Just In
- 9 hrs ago
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- 11 hrs ago
ಸಿವಿ ವಾಹನ ಮಾದರಿಗಳಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್ಸ್ಟೋನ್
- 11 hrs ago
ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ
- 12 hrs ago
ಎರಡನೇ ಬಾರಿ ರೋಲ್ಸ್ ರಾಯ್ಸ್ ಕುಲಿನನ್ ಕಾರು ಖರೀದಿಸಿದ ಮುಖೇಶ್ ಅಂಬಾನಿ
Don't Miss!
- Movies
ಪ್ರತಿಷ್ಟಿತ ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡದ ಸ್ಟಾರ್ ನಟ
- News
ರೈತರ ಪ್ರತಿಭಟನೆ: ಜನವರಿ 19ಕ್ಕೆ ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ ಮತ್ತೊಂದು ಸುತ್ತಿನ ಸಭೆ
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್ ಪಂದ್ಯ, 2ನೇ ದಿನ, Live ಸ್ಕೋರ್
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಂಗಳೂರಿಗೆ ಬಂದ ಭಾರತದ ಮೊದಲ ಕವಾಸಕಿ ಜೆಡ್900ಆರ್ಎಸ್ ಬೈಕ್..
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಕವಾಸಕಿಯು ಕಳೆದ ತಿಂಗಳ ಹಿಂದಷ್ಟೇ ಜೆಡ್900ಆರ್ಎಸ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಎಕ್ಸ್ಶೋರಂ ಪ್ರಕಾರ ಹೊಸ ಬೈಕಿನ ಬೆಲೆಯನ್ನು ರೂ.4.69 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಬಿಡುಗಡೆಗೊಂಡ ಸುಮಾರು ಒಂದು ತಿಂಗಳ ನಂತರ ಮೊದಲ ಬಾರಿಗೆ ಜೆಡ್900ಆರ್ಎಸ್ ಬೈಕಿನ ಮೊದಲ ಯುನಿಟ್ ಮಾರಾಟಗೊಂಡಿದ್ದು, ಅದರಲ್ಲೂ ಮಂಗಳೂರು ಮೂಲದ ಗ್ರಾಹಕರನೇ ಕವಾಸಕಿಯ ಮೊದಲ ಜೆಡ್900ಆರ್ಎಸ್ ಬೈಕ್ ಖರೀದಿಸಿದ್ದಾನೆ.

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಜೆಡ್900ಆರ್ಎಸ್ ಬೈಕ್ ಅನ್ನು ಸಿಬಿಯು ಮಾರ್ಗವಾಗಿ ಬೈಕ್ ಖರೀದಿ ಮಾಡಲಾಗಿದ್ದು, ಈ ಹಿನ್ನೆಲೆ ಆಮುದು ಸುಂಕ ಮತ್ತು ಇತರೆ ತೆರಿಗೆಗಳು ಸೇರಿ ಈ ಬೈಕಿನ ಬೆಲೆಯು ರೂ. 15.30 ಲಕ್ಷಕ್ಕೆ ಖರೀದಿಸಲಾಗಿದೆ.

ಮಂಗಳೂರಿನ ನಿವಾಸಿ ಲೋಬೊ ಎಂಬುವವರೇ ಭಾರತದಲ್ಲಿ ಮೊದಲ ಜೆಡ್900ಆರ್ಎಸ್ ಬೈಕ್ ಬೈಕ್ ಅನ್ನು ಖರೀದಿ ಮಾಡಿದ್ದು, ಎಕ್ಸ್ಶೋರಂ ಬೆಲೆಗಿಂತ 11 ಲಕ್ಷ ಹೆಚ್ಚುವರಿಯಾಗಿ ಬೆಲೆ ತೆತ್ತು ಈ ಹೊಸ ಬೈಕ್ ತಮ್ಮದಾಗಿಸಿಕೊಂಡಿದ್ದಾರೆ.

ನೂತನ ಕವಾಸಕಿ ಝಡ್900ಆರ್ಎಸ್ ಬೈಕ್ ಮಾದರಿಯು ರೆಟ್ರೊ ಮಾರ್ಡನ್ ಶೈಲಿಯನ್ನು ಹೊಂದಿದ್ದು, ಈ ಮೂಲಕ ಲಗ್ಷುರಿ ಬೈಕ್ ಖರೀದಿಗಾರರನ್ನು ಮನ ಸೆಳೆಯುತ್ತಿದೆ. ಇದೇ ಕಾರಣಕ್ಕೆ ಸದ್ಯದಲ್ಲೇ ಮತ್ತಷ್ಟು ಜೆಡ್900ಆರ್ಎಸ್ ಬೈಕ್ಗಳು ಭಾರತೀಯ ಗ್ರಾಹಕರ ಕೈ ಸೇರಲು ಸಜ್ಜುಗೊಂಡಿವೆ.

ಹೊಸ ಬೈಕಿನ ವಿಶೇಷ ಅಂದ್ರೆ, 1970ರ ದಶಕದಲ್ಲೇ ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಝೆಡ್1 ಮತ್ತು ಆಧುನಿಕ ಝಡ್900 ಬೈಕ್ಗಳ ಸಂಯೋಜನೆಯೊಂದಿಗೆ ಝಡ್900ಆರ್ಎಸ್ ಸಿದ್ದಗೊಳಿಸಲಾಗಿದ್ದು, ಸುರಕ್ಷೆತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಹೀಗಾಗಿ ಕವಾಸಕಿ ಕ್ಲಾಸಿಕ್ ಬೈಕ್ ಪ್ರೇಮಿಗಳಿಗೆ ನೂತನ ಅನುಭವ ನೀಡಲಿದ್ದು, ಇದರಲ್ಲಿ ಅತ್ಯಂತ ಶಕ್ತಿಶಾಲಿ 948 ಸಿಸಿ ಇನ್ ಲೈನ್ ಫೋರ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಾಗಿದೆ.

ನೂತನ ಕವಾಸಕಿ ಝಡ್900ಆರ್ಎಸ್ ಬೈಕ್ನಲ್ಲಿ ಎಲ್ಇಡಿ ಹೆಡ್ಲ್ಯಾಂಪ್, ಎಬಿಎಸ್, ಕವಾಸಕಿ ಟ್ರ್ಯಾಕ್ಶನ್ ಕಂಟ್ರೋಲ್, ಡ್ಯುಯಲ್ ಟೋನ್ ಅನಾಲಾಗ್ ಹಾಗು ಟಾಚೋಮೀಟರ್ ಮತ್ತು ವಿವಿಧ ಆಯ್ಕೆಗಳನ್ನು ಪಡೆದಿರುವ ಎಲ್ಸಿಡಿ ಸ್ಕ್ರೀನ್ ಅನ್ನು ಅಳವಡಿಸಲಾಗಿದೆ.

ಮೇಲೆ ಹೇಳಿರುವ ಹಾಗೆಯೇ ನೂತನ ಕವಾಸಕಿ ಝಡ್900ಆರ್ಎಸ್ ಬೈಕ್ 948ಸಿಸಿ ಇನ್ ಲೈನ್ ನಾಲ್ಕು ಎಂಜಿನ್ ಸಹಾಯದೊಂದಿಗೆ 110 ಬಿಹೆಚ್ಪಿ ಹಾಗು 98.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದಿದ್ದು, 6 ಸ್ಪೀಡ್ ಗೇರ್ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಡ್ರೈವ್ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
1. ವಾಹನ ಸವಾರರ ಜೀವಕ್ಕೆ ಕುತ್ತು ತರುತಂತೆ ಟೈರ್ ಕಿಲ್ಲರ್ ಹಂಪ್?
2. ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?
3. ಉಡುಪಿಯಲ್ಲಿ ಭೀಕರ ಅಪಘಾತ- ಇನೋವಾ ಗುದ್ದಿದ ರಭಸಕ್ಕೆ ಗಾಳಿಯಲ್ಲಿ ತೂರಿ ಹೋದ ಪಲ್ಸರ್ ಬೈಕ್...
4. ಕಾರ್ ಪಾರ್ಕ್ ಮಾಡುವಾಗ ಹುಷಾರ್- ಇಲ್ಲಾ ಅಂದ್ರೆ ಏನ್ ಆಗುತ್ತೆ ಅನ್ನೋದಕ್ಕೆ ಈ ವಿಡಿಯೋ ನೋಡಿ..
5. ಬುಲೆಟ್ ಪ್ರಿಯರಿಗೆ ಸಿಹಿ ಸುದ್ದಿ- ಹೊಸ ಬೈಕ್ಗಳಲ್ಲಿ ಸದ್ಯದಲ್ಲೇ ಸಿಂಗಲ್ ಚಾನೆಲ್ ಎಬಿಎಸ್