ಹಳೆಯ ಕೇಸ್‍ಗಳನ್ನು ಕ್ಲೋಸ್ ಮಾಡಲು ಟ್ರಾಫಿಕ್ ಪೊಲೀಸರಿಂದ ಭರ್ಜರಿ ಆಫರ್.!

ವಾಹನ ಚಾಲಕರು ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿ ಅದಕ್ಕೆ ತಕ್ಕ ದಂಡವನ್ನು ಪಾವತಿಸದೆಯೆ ಇರುವವರಿಗೆ ಪೊಲೀಸರು ಒಂದು ಸುವರ್ಣಾವಕಾಶವನ್ನು ನೀಡಿದ್ದಾರೆ. ಈ ನಗರದಲ್ಲಿನ ಟ್ರಾಫಿಕ್ ಪೊಲೀಸರು ಮಾಡಿದ ಈ ಹೊಸ ಯೋಜನೆಯನ್ನ ನೀವು ಬೇರಾವ ರಾಜ್ಯದಲ್ಲು ಕಾಣಲು ಸಾಧ್ಯವಿಲ್ಲ.

ಇಲ್ಲಿ ನಿಮ್ಮ ಟ್ರಾಫಿಕ್ ಪೆನಾಲ್ಟಿಯನ್ನು ರಿಯಾಯಿತಿಯಲ್ಲಿ ಪಾವತಿಸಬಹುದಂತೆ.!

ವಿಶ್ವಾದ್ಯಂತ ರಸ್ತೆ ಅಪಘಾತಗಳ ಕಾರಣದಿಂದ ಭಾರತದಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಪ್ರತೀ ವರ್ಷ ಸುಮಾರು 1.50 ಲಕ್ಷ ಜನರು ರಸ್ತೆ ಅಪಘಾತದಲ್ಲಿ ತಮ್ಮ ಜೀವನವನ್ನು ಕಳೆದುಕೊಳ್ಳುತ್ತಾರೆ ಎಂದು ವರದಿಯೊಂದು ಹೇಳುತ್ತಿದೆ.

ಇಲ್ಲಿ ನಿಮ್ಮ ಟ್ರಾಫಿಕ್ ಪೆನಾಲ್ಟಿಯನ್ನು ರಿಯಾಯಿತಿಯಲ್ಲಿ ಪಾವತಿಸಬಹುದಂತೆ.!

ಹೆಲ್ಮೆಟ್ ರಹಿತ ವಾಹನ ಚಾಲನೆ, ಮದ್ಯ ಸೇವಿಸಿ ವಾಹನ ಚಾಲನೆ ಮತ್ತು ಓವರ್ ಸ್ಪೀಡಿಂಗ್ ಮಾಡುವುದು ರಸ್ತೆ ಅಪಘಾತಕ್ಕೆ ಮುಖ್ಯ ಕಾರಣ ಎಂದರೆ ತಪ್ಪಾಗಲಾರದು. ಇದರ ಬಗ್ಗೆ ನಗರದಲ್ಲಿನ ಟ್ರಾಫಿಕ್ ಪೊಲೀಸರು ಎಷ್ಟೇ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ, ಚಾಲಕರು ಇನ್ನು ಟ್ರಾಫಿಕ್ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ.

ಇಲ್ಲಿ ನಿಮ್ಮ ಟ್ರಾಫಿಕ್ ಪೆನಾಲ್ಟಿಯನ್ನು ರಿಯಾಯಿತಿಯಲ್ಲಿ ಪಾವತಿಸಬಹುದಂತೆ.!

ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರನ್ನು ಹಿಡಿಯಲು ಪೊಲೀಸರು ರಸ್ತೆಗಳ ಪಕ್ಕದಲ್ಲಿ ಕಾಯ್ದಿರುತ್ತಾರೆ ಮತ್ತು ಟೆಕ್ನಾಲಜಿ ಬೆಳೆಯುತ್ತಿರುವ ಕಾರಣ ಸಿಗ್ನಲ್‍ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರುವ ಸಂಗತಿ ನಮಗೆಲ್ಲಾ ತಿಳಿದೇ ಇದೆ.

ಇಲ್ಲಿ ನಿಮ್ಮ ಟ್ರಾಫಿಕ್ ಪೆನಾಲ್ಟಿಯನ್ನು ರಿಯಾಯಿತಿಯಲ್ಲಿ ಪಾವತಿಸಬಹುದಂತೆ.!

ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸದವರ ವಾಹನದ ಸಂಖ್ಯೆಯನ್ನು ನೋಂದಣಿ ಮಾಡಿಕೊಂಡು, ಅವರ ಮನೆಗೆ ಇ-ಚಲನ್ ಅನ್ನು ಕಳುಹಿಸಲಾಗುತ್ತದೆ. ಆದರೆ ತಾವು ಮಾಡಿದ ತಪ್ಪಿಗೆ ಹಾಕಿದ ದಂಡದ ಮೊತ್ತವನ್ನು ಸಹ ನೀಡದೆ ಇನ್ನೂ ನಿಯಮಗಳನ್ನು ಉಲ್ಲಂಘನೆ ಮಾಡುತ್ತಲೆ ಇರುತ್ತಾರೆ.

ಇಲ್ಲಿ ನಿಮ್ಮ ಟ್ರಾಫಿಕ್ ಪೆನಾಲ್ಟಿಯನ್ನು ರಿಯಾಯಿತಿಯಲ್ಲಿ ಪಾವತಿಸಬಹುದಂತೆ.!

ಇದೀಗ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ದಂಡ ಕಟ್ಟದೇ ಓಡಾಡುತ್ತಿರುವ ವಾಹನ ಸವಾರರಿಗೆ ಸುವರ್ಣಾವಕಾಶವೊಂದನ್ನ ನೀಡಿರುವ ಪೊಲೀಸರು ಹಳೆಯ ಕೇಸ್‍ಗಳನ್ನು ಕ್ಲೋಸ್ ಮಾಡಲು ಹೊಸ ತಂತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಇಲ್ಲಿ ನಿಮ್ಮ ಟ್ರಾಫಿಕ್ ಪೆನಾಲ್ಟಿಯನ್ನು ರಿಯಾಯಿತಿಯಲ್ಲಿ ಪಾವತಿಸಬಹುದಂತೆ.!

ಅದೇನೆಂದರೆ ರಿಯಾಯಿತಿ ದರದಲ್ಲಿ ದಂಡ ಪಾವತಿಸುವುದು.! ಹೌದು, ಕೊಲ್ಕತ್ತಾ ನಗರದ ಪೊಲೀಸರು ಈ ಯೋಜನೆಯನ್ನು ಪ್ರಾರಂಭಿಸಿದ್ದು, ಇದರಿಂದ ವಾಹನ ಸವಾರರು ಈ ಹಿಂದೆ ತಾವು ಮಾಡಿದ ರಸ್ತೆ ನಿಯಮಗಳ ಉಲ್ಲಂಘನೆಗೆ ರಿಯಾಯಿತಿ ದರದಲ್ಲಿ ದಂಡ ಪಾವತಿಸಿ ಕೇಸ್ ಕ್ಲೋಸ್ ಮಾಡಿಕೊಳ್ಳಬಹುದು.

ಇಲ್ಲಿ ನಿಮ್ಮ ಟ್ರಾಫಿಕ್ ಪೆನಾಲ್ಟಿಯನ್ನು ರಿಯಾಯಿತಿಯಲ್ಲಿ ಪಾವತಿಸಬಹುದಂತೆ.!

ಮಾಹಿತಿ ಪ್ರಕಾರ, ಕೊಲ್ಕತ್ತಾ ನಗರದ ಟ್ರಾಫಿಕ್ ಪೊಲೀಸರು 'ಒನ್ ಟೈಮ್ ಟ್ರಾಫಿಕ್ ಫೈನ್ ಸೆಟೆಲ್ಮೆಂಟ್ ಸ್ಕೀಮ್' ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಇದರಿಂದ ತಪ್ಪಿತಸ್ಥರು ಬಾಕಿ ಇರುವ ದಂಡದ ಮೊತ್ತವನ್ನ ರಿಯಾಯಿತಿಯಲ್ಲಿ ಕಟ್ಟಬಹುದು.

MOST READ: ದೊಡ್ಡಣ್ಣನಿಗೆ ಸವಾಲು - ಇಂಧನ ಬೆಲೆ ಇಳಿಕೆ ಹಿಂದಿನ ಮೋದಿ ತಾಕತ್ತು..!

ಇಲ್ಲಿ ನಿಮ್ಮ ಟ್ರಾಫಿಕ್ ಪೆನಾಲ್ಟಿಯನ್ನು ರಿಯಾಯಿತಿಯಲ್ಲಿ ಪಾವತಿಸಬಹುದಂತೆ.!

ಈ ಯೋಜನೆಯು ಎರಡು ಹಂತಗಳಲ್ಲಿ ಅನುಷ್ಠಾನಗೊಳ್ಳಲಿದೆ ಮತ್ತು ನವೆಂಬರ್ 15, 2018 ರವರೆಗೆ ನೋಂದಾಯಿಸಲಾಗುವ ಟ್ರಾಫಿಕ್ ಪ್ರಕರಣಗಳು ರಿಯಾಯಿತಿ ದರಕ್ಕೆ ಅರ್ಹರಾಗಿರುತ್ತಾರೆ.

ಇಲ್ಲಿ ನಿಮ್ಮ ಟ್ರಾಫಿಕ್ ಪೆನಾಲ್ಟಿಯನ್ನು ರಿಯಾಯಿತಿಯಲ್ಲಿ ಪಾವತಿಸಬಹುದಂತೆ.!

ಈ ಯೋಜನೆಯ ಪ್ರಥಮ ಹಂತವು ಡಿಸೆಂಬರ್ 1,2018ರಂದು ಪ್ರಾರಂಭವಾಗಿದ್ದು, ಜನವರಿ 14, 2019ರ ವರೆಗು ಕಾರ್ಯರೂಪದಲ್ಲಿ ಇರುತ್ತದೆ. ಈ ಅವಧಿಯಲ್ಲಿ ಅಪರಾಧಿಗಳು ಒಟ್ಟು 35% ರಷ್ಟು ಪಾವತಿಸಬೇಕಾಗುತ್ತದೆ ಮತ್ತು ಉಳಿದ 65% ಆಫರ್ ನೀಡಲಾಗುವುದು.

ಇಲ್ಲಿ ನಿಮ್ಮ ಟ್ರಾಫಿಕ್ ಪೆನಾಲ್ಟಿಯನ್ನು ರಿಯಾಯಿತಿಯಲ್ಲಿ ಪಾವತಿಸಬಹುದಂತೆ.!

ಜನವರಿ 15, 2019 ರಿಂದ ಫೆಬ್ರವರಿ 13, 2019 ರ ವರೆಗೆ ಯೋಜನೆಯ ಎರಡನೇ ಹಂತವು ಕಾರ್ಯನಿರ್ವಹಿಸಲಿದ್ದು, ಈ ಸಮಯದಲ್ಲಿ ಹಳೆಯ ಕೇಸ್‍ಗಳಿಗೆ ದಂಡ ಪಾವತಿಸುವ ವಾಹನ ಸವಾರರು ಶೇಕಡ 50ರಷ್ಟು ರಿಯಾಯಿತಿ ಪಡೆಯಲಿದ್ದಾರೆ.

ಇಲ್ಲಿ ನಿಮ್ಮ ಟ್ರಾಫಿಕ್ ಪೆನಾಲ್ಟಿಯನ್ನು ರಿಯಾಯಿತಿಯಲ್ಲಿ ಪಾವತಿಸಬಹುದಂತೆ.!

ಕೋಲ್ಕತ್ತಾ ಟ್ರಾಫಿಕ್ ಪೋಲಿಸ್ ಮತ್ತು ಕೊಲ್ಕತ್ತಾ ಪೊಲೀಸ್ ಅಧಿಕೃತ ವೆಬ್‍ಸೈಟ್‍ನ ಮುಖಾಂತರ ಆನ್‍ಲೈನ್‍ನಲ್ಲು ದಂಡವನ್ನು ಪಾವತಿಸಬಹುದಾಗಿದ್ದು, 25 ಟ್ರಾಫಿಕ್ ಗಾರ್ಡ್‍ಗಳಲ್ಲಿ ಮತ್ತು ಲಾಲ್ ಬಜಾರ್‍‍ನಲ್ಲಿರುವ ಕೌಂಟರ್‍‍ಗಳಲ್ಲಿ ಆಫ್‍ಲೈನ್‍ನಲ್ಲಿ ಪಾವತಿ ಮಾಡಬಹುದಾಗಿದೆ.

ಇಲ್ಲಿ ನಿಮ್ಮ ಟ್ರಾಫಿಕ್ ಪೆನಾಲ್ಟಿಯನ್ನು ರಿಯಾಯಿತಿಯಲ್ಲಿ ಪಾವತಿಸಬಹುದಂತೆ.!

ಕೊಲ್ಕತ್ತಾ ಪೊಲೀಸರು ಈ ಅವಧಿಯ ನಂತರ ಬಾಕಿ ಉಳಿದಿರುವ ದಂಡಗಳೊಂದಿಗೆ ವಾಹನಗಳು ಮತ್ತು ವಾಹನ ಮಾಲೀಕರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದ್ದಾರೆಂದು ವರದಿಯಾಗಿದೆ.

MOST READ: ಬೆಂಗಳೂರಿನಲ್ಲಿ 2 ವರ್ಷಗಳ ಕಾಲ ಹೊಸ ವಾಹನಗಳ ನೋಂದಣಿ ನಿಷೇಧಕ್ಕೆ ಸಿದ್ದತೆ?

ಇಲ್ಲಿ ನಿಮ್ಮ ಟ್ರಾಫಿಕ್ ಪೆನಾಲ್ಟಿಯನ್ನು ರಿಯಾಯಿತಿಯಲ್ಲಿ ಪಾವತಿಸಬಹುದಂತೆ.!

ಒಟ್ಟಿನಲ್ಲಿ ಈ ರೀತಿಯ ರಿಯಾಯಿತಿ ಯೋಜನೆ ನಮ್ಮ ರಾಜ್ಯದಲ್ಲಿಯು ಆರಂಭವಾದರೇ ಸರ್ಕಾರಕ್ಕು ಆಧಾಯ ಹೆಚ್ಚಲಿದ್ದು ಜೊತೆಗೆ ವಾಹನ ಸವಾರರಿಗು ಅನುಕೂಲ ಆಗರಲಿದೆ ಎಂಬುವುದು ಕೆಲವರ ಅಭಿಪ್ರಾಯ. ಇದಕ್ಕೆ ನಿಮ್ಮ ಅಭಿಪ್ರಾಯವನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ.

Source: FinancialExpress

Most Read Articles

Kannada
English summary
Kolkata Traffic Police formulates a new ‘One Time Traffic Fine Settlement Scheme’. Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X