ಕೇವಲ 10 ಕೆ.ಜಿ ತೂಕ ಇರುವ ಈ ಎಲೆಕ್ಟ್ರಿಕ್ ಬೈಕ್ ಅನ್ನು ಫೋರ್ಡಿಂಗ್ ಕೂಡಾ ಮಾಡ್ಬಹುದು..!

ವಿಶ್ವಾದ್ಯಂತ ಸ್ಮಾಟ್ ವಾಹನಗಳ ಹಾವಳಿ ಹೆಚ್ಚುತ್ತಿದ್ದು, ಇದೀಗ ಬ್ರಿಟಿಷ್ ಸೈಕಲ್ ಉತ್ಪಾದನಾ ಸಂಸ್ಥೆಯಾದ ಹಮಿಂಗ್‌ಬರ್ಡ್ ಕೂಡಾ ವಿನೂತನ ಮಾದರಿಯ ಎಲೆಕ್ಟ್ರಿಕ್ ಬೈಕ್ ಮಾದರಿಯೊಂದನ್ನು ಅಭಿವೃದ್ದಿ ಮಾಡಿದೆ.

By Praveen Sannamani

ವಿಶ್ವಾದ್ಯಂತ ಸ್ಮಾಟ್ ವಾಹನಗಳ ಹಾವಳಿ ಹೆಚ್ಚುತ್ತಿದ್ದು, ಇದೀಗ ಬ್ರಿಟಿಷ್ ಸೈಕಲ್ ಉತ್ಪಾದನಾ ಸಂಸ್ಥೆಯಾದ ಹಮಿಂಗ್‌ಬರ್ಡ್ ಕೂಡಾ ವಿನೂತನ ಮಾದರಿಯ ಎಲೆಕ್ಟ್ರಿಕ್ ಬೈಕ್ ಮಾದರಿಯೊಂದನ್ನು ಅಭಿವೃದ್ದಿ ಮಾಡಿದೆ. ಕೇವಲ 10 ಕೆ.ಜಿ 300 ಗ್ರಾಂ ತೂಕವನ್ನು ಹೊಂದಿರುವ ಈ ಬೈಕ್ ನೋಡಲು ಸೈಕಲ್ ರೀತಿಯಲ್ಲೇ ಕಂಡರೂ ಉತ್ತಮ ಚಾಲನಾ ಕೌಶಲ್ಯವನ್ನು ಪಡೆದುಕೊಂಡಿರುವುದೇ ಈ ವಾಹನದ ವಿಶೇಷ.

ಕೇವಲ 10 ಕೆ.ಜಿ ತೂಕ ಇರುವ ಈ ಎಲೆಕ್ಟ್ರಿಕ್ ಬೈಕ್ ಅನ್ನು ಫೋರ್ಡಿಂಗ್ ಕೂಡಾ ಮಾಡ್ಬಹುದು..!

ಹಮಿಂಗ್‌ಬರ್ಡ್ ಸಂಸ್ಥೆಯು ಹಗುರದಾಯಕ ಸೈಕಲ್ ಮತ್ತು ಬೈಕ್ ಮಾದರಿಗಳನ್ನು ಅಭಿವೃದ್ಧಿಗೊಳಿಸುವುದರಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದು, 2017ರಲ್ಲೇ 6.9 ಕೆ.ಜಿ ತೂಕದ ಸಣ್ಣ ಎಲೆಕ್ಟ್ರಿಕ್ ಬೈಕ್‌ವೊಂದನ್ನು ಅಭಿವೃದ್ಧಿಪಡಿಸಿತ್ತು. ಆದ್ರೆ ಇದೀಗ ಅಭಿವೃದ್ದಿ ಮಾಡಿರುವ ಎಲೆಕ್ಟ್ರಿಕ್ ಬೈಕ್‌ಗಳು ಫೋರ್ಡಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಅತ್ಯುತ್ತಮ ಮೈಲೇಜ್ ರೇಂಜ್ ಕೂಡಾ ಪಡೆದುಕೊಂಡಿದೆ.

ಕೇವಲ 10 ಕೆ.ಜಿ ತೂಕ ಇರುವ ಈ ಎಲೆಕ್ಟ್ರಿಕ್ ಬೈಕ್ ಅನ್ನು ಫೋರ್ಡಿಂಗ್ ಕೂಡಾ ಮಾಡ್ಬಹುದು..!

ಪ್ರತಿ ಚಾರ್ಜ್‌ಗೆ 30ಕಿ.ಮಿ ಮೈಲೇಜ್

ಹೌದು, ಹಮಿಂಗ್‌ಬರ್ಡ್ ಸಂಸ್ಥೆಯು ಅಭಿವೃದ್ಧಿಗೊಳಿಸಿರುವ ಇ-ಬೈಕ್ ಮಾದರಿಯು ಪ್ರತಿ ಚಾರ್ಜ್‌ಗೆ 30 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲ ಗುಣಹೊಂದಿದ್ದು, ನಗರ ಪ್ರದೇಶಗಳಲ್ಲಿ ಜನತೆಗೆ ಇದೊಂದು ಅತ್ಯುತ್ತಮ ಆಯ್ಕೆ ಎನ್ನಬಹುದು.

ಕೇವಲ 10 ಕೆ.ಜಿ ತೂಕ ಇರುವ ಈ ಎಲೆಕ್ಟ್ರಿಕ್ ಬೈಕ್ ಅನ್ನು ಫೋರ್ಡಿಂಗ್ ಕೂಡಾ ಮಾಡ್ಬಹುದು..!

ಇನ್ನು ಹಮಿಂಗ್‌ಬರ್ಡ್ ಎಲೆಕ್ಟ್ರಿಕ್ ಬೈಕ್‌ಗಳಲ್ಲಿ 250 ವೊಲ್ಟ್ ಬ್ಯಾಟರಿ ಬಳಕೆ ಮಾಡಲಾಗಿದ್ದು, ಒಂದು ಬಾರಿ ಪೂರ್ಣಪ್ರಮಾಣದ ಬ್ಯಾಟರಿ ಚಾರ್ಜ್‌ಗೊಳ್ಳಲು ಕೇಲವ 30 ನಿಮಿಷ ಕಾಲ ಸಮಯಾವಕಾಶ ತೆಗೆದುಕೊಳ್ಳುತ್ತೆ.

ಕೇವಲ 10 ಕೆ.ಜಿ ತೂಕ ಇರುವ ಈ ಎಲೆಕ್ಟ್ರಿಕ್ ಬೈಕ್ ಅನ್ನು ಫೋರ್ಡಿಂಗ್ ಕೂಡಾ ಮಾಡ್ಬಹುದು..!

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಹಮಿಂಗ್‌ಬರ್ಡ್ ಎಲೆಕ್ಟ್ರಿಕ್ ಬೈಕ್‌ಗಳು ಸೈಕಲ್ ಮಾದರಿಯಲ್ಲೇ ಪೆಡಲ್ ವ್ಯವಸ್ಥೆಯಿದ್ದು, ಈ ಬೈಕ್ ಚಾಲನೆ ಮಾಡುವ ಮುನ್ನ ಬೈಕ್ ಸವಾರರು ಪ್ರತಿ ಗಂಟೆಗೆ 8 ಕಿ.ಮೀ ವೇಗದಲ್ಲಿ 2 ನಿಮಿಷಗಳ ಕಾಲ ಸೈಕಲ್ ತುಳಿಯುವ ಮಾದರಿಯಲ್ಲೇ ಮುಂದೆ ಸಾಗಬೇಕು.

ಕೇವಲ 10 ಕೆ.ಜಿ ತೂಕ ಇರುವ ಈ ಎಲೆಕ್ಟ್ರಿಕ್ ಬೈಕ್ ಅನ್ನು ಫೋರ್ಡಿಂಗ್ ಕೂಡಾ ಮಾಡ್ಬಹುದು..!

ತದನಂತರ ಎಲೆಕ್ಟ್ರಿಕ್ ಮೋಟಾರ್‌ಗೆ ಕನೆಕ್ಟ್‌ಗೊಳ್ಳುವ ಬೈಕಿನ ಎಂಜಿನ್ ಪ್ರತಿ ಗಂಟೆಗೆ 25 ಕಿ.ಮೀ ಟಾಪ್ ಸ್ಪೀಡ್‌ನಲ್ಲಿ ಚಾಲನೆಗೊಳ್ಳುತ್ತಲ್ಲದೇ ಸೈಕಲ್ ಚಾಲನೆ ಮಾಡುವ ರೀತಿಯಲ್ಲೇ ಪೆಡಲ್ ಮೇಲೆ ನಿಮ್ಮ ಕಾಲುಗಳು ಇರಿಸಿ ವಿಶ್ರಾಂತಿ ಪಡೆದುಕೊಳ್ಳುತ್ತಾ ಮುಂದೆ ಸಾಗಬಹುದು.

ಕೇವಲ 10 ಕೆ.ಜಿ ತೂಕ ಇರುವ ಈ ಎಲೆಕ್ಟ್ರಿಕ್ ಬೈಕ್ ಅನ್ನು ಫೋರ್ಡಿಂಗ್ ಕೂಡಾ ಮಾಡ್ಬಹುದು..!

ನಿಮಗೆ ಅವಶ್ಯಕತೆ ಇದ್ದಲ್ಲಿ ಹೆಚ್ಚುವರಿ ಬ್ಯಾಟರಿ ಬ್ಯಾಕ್‌ಅಪ್ ಸಹ ತೆಗೆದುಕೊಂಡು ಹೋಗಬಹುದಾಗಿದ್ದು, ಫೋರ್ಡಿಂಗ್ ವ್ಯವಸ್ಥೆ ಇರುವ ಹಿನ್ನೆಲೆಯಲ್ಲಿ ಸ್ವಲ್ಪ ಸ್ಥಳಾವಕಾಶದಲ್ಲೇ ಬೈಕ್ ನಿಲುಗಡೆಗೆ ಮಾಡಲು ಇದು ಸಹಕಾರಿಯಾಗಲಿದೆ.

ಕೇವಲ 10 ಕೆ.ಜಿ ತೂಕ ಇರುವ ಈ ಎಲೆಕ್ಟ್ರಿಕ್ ಬೈಕ್ ಅನ್ನು ಫೋರ್ಡಿಂಗ್ ಕೂಡಾ ಮಾಡ್ಬಹುದು..!

ಸ್ಮಾರ್ಟ್ ಫೋನ್ ಕನೆಕ್ಟ್ ಮಾಡಿ..!

ಅಂದಹಾಗೆ, ಹಮಿಂಗ್‌ಬರ್ಡ್ ಎಲೆಕ್ಟ್ರಿಕ್ ಬೈಕ್‌ಗಳನ್ನು ಸ್ಮಾರ್ಟ್‌ಫೋನ್ ಮೂಲಕವೇ ನಿಯಂತ್ರಣ ಮಾಡಬಹುದಾಗಿದ್ದು, 'ಬಿಟ್‌ರೈಡ್' ಎನ್ನುವ ಆ್ಯಪ್ ಮೂಲಕವೇ ಬೈಕಿನ ತಾಂತ್ರಿಕ ಅಂಶಗಳನ್ನು ನಿಯಂತ್ರಿಸುವುದರಲ್ಲೇ ನ್ಯಾವಿಗೆಷನ್ ಸೌಲಭ್ಯ ಸಹ ಇದೆ.

ಕೇವಲ 10 ಕೆ.ಜಿ ತೂಕ ಇರುವ ಈ ಎಲೆಕ್ಟ್ರಿಕ್ ಬೈಕ್ ಅನ್ನು ಫೋರ್ಡಿಂಗ್ ಕೂಡಾ ಮಾಡ್ಬಹುದು..!

ಇದೆಲ್ಲಕ್ಕಿಂತೂ ಮುಖ್ಯವಾದ ಸೌಲಭ್ಯವೊಂದನ್ನ ಹೊಂದಿರುವ ಈ ಎಲೆಕ್ಟ್ರಿಕ್ ಬೈಕು ಒಂದು ವೇಳೆ ಕಳ್ಳತನವಾದ್ರೂ ಕೆಲವೇ ಗಂಟೆಗಳಲ್ಲಿ ಕಳ್ಳತನವಾದ ಬೈಕ್ ಅನ್ನು ಪತ್ತೆಹಚ್ಚಬಹುದಾಗಿದೆ. ಬೈಕಿನಲ್ಲಿರುವ ಕೆಲವು ತಾಂತ್ರಿಕ ಅಂಶಗಳು ಬಿಟ್‌ರೈಡ್ ಆ್ಯಪ್ ಜೊತೆ ಕಾರ್ಯನಿರ್ವಹಣೆ ಮಾಡುತ್ತಲ್ಲದೇ ಬೈಕ್ ಚಾಲನೆಯ ವೇಳೆಯೇ ಬೈಕ್ ಹಿಂದಿನ ಚಕ್ರವನ್ನು ಆ್ಯಪ್ ಮೂಲಕ ಆಟೋ ಲಾಕ್ ಮಾಡಬಹುದಾಗಿದೆ.

ಕೇವಲ 10 ಕೆ.ಜಿ ತೂಕ ಇರುವ ಈ ಎಲೆಕ್ಟ್ರಿಕ್ ಬೈಕ್ ಅನ್ನು ಫೋರ್ಡಿಂಗ್ ಕೂಡಾ ಮಾಡ್ಬಹುದು..!

ಒಟ್ಟಿನಲ್ಲಿ ಹಲವು ಸುಧಾರಿತ ತಂತ್ರಜ್ಞಾನಗಳೊಂದು ಭಾರೀ ಆಕರ್ಷಣೆಗೆ ಕಾರಣವಾಗಿರುವ ಹಮಿಂಗ್‌ಬರ್ಡ್ ಎಲೆಕ್ಟ್ರಿಕ್ ಬೈಕ್‌ಗಳು ಸದ್ಯ ಯುರೋಪ್ ಮತ್ತು ಯುಎಸ್‌ಎ ಮಾರುಕಟ್ಟೆಗಳಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಖರೀದಿ ಲಭ್ಯವಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Hummingbird Launches The World's Lightest Electric Folding Bike.
Story first published: Friday, July 13, 2018, 18:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X