ಮೊದಲ ಬಾರಿಗೆ ಜಾವಾದಿಂದ ರೋಡ್ ಟೆಸ್ಟ್- ಹೇಗಿದೆ ಗೊತ್ತಾ ಹೊಸ ಬೈಕ್ ಪರ್ಫಾಮೆನ್ಸ್?

ದೇಶಾದ್ಯಂತ ಇದೀಗ ಮಧ್ಯಮ ಕ್ರಮಾಂಕದ ಸೂಪರ್ ಬೈಕ್‌ಗಳ ಮಾರಾಟದಲ್ಲಿ ಭಾರೀ ಬೇಡಿಕೆ ಕಂಡುಬರುತ್ತಿದ್ದು, ವಿವಿಧ ಬೈಕ್ ಉತ್ಪಾದನಾ ಸಂಸ್ಥೆಗಳು ವಿಶೇಷ ಮಾದರಿಯ ಹೊಸ ಉತ್ಪನ್ನಗಳನ್ನು ಹೊರತರುತ್ತಿವೆ. ಈ ಮಧ್ಯೆ ಮಹಿಂದ್ರಾ ಸಂಸ್ಥೆಯು ಸಹ ಬಿಎಸ್ಎ ಸಂಸ್ಥೆಯ ಜೊತೆಗೆ ಜಾವಾ ಬೈಕ್‌ಗಳಿಗೆ ಮರುಜೀವ ನೀಡುತ್ತಿರುವುದು ಸದ್ಯ ಭಾರೀ ಚರ್ಚಗೆ ಕಾರಣವಾಗಿದೆ.

ಮೊದಲ ಬಾರಿಗೆ ಜಾವಾದಿಂದ ರೋಡ್ ಟೆಸ್ಟ್- ಹೇಗಿದೆ ಗೊತ್ತಾ ಹೊಸ ಬೈಕ್ ಪರ್ಫಾಮೆನ್ಸ್?

ಜಾಗತಿಕವಾಗಿ ಬೈಕ್ ಮಾರಾಟದಲ್ಲಿ ತನ್ನದೇ ಜನಪ್ರಿಯತೆ ಹೊಂದಿರುವ ಬಿಎಸ್ಎ ಮೋಟಾರ್ ಸೈಕಲ್ ಸಂಸ್ಥೆಯು ಭಾರತದಲ್ಲಿ ಮಹೀಂದ್ರಾ ಕೈಜೋಡಿಸುವ ಮೂಲಕ ಕ್ಲಾಸಿಕ್ ಬೈಕ್ ಉತ್ಪಾದನೆಗೆ ಹೊಸ ಯೋಜನೆ ರೂಪಿಸಿದ್ದು, ಈ ಹಿನ್ನೆಲೆಯಲ್ಲಿ ಬಿಎಸ್ಎ ಸಂಸ್ಥೆಯ ಪಾಲುದಾರ ಸಂಸ್ಥೆಯಾದ ಜಾವಾ ಬೈಕ್‌ಗಳಿಗೆ ಮರುಜೀವ ತುಂಬುವ ಜವಾಬ್ದಾರಿ ಇದೀಗ ಮಹೀಂದ್ರಾ ಮೇಲಿದೆ.

ಮೊದಲ ಬಾರಿಗೆ ಜಾವಾದಿಂದ ರೋಡ್ ಟೆಸ್ಟ್- ಹೇಗಿದೆ ಗೊತ್ತಾ ಹೊಸ ಬೈಕ್ ಪರ್ಫಾಮೆನ್ಸ್?

ಭಾರತದಲ್ಲಿ 80ರ ದಶಕದಲ್ಲಿ ತನ್ನದೆ ಆದ ಜನಪ್ರಿಯತೆ ಸಾಧಿಸಿ ಕ್ಲಾಸಿಕ್ ಬೈಕ್ ಪ್ರಿಯರ ಕ್ರೇಜ್‌ಗೆ ಕಾರಣವಾಗಿದ್ದ ಜಾವಾ ಸಂಸ್ಥೆಯು ತದನಂತರದ ದಿನಗಳಲ್ಲಿ ಭಾರೀ ನಷ್ಟ ಅನುಭವಿಸುವ ಮೂಲಕ ಮಾರುಕಟ್ಟೆಯಿಂದಲೇ ನಿರ್ಗಮಿಸಿತ್ತು.

ಮೊದಲ ಬಾರಿಗೆ ಜಾವಾದಿಂದ ರೋಡ್ ಟೆಸ್ಟ್- ಹೇಗಿದೆ ಗೊತ್ತಾ ಹೊಸ ಬೈಕ್ ಪರ್ಫಾಮೆನ್ಸ್?

ಆದಾದ ಬಳಿಕ ಬಿಎಸ್ಎ ಮೋಟಾರ್ ಸೈಕಲ್ ಸಂಸ್ಥೆಯ ಪಾಲಾಗಿದ್ದ ಜಾವಾ ಸಂಸ್ಥೆಯು ವಿವಿಧ ಮಾದರಿಯ ಬೈಕ್‌ಗಳನ್ನು ನಿರ್ಮಿಸಿದ್ದರೂ ಯಾವುದೇ ಸಂಚಲನ ಮೂಡಿಸಲಿಲ್ಲ. ಇದಾದ ನಂತರ 2016ರಲ್ಲಿ ಬಿಎಸ್ಎ ಸಂಸ್ಥೆಯಲ್ಲಿ ಮಹೀಂದ್ರಾ ಸಂಸ್ಥೆಯು ಪಾಲು ಹೊಂದುವ ಮೂಲಕ ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.

ಮೊದಲ ಬಾರಿಗೆ ಜಾವಾದಿಂದ ರೋಡ್ ಟೆಸ್ಟ್- ಹೇಗಿದೆ ಗೊತ್ತಾ ಹೊಸ ಬೈಕ್ ಪರ್ಫಾಮೆನ್ಸ್?

ತದನಂತರ ಮಾರುಕಟ್ಟೆ ಅಧ್ಯಯನ ನಡೆಸಿದ ಮಹೀಂದ್ರಾ ಸಂಸ್ಥೆಯು ಜಾವಾ ಬೈಕ್ ವಿನ್ಯಾಸ ಮತ್ತು ಎಂಜಿನ್ ವಿಭಾಗದಲ್ಲಿ ಭಾರೀ ಸುಧಾರಣೆ ತರುವ ಮೂಲಕ ಇದೀಗ ಹೊಸ ಬೈಕ್ ಸಿದ್ದಗೊಳಿಸಿದ್ದು, ಈ ಮಧ್ಯೆ ಮೊದಲ ಬಾರಿಗೆ ಹೊಸ ಬೈಕ್ ಕಾರ್ಯಕ್ಷಮತೆ ಕುರಿತಾಗಿ ರೋಡ್ ಟೆಸ್ಟ್ ನಡೆಸಿದೆ.

ಮೊದಲ ಬಾರಿಗೆ ಜಾವಾದಿಂದ ರೋಡ್ ಟೆಸ್ಟ್- ಹೇಗಿದೆ ಗೊತ್ತಾ ಹೊಸ ಬೈಕ್ ಪರ್ಫಾಮೆನ್ಸ್?

ಈ ಹಿಂದಿನ ಜಾವಾ ಬೈಕ್ ವಿನ್ಯಾಸಗಳಲ್ಲೇ ಕೆಲವು ಅತ್ಯಾಧುನಿಕ ಡಿಸೈನ್ ಶೈಲಿಯನ್ನು ನೀಡಿರುವ ಮಹೀಂದ್ರಾ ಸಂಸ್ಥೆಯು ಮೂಲ ಬೈಕ್ ವಿನ್ಯಾಸಕ್ಕೆ ಯಾವುದೇ ಧಕ್ಕೆ ಬರದಂತೆ ಹೊಸ ಫೀಚರ್ಸ್ ನೀಡಿದ್ದು, ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಇದು ಭಾರೀ ಪೈಪೋಟಿ ನೀಡಲಿದೆ.

ಮೊದಲ ಬಾರಿಗೆ ಜಾವಾದಿಂದ ರೋಡ್ ಟೆಸ್ಟ್- ಹೇಗಿದೆ ಗೊತ್ತಾ ಹೊಸ ಬೈಕ್ ಪರ್ಫಾಮೆನ್ಸ್?

ಎಂಜಿನ್ ಸಾಮರ್ಥ್ಯ

ಕಳೆದ ವಾರವಷ್ಟೇ ಜಾವಾ ಬೈಕ್‌ಗಳಿಗಾಗಿ ಸಿದ್ದಪಡಿಸಲಾಗಿರುವ ಎಂಜಿನ್ ಮಾದರಿಯನ್ನು ಬಹಿರಂಗಗೊಳಿಸಿದ್ದ ಮಹೀಂದ್ರಾ ಸಂಸ್ಥೆಯು, ಬಿಎಸ್- 6 ವೈಶಿಷ್ಟ್ಯತೆಯುಳ್ಳ 293-ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ (ಡ್ಯುಯಲ್ ಹೆಡ್ ಕ್ಯಾಮ್) ಎಂಜಿನ್ ಜೋಡಣೆ ಮಾಡಲಿದೆ.

ಮೊದಲ ಬಾರಿಗೆ ಜಾವಾದಿಂದ ರೋಡ್ ಟೆಸ್ಟ್- ಹೇಗಿದೆ ಗೊತ್ತಾ ಹೊಸ ಬೈಕ್ ಪರ್ಫಾಮೆನ್ಸ್?

ಈ ಮೂಲಕ 27-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರುವ ಜಾವಾ ಹೊಸ ಎಂಜಿನ್ ಮಾದರಿಯು, 2020ರ ವೇಳೆಗೆ ಕಡ್ಡಾಯವಾಗಿ ಜಾರಿಯಾಗಲಿರುವ ಬಿಎಸ್-6 ವೈಶಿಷ್ಟ್ಯತೆಯನ್ನು ಈಗಲೇ ಪಡೆದುಕೊಳ್ಳುತ್ತಿರುವುದು ಮತ್ತೊಂದು ವಿಶೇಷ.

ಮೊದಲ ಬಾರಿಗೆ ಜಾವಾದಿಂದ ರೋಡ್ ಟೆಸ್ಟ್- ಹೇಗಿದೆ ಗೊತ್ತಾ ಹೊಸ ಬೈಕ್ ಪರ್ಫಾಮೆನ್ಸ್?

ಇದರೊಂದಿಗೆ ಮಾರ್ಡನ್ ರೆಟ್ರೋ ಲುಕ್ ಪಡೆದುಕೊಳ್ಳಲಿರುವ ಜಾವಾ ಬೈಕ್‌ಗಳಲ್ಲಿ ಸವಾರರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಇವು 300ಸಿಸಿ ಬೈಕ್ ವಿಭಾಗದಲ್ಲೇ ವಿಶೇಷ ಎನ್ನಿಸುವ ಮೂಲಕ ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯಲಿವೆ.

ಮೊದಲ ಬಾರಿಗೆ ಜಾವಾದಿಂದ ರೋಡ್ ಟೆಸ್ಟ್- ಹೇಗಿದೆ ಗೊತ್ತಾ ಹೊಸ ಬೈಕ್ ಪರ್ಫಾಮೆನ್ಸ್?

ನವೆಂಬರ್ 15ಕ್ಕೆ ಅನಾವರಣ..!

ಸದ್ಯ ಹೊಸ ಬೈಕ್ ಎಂಜಿನ್ ಮಾತ್ರ ಬಹಿರಂಗ ಮಾಡಿರುವ ಮಹೀಂದ್ರಾ ಸಂಸ್ಥೆಯು ನವೆಂಬರ್ 15ರಂದು ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿರುವ ಹೊಸ ಬೈಕ್ ಮಾದರಿಯನ್ನು ಸಹ ಅನಾವರಣಗೊಳಿಸಲಿದೆ.

ಮೊದಲ ಬಾರಿಗೆ ಜಾವಾದಿಂದ ರೋಡ್ ಟೆಸ್ಟ್- ಹೇಗಿದೆ ಗೊತ್ತಾ ಹೊಸ ಬೈಕ್ ಪರ್ಫಾಮೆನ್ಸ್?

ಈ ಬಗ್ಗೆ ಮಹೀಂದ್ರಾ ಸಂಸ್ಥೆಯ ಅಧ್ಯಕ್ಷ ಆನಂದ್ ಮಹೀಂದ್ರಾ ಅವರೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದು, ನವೆಂಬರ್ 15ರಂದು ಬೈಕ್ ಅನಾವರಣಗೊಳಿಸಿದ ನಂತರ ಮುಂದಿನ ಕೆಲವೇ ದಿನಗಳಲ್ಲಿ ಹೊಸ ಬೈಕ್ ಮಾರಾಟಕ್ಕೆ ಲಭ್ಯವಾಗಲಿವೆ.

MOST READ: ವಿಮಾನವನ್ನೇ ನಿರ್ಮಿಸಲು ಮುಂದಾಗಿದ್ದ ರೈತನೊಬ್ಬ ಕೊನೆಗೆ ಮಾಡಿದ್ದೇನು ಗೊತ್ತಾ?

ಮೊದಲ ಬಾರಿಗೆ ಜಾವಾದಿಂದ ರೋಡ್ ಟೆಸ್ಟ್- ಹೇಗಿದೆ ಗೊತ್ತಾ ಹೊಸ ಬೈಕ್ ಪರ್ಫಾಮೆನ್ಸ್?

ಬೈಕ್ ಬೆಲೆ(ಅಂದಾಜು)

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್‌ಗಳನ್ನೇ ಪ್ರಮುಖ ಪ್ರತಿಸ್ಪರ್ಧಿಯಾಗಿಸಿಕೊಂಡಿರುವ ಮಹೀಂದ್ರಾ ಸಂಸ್ಥೆಯು ಹೊಸ ಜಾವಾ ಬೈಕ್‌ಗಳ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ರೂ. 1.70 ಲಕ್ಷದಿಂದ ರೂ.2 ಲಕ್ಷದ ತನಕ ನಿಗದಿಗೊಳಿಸುವ ಸಾಧ್ಯತೆಗಳಿವೆ.

ಮೊದಲ ಬಾರಿಗೆ ಜಾವಾದಿಂದ ರೋಡ್ ಟೆಸ್ಟ್- ಹೇಗಿದೆ ಗೊತ್ತಾ ಹೊಸ ಬೈಕ್ ಪರ್ಫಾಮೆನ್ಸ್?

ಇಲ್ಲಿ ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಜಾವಾ ಬೈಕ್‌ಗಳಿಗೆ ಸಿದ್ದಗೊಳಿಸಲಾಗಿರುವ ಹೊಸ ಎಂಜಿನ್ ಹೋಲಿಕೆಯು ಸದ್ಯ ಮೊಜೊ ಎಕ್ಸ್‌ಟಿ300 ಬೈಕ್‌ಗಳಲ್ಲಿಯೂ ಸಹ ಇದ್ದು, ಹೀಗಾಗಿ ಬೈಕ್ ಬೆಲೆಗಳು ರೂ.2 ಲಕ್ಷ ದಾಟುವುದಿಲ್ಲ ಎನ್ನಲಾಗಿದೆ.

MOST READ: ದೀಪಾವಳಿ ಹಬ್ಬಕ್ಕಾಗಿ ಉದ್ಯೋಗಿಗಳಿಗೆ 1600 ಕಾರುಗಳನ್ನು ಗಿಫ್ಟ್ ನೀಡಿದ ಉದ್ಯಮಿ..!

ಮೊದಲ ಬಾರಿಗೆ ಜಾವಾದಿಂದ ರೋಡ್ ಟೆಸ್ಟ್- ಹೇಗಿದೆ ಗೊತ್ತಾ ಹೊಸ ಬೈಕ್ ಪರ್ಫಾಮೆನ್ಸ್?

ಒಟ್ಟಿನಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಖರೀದಿದಾರರಿಗೆ ಪರ್ಯಾಯ ಆಯ್ಕೆಯಾಗಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಜಾವಾ ಬೈಕ್‌ಗಳು ಬೆಲೆ ಮತ್ತು ನೀಡುವ ಸೌಲಭ್ಯಗಳ ಆಧಾರ ಮೇಲೆ ಭವಿಷ್ಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿವೆ.

Most Read Articles

Kannada
English summary
Jawa Motorcycle Spotted Testing In India — To Rival Royal Enfield.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X