನ್‌ಗಿಂತ ಯಾವುದರಲ್ಲೂ ಕಡಿಮೆ ಇಲ್ಲದಂತೆ ಬೈಕಿನ ವಿನ್ಯಾಸಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ಬೈಕಿನ ಎಂಜಿನ್ ವಿಭಾಗವನ್ನು ಹೊರತುಪಡಿಸಿ ಉಳಿದೆಲ್ಲಾ ವಿನ್ಯಾಸಗಳನ್ನು ಸಹ ಹೊಸದಾಗಿ ಅಭಿವೃದ್ಧಿ ಮಾಡಲಾಗಿದೆ.

ಹೋಂಡಾ ಸಿಬಿ ಶೈನ್ ಮಾಡಿಫೈ ಕಫೆ ರೇಸರ್ ಸೈಬರ್‌ಟ್ರಾನ್..

ಬೈಕಿನ ಹೆಡ್‌ಲ್ಯಾಂಪ್, ಹ್ಯಾಂಡಲ್ ಬಾರ್, ಮುಂಭಾಗದ ಸಸ್ಷೆನ್, ಹಿಂಭಾಗದ ಪೋರ್ಕ್, ಎಕ್ಸಾಸ್ಟ್ ವಿನ್ಯಾಸವು ಬೈಕ್ ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಬೈಕಿನ ಸೀಟಿನ ಡಿಸೈನ್ ಸಹ ಬೈಕಿನ ಅಂದಕ್ಕೆ ಮತ್ತಷ್ಟು ಮೆರಗು ನೀಡಿದೆ ಎನ್ನಬಹುದು.

ಹೋಂಡಾ ಸಿಬಿ ಶೈನ್ ಮಾಡಿಫೈ ಕಫೆ ರೇಸರ್ ಸೈಬರ್‌ಟ್ರಾನ್..

ಸಿಂಗಲ್ ಸೀಟು ವಿನ್ಯಾಸವಿರುವ ಸಿಬಿ ಶೈನ್ ಮಾಡಿಫೈ ಸೈಬರ್‌ಟ್ರಾನ್ ಬೈಕಿನಲ್ಲಿ ರೆಟ್ರೋ ಮಾದರಿಯ ಇನ್‌ಸ್ಟೂಮೆಂಟ್ ಕ್ಲಸ್ಟರ್, ಕೀ ಸಾಕೇಟ್, ಫ್ಯೂಲ್ ಟ್ಯಾಂಕ್ ವಿನ್ಯಾಸ, ಅಗಲವಾದ ಚಕ್ರಗಳು ಮಾಡಿಫೈ ಅವತಾರವನ್ನು ಎದ್ದುಕಾಣುವಂತೆ ಮಾಡಿವೆ.

ಹೋಂಡಾ ಸಿಬಿ ಶೈನ್ ಮಾಡಿಫೈ ಕಫೆ ರೇಸರ್ ಸೈಬರ್‌ಟ್ರಾನ್..

ಎಂಜಿನ್ ಸಾಮರ್ಥ್ಯ

124.7 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿರುವ ಮೂಲ ಸಿಬಿ ಶೈನ್‌ಗಳ ಎಂಜಿನ್ ಮಾದರಿಯನ್ನೇ ಇಲ್ಲೂ ಕೂಡಾ ಮುಂದುವರಿಸಲಾಗಿದ್ದು, 10.16-ಬಿಎಚ್‌ಪಿ ಮತ್ತು 10.30-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಪಡೆದಿದೆ.

ಹೋಂಡಾ ಸಿಬಿ ಶೈನ್ ಮಾಡಿಫೈ ಕಫೆ ರೇಸರ್ ಸೈಬರ್‌ಟ್ರಾನ್..

ಹಾಗೆಯೇ ಮಾಡಿಫೈ ಬೈಕಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂಭಾಗದ ಚಕ್ರದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಮೂಲ ಮಾದರಿಯಂತೆ ಡ್ರಮ್ ಬ್ರೇಕ್ ವ್ಯವಸ್ಥೆಯನ್ನೇ ಮುಂದುವರಿಸಲಾಗಿದೆ.

ಹೋಂಡಾ ಸಿಬಿ ಶೈನ್ ಮಾಡಿಫೈ ಕಫೆ ರೇಸರ್ ಸೈಬರ್‌ಟ್ರಾನ್..

ಇನ್ನು ಬೈಕಿನ ಮಾಡಿಫೈಗೆ ತಗುಲಿದ ವೆಚ್ಚಗಳ ಬಗ್ಗೆ ಫೀಲ್ ಆನ್ ವೀಲ್ಹ್ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲವಾದರೂ ಮೂಲ ಬೈಕ್ ಮಾದರಿಯಾದ ಸಿಬಿ ಶೈನ್ ಆವೃತ್ತಿಯನ್ನು ಹಿಡಿದು ಈ ಬೈಕಿನ ಬೆಲೆಯು 1 ರಿಂದ 1.20 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಹೋಂಡಾ ಸಿಬಿ ಶೈನ್ ಮಾಡಿಫೈ ಕಫೆ ರೇಸರ್ ಸೈಬರ್‌ಟ್ರಾನ್..

ಒಂದು ವೇಳೆ ನಿಮ್ಮದೇ ಸಿಬಿ ಶೈನ್ ಬೈಕ್ ಇದ್ದಲ್ಲಿ ಅದನ್ನು ಕೂಡಾ ಮಾಡಿಫೈ ಮಾಡಿಸಿಕೊಳ್ಳಬಹುದಾಗಿದ್ದು, ನಿಮ್ಮ ಅಗತ್ಯಕ್ಕೆ ತಕ್ಕಂತೆ ಮತ್ತಷ್ಟು ಬದಲಾವಣೆ ಮಾಡಿಕೊಳ್ಳಬಹುದಾದ ಅವಕಾಶವಿದೆ. ಈ ಬಗ್ಗೆ ನೀವೇ ಅವರನ್ನು ನೇರವಾಗಿ ಸಂಪರ್ಕಿಸಬಹುದು.

ಫೀಲ್ ಆನ್ ವೀಲ್ಹ್ ಸಂಸ್ಥೆಯು ನಿರ್ಮಾಣ ಮಾಡಿರುವ ಹೋಂಡಾ ಸಿಬಿ ಶೈನ್ ಮಾಡಿಫೈ ಸೈಬರ್‌ಟ್ರಾನ್ ಬೈಕಿನ ವಿಡಿಯೋ ಇಲ್ಲಿದೆ ವೀಕ್ಷಿಸಿ....

Most Read Articles

Kannada
Read more on bike modifications
English summary
Modified Honda Shine Cafe Racer Motorcycle
Story first published: Thursday, June 7, 2018, 16:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X