ಸೂಪರ್ ಬೈಕ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 200 ಮಾಡಿಫೈ ಸ್ಕ್ರ್ಯಾಂಬ್ಲರ್

ಸೂಪರ್ ಕ್ಲಾಸಿಕ್ ಬೈಕ್‌ಗಳಲ್ಲಿ ಡುಕಾಟಿ ಸಂಸ್ಥೆಯ ಸ್ಕ್ರ್ಯಾಂಬ್ಲರ್ ಬೈಕ್ ಆವೃತ್ತಿಯು ಅತಿಹೆಚ್ಚು ಬೇಡಿಕೆಯನ್ನು ಹೊಂದಿದೆ.

By Praveen Sannamani

ಸೂಪರ್ ಕ್ಲಾಸಿಕ್ ಬೈಕ್‌ಗಳಲ್ಲಿ ಡುಕಾಟಿ ಸಂಸ್ಥೆಯ ಸ್ಕ್ರ್ಯಾಂಬ್ಲರ್ ಬೈಕ್ ಆವೃತ್ತಿಯು ಅತಿಹೆಚ್ಚು ಬೇಡಿಕೆಯನ್ನು ಹೊಂದಿದ್ದು, ಈ ಹಿನ್ನೆಲೆ ದುಬಾರಿಯ ಬೆಲೆಯ ಬೈಕಿನ ವಿನ್ಯಾಸಗಳು ಮಾಡಿಫೈ ಪ್ರಿಯರ ನೆಚ್ಚಿನ ಆಯ್ಕೆಯಾಗುತ್ತಿರುವುದಲ್ಲದೇ ಹೊಸ ಟ್ರೆಂಡ್ ಸೃಷ್ಠಿಸಿದೆ.

ಸೂಪರ್ ಬೈಕ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 200 ಮಾಡಿಫೈ ಸ್ಕ್ರ್ಯಾಂಬ್ಲರ್

ಆಟೋ ಮಾಡಿಫೈ ಎನ್ನುವುದು ಇವತ್ತಿನ ಯುವಜನತೆಯ ಒಂದು ಲೈಫ್ ಸ್ಟೈಲ್ ಆಗಿ ಮಾರ್ಪಡುತ್ತಿದೆ. ಇದೇ ಕಾರಣಕ್ಕೆ ಹಲವಾರು ಆಟೋ ಮಾಡಿಫೈ ಸಂಸ್ಥೆಗಳು ಅಗ್ಗದ ಬೆಲೆಯಲ್ಲಿ ಲಭ್ಯವಿರುವ ಬೈಕ್‌ ಮತ್ತು ಕಾರುಗಳನ್ನೇ ಬಳಕೆ ಮಾಡಿಕೊಂಡು ದುಬಾರಿ ಬೆಲೆಯ ವಾಹನ ಮಾದರಿಗಳನ್ನೇ ಹೋಲುವಂತೆ ಮಾಡಿಫೈ ವಿನ್ಯಾಸ ಮಾಡುತ್ತಿರುವುದು ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

ಸೂಪರ್ ಬೈಕ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 200 ಮಾಡಿಫೈ ಸ್ಕ್ರ್ಯಾಂಬ್ಲರ್

ಈ ಮಧ್ಯೆ ಇಂಡೋನೇಷ್ಯಾ ಮೂಲದ ಕ್ಯಾಟ್ರೊಸ್ ಗ್ಯಾರೇಜ್ ಎನ್ನುವ ಮಾಡಿಫೈ ಸಂಸ್ಥೆಯೊಂದು ಕೆಟಿಎಂ ಡ್ಯೂಕ್ 200 ಬೈಕ್ ಮಾದರಿಯನ್ನು ಬಳಕೆ ಮಾಡಿಕೊಂಡು ಸ್ಕ್ರ್ಯಾಂಬ್ಲರ್ ಮಾಡಿಫೈ ವಿಶೇಷ ಆವೃತ್ತಿಯನ್ನು ಸಿದ್ದಗೊಳಿಸಿದ್ದು, ಮಾಡಿಫೈ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಸೂಪರ್ ಬೈಕ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 200 ಮಾಡಿಫೈ ಸ್ಕ್ರ್ಯಾಂಬ್ಲರ್

ಆಪ್ ರೋಡಿಂಗ್ ಪ್ರಿಯರಿಗಾಗಿಯೇ ವಿನೂತನ ಸ್ಕ್ರ್ಯಾಂಬ್ಲರ್ ಮಾಡಿಫೈ ಆವೃತ್ತಿಯನ್ನು ಸಿದ್ದಗೊಳಿಸಿದ್ದು, ಹೊಸ ಬೈಕಿನಲ್ಲಿ ಐಷಾರಾಮಿ ಸೌಲಭ್ಯಗಳನ್ನು ಸೇರಿಸಲಾಗಿದೆ. ಜೊತೆಗೆ ಮೂಲ ಬೈಕಿಗಿಂತ ಮಾಡಿಫೈ ಬೈಕ್ ವಿಭಿನ್ನ ಲುಕ್ ಪಡೆದುಕೊಂಡಿದೆ.

ಸೂಪರ್ ಬೈಕ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 200 ಮಾಡಿಫೈ ಸ್ಕ್ರ್ಯಾಂಬ್ಲರ್

ಮೂಲತಃ ಬೆನೆಲ್ಲಿ ನಿರ್ಮಾಣದ ಲೆಯೊನ್ಸಿನೊ ಸ್ಕ್ರಾಂಬ್ಲರ್ ಬೈಕ್ ವಿನ್ಯಾಸವನ್ನು ಆಧರಿಸಿರುವ ಕೆಟಿಎಂ ಡ್ಯೂಕ್ 200 ಮಾಡಿಫೈ ಬೈಕ್ ಮಾದರಿಯಲ್ಲಿ ವಿನೂತನ ಶೈಲಿಯ ರೆಟ್ರೋ ಹೆಡ್‌ಲ್ಯಾಂಪ್, ಯುಎಸ್‌ಡಿ ಫೋರ್ಕ್, ಫ್ರಂಟ್ ಮಡ್ ಗಾರ್ಡ್ ವಿನ್ಯಾಸ ವಿಶೇಷ ಎನ್ನಿಸಲಿದೆ.

ಸೂಪರ್ ಬೈಕ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 200 ಮಾಡಿಫೈ ಸ್ಕ್ರ್ಯಾಂಬ್ಲರ್

ಆದ್ರೆ ಮಾಡಿಫೈ ಬೈಕ್ ಮಾದರಿಯಲ್ಲಿ ಮೂಲ ಕೆಟಿಎಂ ಡ್ಯೂಕ್ 200 ಮಾದರಿಯ ಚಕ್ರಗಳು ಮತ್ತು ಬ್ರೇಕಿಂಗ್ ಮಾದರಿಯನ್ನೇ ಮಾಡಿಫೈ ಬೈಕಿನಲ್ಲೂ ಮುಂದುವರಿಸಲಾಗಿದ್ದು, ರೇಸ್ ಪ್ರಿಯರಿಗೆ ಬಟನ್ ಟೈರ್ ಮಾಡಿರುವುದು ಬೈಕಿಗೆ ರಗಡ್ ಲುಕ್ ನೀಡಿದೆ.

ಸೂಪರ್ ಬೈಕ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 200 ಮಾಡಿಫೈ ಸ್ಕ್ರ್ಯಾಂಬ್ಲರ್

ಬೈಕಿನ ಫ್ಯೂಲ್ ಟ್ಯಾಂಕ್ ಮೇಲೆ ಡ್ಯೂಕ್ 200 ಕ್ಯಾಟ್ರೊಸ್ ಎಂಬ ಬ್ಯಾಡ್ಜ್ ಬಳಕೆ ಮಾಡಲಾಗಿದ್ದು, ಕ್ಲಾಸಿಯಾಗಿರುವ ಸಿಂಗಲ್ ಪೀಸ್ ಲೆದರ್ ಸೀಟು, ಮೆಟಲ್ ಎಂಜಿನ್ ಕವರ್, ರೌಂಡ್ ಟೈಲ್ ಲ್ಯಾಂಪ್ ಬಳಕೆ ಮಾಡಿರುವುದು ಬೈಕಿನ ಅಂದವನ್ನು ಹೆಚ್ಚಿಸಿವೆ.

ಸೂಪರ್ ಬೈಕ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 200 ಮಾಡಿಫೈ ಸ್ಕ್ರ್ಯಾಂಬ್ಲರ್

ಎಂಜಿನ್ ಸಾಮರ್ಥ್ಯ

199.5ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಈ ಮಾಡಿಫೈ ಬೈಕ್ ಮಾದರಿಯು 25-ಬಿಎಚ್‌ಪಿ ಮತ್ತು 19.2-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು ಎಂದು ಕ್ಯಾಟ್ರೊಸ್ ಸಂಸ್ಥೆ ಹೇಳಿಕೊಂಡಿದೆ.

ಒಟ್ಟಿನಲ್ಲಿ ಕೆಟಿಎಂ ಡ್ಯೂಕ್ ಸರಣಿಗಳು ಸಹ ಮಾಡಿಫೈ ವಿನ್ಯಾಸಕ್ಕೆ ವಿಶೇಷವಾಗಿ ಬಳಕೆ ಮಾಡಿಕೊಳ್ಳಲು ಸೂಕ್ತ ಎಂಬುವುದು ಸಾಬೀತಾಗಿದ್ದು, ಕ್ಯಾಟ್ರೊಸ್ ಸಂಸ್ಥೆಯು ಸಿದ್ದಗೊಳಿಸಿರುವ ಮಾಡಿಫೈ ಬೈಕಿನ ವಿಡಿಯೋ ಇಲ್ಲಿದೆ ನೋಡಿ..

Most Read Articles

Kannada
Read more on bike modifications ktm
English summary
A KTM Duke 200 Scrambler Modification From Indonesia.
Story first published: Friday, June 1, 2018, 17:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X