ಕೆಟಿಎಂ 125 ಡ್ಯೂಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು ಗೊತ್ತಾ?

ಕೆಟಿಎಂ 125 ಡ್ಯೂಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು ಗೊತ್ತಾ?

ಕಳೆದ 2 ದಿನಗಳ ಹಿಂದಷ್ಟೇ ಡ್ರೈವ್‌ಸ್ಪಾರ್ಕ್ ತಂಡವು ಕೆಟಿಎಂ ಸಂಸ್ಥೆಯ ಬೇಬಿ ಡ್ಯೂಕ್ ಮಾದರಿಯಾದ 125 ಡ್ಯೂಕ್ ಬೈಕ್ ಆವೃತ್ತಿಯು ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಬಗ್ಗೆ ವರದಿ ಮಾಡಿದ್ದೆವು. ಇದಕ್ಕೆ ಪೂರಕ ಎನ್ನುವಂತೆ ಕೆಟಿಎಂ ಸಂಸ್ಥೆಯು ಇದೀಗ 125 ಡ್ಯೂಕ್ ಬೈಕ್‌ಗಳ ಖರೀದಿಗಾಗಿ ಆಸಕ್ತ ಗ್ರಾಹಕರಿಂದ ಬುಕ್ಕಿಂಗ್ ಕೂಡಾ ಪಡೆದುಕೊಳ್ಳುತ್ತಿರುವುದು ಮಾಹಿತಿ ಲಭ್ಯವಾಗಿದೆ.

ಕೆಟಿಎಂ 125 ಡ್ಯೂಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು ಗೊತ್ತಾ?

ಆಸ್ಟ್ರೀಯಾ ಮೂಲದ ಕೆಟಿಎಂ ಬೈಕ್ ಉತ್ಪಾದನಾ ಸಂಸ್ಥೆಯು ವಿವಿಧ ಮಾದರಿಯ ಬೈಕ್ ಉತ್ಪನ್ನಗಳೊಂದಿಗೆ ಭಾರತದಲ್ಲಿ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳನ್ನು ಜನಪ್ರಿಯತೆ ಸಾಧಿಸಿದ್ದು, ಇದೀಗ ಮತ್ತೊಮ್ಮೆ ಬೈಕ್ ಮಾರಾಟದಲ್ಲಿ ಸಂಚಲನ ಸೃಷ್ಠಿಸಲು ಮುಂದಾಗಿರುವ ಕೆಟಿಎಂ ಸಂಸ್ಥೆಯು ಭಾರತದಲ್ಲಿ ಎಂಟ್ರಿ ಲೆವಲ್ 125 ಡ್ಯೂಕ್ ಬಿಡುಗಡೆಗೆ ವೇದಿಕೆ ಸಜ್ಜುಗೊಳಿಸುತ್ತಿದೆ.

ಕೆಟಿಎಂ 125 ಡ್ಯೂಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು ಗೊತ್ತಾ?

ಕೆಟಿಎಂ ಡ್ಯೂಕ್ 125 ಬೈಕ್ ಮಾದರಿಗಳು ಈಗಾಗಲೇ ವಿದೇಶಿ ಮಾರುಕಟ್ಟೆಗಳಲ್ಲಿ ಸಾಕಷ್ಟು ಜನಪ್ರಿಯತೆ ಸಾಧಿಸಿದ್ದು, ಇದೀಗ ಭಾರತದಲ್ಲೂ ಹೊಸ ಬೈಕ್ ಉತ್ಪನ್ನವನ್ನು ಪರಿಚಯಿಸಲು ಮುಂದಾಗಿರುವ ಕೆಟಿಎಂ ಸಂಸ್ಥೆಯು ನವೆಂಬರ್ ಅಂತ್ಯಕ್ಕೆ ಹೊಸ ಬೈಕ್ ಬಿಡುಗಡೆಯ ಇರಾದೆಯಲ್ಲಿದೆ.

ಕೆಟಿಎಂ 125 ಡ್ಯೂಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು ಗೊತ್ತಾ?

ಕೆಟಿಎಂ ಸಂಸ್ಥೆಯು ಸದ್ಯ 200 ಡ್ಯೂಕ್ ಮಾದರಿಯನ್ನು ಎಂಟ್ರಿ ಲೆವಲ್ ಬೈಕ್ ಮಾದರಿಯಾಗಿ ಮಾರಾಟ ಮಾಡುತ್ತಿದ್ದು, ದುಬಾರಿ ಬೆಲೆಯ ನಡುವೆಯೂ ಉತ್ತಮ ಬೇಡಿಕೆ ಕಾಯ್ದುಕೊಂಡಿದೆ. ಹೀಗಿರುವಾಗ ಕಳೆದ ಕೆಲ ತಿಂಗಳಿನಿಂದ ಹಲವು ಬೈಕ್ ಉತ್ಪಾದನಾ ಸಂಸ್ಥೆಗಳು ವಿವಿಧ ಮಾದರಿಯ ಎಂಟ್ರಿ ಲೆವಲ್ ಸ್ಪೋರ್ಟಿ ಬೈಕ್ ಹೊರತರುತ್ತಿರುವುದು ಕೆಟಿಎಂಗೆ ಹೊಸ ಸವಾಲಾಗಿ ಪರಿಣಮಿಸುತ್ತಿದೆ.

ಕೆಟಿಎಂ 125 ಡ್ಯೂಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು ಗೊತ್ತಾ?

ಹೀಗಾಗಿ ವಿದೇಶಿ ಮಾರುಕಟ್ಟೆಯಲ್ಲಿರುವ ತನ್ನ ಜನಪ್ರಿಯ 125 ಡ್ಯೂಕ್ ಬೈಕ್ ಮಾದರಿಯ ಮಾರಾಟವನ್ನು ಭಾರತದಲ್ಲೂ ಆರಂಭಿಸುವ ಯೋಜನೆಯಲ್ಲಿರುವ ಕೆಟಿಎಂ ಸಂಸ್ಥೆಯು ಎಂಟ್ರಿ ಲೆವಲ್ ಬೈಕ್ ಪ್ರಿಯರನ್ನು ತನ್ನತ್ತ ಸೆಳೆಯುವ ತವಕದಲ್ಲಿದ್ದು, ಪರ್ಫಾಮೆನ್ಸ್ ಪ್ರಿಯರಿಗೂ ಇದು ಅತ್ಯುತ್ತಮ ಆಯ್ಕೆಯಾಗಲಿದೆ.

ಕೆಟಿಎಂ 125 ಡ್ಯೂಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು ಗೊತ್ತಾ?

ಕೆಟಿಎಂ ಸಂಸ್ಥೆಯು ವಿದೇಶಿ ಮಾರುಕಟ್ಟೆಗಳಲ್ಲಿ ಈಗಾಗಲೇ ದುಬಾರಿ ಬೆಲೆಯ 1290 ಸೂಪರ್ ಡ್ಯೂಕ್ ಸಹ ಮಾರಾಟ ಮಾಡುತ್ತಿದ್ದು, ಅದೇ ಬೈಕಿನ ಡಿಸೈನ್ ಪ್ರೇರಿತ ಬೇಬಿ ಡ್ಯೂಕ್(125 ಡ್ಯೂಕ್) ಹೊರತರುತ್ತಿರುವುದು ಸ್ಪೋರ್ಟಿ ಬೈಕ್ ಪ್ರಿಯರಿಗೆ ಹಬ್ಬವೇ ಸರಿ.

ಕೆಟಿಎಂ 125 ಡ್ಯೂಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು ಗೊತ್ತಾ?

ಎಂಜಿನ್ ಸಾಮರ್ಥ್ಯ

125 ಡ್ಯೂಕ್ ಬೈಕ್ ಮಾದರಿಯು 124.7-ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 14.7-ಬಿಎಚ್‌ಪಿ ಮತ್ತು 11.80-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಪಡೆದುಕೊಂಡಿದೆ.

ಕೆಟಿಎಂ 125 ಡ್ಯೂಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು ಗೊತ್ತಾ?

ಇದರೊಂದಿಗೆ 125 ಸಿಸಿ ಎಂಜಿನ್ ಬೈಕ್‌ಗಳಲ್ಲೇ ಇದು ಪವರ್ ಫುಲ್ ಎಂಜಿನ್ ಮಾದರಿ ಎನ್ನಿಸಲಿದ್ದು, ಮುಂಭಾಗದಲ್ಲಿ 43-ಎಂಎಂ ಡಬ್ಲ್ಯುಪಿ ಅಪ್‌ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಡಬ್ಲ್ಯಪಿ ಮೊನೊಶಾರ್ಕ್ ಸಸ್ಷೆನ್ ಪಡೆದಿರಲಿದೆ.

ಕೆಟಿಎಂ 125 ಡ್ಯೂಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು ಗೊತ್ತಾ?

ಇನ್ನು ಬೈಕಿನ ಬ್ರೇಕಿಂಗ್ ವಿಭಾಗವು ಸಹ ವಿಶ್ವದರ್ಜೆಯ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದು, 300-ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು 230-ಎಂಎಂ ರಿಯರ್ ಡಿಸ್ಕ್ ಬ್ರೇಕ್ ಜೊತೆಗೆ ಬಾಷ್ ನಿರ್ಮಾಣದ ಡ್ಯುಯಲ್ ಚಾನಲ್ ಎಬಿಎಸ್ ಜೋಡಣೆ ಹೊಂದಿರಲಿದೆ.

MOST READ: ಎಲ್ಲೆಂದರಲ್ಲೇ ಪಾರ್ಕಿಂಗ್ ಮಾಡುವ ಮುನ್ನ ಹುಷಾರ್- ನಿಮ್ಮ ವಾಹನಕ್ಕೂ ಇದೇ ಪರಿಸ್ಥಿತಿ ಬರಬಹುದು..!

ಕೆಟಿಎಂ 125 ಡ್ಯೂಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು ಗೊತ್ತಾ?

ಮತ್ತೊಂದು ಮಾಹಿತಿ ಪ್ರಕಾರ, ಭಾರತದಲ್ಲಿ ಬಿಡುಗಡೆ ಮಾಡಲಿರುವ 125 ಡ್ಯೂಕ್ ಬೈಕ್ ಬೆಲೆಗಳನ್ನು ತಗ್ಗಿಸುವ ಉದ್ದೇಶದಿಂದ ಎಬಿಎಸ್ ಬದಲಾಗಿ ಸಿಬಿಎಸ್(ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ) ಸೌಲಭ್ಯವನ್ನು ಸಹ ಒದಗಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಭಾರತದಲ್ಲಿ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಮಾತ್ರವೇ ಎಬಿಎಸ್ ಕಡ್ಡಾಯವಾಗುತ್ತಿರುವುದಿಂದ ಸಿಬಿಎಸ್ ಒದಗಿಸಬಹುದು ಎನ್ನಲಾಗಿದೆ.

ಕೆಟಿಎಂ 125 ಡ್ಯೂಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು ಗೊತ್ತಾ?

ತಾಂತ್ರಿಕವಾಗಿ ಎಬಿಎಸ್ ಮತ್ತು ಸಿಬಿಎಸ್ ಒಂದೇ ರೀತಿಯ ಕಾರ್ಯನಿರ್ವಹಣಾ ಗುಣಹೊಂದಿದ್ದರೂ, ಎಬಿಎಸ್‌ಗೆ ಇರುವ ಮಾನ್ಯತೆ ಸಿಬಿಎಸ್‌ಗೆ ಇಲ್ಲ. ವಾಸ್ತವವಾಗಿ ಸಿಬಿಎಸ್ ಕೂಡಾ ಬೈಕಿನ ಬ್ರೇಕಿಂಗ್ ವಿಭಾಗದಲ್ಲಿ ಅದ್ಬುತ ಕಾರ್ಯನಿರ್ವಹಣೆ ಹೊಂದಿದ್ದು, ಎಬಿಎಸ್‌ನಂತೆಯೇ ಕಾರ್ಯನಿರ್ವಹಿಸಬಲ್ಲದು.

ಕೆಟಿಎಂ 125 ಡ್ಯೂಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು ಗೊತ್ತಾ?

ಅದು ಹೇಗೆ ಅಂದ್ರೆ, ಬೈಕ್ ಸವಾರರು ಚಾಲನೆ ವೇಳೆ ತುರ್ತು ಸಂದರ್ಭಗಳು ಎದುರಾದಾಗ ಬೈಕ್ ನಿಯಂತ್ರಿಸಲು ಸಡನ್ ಆಗಿ ಬ್ರೇಕ್ ಒತ್ತುವುದು ಕಾಮನ್. ಈ ವೇಳೆ ಬೈಕ್ ಸ್ಕಿಡ್ ಆಗುವ ಸಾಧ್ಯತೆಗಳು ಕೂಡಾ ಹೆಚ್ಚು. ಹೀಗಿರುವಾಗ ಬೈಕಿನಲ್ಲಿರುವ ಎಬಿಎಸ್ ಸೌಲಭ್ಯದಂತೆಯೇ ಸಿಬಿಎಸ್ ಸೌಲಭ್ಯವು ಕೂಡಾ ಬೈಕ್ ಸವಾರರ ಸಹಾಯಕ್ಕೆ ಬರಲಿದೆ.

ಕೆಟಿಎಂ 125 ಡ್ಯೂಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು ಗೊತ್ತಾ?

ಬೈಕ್ ಸವಾರರು ಮುಂದಿನ ಚಕ್ರದ ಬ್ರೇಕ್ ಒತ್ತಿದ್ದಲ್ಲಿ ಅದು ಹಿಂದಿನ ಚಕ್ರದ ಬ್ರೇಕ್ ಮೇಲೂ ನಿಯಂತ್ರಣ ಹೊಂದಿರಲಿದ್ದು, ಹಿಂದಿನ ಚಕ್ರದ ಬ್ರೇಕ್ ಒತ್ತಿದಾಗ ಮುಂದಿನ ಚಕ್ರದ ಬ್ರೇಕ್ ಮೇಲೂ ಅನ್ವಯವಾಗುವಂತೆ ಸಿಬಿಎಸ್ ಸೌಲಭ್ಯವನ್ನ ಜೋಡಣೆ ಮಾಡಲಾಗಿರುತ್ತೆ. ಹೀಗಾಗಿ ಬೈಕ್ ಸ್ಕೀಡ್ ಆಗುವ ಸಾಧ್ಯತೆ ತುಂಬಾ ವಿರಳ ಎನ್ನಬಹುದು.

ಕೆಟಿಎಂ 125 ಡ್ಯೂಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು ಗೊತ್ತಾ?

ಇದರಿಂದ ದುಬಾರಿ ಬೆಲೆಯ ಎಬಿಎಸ್ ಬದಲಾಗಿ ಅಗ್ಗದ ಬೆಲೆಗೆ ಲಭ್ಯವಾಗುವ ಸಿಬಿಎಸ್ ಜೋಡಣೆ ಮಾಡುವ ಬಗ್ಗೆಯು ಚಿಂತನೆ ನಡೆಸಿರುವ ಕೆಟಿಎಂ ಸಂಸ್ಥೆಯು ಗ್ರಾಹಕರ ಆದ್ಯತೆ ಮೇರೆಗೆ ಸಿಬಿಎಸ್ ಬೇಕೋ ಅಥವಾ ಎಬಿಎಸ್ ಬೇಕೋ ಎನ್ನುವುದನ್ನು ಸದ್ಯದಲ್ಲೇ ನಿರ್ಧರಿಸಲಿದೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಕೆಟಿಎಂ 125 ಡ್ಯೂಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು ಗೊತ್ತಾ?

ಒಂದು ವೇಳೆ ಎಬಿಎಸ್ ಅಳವಡಿಕೆ ಹೊಂದಿದ್ದಲ್ಲಿ 125 ಡ್ಯೂಕ್ ಬೆಲೆ ತುಸು ದುಬಾರಿ ಎನ್ನಿಸಲಿದ್ದು, ಎಂಟ್ರಿ ಲೆವಲ್ ಬೈಕಿಗೆ ಯಾವೆಲ್ಲಾ ಅಗತ್ಯ ತಾಂತ್ರಿಕ ಸೌಲಭ್ಯ ಬೇಕೋ ಅದೆಲ್ಲವೂ ಬೇಬಿ ಡ್ಯೂಕ್‌ನಲ್ಲಿ ಇರಲಿದೆ ಎನ್ನುವುದು ಬಲ್ಲ ಮೂಲಗಳ ಮಾಹಿತಿ.

ಕೆಟಿಎಂ 125 ಡ್ಯೂಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು ಗೊತ್ತಾ?

ಬೈಕಿನ ಬೆಲೆಗಳು(ಅಂದಾಜು)

ತಾಂತ್ರಿಕವಾಗಿ ಬಲಿಷ್ಠವಾಗಿರುವ 125 ಡ್ಯೂಕ್ ಬೈಕ್ ಮಾದರಿಯ ಬೆಲೆ ಕೆಟಿಎಂ ಶೋರೂಂ ಸಿಬ್ಬಂದಿಯ ಮಾಹಿತಿ ಪ್ರಕಾರ, ಆನ್ ರೋಡ್ ಬೆಲೆ ರೂ. 1.40 ಲಕ್ಷದಿಂದ ರೂ.1.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ. ಇದಕ್ಕಾಗಿಯೇ ಗ್ರಾಹಕರಿಂದ ರೂ. 1 ಸಾವಿರ ಮುಂಗಡ ಪಡೆದುಕೊಳ್ಳುತ್ತಿರುವ ಅಧಿಕೃತ ಮಾರಾಟಗಾರರು ಹೊಸ ಬೈಕ್ ನವೆಂಬರ್ ಅಂತ್ಯಕ್ಕೆ ಇಲ್ಲವೇ ಡಿಸೆಂಬರ್ ಆರಂಭದಲ್ಲಿ ಖರೀದಿಗೆ ಲಭ್ಯವಿರಲಿವೆ ಎನ್ನುವ ಮಾಹಿತಿ ನೀಡುತ್ತಿದ್ದಾರೆ.

ಕೆಟಿಎಂ 125 ಡ್ಯೂಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು ಗೊತ್ತಾ?

ಈ ಮೂಲಕ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಮತ್ತು ಯಮಹಾ ಎಫ್‌ಜೆಡ್25 ಬೈಕ್‌ಗಳಿಗೆ ಪೈಪೋಟಿ ನೀಡಲಿರುವ 125 ಡ್ಯೂಕ್‌ ಬೈಕ್, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೀರೋ ಎಕ್ಸ್‌ಪಲ್ಸ್ 200 ಅಡ್ವೆಂಚರ್ ಬೈಕಿಗೂ ಟಕ್ಕರ್ ನೀಡಲಿದೆ.

Most Read Articles

Kannada
Read more on ktm ಕೆಟಿಎಂ
English summary
KTM 125 Duke Bookings Open In India — Launch Soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X