Just In
- 10 min ago Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- 1 hr ago ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- 2 hrs ago ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- 2 hrs ago Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
Don't Miss!
- News Nandi Hills: ನಂದಿಬೆಟ್ಟದ ಕಡೆ ಹೊರಡುವ ಪ್ರವಾಸಿಗರೇ ಇಲ್ಲಿ ಗಮನಿಸಿ
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಯಲ್ ಎನ್ಫೀಲ್ಡ್ಗೆ ಟಕ್ಕರ್ ನೀಡಲು ಸಜ್ಜಾದ ಜಾವಾ ಮೊದಲ ಬೈಕ್ ಹೇಗಿರಲಿದೆ ಗೊತ್ತಾ?
ದೇಶಾದ್ಯಂತ ಇದೀಗ ಮಧ್ಯಮ ಕ್ರಮಾಂಕದ ಸೂಪರ್ ಬೈಕ್ಗಳ ಮಾರಾಟದಲ್ಲಿ ಭಾರೀ ಬೇಡಿಕೆ ಕಂಡುಬರುತ್ತಿದ್ದು, ವಿವಿಧ ಬೈಕ್ ಉತ್ಪಾದನಾ ಸಂಸ್ಥೆಗಳು ವಿಶೇಷ ಮಾದರಿಯ ಹೊಸ ಉತ್ಪನ್ನಗಳನ್ನು ಹೊರತರುತ್ತಿವೆ. ಈ ಮಧ್ಯೆ ಮಹಿಂದ್ರಾ ಸಂಸ್ಥೆಯು ಸಹ ಬಿಎಸ್ಎ ಸಂಸ್ಥೆಯ ಜೊತೆಗೆ ಜಾವಾ ಬೈಕ್ಗಳಿಗೆ ಮರುಜೀವ ನೀಡುತ್ತಿರುವುದು ಸದ್ಯ ಭಾರೀ ಚರ್ಚಗೆ ಕಾರಣವಾಗಿದೆ.
ಜಾಗತೀಕವಾಗಿ ಬೈಕ್ ಮಾರಾಟದಲ್ಲಿ ತನ್ನದೆ ಜನಪ್ರಿಯತೆ ಹೊಂದಿರುವ ಬಿಎಸ್ಎ ಮೋಟಾರ್ ಸೈಕಲ್ ಸಂಸ್ಥೆಯು ಭಾರತದಲ್ಲಿ ಮಹೀಂದ್ರಾ ಕೈಜೋಡಿಸುವ ಮೂಲಕ ಕ್ಲಾಸಿಕ್ ಬೈಕ್ ಉತ್ಪಾದನೆಗೆ ಹೊಸ ಯೋಜನೆ ರೂಪಿಸಿದ್ದು, ಈ ಹಿನ್ನೆಲೆಯಲ್ಲಿ ಬಿಎಸ್ಎ ಸಂಸ್ಥೆಯ ಪಾಲುದಾರ ಸಂಸ್ಥೆಯಾದ ಜಾವಾ ಬೈಕ್ಗಳಿಗೆ ಮರುಜೀವ ತುಂಬುವ ಜವಾಬ್ದಾರಿ ಇದೀಗ ಮಹೀಂದ್ರಾ ಮೇಲಿದೆ.
ಭಾರತದಲ್ಲಿ 80ರ ದಶಕದಲ್ಲಿ ತನ್ನದೆ ಆದ ಜನಪ್ರಿಯತೆ ಸಾಧಿಸಿ ಕ್ಲಾಸಿಕ್ ಬೈಕ್ ಪ್ರಿಯರ ಕ್ರೇಜ್ಗೆ ಕಾರಣವಾಗಿದ್ದ ಜಾವಾ ಸಂಸ್ಥೆಯು ತದನಂತರದ ದಿನಗಳಲ್ಲಿ ಭಾರೀ ನಷ್ಟ ಅನುಭವಿಸುವ ಮೂಲಕ ಮಾರುಕಟ್ಟೆಯಿಂದಲೇ ನಿರ್ಗಮಿಸಿತ್ತು.
ಆದಾದ ಬಳಿಕ ಬಿಎಸ್ಎ ಮೋಟಾರ್ ಸೈಕಲ್ ಸಂಸ್ಥೆಯ ಪಾಲಾಗಿದ್ದ ಜಾವಾ ಸಂಸ್ಥೆಯು ವಿವಿಧ ಮಾದರಿಯ ಬೈಕ್ಗಳನ್ನು ನಿರ್ಮಿಸಿದ್ದರೂ ಯಾವುದೇ ಸಂಚಲನ ಮೂಡಿಸಲಿಲ್ಲ. ಇದಾದ ನಂತರ 2016ರಲ್ಲಿ ಬಿಎಸ್ಎ ಸಂಸ್ಥೆಯಲ್ಲಿ ಮಹೀಂದ್ರಾ ಸಂಸ್ಥೆಯು ಪಾಲು ಹೊಂದುವ ಮೂಲಕ ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.
ತದನಂತರ ಮಾರುಕಟ್ಟೆ ಅಧ್ಯಯನ ನಡೆಸಿದ ಮಹೀಂದ್ರಾ ಸಂಸ್ಥೆಯು ಜಾವಾ ಬೈಕ್ ವಿನ್ಯಾಸ ಮತ್ತು ಎಂಜಿನ್ ವಿಭಾಗದಲ್ಲಿ ಭಾರೀ ಸುಧಾರಣೆ ತರುವ ಮೂಲಕ ಇದೀಗ ಹೊಸ ಬೈಕ್ ಸಿದ್ದಗೊಳಿಸಿದ್ದು, ಕಳೆದ 2 ದಿನಗಳ ಹಿಂದಷ್ಟೇ ಬಿಡುಗಡೆಯಾಗಲಿರುವ ಮೊದಲ ಬೈಕಿನ ಎಂಜಿನ್ ಮಾದರಿಯನ್ನು ಸಹ ಬಹಿರಂಗಗೊಳಿಸಿದೆ.
ಈ ಹಿಂದಿನ ಜಾವಾ ಬೈಕ್ ವಿನ್ಯಾಸಗಳಲ್ಲೇ ಕೆಲವು ಅತ್ಯಾಧುನಿಕ ಡಿಸೈನ್ ಶೈಲಿಯನ್ನು ನೀಡಿರುವ ಮಹೀಂದ್ರಾ ಸಂಸ್ಥೆಯು ಮೂಲ ಬೈಕ್ ವಿನ್ಯಾಸಕ್ಕೆ ಯಾವುದೇ ಧಕ್ಕೆ ಬರದಂತೆ ಹೊಸ ಫೀಚರ್ಸ್ ನೀಡಿದ್ದು, ರಾಯಲ್ ಎನ್ಫೀಲ್ಡ್ ಬೈಕ್ಗಳಿಗೆ ಇದು ಭಾರೀ ಪೈಪೋಟಿ ನೀಡಲಿದೆ.
ಎಂಜಿನ್ ಸಾಮರ್ಥ್ಯ
ಕಳೆದ ವಾರವಷ್ಟೇ ಜಾವಾ ಬೈಕ್ಗಳಿಗಾಗಿ ಸಿದ್ದಪಡಿಸಲಾಗಿರುವ ಎಂಜಿನ್ ಮಾದರಿಯನ್ನು ಬಹಿರಂಗಗೊಳಿಸಿದ್ದ ಮಹೀಂದ್ರಾ ಸಂಸ್ಥೆಯು, ಬಿಎಸ್- 6 ವೈಶಿಷ್ಟ್ಯತೆಯುಳ್ಳ 293-ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ (ಡ್ಯುಯಲ್ ಹೆಡ್ ಕ್ಯಾಮ್) ಎಂಜಿನ್ ಜೋಡಣೆ ಮಾಡಲಿದೆ.
ಈ ಮೂಲಕ 27-ಬಿಎಚ್ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರುವ ಜಾವಾ ಹೊಸ ಎಂಜಿನ್ ಮಾದರಿಯು, 2020ರ ವೇಳೆಗೆ ಕಡ್ಡಾಯವಾಗಿ ಜಾರಿಯಾಗಲಿರುವ ಬಿಎಸ್-6 ವೈಶಿಷ್ಟ್ಯತೆಯನ್ನು ಈಗಲೇ ಪಡೆದುಕೊಳ್ಳುತ್ತಿರುವುದು ಮತ್ತೊಂದು ವಿಶೇಷ.
MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!
ಇದರೊಂದಿಗೆ ಮಾರ್ಡನ್ ರೆಟ್ರೋ ಲುಕ್ ಪಡೆದುಕೊಳ್ಳಲಿರುವ ಜಾವಾ ಬೈಕ್ಗಳಲ್ಲಿ ಸವಾರರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಇವು 300ಸಿಸಿ ಬೈಕ್ ವಿಭಾಗದಲ್ಲೇ ವಿಶೇಷ ಎನ್ನಿಸುವ ಮೂಲಕ ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯಲಿವೆ.
ನವೆಂಬರ್ 15ಕ್ಕೆ ಅನಾವರಣ..!
ಸದ್ಯ ಹೊಸ ಬೈಕ್ ಎಂಜಿನ್ ಮಾತ್ರ ಬಹಿರಂಗ ಮಾಡಿರುವ ಮಹೀಂದ್ರಾ ಸಂಸ್ಥೆಯು ನವೆಂಬರ್ 15ರಂದು ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿರುವ ಹೊಸ ಬೈಕ್ ಮಾದರಿಯನ್ನು ಸಹ ಅನಾವರಣಗೊಳಿಸಲಿದೆ.
ಈ ಬಗ್ಗೆ ಮಹೀಂದ್ರಾ ಸಂಸ್ಥೆಯ ಅಧ್ಯಕ್ಷ ಆನಂದ್ ಮಹೀಂದ್ರಾ ಅವರೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದು, ನವೆಂಬರ್ 15ರಂದು ಬೈಕ್ ಅನಾವರಣಗೊಳಿಸಿದ ನಂತರ ಮುಂದಿನ ಕೆಲವೇ ದಿನಗಳಲ್ಲಿ ಹೊಸ ಬೈಕ್ ಮಾರಾಟಕ್ಕೆ ಲಭ್ಯವಾಗಲಿವೆ.
ಬೈಕ್ ಬೆಲೆಗಳು(ಅಂದಾಜು)
ರಾಯಲ್ ಎನ್ಫೀಲ್ಡ್ ಕ್ಲಾಸಿಕ್ ಬೈಕ್ಗಳನ್ನೇ ಪ್ರಮುಖ ಪ್ರತಿಸ್ಪರ್ಧಿಯಾಗಿಸಿಕೊಂಡಿರುವ ಮಹೀಂದ್ರಾ ಸಂಸ್ಥೆಯು ಹೊಸ ಜಾವಾ ಬೈಕ್ಗಳ ಬೆಲೆಯನ್ನು ಎಕ್ಸ್ಶೋರೂಂ ಪ್ರಕಾರ ರೂ. 1.70 ಲಕ್ಷದಿಂದ ರೂ.2 ಲಕ್ಷದ ತನಕ ನಿಗದಿಗೊಳಿಸುವ ಸಾಧ್ಯತೆಗಳಿವೆ.
MOST READ: ಹೋಂಡಾ ಆಕ್ಟೀವಾ ಸ್ಕೂಟರ್ಗಿಂತಲೂ ದುಬಾರಿ ಈ ಹೆಲ್ಮೆಟ್ ಬೆಲೆ..!
ಇಲ್ಲಿ ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಜಾವಾ ಬೈಕ್ಗಳಿಗೆ ಸಿದ್ದಗೊಳಿಸಲಾಗಿರುವ ಹೊಸ ಎಂಜಿನ್ ಹೋಲಿಕೆಯು ಸದ್ಯ ಮೊಜೊ ಎಕ್ಸ್ಟಿ300 ಬೈಕ್ಗಳಲ್ಲಿಯೂ ಸಹ ಇದ್ದು, ಹೀಗಾಗಿ ಬೈಕ್ ಬೆಲೆಗಳು ರೂ.2 ಲಕ್ಷ ದಾಟುವುದಿಲ್ಲ ಎನ್ನಲಾಗಿದೆ.
ಒಟ್ಟಿನಲ್ಲಿ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್ ಖರೀದಿದಾರರಿಗೆ ಪರ್ಯಾಯ ಆಯ್ಕೆಯಾಗಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಜಾವಾ ಬೈಕ್ಗಳು ಬೆಲೆ ಮತ್ತು ನೀಡುವ ಸೌಲಭ್ಯಗಳ ಆಧಾರ ಮೇಲೆ ಭವಿಷ್ಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿವೆ.
ಜಾವಾ ಬೈಕ್ಗಳ ಮತ್ತಷ್ಟು ಚಿತ್ರಗಳಿಗಾಗಿ ಫೋಟೋ ಗ್ಯಾಲರಿ ನೋಡಿ..!