ಮಾಡಿಫೈನಲ್ಲಿ ಹೊಸ ರೂಪ ಪಡೆದ ಕೆಎಂಟಿ ಡ್ಯೂಕ್ 200 ಸ್ಟ್ರೀಟ್ ಎಕ್ಸ್2

ಮಾಡಿಫೈ ಸಂಸ್ಥೆಯೊಂದು ಸ್ಟ್ರಿಟ್ ಎಕ್ಸ್2 ಹೆಸರಿನಲ್ಲಿ ಡ್ಯೂಕ್ 200 ಮಾದರಿಯನ್ನು ವಿಶೇಷವಾಗಿ ಅಭಿವೃದ್ಧಿ ಮಾಡಿದೆ.

By Praveen Sannamani

ಆಸ್ಟ್ರೀಯನ್ ಮೂಲದ ಬೈಕ್ ಉತ್ಪಾದನಾ ಕೆಟಿಎಂ ಸಂಸ್ಥೆಯು ಕಳೆದ ವರ್ಷವಷ್ಟೇ 2017ರ ಡ್ಯೂಕ್ 250 ಮತ್ತು ಡ್ಯೂಕ್ 390 ಮಾದರಿಗಳನ್ನು ಹೊಸ ಸೌಲಭ್ಯಗಳೊಂದಿಗೆ ಬಿಡುಗಡೆ ಮಾಡಿತ್ತು. ಆದರೇ, ಡ್ಯೂಕ್ 200 ಮಾದರಿಯಲ್ಲಿ ಯಾವುದೇ ಬದಲಾವಣೆ ತಂದಿರಲಿಲ್ಲ. ಇದೇ ಉದ್ದೇಶದಿಂದ ಮಾಡಿಫೈ ಸಂಸ್ಥೆಯೊಂದು ಸ್ಟ್ರಿಟ್ ಎಕ್ಸ್2 ಹೆಸರಿನಲ್ಲಿ ಡ್ಯೂಕ್ 200 ಮಾದರಿಯನ್ನು ವಿಶೇಷವಾಗಿ ಅಭಿವೃದ್ಧಿ ಮಾಡಿದೆ.

ಮಾಡಿಫೈನಲ್ಲಿ ಹೊಸ ರೂಪ ಪಡೆದ ಕೆಎಂಟಿ ಡ್ಯೂಕ್ 200 ಸ್ಟ್ರೀಟ್ ಎಕ್ಸ್2

ಡ್ಯೂಕ್ 200 ಮಾದರಿಗಳನ್ನು ಉನ್ನತಿಕರಿಸದ ಬಗ್ಗೆ ಬೇಸರ ಹೊಂದಿರುವ ಗ್ರಾಹಕರಿಗೆ ಪುಣೆ ಮೂಲದ ಆಟೋಲೋಗ್ ಡಿಸೈನ್ ಎನ್ನುವ ಮಾಡಿಫೈ ಸಂಸ್ಥೆಯೊಂದು ಸ್ಟ್ರೀಟ್ ಎಕ್ಸ್2 ಹೆಸರಿನಲ್ಲಿ ಡ್ಯೂಕ್ 200 ಮಾದರಿಗೆ ಹೊಸ ವಿನ್ಯಾಸ ನೀಡಿದ್ದು, ಸಂಪೂರ್ಣ ಮಾರ್ಪಾಡುಗಳೊಂದಿಗೆ ಡ್ಯೂಕ್ 200 ಮಾಡಿಫೈಗೊಂಡಿದೆ.

ಮಾಡಿಫೈನಲ್ಲಿ ಹೊಸ ರೂಪ ಪಡೆದ ಕೆಎಂಟಿ ಡ್ಯೂಕ್ 200 ಸ್ಟ್ರೀಟ್ ಎಕ್ಸ್2

ಈ ಮೂಲಕ ನಕೇಡ್ ಸೂಪರ್ ಬೈಕ್‌ಗಳ ವಿನ್ಯಾಸಕ್ಕೆ ಡ್ಯೂಕ್ 200 ಸ್ಟ್ರೀಟ್ ಎಕ್ಸ್2 ಮಾದರಿಯನ್ನು ಬದಲಾಯಿಸಿದ್ದು, ಉನ್ನತ ಮಾದರಿಯಾದ ಡ್ಯೂಕ್ 390 ಬೈಕ್ ವಿನ್ಯಾಸವನ್ನು ಹೊಂದಿರಲಿದೆ.

ಮಾಡಿಫೈನಲ್ಲಿ ಹೊಸ ರೂಪ ಪಡೆದ ಕೆಎಂಟಿ ಡ್ಯೂಕ್ 200 ಸ್ಟ್ರೀಟ್ ಎಕ್ಸ್2

ಕೇವಲ 12 ಸಾವಿರಗಳಿಗೆ ಈ ರೀತಿಯಾದ ಮಾಡಿಫೈ ಹೊಂದಬಹುದಾಗಿದ್ದು, ಮಸ್ಕ್ಯೂಲರ್ ಟ್ಯಾಂಕ್, ಬೆಲ್ಲಿ ಪಾನ್, ರೆಡಿಯೆಟರ್ ಕವರ್ ಮತ್ತು ಹಿಂಬದಿಯ ಕೌಲ್ ವಿನ್ಯಾಸದಲ್ಲಿ ಹೊಸ ಡಿಸೈನ್‌ಗಳನ್ನು ಸೇರಿಸಲಾಗುತ್ತದೆ.

ಮಾಡಿಫೈನಲ್ಲಿ ಹೊಸ ರೂಪ ಪಡೆದ ಕೆಎಂಟಿ ಡ್ಯೂಕ್ 200 ಸ್ಟ್ರೀಟ್ ಎಕ್ಸ್2

ಒಂದು ವೇಳೆ ಇನ್ನಷ್ಟು ಪ್ರಮಾಣದ ಖರ್ಚು ಮಾಡುವುದಾದರೇ, ಬೈಕ್ ಮಾಡಿಫೈನಲ್ಲಿ ಟೈಲ್ ಟಿಡ್ಡಿ ಯುನಿಟ್, ರಿರ್ ಟೈರ್ ಹಗ್ಗರ್ ಮತ್ತು ಸೀಟ್ ಕೌಲ್ ಸಹ ವಿಭಿನ್ನ ವಿನ್ಯಾಸ ಹೊಂದಲಿದೆ. ಜೊತೆಗೆ ಗ್ರಾಹಕರ ಬೇಡಿಕೆ ಅನುಗುಣವಾಗಿ ಪೇಂಟ್ ಸ್ಕೀಮ್ ಕೂಡಾ ಲಭ್ಯವಿರಲಿದೆ.

ಮಾಡಿಫೈನಲ್ಲಿ ಹೊಸ ರೂಪ ಪಡೆದ ಕೆಎಂಟಿ ಡ್ಯೂಕ್ 200 ಸ್ಟ್ರೀಟ್ ಎಕ್ಸ್2

ಆದರೇ, ಆಟೋಲೋಗ್ ಡಿಸೈನ್ ಎನ್ನುವ ಮಾಡಿಫೈ ಸಂಸ್ಥೆಯು ಒದಗಿಸುವ ಹೊಸ ಡಿಸೈನ್‌ಗಳಿಗೆ ಯಾವುದೇ ರೀತಿಯ ವಾರಂಟಿಗಳು ಇರುವುದಿಲ್ಲ ಎನ್ನಲಾಗಿದ್ದು, ಡ್ಯೂಕ್ 390 ಮಾದರಿಯಲ್ಲಿ ಹೆಡ್‌ಲೈಟ್‌ಗಳನ್ನು ಸಹ ಮರುಜೋಡಣೆ ಮಾಡಲಾಗುತ್ತದೆ.

ಮಾಡಿಫೈನಲ್ಲಿ ಹೊಸ ರೂಪ ಪಡೆದ ಕೆಎಂಟಿ ಡ್ಯೂಕ್ 200 ಸ್ಟ್ರೀಟ್ ಎಕ್ಸ್2

ಇದಷ್ಟೇ ಅಲ್ಲದೇ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮತ್ತಷ್ಚು ಹೊಸ ಫೀಚರ್‌ಗಳನ್ನು ಅಳವಡಿಸುವ ಆಟೋಲೋಗ್ ಡಿಸೈನ್ ಸಂಸ್ಥೆಯು ಈಗಾಗಲೇ ಸಾವಿರಾರು ಗ್ರಾಹಕರಿಗೆ ಇದೇ ರೀತಿಯಾದ ಮಾಡಿಫೈ ಉತ್ಪನ್ನಗಳನ್ನು ತಯಾರಿಸಿಕೊಟ್ಟಿದೆ.

ಮಾಡಿಫೈನಲ್ಲಿ ಹೊಸ ರೂಪ ಪಡೆದ ಕೆಎಂಟಿ ಡ್ಯೂಕ್ 200 ಸ್ಟ್ರೀಟ್ ಎಕ್ಸ್2

ಒಂದು ವೇಳೆ ನೀವು ಕೂಡಾ ನಿಮ್ಮ ಡ್ಯೂಕ್ 200 ಮಾದರಿಯನ್ನು ಮಾಡಿಫೈ ಮಾಡಿಸಬೇಕು ಎನ್ನುವ ಆಸಕ್ತಿ ಇದ್ದಲ್ಲಿ ಆಟೋಲೋಗ್ ಡಿಸೈನ್ ಸಂಪರ್ಕಿಸಬಹುದಾಗಿದ್ದು, ನಿರ್ದಿಷ್ಟ ಅವಧಿಯಲ್ಲಿ ಮಾಡಿಫೈ ಬೈಕ್ ಅನ್ನು ಒದಗಿಸುತ್ತಾರೆ.

Most Read Articles

Kannada
Read more on ktm ಕೆಟಿಎಂ
English summary
KTM Duke 200 Street X2 — An Affordable Customisation Kit You Can Own.
Story first published: Saturday, March 3, 2018, 15:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X