Just In
- 11 hrs ago ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- 12 hrs ago ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- 13 hrs ago ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- 14 hrs ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
Don't Miss!
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- News Realme: ಅಗ್ಗದ 5G ಸ್ಮಾರ್ಟ್ಫೋನ್ ಬಿಡುಗಡೆ ರೆಡಿ; ಇದರ ಬೆಲೆ ಎಷ್ಟು ಗೊತ್ತಾ?
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಂಡಾ ಎಕ್ಸ್-ಬ್ಲೇಡ್ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು..?
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೊಂಡಾ ತನ್ನ ಹೊಸ ಎಕ್ಸ್-ಬ್ಲೇಡ್ ಬೈಕಿನ ಬುಕ್ಕಿಂಗನ್ನು ಶುರುಮಾಡಿದ್ದು, 5 ವಿವಿಧ ಬಣ್ಣಗಳಲ್ಲಿ ಲಭ್ಯವಿರಲಿದೆ.
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೊಂಡಾ ತನ್ನ ಹೊಸ ಎಕ್ಸ್-ಬ್ಲೇಡ್ ಬೈಕಿನ ಬುಕ್ಕಿಂಗನ್ನು ಶುರುಮಾಡಿದ್ದು, 5 ವಿವಿಧ ಬಣ್ಣಗಳಲ್ಲಿ ಲಭ್ಯವಿರಲಿದೆ. ಜೊತೆಗೆ ಈ ಬೈಕಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ 79 ಸಾವಿರಕ್ಕೆ ನಿಗದಿಪಡಿಸಲಾಗಿದೆ.
ಹೊಂಡಾ ನಿರ್ಮಾಣದ ಎಕ್ಸ್-ಬ್ಲೇಡ್ ವಿನ್ಯಾಸವು ಹೊಂಡಾ ಹಾರ್ನೆಟ್ 160 ಆರ್ ಬೈಕ್ಗೆ ಹೋಲಿಕೆ ಆಗುತ್ತಾದರೂ ಈ ಬೈಕ್ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದ್ದು, ಶಾರ್ಪ್ ಲುಕ್ ಯುವ ಸಮುದಾಯವನ್ನು ತನ್ನತ್ತ ಕೈ ಬಿಸಿ ಕರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಎಂಜಿನ್ ಸಾಮರ್ಥ್ಯ
162.7-ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿರುವ ಎಕ್ಸ್ -ಬ್ಲೇಡ್ ಬೈಕ್ಗಳು 13.93-ಬಿಹೆಚ್ಪಿ ಮತ್ತು 13.9-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಈ ಬೈಕ್ನಲ್ಲಿ 5-ಸ್ಪೀಡ್ ಗೇರ್ ಬಾಕ್ಸ್ ಜೋಡಣೆ ಇದ್ದು, ರೇಸರ್ ಶಾರ್ಪ್ ಡಿಸೈನ್ ಆಕರ್ಷಕ ಲುಕ್ ಕೊಟ್ಟಿದೆ.
ಬೈಕ್ ವೈಶಿಷ್ಟ್ಯತೆ
ಹೊಸ ಬೈಕ್ ವೈಶಿಷ್ಟ್ಯತೆ ಎಕ್ಸ್-ಬ್ಲೇಡ್ ಬೈಕ್ ಪ್ರಮುಖ ಲಕ್ಷಣವೆಂದರೆ ಫುಲ್ ಎಲ್ಇಡಿ ಹೆಡ್ಲೈಟ್ ಸೆಟಪ್, ರೋಬೊ ಫೇಸ್ ನೋಟ, ಎಲ್ಇಡಿ ಹೆಡ್ ಲೈಟ್ ಪೊಜಿಷನ್ ಲ್ಯಾಂಪನ್ನು ಹೊಂದಿದ್ದು, ಟೈಲ್ ಲೈಟ್ ಕೂಡ ಎಲ್ಇಡಿಯಾಗಿದೆ. ಇದಲ್ಲದೇ ಹೊಸ ಡಿಜಿಟಲ್ ಕ್ಲಸ್ಟರ್ ಉಪಕರಣ ಮತ್ತು ಗೇರ್ ಶಿಫ್ಟ್ ಇಂಡಿಕೇಟರ್ ಕೂಡ ಹೊಂದಿದೆ.
ಆಕ್ರಮಣಕಾರಿ ಕಪ್ಪು ಶೇಡ್ ಗಳೊಂದಿಗೆ ಮಸ್ಕ್ಯುಲರ್ ಫ್ಯುಯಲ್ ಟ್ಯಾಂಕ್ ವಿನ್ಯಾಸವು ಹೊಸ ಬೈಕಿನ ವಿನ್ಯಾಸಕ್ಕೆ ಮೆರಗು ನೀಡಿದ್ದು, ಸೈಡ್ ಪ್ಯಾನೆಲ್ ಗಳು ಕೂಡ ಕಪ್ಪು ಬಣ್ಣವನ್ನು ಹೊಂದಿದೆ. ಬೈಕಿನ ಟೈಲ್ ವಿಭಾಗವು ಸ್ಪ್ಲಿಟ್ ಗ್ರಾಬ್ ರೈಲ್ ಮತ್ತು ರೇಜರ್ ಅಂಚುಗಳು ಮತ್ತು ಡಬಲ್ ಔಟ್ಲೆಟ್ ಮಫ್ಲರ್ ನೀಡಲಾಗಿದೆ.
ಲಭ್ಯವಿರುವ ಬಣ್ಣಗಳು ಹೊಸ ಬೈಕ್ಗಳು ಮೇಟ್ ಮಾರ್ವೆಲ್ ಬ್ಲೂ ಮೆಟಾಲಿಕ್, ಪರ್ಲ್ ಇಗ್ನ್ಯೋಸ್ ಬ್ಲಾಕ್, ಮೇಟ್ ಫ್ರೋಜೆನ್ ಸಿಲ್ವರ್, ಪರ್ಲ್ ಸ್ಪಾರ್ಟನ್ ಮತ್ತುಮೇಟ್ ಮಾರ್ಷಲ್ ಗ್ರೀನ್ ಮೆಟಾಲಿಕ್ ಎಂಬ 5 ವಿವಿಧ ಬಣ್ಣಗಳಲ್ಲಿ ದೊರೆಯಲಿವೆ.
ಆ ಸೂಪರ್ ಬೈಕಿನಲ್ಲಿ ಎಬಿಎಸ್ ಇಲ್ಲಾ ಅಂದಿದ್ರೆ ಕಥೆ ಅಷ್ಟೇ...
ಹೊಂಡಾ ಎಕ್ಸ್-ಬ್ಲೇಡ್ ಅಲ್ಲದೇ ಆಕ್ಟಿವಾ 5ಜಿ, ಲಿವೊ, ಸೀಬಿ ಶೈನ್, ಸೀಬಿ ಶೈನ್ ಎಸ್ ಪಿ, ಸೀಬಿ ಹಾರ್ನೆಟ್ ಮತ್ತು ಸಿಬಿಆರ್ 250ಆರ್ ತನ್ನ ಹತ್ತು ಹೊಸ ದ್ವಿಚಕ್ರ ವಾಹನಗಳನ್ನು ಪರಿಚಯಿಸುತ್ತಿದೆ.
ಜೊತೆಗೆ ಪರ್ಫಾಮೆನ್ಸ್ ಬೈಕ್ಗಳಾದ ಸಿಬಿಆರ್ 650ಎಫ್, ಆಫ್ರಿಕಾ ಟ್ವಿನ್, ಸಿಬಿಆರ್1000 ಆರ್ ಆರ್ ಮತ್ತು ಗೋಲ್ಡ್ ವಿಂಗ್ ಹೊಸ ಆವೃತ್ತಿಗಳನ್ನು ಕೂಡಾ ಅನಾವರಣಗೊಳಿಸಲಿದೆ.
Trending On DriveSpark Kannada:
ಹ್ಯುಂಡೈ ಕ್ರೇಟಾ ಹಿಂದಿಕ್ಕಲು ಬರುತ್ತಿರುವ ಟೊಯೊಟಾ ರಷ್ ಸ್ಪೆಷಲ್ ಏನು?