ಜಾವಾ ಯೆಜ್ಡಿ ಬೈಕ್ ರ‍್ಯಾಲಿ- ಸಿಲಿಕಾನ್ ಸಿಟಿಯಲ್ಲಿ ಕಮ್ಮಿಯಾಗಿಲ್ಲ ಜಾವಾ ಕ್ರೇಜ್..!

ಯೂರೋಪ್‌ನಲ್ಲಿ ತಯಾರಾಗಿ ಕ್ರಮೇಣ ಜಗತ್ತಿನಾದ್ಯಂತ ವಿಸ್ತರಿಸಿ 1960ರಲ್ಲಿ ಭಾರತಕ್ಕೆ ಅಡಿಯಿಟ್ಟ ಆಕರ್ಷಕ ಬೈಕ್‌ಗಳಲ್ಲಿ ಇದೂ ಒಂದು.

By Praveen Sannamani

ಅದು ಅರವತ್ತರ ದಶಕ. ರಸ್ತೆಗಳಲ್ಲಿ ಡುಗ್ ಡುಗ್ ಡುಗ್ ಎಂದು ಲಯಬದ್ಧವಾಗಿ ಸದ್ದು ಮಾಡುತ್ತಾ ರಸ್ತೆ ರಾಜ ಎನ್ನಿಸಿಕೊಂಡಿದ್ದ ಜಾವಾ ಬೈಕ್‌ಗಳು ಕಾಲ ಕ್ರಮೆಣ ನೆಪಥ್ಯಕ್ಕೆ ಸರಿದಿದ್ದು ಬಹುತೇಕ ಬೈಕ್ ಪ್ರೇಮಿಗಳಿಗೆ ಗೊತ್ತಿಲ್ಲದ ವಿಚಾರವೇನು ಅಲ್ಲ. ಯೂರೋಪ್‌ನಲ್ಲಿ ತಯಾರಾಗಿ ಕ್ರಮೇಣ ಜಗತ್ತಿನಾದ್ಯಂತ ವಿಸ್ತರಿಸಿ 1960ರಲ್ಲಿ ಭಾರತಕ್ಕೆ ಅಡಿಯಿಟ್ಟ ಆಕರ್ಷಕ ಬೈಕ್‌ಗಳಲ್ಲಿ ಇದೂ ಒಂದು.

ಜಾವಾ ಯೆಜ್ಡಿ ಬೈಕ್ ರ‍್ಯಾಲಿ- ಸಿಲಿಕಾನ್ ಸಿಟಿಯಲ್ಲಿ ಕಮ್ಮಿಯಾಗಿಲ್ಲ ಜಾವಾ ಕ್ರೇಜ್

ಜಾವಾ ಯೆಜ್ಡಿ ಬೈಕ್‌ಗಳ ಉತ್ಪಾದನೆ ಮತ್ತು ಮಾರಾಟ ಇಲ್ಲವಾದ್ರೂ ಅವುಗಳ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಒಂದು ಕಾಲದಲ್ಲಿ ಭಾರತೀಯ ರಸ್ತೆಗಳಲ್ಲಿ ರಾಜನಂತೆ ಮೆರೆದಿದ್ದ ಜಾವಾ ಯೆಜ್ಡಿ ಬೈಕ್‌ಗಳಿಗೆ ಫಿದಾ ಆಗದವರೇ ಇಲ್ಲ ಎಂದ್ರೆ ತಪ್ಪಾಗುವುದಿಲ್ಲ. ಯಾಕೆಂದ್ರೆ ಬೈಕ್ ಪ್ರೇಮಿಗಳ ಮನಗೆದ್ದಿದ್ದ ಈ ಬೈಕ್‌ಗಳು ಬಹುತೇಕರ ಪಾಲಿನ ಆ್ಯಂಟಿಕ್ ಪೀಸ್.

ಜಾವಾ ಯೆಜ್ಡಿ ಬೈಕ್ ರ‍್ಯಾಲಿ- ಸಿಲಿಕಾನ್ ಸಿಟಿಯಲ್ಲಿ ಕಮ್ಮಿಯಾಗಿಲ್ಲ ಜಾವಾ ಕ್ರೇಜ್

ದೇಶದಲ್ಲಿ ಸದ್ಯ ಜಾವಾ ಯೆಜ್ಡಿ ಬೈಕ್‌ಗಳು ಮಾರಾಟಕ್ಕೆ ಇಲ್ಲವಾದ್ರೂ ಪ್ರತಿ ವರ್ಷ ನಡೆಯುವ ಜಾವಾ ದಿನಾಚರಣೆಯು ಹಲವು ವಿಶೇಷತೆಗಳಿಂದಾಗಿ ಗಮನಸೆಳೆಯುತ್ತಿದ್ದು, ಮೊನ್ನೆಯಷ್ಟೆ ಬೆಂಗಳೂರಿನಲ್ಲಿ ನಡೆದ 16ನೇ ಅಂತಾರಾಷ್ಟ್ರೀಯ ಜಾವಾ ದಿನಾಚರಣೆಯು ಹಲವು ವಿಶೇಷತೆಗಳಿಗೆ ಕಾರಣವಾಗಿದಲ್ಲದೇ ಸಿಲಿಕಾನ್ ಸಿಟಿ ಜನರ ಆಕರ್ಷಣೆಗೆ ಕಾರಣವಾಗಿದೆ.

ಜಾವಾ ಯೆಜ್ಡಿ ಬೈಕ್ ರ‍್ಯಾಲಿ- ಸಿಲಿಕಾನ್ ಸಿಟಿಯಲ್ಲಿ ಕಮ್ಮಿಯಾಗಿಲ್ಲ ಜಾವಾ ಕ್ರೇಜ್

ಬೆಂಗಳೂರಿನ 'ಜಾವಾ ಯೆಜ್ಡಿ ಮೋಟಾರ್‌ಸೈಕಲ್ ಕ್ಲಬ್' ವತಿಯಿಂದ ಆಯೋಜಿಸಲಾಗಿದ್ದ ಜಾವಾ ಯೆಜ್ಡಿ ಬೈಕ್ ರ‍್ಯಾಲಿಯಲ್ಲಿ ಸಮಾರು 500ಕ್ಕೂ ಬೈಕ್‌ಗಳು ಪಾಲ್ಗೊಂಡಿದ್ದಲ್ಲದೇ ಕ್ಲಾಸಿಕ್ ಮೋಟಾರ್‌ಸೈಕಲ್‌ಗಳ ಸದ್ದು ಬೈಕ್ ಪ್ರೇಮಿಗಳ ಎದೆಯಲ್ಲಿ ರೊಮಾಂಚನ ಉಂಟುಮಾಡಿದವು.

ಜಾವಾ ಯೆಜ್ಡಿ ಬೈಕ್ ರ‍್ಯಾಲಿ- ಸಿಲಿಕಾನ್ ಸಿಟಿಯಲ್ಲಿ ಕಮ್ಮಿಯಾಗಿಲ್ಲ ಜಾವಾ ಕ್ರೇಜ್

ನಗರ ಹೃದಯ ಭಾಗದಲ್ಲಿರುವ ಸೇಂಟ್ ಜೋಸೆಫ್ ಹೈ ಸ್ಕೂಲ್ ಮೈದಾನದಿಂದ ಆರಂಭವಾದ ಬೈಕ್ ರ‍್ಯಾಲಿಯು ವಿಠಲ್ ಮಲ್ಯಾ ರಸ್ತೆ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಪ್ರದರ್ಶನ ನಡೆಯಿತು. ಜೊತೆಗೆ ಒಂದು ವಾರದ ತನಕ ಸಾರ್ವಜನಿಕರಿಗೆ ಉಚಿತವಾಗಿ ಬೈಕ್ ಪ್ರದರ್ಶನದ ಅವಕಾಶ ನೀಡಿರುವುದು ಬೈಕ್ ಪ್ರೇಮಿಗಳಿಗೆ ಡಬಲ್ ಧಮಾಕಾ ಅಂದ್ರೆ ತಪ್ಪಾಗಲಾರದು.

ಜಾವಾ ಯೆಜ್ಡಿ ಬೈಕ್ ರ‍್ಯಾಲಿ- ಸಿಲಿಕಾನ್ ಸಿಟಿಯಲ್ಲಿ ಕಮ್ಮಿಯಾಗಿಲ್ಲ ಜಾವಾ ಕ್ರೇಜ್

ಇನ್ನು ಬೈಕ್ ರ‍್ಯಾಲಿಯಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ 50ಸಿಸಿ ಸಾಮರ್ಥ್ಯದ ಜಾವಾ ಕ್ಲಾಟ್, 125ಸಿಸಿ ಸಾಮರ್ಥ್ಯದ ಪರ್ಕ್ ಮತ್ತು 350ಸಿಸಿ ಸಾಮರ್ಥ್ಯ ಟ್ವಿನ್ ಬೈಕ್‌ಗಳ ಸದ್ದು ಕ್ಲಾಸಿಕ್ ಯುಗವನ್ನು ನೆನಪಿಸಿದ್ದು ಮಾತ್ರ ಸುಳ್ಳಲ್ಲ.

ಜಾವಾ ಯೆಜ್ಡಿ ಬೈಕ್ ರ‍್ಯಾಲಿ- ಸಿಲಿಕಾನ್ ಸಿಟಿಯಲ್ಲಿ ಕಮ್ಮಿಯಾಗಿಲ್ಲ ಜಾವಾ ಕ್ರೇಜ್

1960 ರಿಂದ 1996 ರ ತನಕವು ಭಾರತದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿದ್ದ ಐಡಿಯಲ್ ಜಾವಾ ಸಂಸ್ಥೆಯು ಜಾವಾ 250, ಜಾವಾ 50 ಜೆಟ್, ಯೆಜ್ಡಿ 250, ಯೆಜ್ಡಿ 250 ಕ್ಲಾಸಿಕ್, ಯೆಜ್ಡಿ 250 ರೋಡ್ ಕಿಂಗ್, ಯೆಜ್ಡಿ 250 ಮೋನಾರ್ಚ್, ಯೆಜ್ಡಿ 175 ಡಿಲಕ್ಸ್ ಮತ್ತು ಯೆಜ್ಡಿ 350 ಟಿನ್ವ್ ಬೈಕ್ ಮಾರಾಟ ಮಾಡುತ್ತಿತ್ತು. ಆದ್ರೆ ಕೆಲವು ಮಾಡೆಲ್‌ಗಳನ್ನು ಹೊರತುಪಡಿಸಿ ಬಹುತೇಕ ಬೈಕ್‌ಗಳು ಇಂದು ಮೂಲೆಗುಂಪಾಗಿವೆ.

ಜಾವಾ ಯೆಜ್ಡಿ ಬೈಕ್ ರ‍್ಯಾಲಿ- ಸಿಲಿಕಾನ್ ಸಿಟಿಯಲ್ಲಿ ಕಮ್ಮಿಯಾಗಿಲ್ಲ ಜಾವಾ ಕ್ರೇಜ್

ಒಂದು ಕಾಲದಲ್ಲಿ ವಿಶ್ವಾದ್ಯಂತ ಜನಪ್ರಿಯವಾಗಿದ್ದ ಬುಲೆಟ್ ಬೈಕ್‌ಗಳ ಜಾವಾ ಕೂಡಾ ಒಂದು. ಮೈಸೂರಿನಲ್ಲಿಯೇ ತಯಾರಾಗುತ್ತಿದ್ದ ಈ ಬೈಕ್‌ಗಳು 1960 ರಿಂದ 1996ರವರೆಗೆ ಭಾರತದ ಮಹಾನಗರಗಳನ್ನು ಮಾತ್ರವಲ್ಲ, ವಿಶ್ವದ ಅನೇಕ ರಾಷ್ಟ್ರಗಳಿಗೆ ರಫ್ತಾಗಿದ್ದವು.

ಜಾವಾ ಯೆಜ್ಡಿ ಬೈಕ್ ರ‍್ಯಾಲಿ- ಸಿಲಿಕಾನ್ ಸಿಟಿಯಲ್ಲಿ ಕಮ್ಮಿಯಾಗಿಲ್ಲ ಜಾವಾ ಕ್ರೇಜ್

ಟರ್ಕಿ, ನೈಜಿರಿಯಾ, ಶ್ರೀಲಂಕಾ, ಈಜಿಪ್ಟ್ ಸೇರಿದಂತೆ 30ಕ್ಕೂ ಹೆಚ್ಚು ದೇಶಗಳಲ್ಲಿ ಯೆಜ್ಢಿ ಬೈಕ್ ಎಂಬುದು ರೋಡ್ ಕಿಂಗ್ ಆಗಿ ಮೆರೆದಿತ್ತು. ‘ಫಾರ್ ಎವರ್ ಬೈಕ್, ಫಾರ್ ಎವರ್ ವ್ಯಾಲ್ಯೂ...' ಎಂಬುದು ಯೆಜ್ಡಿ ಅಡಿ ಬರಹವಾಗಿತ್ತು !

ಜಾವಾ ಯೆಜ್ಡಿ ಬೈಕ್ ರ‍್ಯಾಲಿ- ಸಿಲಿಕಾನ್ ಸಿಟಿಯಲ್ಲಿ ಕಮ್ಮಿಯಾಗಿಲ್ಲ ಜಾವಾ ಕ್ರೇಜ್

ಆ ಕಾಲದ ಸಿನಿಮಾ ಹೀರೋಗಳು ನಾಯಕಿಯರನ್ನು ಕೂರಿಸಿಕೊಂಡು ಓಡುತ್ತಿದ್ದ ವಾಹನ ಕೂಡ ಇದೇ. ಇಂಥಾ ಬೈಕ್ ಏರಿ, ಪ್ರೀತಿಸಿದ ಯುವತಿಯನ್ನೋ, ಮೆಚ್ಚಿನ ಮಡದಿಯನ್ನೋ, ಕಾಲೇಜಿನ ಗರ್ಲ್ಸ್ ಫ್ರೆಂಡ್ ಅನ್ನೋ ಹಿಂದೆ ಕೂರಿಸಿಕೊಂಡು- ಬೈಕ್ ಓಡಿಸುವುದು ಆ ಕಾಲದ ‘ಹೀರೋಯಿಸಂ' ಆಗಿತ್ತು.

ಜಾವಾ ಯೆಜ್ಡಿ ಬೈಕ್ ರ‍್ಯಾಲಿ- ಸಿಲಿಕಾನ್ ಸಿಟಿಯಲ್ಲಿ ಕಮ್ಮಿಯಾಗಿಲ್ಲ ಜಾವಾ ಕ್ರೇಜ್

ಅಂದು ಹೀರೋಯಿಸಂ ಮೆರೆದ ಅನೇಕರು ಇಂದು ಹಿರಿಯ ನಾಗರಿಕರು. ವಿಶೇಷ ಅಂದ್ರೆ, ಅಂದು ಬೈಕ್ ಓಡಿಸಿದವರು ಇಂದಿನ ಬೈಕ್ ರ‍್ಯಾಲಿಯಲ್ಲಿ ಕೂಡಾ ಭಾಗಿಯಾಗಿಗುವ ಮೂಲಕ ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದು ಯುವಕರನ್ನು ನಾಚಿಸುವಂತಿತ್ತು.

ಜಾವಾ ಯೆಜ್ಡಿ ಬೈಕ್ ರ‍್ಯಾಲಿ- ಸಿಲಿಕಾನ್ ಸಿಟಿಯಲ್ಲಿ ಕಮ್ಮಿಯಾಗಿಲ್ಲ ಜಾವಾ ಕ್ರೇಜ್

ಈ ಎಲ್ಲ ಕಾರಣಕ್ಕಾಗಿಯೋ ಏನೋ, ಬಹುತೇಕರಿಗೆ ಯೆಜ್ಡಿ ಎಂದರೆ ಆ್ಯಂಟಿಕ್ ಪೀಸ್ ! ಅದನ್ನು ಜತನದಿಂದಲೇ ಮನೆಯಲ್ಲಿಟ್ಟುಕೊಂಡು ರ‍್ಯಾಲಿಗಳ ಸಂದರ್ಭದಲ್ಲಿ ಬೈಕ್ ಏರಿ, ಚಿರ ಯೌವನಿಗರಾಗುತ್ತಾರೆ. ಭಾನುವಾರ ನಡೆದ ರ‍್ಯಾಲಿಯಲ್ಲೂ ಕೂಡಾ ಯೆಜ್ಡಿ ಏರಿದವರಲ್ಲಿ ಯುವಕರೂ ಇದ್ದರು. ಜೊತೆಗೆ ಹಿರಿಯರಂತೆ ಅವರು ಕೂಡ ಜೋಶ್‌ನಲ್ಲಿ ಬೈಕ್ ಓಡಿಸಿದ್ದು ವಿಶೇಷವಾಗಿತ್ತು.

ಜಾವಾ ಯೆಜ್ಡಿ ಬೈಕ್ ರ‍್ಯಾಲಿ- ಸಿಲಿಕಾನ್ ಸಿಟಿಯಲ್ಲಿ ಕಮ್ಮಿಯಾಗಿಲ್ಲ ಜಾವಾ ಕ್ರೇಜ್

ಐಕಾನಿಕ್ 'ಜಾವಾ' ಬೈಕ್ ಗಳಿಗೆ ಪುನರ್ಜ್ಮನ!

1996ರಿಂದಲೇ ಜಾವಾ ಸಂಸ್ಥೆಯು ತನ್ನ ಐಕಾನಿಕ್ ಮೋಟಾರ್‌ಸೈಕಲ್‌ಗಳ ನಿರ್ಮಾಣವನ್ನು ಕೊನೆಗೊಳಿಸಿತ್ತು. ಇದೀಗ ಮಹೀಂದ್ರ ಜಾವಾ ಬ್ರಾಂಡ್ ಹೆಸರಲ್ಲಿ ಮಾರಾಟ ಹಕ್ಕು ಗಿಟ್ಟಿಸಿಕೊಳ್ಳುವ ಮೂಲಕ ಮರು ಜೀವ ಪಡೆಯುವ ಕಾಲ ಸನ್ನಿಹತವಾಗಿದೆ.

ಜಾವಾ ಯೆಜ್ಡಿ ಬೈಕ್ ರ‍್ಯಾಲಿ- ಸಿಲಿಕಾನ್ ಸಿಟಿಯಲ್ಲಿ ಕಮ್ಮಿಯಾಗಿಲ್ಲ ಜಾವಾ ಕ್ರೇಜ್

ಬ್ರಿಟನ್‌ನ ಅತಿ ಹಳೆಯ ಬಿಎಸ್‌ಎ ಮೋಟಾರ್ ಸೈಕಲ್ ಸಂಸ್ಥೆಯನ್ನು ಖರೀದಿಸುವ ಮೂಲಕ ದೇಶದೆಲ್ಲ ವಾಹನ ಪ್ರೇಮಿಗಳನ್ನು ಆಶ್ಚರ್ಯ ಚಕಿತಗೊಳಿಸಿರುವ ಭಾರತದ ಅಗ್ರಗಣ್ಯ ಮಹೀಂದ್ರಾ ಅಂಡ್ ಮಹೀಂದ್ರಾ ಸಂಸ್ಥೆಯೀಗ ಮಗದೊಂದು ಐಕಾನಿಕ್ ಜಾವಾ ಬ್ರಾಂಡ್ ಮಾದರಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಜಾವಾ ಯೆಜ್ಡಿ ಬೈಕ್ ರ‍್ಯಾಲಿ- ಸಿಲಿಕಾನ್ ಸಿಟಿಯಲ್ಲಿ ಕಮ್ಮಿಯಾಗಿಲ್ಲ ಜಾವಾ ಕ್ರೇಜ್

ಪ್ರೀಮಿಯಂ ಹಾಗೂ ಐಕಾನಿಕ್ ಮೋಟಾರ್ ಸೈಕಲ್ ವಿಭಾಗವನ್ನು ಗುರಿ ಮಾಡಲಿರುವ ಮಹೀಂದ್ರ, ಹಳೆಯ ಜೀವನಶೈಲಿಯನ್ನು ಹೊಸ ರೀತಿಯಲ್ಲಿ ಮರು ಸೃಷ್ಟಿ ಮಾಡಲಿದೆ.

ಜಾವಾ ಯೆಜ್ಡಿ ಬೈಕ್ ರ‍್ಯಾಲಿ- ಸಿಲಿಕಾನ್ ಸಿಟಿಯಲ್ಲಿ ಕಮ್ಮಿಯಾಗಿಲ್ಲ ಜಾವಾ ಕ್ರೇಜ್

ಮಹೀಂದ್ರಾ ಅಂಗ ಸಂಸ್ಥೆಯಾಗಿರುವ ಕ್ಲಾಸಿಕ್ ಲೆಜೆಂಡ್ಸ್ ಇಂಡಿಯಾ ಮತ್ತು ಪೂರ್ವ ಏಷ್ಯಾದಲ್ಲಿ ಜಾವಾ ಬ್ರಾಂಡ್ ನಲ್ಲಿ ಹೊಸ ಉತ್ಪನ್ನಗಳನ್ನು ಮಾರಾಟ ಮಾಡಲು ಪರವಾನಗಿ ಗಿಟ್ಟಿಸಿಕೊಂಡಿದೆ. ಒಟ್ಟಿನಲ್ಲಿ ಮೋಟಾರ್‌ಸೈಕಲ್ ವಿಭಾಗದಲ್ಲಿ ಹೊಸ ದಾಖಲೆ ಸೃಷ್ಠಿಸಿದ್ದ ಜಾವಾ ಯಜ್ಡಿ ಬೈಕ್‌ಗಳು ಹೊಸತನದೊಂದಿಗೆ ಮತ್ತೆ ಮಾರುಕಟ್ಟೆ ಪ್ರವೇಶ ಪಡೆಯುತ್ತಿದ್ದು, ಆಧುನಿಕ ಭರಾಟೆಯಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಠಿಸುವ ತವಕದಲ್ಲಿವೆ ಎನ್ನಬಹುದು.

Most Read Articles

Kannada
Read more on off beat motorcycles
English summary
16th International Jawa Day Celebrations Bangalore 2018 — A Look Back To Yesterday’s Motorcycles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X