ಬಿಡುಗಡೆಗೆ ಸಿದ್ಧಗೊಂಡಿರುವ ಜಾವಾ ಬೈಕ್‍ಗಳ ಬೆಲೆ ಮತ್ತು ಬುಕ್ಕಿಂಗ್ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಡ್ರೈವ್‌ಸ್ಪಾರ್ಕ್ ತಂಡವು ಕಳೆದ ಒಂದು ತಿಂಗಳಿನಿಂದ ಹೊಸ ಜಾವಾ ಬೈಕ್‌ಗಳ ಬಿಡುಗಡೆಯ ಕುರಿತಾಗಿ ಹಲವು ವರದಿಗಳನ್ನು ನೀಡುತ್ತಲೇ ಇದ್ದೇವೆ. ಇಂದು ಕೂಡಾ ಹೊಸ ಜಾವಾ ಬೈಕ್‌ ಬಿಡುಗಡೆಯ ಕುರಿತಾಗಿ ಹೊಸ ವಿಚಾರವೊಂದು ನಮಗೆ ತಿಳಿದು ಬಂದಿದ್ದು, ಭಾರತದಲ್ಲಿ ಜಾವಾ ಸಂಸ್ಥೆಯು ಗ್ರಾಹಕರ ಬೇಡಿಕೆ ಅನುಗುಣವಾಗಿ ವಿವಿಧ ಮಾದರಿಯ ಒಟ್ಟು ನಾಲ್ಕು ಬೈಕ್‌ಗಳನ್ನು ಬಿಡುಗಡೆಗೊಳಿಸಲು ಸಿದ್ದಗೊಂಡಿದೆಯೆಂತೆ.

ಭಾರತದಲ್ಲಿ ಒಂದಲ್ಲಾ ಬರೋಬ್ಬರಿ 4 ವಿವಿಧ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಜಾವಾ..!

ಭಾರತದಲ್ಲಿ ಮಹೀಂದ್ರಾ ಪಾಲುದಾರಿಕೆಯಲ್ಲಿ ಜಾವಾ ಹೊಸ ಬೈಕ್‌ಗಳು ಬಿಡುಗಡೆಯಾಗುತ್ತಿದ್ದು, ಬಿಡುಗಡೆಯಾಗಲಿರುವ ಕೆಲವು ಬೈಕ್ ಮಾದರಿಗಳ ಉತ್ಪಾದನಾ ಆವೃತ್ತಿಗಳ ಚಿತ್ರಗಳು ಡ್ರೈವ್‌ಸ್ಪಾರ್ಕ್ ತಂಡಕ್ಕೆ ಲಭ್ಯವಾಗಿವೆ. ಸಿಕ್ಕಿರುವ ಮಾಹಿತಿ ಪ್ರಕಾರ ಜಾವಾ ಹೊಸ ಬೈಕ್‌ಗಳ ಖರೀದಿಗಾಗಿ ಬೆಂಗಳೂರಿನಲ್ಲಿನ ಡೀಲರ್‍‍ಗಳು ಅನಧಿಕೃತವಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಈಗಾಗಲೇ ಶುರು ಮಾಡಿದ್ದು, ಆಸಕ್ತ ಗ್ರಾಹಕರು ಹತ್ತಿರದ ಜಾವಾ ಡೀಲರ್‍‍ಗಳ ಬಳಿ 1 ಸಾವಿರ ರೂಪಾಯಿ ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆಯೆಂತೆ.

ಭಾರತದಲ್ಲಿ ಒಂದಲ್ಲಾ ಬರೋಬ್ಬರಿ 4 ವಿವಿಧ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಜಾವಾ..!

ಇನ್ನು ಜಾವಾ ಬೈಕ್ ಭಾರತದಲ್ಲಿ ಮರುಬಿಡುಗಡೆಯಾಗುತ್ತೆ ಎಂದಿದ್ದೇ ತಡ ರಾಯಲ್ ಎನ್‌ಫೀಲ್ಡ್ ಸಂಸ್ಥೆಗೆ ಒಂದು ರೀತಿ ತಳಮಳ ಶುರುವಾಗಿದೆ ಅಂದ್ರೆ ತಪ್ಪಾಗುವುದಿಲ್ಲ. ಇದಕ್ಕೆ ಕಾರಣ, ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗಿಂತಾ ಅಂದರೆ ರೂ.1.5 ಲಕ್ಷದ ಪ್ರಾರಾಂಭಿಕ ಬೆಲೆಯಲ್ಲಿ ಬಿಡುಗಡೆಗೊಳಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಷ್ಟು ದಿನಗಳ ಕಾಲ ಹೊಸ ಜಾವಾ ಬೈಕ್ ಮೊದಲಿನ ಗತ್ತು ಪಡೆದುಕೊಂಡಿರುತ್ತೊ ಇಲ್ಲವೋ ಅನ್ನುವ ಗೊಂದಲಗಳಿದ್ದವು. ಆದ್ರೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿರುವ ಹೊಸ ಜಾವಾ ಬೈಕ್‌ಗಳು ಆರ್‌ಇ ಬೈಕ್‌ಗಳನ್ನೇ ಟಾರ್ಗೆಟ್ ಮಾಡಿರುವುದು ಸ್ಪಷ್ಟವಾಗಿದೆ.

ಭಾರತದಲ್ಲಿ ಒಂದಲ್ಲಾ ಬರೋಬ್ಬರಿ 4 ವಿವಿಧ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಜಾವಾ..!

ಜಾಗತಿಕವಾಗಿ ಬೈಕ್ ಮಾರಾಟದಲ್ಲಿ ತನ್ನದೇ ಜನಪ್ರಿಯತೆ ಹೊಂದಿರುವ ಬಿಎಸ್ಎ ಮೋಟಾರ್ ಸೈಕಲ್ ಸಂಸ್ಥೆಯು ಭಾರತದಲ್ಲಿ ಮಹೀಂದ್ರಾ ಕೈಜೋಡಿಸುವ ಮೂಲಕ ಕ್ಲಾಸಿಕ್ ಬೈಕ್ ಉತ್ಪಾದನೆಗೆ ಹೊಸ ಯೋಜನೆ ರೂಪಿಸಿದ್ದು, ಈ ಹಿನ್ನೆಲೆಯಲ್ಲಿ ಬಿಎಸ್ಎ ಸಂಸ್ಥೆಯ ಪಾಲುದಾರ ಸಂಸ್ಥೆಯಾದ ಜಾವಾ ಬೈಕ್‌ಗಳಿಗೆ ಮರುಜೀವ ತುಂಬುವ ಜವಾಬ್ದಾರಿ ಇದೀಗ ಮಹೀಂದ್ರಾ ಮೇಲಿದೆ.

ಭಾರತದಲ್ಲಿ ಒಂದಲ್ಲಾ ಬರೋಬ್ಬರಿ 4 ವಿವಿಧ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಜಾವಾ..!

ಭಾರತದಲ್ಲಿ 80ರ ದಶಕದಲ್ಲಿ ತನ್ನದೆ ಆದ ಜನಪ್ರಿಯತೆ ಸಾಧಿಸಿ ಕ್ಲಾಸಿಕ್ ಬೈಕ್ ಪ್ರಿಯರ ಕ್ರೇಜ್‌ಗೆ ಕಾರಣವಾಗಿದ್ದ ಜಾವಾ ಸಂಸ್ಥೆಯು ತದನಂತರದ ದಿನಗಳಲ್ಲಿ ಭಾರೀ ನಷ್ಟ ಅನುಭವಿಸುವ ಮೂಲಕ ಮಾರುಕಟ್ಟೆಯಿಂದಲೇ ನಿರ್ಗಮಿಸಿತ್ತು.

ಭಾರತದಲ್ಲಿ ಒಂದಲ್ಲಾ ಬರೋಬ್ಬರಿ 4 ವಿವಿಧ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಜಾವಾ..!

ಆ ಬಳಿಕ ಬಿಎಸ್ಎ ಮೋಟಾರ್ ಸೈಕಲ್ ಸಂಸ್ಥೆಯ ಪಾಲಾಗಿದ್ದ ಜಾವಾ ಸಂಸ್ಥೆಯು ವಿವಿಧ ಮಾದರಿಯ ಬೈಕ್‌ಗಳನ್ನು ನಿರ್ಮಿಸಿದ್ದರೂ ಯಾವುದೇ ಸಂಚಲನ ಮೂಡಿಸಲಿಲ್ಲ. ಇದಾದ ನಂತರ 2016ರಲ್ಲಿ ಬಿಎಸ್ಎ ಸಂಸ್ಥೆಯಲ್ಲಿ ಮಹೀಂದ್ರಾ ಸಂಸ್ಥೆಯು ಪಾಲು ಹೊಂದುವ ಮೂಲಕ ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.

ಭಾರತದಲ್ಲಿ ಒಂದಲ್ಲಾ ಬರೋಬ್ಬರಿ 4 ವಿವಿಧ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಜಾವಾ..!

ತದನಂತರ ಭಾರತದಲ್ಲಿ ವಿವಿಧ ರೀತಿಯ ಮಾರುಕಟ್ಟೆ ಅಧ್ಯಯನ ನಡೆಸಿದ ಮಹೀಂದ್ರಾ ಸಂಸ್ಥೆಯು ಜಾವಾ ಬೈಕ್ ವಿನ್ಯಾಸ ಮತ್ತು ಎಂಜಿನ್ ವಿಭಾಗದಲ್ಲಿ ಭಾರೀ ಸುಧಾರಣೆ ತರುವ ಮೂಲಕ ಇದೀಗ ಹೊಸ ಬೈಕ್‌ಗಳನ್ನು ಸಿದ್ದಗೊಳಿಸಿದ್ದು, ಈ ಮಧ್ಯೆ ಮೊದಲ ಬಾರಿಗೆ ಹೊಸ ಬೈಕ್ ಕಾರ್ಯಕ್ಷಮತೆ ಕುರಿತಾಗಿ ರೋಡ್ ಟೆಸ್ಟ್ ನಡೆಸುತ್ತಿದೆ.

ಭಾರತದಲ್ಲಿ ಒಂದಲ್ಲಾ ಬರೋಬ್ಬರಿ 4 ವಿವಿಧ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಜಾವಾ..!

ಈ ಹಿಂದಿನ ಜಾವಾ ಬೈಕ್ ವಿನ್ಯಾಸಗಳಲ್ಲೇ ಕೆಲವು ಅತ್ಯಾಧುನಿಕ ಡಿಸೈನ್ ಶೈಲಿಯನ್ನು ನೀಡಿರುವ ಮಹೀಂದ್ರಾ ಸಂಸ್ಥೆಯು ಮೂಲ ಬೈಕ್‌ಗಳ ವಿನ್ಯಾಸಕ್ಕೆ ಯಾವುದೇ ಧಕ್ಕೆ ಬರದಂತೆ ಹೊಸ ಫೀಚರ್ಸ್ ನೀಡಿದ್ದು, ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಇದು ಭಾರೀ ಪೈಪೋಟಿ ನೀಡಲಿದೆ.

ಭಾರತದಲ್ಲಿ ಒಂದಲ್ಲಾ ಬರೋಬ್ಬರಿ 4 ವಿವಿಧ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಜಾವಾ..!

ಹೊಸ ಬೈಕ್‌ಗಳ ಎಂಜಿನ್ ವೈಶಿಷ್ಟ್ಯ

ಸಿಕ್ಕಿರುವ ಮಾಹಿತಿಗಳ ಪ್ರಕಾರ ಹೊಸ ಜಾವಾ ಬೈಕ್‌ಗಳು ಬಿಎಸ್- 6 ವೈಶಿಷ್ಟ್ಯತೆಯುಳ್ಳ 300ಸಿಸಿ ಮತ್ತು 350ಸಿಸಿ ಸಿಂಗಲ್ ಸಿಲಿಂಡರ್ (ಡ್ಯುಯಲ್ ಹೆಡ್ ಕ್ಯಾಮ್) ಎಂಜಿನ್ ಜೋಡಣೆ ಮಾಡಲಿದೆ ಎನ್ನಲಾಗಿದೆ.

ಭಾರತದಲ್ಲಿ ಒಂದಲ್ಲಾ ಬರೋಬ್ಬರಿ 4 ವಿವಿಧ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಜಾವಾ..!

ಇದರೊಂದಿಗೆ ಮಾರ್ಡನ್ ರೆಟ್ರೋ ಲುಕ್ ಪಡೆದುಕೊಳ್ಳಲಿರುವ ಜಾವಾ ಬೈಕ್‌ಗಳಲ್ಲಿ ಸವಾರರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಇವು 300ಸಿಸಿ ಬೈಕ್ ವಿಭಾಗದಲ್ಲೇ ವಿಶೇಷ ಎನ್ನಿಸುವ ಮೂಲಕ ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯಲಿವೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಭಾರತದಲ್ಲಿ ಒಂದಲ್ಲಾ ಬರೋಬ್ಬರಿ 4 ವಿವಿಧ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಜಾವಾ..!

ಬೈಕ್ ಬೆಲೆ(ಅಂದಾಜು)

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್‌ಗಳನ್ನೇ ಪ್ರಮುಖ ಪ್ರತಿಸ್ಪರ್ಧಿಯಾಗಿಸಿಕೊಂಡಿರುವ ಮಹೀಂದ್ರಾ ಸಂಸ್ಥೆಯು ಹೊಸ ಜಾವಾ ಬೈಕ್‌ಗಳ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ರೂ. 1.50 ಲಕ್ಷದದಿಂದ ಪ್ರಾರಂಭಿಸುವ ಸಾಧ್ಯತೆಗಳಿವೆ.

ಭಾರತದಲ್ಲಿ ಒಂದಲ್ಲಾ ಬರೋಬ್ಬರಿ 4 ವಿವಿಧ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಜಾವಾ..!

ಇಲ್ಲಿ ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಜಾವಾ ಬೈಕ್‌ಗಳಿಗೆ ಸಿದ್ದಗೊಳಿಸಲಾಗಿರುವ ಹೊಸ ಎಂಜಿನ್ ಹೋಲಿಕೆಯು ಸದ್ಯ ಮೊಜೊ ಎಕ್ಸ್‌ಟಿ300 ಬೈಕ್‌ಗಳಲ್ಲಿಯೂ ಸಹ ಇದ್ದು, ಹೀಗಾಗಿ ಬೈಕ್ ಬೆಲೆಗಳು ರೂ.1.5 ಲಕ್ಷ ದಾಟುವುದಿಲ್ಲ ಎನ್ನಲಾಗಿದೆ.

MOST READ: ಹರಾಜಿಗಿಡಲಾಗಿರುವ ಕಾಶ್ಮೀರ ಮಹಾರಾಜ ಹರಿ ಸಿಂಗ್ ಕಾರಿನ ಬೆಲೆ ಎಷ್ಟು ಗೊತ್ತಾ?

ಭಾರತದಲ್ಲಿ ಒಂದಲ್ಲಾ ಬರೋಬ್ಬರಿ 4 ವಿವಿಧ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಜಾವಾ..!

ಒಟ್ಟಿನಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಖರೀದಿದಾರರಿಗೆ ಪರ್ಯಾಯ ಆಯ್ಕೆಯಾಗಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಜಾವಾ ಬೈಕ್‌ಗಳು ಬೆಲೆ ಮತ್ತು ನೀಡುವ ಸೌಲಭ್ಯಗಳ ಆಧಾರದ ಮೇಲೆ ಭವಿಷ್ಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿವೆ.

Most Read Articles

Kannada
English summary
Spy Pics: Jawa 350cc And 300cc Spied; India Launch On November 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X