ಕವಾಸಕಿ ನಿಂಜಾ 400 V/S ಯಮಹಾ ವೈಜೆಡ್ಎಫ್-ಆರ್3

ಕೆಲ ದಿನಗಳ ಹಿಂದೆಯೆ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಯಮಹಾ ನಿಂಜಾ 400 ಬೈಕ್ ಹಾಗು ಯಮಹಾ ವೈಜೆಡ್ಎಫ್-ಆರ್3 ಬೈಕುಗಳು ಮಾರುಕಟ್ಟೆಯಲ್ಲಿ ಸದ್ದು ಮಾಡಲು ಶುರು ಮಾಡಿವೆ.

By Rahul Ts

ಕೆಲ ದಿನಗಳ ಹಿಂದೆಯೆ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಯಮಹಾ ನಿಂಜಾ 400 ಬೈಕ್ ಹಾಗು ಯಮಹಾ ವೈಜೆಡ್ಎಫ್-ಆರ್3 ಬೈಕುಗಳು ಮಾರುಕಟ್ಟೆಯಲ್ಲಿ ಸದ್ದು ಮಾಡಲು ಶುರು ಮಾಡಿವೆ. ಎರಡೂ ಬೈಕುಗಳು ಗ್ರಾಹಕರನ್ನು ಸೆಳೆಯಲು ಹೊಸ ವೈಶಿಷ್ಟ್ಯತೆಗಳು ಹಾಗು ವಿನ್ಯಾಸವನ್ನು ಪಡೆದುಕೊಂಡಿವೆ.

ಕವಾಸಕಿ ನಿಂಜಾ 400 V/S ಯಮಹಾ ವೈಜೆಡ್ಎಫ್-ಆರ್3

ಈ ನಿಟ್ಟಿನಲ್ಲಿ ಹೊಸದಾಗಿ ಬಿಡುಗಡೆಗೊಂಡ ಈ ಎರಡೂ ಬೈಕುಗಳಲ್ಲಿ ವಿನ್ಯಾಸ, ವೈಶಿಷ್ಟ್ಯತೆ ಹಾಗು ಬೆಲೆಯಲ್ಲಿಗ್ರಾಹಕರು ಖರೀದಿ ಮಾಡಲು ಯಾವುದು ಉತ್ತಮವೆಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ..

ಕವಾಸಕಿ ನಿಂಜಾ 400 V/S ಯಮಹಾ ವೈಜೆಡ್ಎಫ್-ಆರ್3

ವಿನ್ಯಾಸ

ಕವಾಸಕಿ ನಿಂಜಾ 400 ಬೈಕ್ ತನ್ನ ನಿಂಜಾ 300 ಬೈಕಿಗೆ ಹೋಲಿಸಿದರೆ ಶಾರ್ಪ್ ಡಿಸೈನ್ ಪಡೆದಿದ್ದು, ಟ್ವಿನ್ ಹೆಡ್‍ಲೈಟ್ ಅಗಲವಾದ ವಿಂಡ್‍ಸ್ಕ್ರೀನ್ ಹಾಗು ಮಸ್ಕ್ಯುಲರ್ ಫ್ಯುಯಲ್ ಟ್ಯಾಂಕ್‍ಅನ್ನು ಪಡೆದು ಆಕರ್ಷಕವಾದ ವಿನ್ಯಾಸವನ್ನು ಪಡೆದಿದೆ.

ಕವಾಸಕಿ ನಿಂಜಾ 400 V/S ಯಮಹಾ ವೈಜೆಡ್ಎಫ್-ಆರ್3

ಕವಾಸಕಿ ನಿಂಜಾ ಹಿಂಭಾಗವು ಎಲ್ಇಡಿ ಟೈಲ್‍ಲೈಟ್ ಹಾಗು ವಿನೂತನವಾಗಿ ಎಕ್ಸಾಸ್ಟ್ ಕ್ಯಾನಿಸ್ಟರ್ ಅನ್ನು ಪಡೆದುಕೊಂಡಿದೆ. ಇನ್ನು ಈ ಬೈಕ್ ಹಸಿರು ಹಾಗು ಕಪ್ಪು ಬಣ್ಣಗಳ ಮಿಷ್ರಣದಿಂದ ಬೈಕಿಗೆ ಸ್ಪೋರ್ಟಿ ಲುಕ್ ನೀಡಿದೆ.

ಕವಾಸಕಿ ನಿಂಜಾ 400 V/S ಯಮಹಾ ವೈಜೆಡ್ಎಫ್-ಆರ್3

ಮತ್ತೊಂದು ಕಡೆ ಯಮಹಾ ವೈಜೆಡ್ಎಫ್-ಆರ್3 ಬೈಕ್ ಕೂಡ ಶಾರ್ಪ್ ಫ್ರಂಟ್ ಹಾಗು ಟ್ವಿನ್-ಹೆಡ್‍ಲೈಟ್‍ನಿಂದ ಸಜ್ಜುಗೊಂಡಿದ್ದು, ಅಗಲವಾದ ವಿಂಡ್‍ಸ್ಕ್ರೀನ್ ಹಾಗು ಫ್ಯುಯಲ್ ಟ್ಯಾಂಕ್ ಬೈಕಿನ ಲುಕ್ ಅನ್ನು ಹೆಚ್ಚಿಸಿವೆ.

ಕವಾಸಕಿ ನಿಂಜಾ 400 V/S ಯಮಹಾ ವೈಜೆಡ್ಎಫ್-ಆರ್3

ವೈಜೆಡ್ಎಫ್-ಆರ್3 ಬೈಕ್‍ ಎಲ್ಇಡಿ ಟೈಲ್‍ಲೈಟ್, ಎಕ್ಸಾಸ್ಟ್ ಮಫ್ಲರ್ ಅನ್ನು ಕೂಡ ಪಡೆದಿದ್ದು, ಎರಡೂ ಬೈಕುಗಳು ಗ್ರಾಹಕರನ್ನು ಸೆಳೆಯಲು ಸಮಾನವಾದ ವಿನ್ಯಾಸವನ್ನು ಪಡೆದುಕೊಂಡಿವೆ.

ಒಟ್ಟಾರೆ ವಿನ್ಯಾಸದ ರೇಟಿಂಗ್

ಕವಾಸಕಿ ನಿಂಜಾ 400 - 8/10

ಯಮಹಾ YZF-R3 - 8/10

ಕವಾಸಕಿ ನಿಂಜಾ 400 V/S ಯಮಹಾ ವೈಜೆಡ್ಎಫ್-ಆರ್3

ಬೈಕುಗಳ ವೈಶಿಷ್ಟ್ಯತೆಗಳು

ಕವಾಸಕಿ ನಿಂಜಾ 400 ಬೈಕ್ ಹೊಸ ಎನ್ಟ್ರೂಮೆಂಟ್ ಕ್ಲಸ್ಟರ್‍‍ನೊಂದಿಗೆ ಪ್ರೀಮಿಯಂ ಡಿಜಿಟಲ್ ಡಿಸ್ಪ್ಲೇ, ಎಲ್ಇಡಿ ಟೈಲ್‍ಲೈಟ್ ಹಾಗು ಎಕ್ಸಾಸ್ಟ್ ಮಫ್ಲರ್ ಅನ್ನು ಪಡೆದುಕೊಂಡಿವೆ.

ಕವಾಸಕಿ ನಿಂಜಾ 400 V/S ಯಮಹಾ ವೈಜೆಡ್ಎಫ್-ಆರ್3

ಅಲ್ಲದೇ ಈ ಬೈಕ್ ಅಪ್‍ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗು ಹಿಂಭಾಗದಲ್ಲಿ ಮೊನೋಶಾಕ್ ಸಸ್ಪೆಂಷನ್ ಹಾಗು ಎರಡು ಬದಿಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಹಾಗು ಸ್ಲಿಪ್ಪರ್ ಕ್ಲಚ್‍‍ಗಳನ್ನು ಕೂಡ ಪಡೆದುಕೊಂಡಿದೆ.

ಕವಾಸಕಿ ನಿಂಜಾ 400 V/S ಯಮಹಾ ವೈಜೆಡ್ಎಫ್-ಆರ್3

ಯಮಹಾ ವೈಜೆಡ್ಎಫ್-ಆರ್3 ಬೈಕ್ ಡಿಜಿಟಲ್ ಅನಾಲಾಗ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಎಲ್ಇಡಿ ಹೆಡ್‍ಲೈಟ್, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಪೋರ್ಕ್ಸ್ ಹಾಗು ಹಿಂಭಾಗದಲ್ಲಿ ಮೊನೋಶಾಕ್ ಸಸ್ಪೆಂಷನ್ ಅನ್ನು ಪಡೆದುಕೊಂಡಿವೆ. ಇದಲ್ಲದೇ ಎರಡೂ ಬದಿಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದ್ದು ಸ್ಟ್ಯಾಂಡರ್ಡ್ ಎಬಿಎಸ್ ಅನ್ನು ಕೂಡ ಪಡೆದುಕೊಂಡಿವೆ.

ಕವಾಸಕಿ ನಿಂಜಾ 400 V/S ಯಮಹಾ ವೈಜೆಡ್ಎಫ್-ಆರ್3

ವೈಶಿಷ್ಟ್ಯತೆಗಳಲ್ಲಿ ಎರಡೂ ಬೈಕುಗಳು ಸಮಾನವಾಗಿ ಪಡಿದುಕೊಂಡಿವೆ ಆದರೆ, ಕವಾಸಕಿ ನಿಂಜಾ ಬೈಕ್ ವಿಶೇಷವಾಗಿ ಸ್ಲಿಪ್ಪರ್ ಕ್ಲಚ್ ಪಡೆದಿರುವುದನ್ನು ನಾವು ಗಮನಿಸಬೇಕಾಗುತ್ತದೆ.

ಒಟ್ಟಾರೆ ವೈಶಿಷ್ಟ್ಯತೆಗಳ ರೇಟಿಂಗ್

ಕವಾಸಕಿ ನಿಂಜಾ 400 - 8/10

ಯಮಹಾ YZF-R3 - 7.5/10

ಕವಾಸಕಿ ನಿಂಜಾ 400 V/S ಯಮಹಾ ವೈಜೆಡ್ಎಫ್-ಆರ್3

ಬೈಕುಗಳ ಎಂಜಿನ್ ಸಾಮರ್ಥ್ಯ

ಕವಾಸಕಿ ನಿಂಜಾ 399ಸಿಸಿ ಪ್ಯಾರಲಲ್ ಟ್ವಿನ್, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 48.3ಬಿಹೆಚ್‍ಪಿ ಹಾಗು 38ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವಷಕ್ತಿಯನ್ನು ಪಡೆದಿದ್ದು, ಸ್ಲಿಪ್ಪರ್ ಕ್ಲಚ್ ಅಸ್ಸಿಸ್ಟಂನ್ಸ್ ನಿಂದ 6 ಸ್ಪೀಡ್ ಗೇರ್‍‍ಬಾಕ್ಸ್ ಗೆ ಜೋಡಿಸಲಾಗಿದೆ.

ಕವಾಸಕಿ ನಿಂಜಾ 400 V/S ಯಮಹಾ ವೈಜೆಡ್ಎಫ್-ಆರ್3

ಯಮಹಾ ವೈಜೆಡ್ಎಫ್-ಆರ್3 ಬೈಕ್ 321ಸಿಸಿ ಇನ್‍ಲೈನ್ ಟ್ವಿನ್ ಸಿಲೆಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 41ಬಿಹೆಚ್‍ಪಿ ಹಾಗು 29.6ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ತಾಂತ್ರಿಕವಾಗಿ ನೋಡುವುದಾದರೆ ನಿಂಜಾ 400 ಬೈಕ್ ಯಮಹಾ ಆರ್3 ಬೈಕ್‍ಗಿಂತಾ ಹೆಚ್ಚಿನ ಸಾಮರ್ಥ್ಯವನ್ನೇ ಪಡೆದಿದೆ.

ಎಂಜಿನ್ ಸಾಮರ್ಥ್ಯದ ರೇಟಿಂಗ್

ಕವಾಸಕಿ ನಿಂಜಾ 400 - 8/10

ಯಮಹಾ YZF-R3 - 7/10

ಕವಾಸಕಿ ನಿಂಜಾ 400 V/S ಯಮಹಾ ವೈಜೆಡ್ಎಫ್-ಆರ್3

ಬೈಕುಗಳ ಬೆಲೆ

ಕವಾಸಕಿ ನಿಂಜಾ 400 ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 4.69 ಲಕ್ಷಕ್ಕೆ ಲಭ್ಯವಿದ್ದು, ಯಮಹಾ ವೈಜೆಡ್ಎಫ್-ಆರ್3 ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 3.48 ಲಕ್ಷಕ್ಕೆ ದೊರೆಯಲಿದೆ.

ಕವಾಸಕಿ ನಿಂಜಾ 400 V/S ಯಮಹಾ ವೈಜೆಡ್ಎಫ್-ಆರ್3

ಇನ್ನು ಕೊನೆಯದಾಗಿ ಈ ಬೈಕುಗಳಲ್ಲಿ ಯಾವುದು ಉತ್ತಮ ಎಂಬುವುದರೆ ಬಗ್ಗೆ ಹೇಳುವುದಾದರೆ, ಎರಡೂ ಬೈಕುಗಳು ತಮ್ಮ ವಿಭಾಗದಲ್ಲಿ ಸಮಾನತೆಯನ್ನು ಪಡೆದುಕೊಂಡೆವೆ. ಆದರೆ ನಿಂಜಾ ಬೈಕ್‍ನಲ್ಲಿ ಸ್ಲಿಪ್ಪೃ ಕ್ಲಚ್ ಅನ್ನು ಅಳವಡಿಸಲಾಗಿರುವುದನ್ನು ಗಮನಿಸಬೇಕಾಗಿದ್ದು, ಅದು ಬೈಕಿನ ಒಟ್ಟಾರೆ ಪರ್ಫಾರ್ಮೆಂನ್ಸ್ ಅನ್ನು ಹೆಚ್ಚಿಸುವುದರಲ್ಲಿ ಸಹಾಯಕವಾಗಿದೆ.

ಕವಾಸಕಿ ನಿಂಜಾ 400 V/S ಯಮಹಾ ವೈಜೆಡ್ಎಫ್-ಆರ್3

ನೀವು ಒಳ್ಳೆಯ ಪರ್ಫಾರ್ಮೆಂನ್ಸ್ ನೀಡುವ ಬೈಕ್‍ ಅನ್ನು ಖರೀದಿ ಮಾಡುವ ಆಳೋಚನೆಯಲ್ಲಿದ್ದರೆ ಕವಾಸಕಿ ನಿಂಜಾ 400 ಬೈಕ್ ಆಯ್ಕೆಮಾದಿಕೊಳ್ಳಬಹುದಾಗಿದ್ದು, ಇನ್ನು ಬಡ್ಜೆಟ್‍‍ಗೆ ಸರಿ ಹೊಂದುವ ಹಾಗೆ ವೈಶಿಷ್ಟ್ಯತೆಗಳನ್ನು ಪಡೆದಿರುವ ಬೈಕ್ ಖರೀದಿಸಲು ಇಚ್ಛಿಸುವುದಾದರೆ ಯಮಹಾ ವೈಜೆಡ್ಎಫ್-ಆರ್3 ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಹೊಸ ಸ್ಕೂಟರ್‌ಗಳಲ್ಲಿ ತಾಂತ್ರಿಕ ದೋಷ- ಗ್ರಾಜಿಯಾ, ಆಕ್ಟಿವಾ 125 ಹಿಂಪಡೆದ ಹೋಂಡಾ

2. ಮಂಗಳೂರಿಗೆ ಬಂದ ಭಾರತದ ಮೊದಲ ಕವಾಸಕಿ ಜೆಡ್900ಆರ್‍ಎಸ್ ಬೈಕ್..

3. ವಾಹನ ಸವಾರರ ಜೀವಕ್ಕೆ ಕುತ್ತು ತರುತಂತೆ ಟೈರ್ ಕಿಲ್ಲರ್ ಹಂಪ್?

4. ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

5. ಏಪ್ರಿಲ್ 1ರಿಂದಲೇ ಬದಲಾಗಲಿವೆ ಥರ್ಡ್ ಪಾರ್ಟಿ ವಿಮಾ ದರಗಳು..

Most Read Articles

Kannada
Read more on kawasaki yamaha comparison
English summary
Kawasaki Ninja 400 Vs. Yamaha YZF-R3 Comparison.
Story first published: Wednesday, April 4, 2018, 10:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X