ಸಮಸ್ಯೆಗಳ ಗೂಡಾದ ಹೊಸ ಡ್ಯೂಕ್ 390- ವರ್ಷದಲ್ಲಿ ಎರಡನೇ ಬಾರಿ ಹೊಸ ಬೈಕ್ ಹಿಂಪಡೆದ ಕೆಟಿಎಂ..!

By Praveen Sannamani

ಕಮ್ಯೂಟರ್ ಬೈಕ್ ವಿಭಾಗದಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿರುವ ಡ್ಯೂಕ್ 390 ಬೈಕ್‌ಗಳ ಮೇಲಿನ ಯುವಕರ ಕ್ರೇಜ್ ಇತ್ತೀಚೆಗೆ ಅದ್ಯಾಕೊ ಕಡಿಮೆ ಆಗ್ತಾ ಇದೆ. ಇದಕ್ಕೆ ಹಲವಾರು ಕಾರಣಗಳಿದ್ದು, 2017ರ ಫೆಬ್ರುವರಿಯಿಂದ ಇದುವರೆಗೂ ಕೆಟಿಎಂ ಡ್ಯೂಕ್ 390 ಬೈಕ್‌ಗಳಲ್ಲಿ ಒಂದಿಲ್ಲಾ ಒಂದು ತಾಂತ್ರಿಕ ಸಮಸ್ಯೆಗಳು ಎದುರುಗೊಳ್ಳುತ್ತಲೇ ಇವೆ ಎಂದ್ರೆ ನೀವು ನಂಬಲೇಬೇಕು.

ಸಮಸ್ಯೆಗಳ ಗೂಡಾದ ಹೊಸ ಡ್ಯೂಕ್ 390- ವರ್ಷದಲ್ಲಿ ಎರಡನೇ ಬಾರಿ ಬೈಕ್ ಹಿಂಪಡೆದ ಕೆಟಿಎಂ..!

ಹೌದು, 2017ರ ಫೆಬ್ರುವರಿಯಲ್ಲಿ ಮಹತ್ವದ ಬದಲಾವಣೆಯೊಂದಿಗೆ ಭಾರತದಲ್ಲಿ ಬಿಡುಗಡೆಯಾಗಿದ್ದ ಕೆಟಿಎಂ ಡ್ಯೂಕ್ 390 ಬೈಕ್‌ಗಳು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಲೇ ಇವೆ. ಜೊತೆಗೆ 2018ರ ಆವೃತ್ತಿ ಬಿಡುಗಡೆಯಾದ ನಂತರ ಈ ಹಿಂದಿನ ತಾಂತ್ರಿಕ ಸಮಸ್ಯೆಗಳು ಮರುಕಳಿಸುತ್ತಲೇ ಇದ್ದು, ಇದೀಗ ಕಡ್ಡಾಯವಾಗಿ ಪ್ರತಿ ಡ್ಯೂಕ್ 390 ಬೈಕ್‌ಗಳಿಗಳಿಗೆ ಮಾನ್ಸೂನ್ ಕಿಟ್ ಜೋಡೆಣೆಗೆ ಮುಂದಾಗಿದೆ.

ಸಮಸ್ಯೆಗಳ ಗೂಡಾದ ಹೊಸ ಡ್ಯೂಕ್ 390- ವರ್ಷದಲ್ಲಿ ಎರಡನೇ ಬಾರಿ ಬೈಕ್ ಹಿಂಪಡೆದ ಕೆಟಿಎಂ..!

ಇಷ್ಟು ದಿನಗಳ ಕಾಲ ಗ್ರಾಹಕರ ದೂರುಗಳ ಅನ್ವಯ ಬೈಕ್‌ಗಳನ್ನು ಹಿಂಪಡೆಯುತ್ತಿದ್ದ ಕೆಟಿಎಂ ಸಂಸ್ಥೆಯು ಇದೇ ಮೊದಲ ಬಾರಿಗೆ ಸ್ವಯಂಪ್ರರೇಣೆಯಾಗಿ ಡ್ಯೂಕ್ 390 ಬೈಕ್‌ಗಳಿಗೆ ಮಾನ್ಸೂನ್ ಕಿಟ್ ಜೋಡಿಸುತ್ತಿದ್ದು, ಇದರಿಂದ ಮಳೆಗಾಲದ ಸಮಯದಲ್ಲಿ ಬೈಕ್ ಎಂಜಿನ್ ವಿಭಾಗದಲ್ಲಿ ಕೆಸರು ಮೆತ್ತುವ ಸಮಸ್ಯೆ ತಪ್ಪಲಿದೆ.

ಸಮಸ್ಯೆಗಳ ಗೂಡಾದ ಹೊಸ ಡ್ಯೂಕ್ 390- ವರ್ಷದಲ್ಲಿ ಎರಡನೇ ಬಾರಿ ಬೈಕ್ ಹಿಂಪಡೆದ ಕೆಟಿಎಂ..!

ಜೊತೆಗೆ ಮಾನ್ಸೂನ್ ಕಿಟ್ ಇದ್ದಲ್ಲಿ ಬೈಕಿನ ಹಿಂಬದಿ ಸವಾರರಿಗೆ ಕೆಸರು ಸಿಡಿಯುವ ಸಮಸ್ಯೆ ಕೂಡಾ ತಪ್ಪಲ್ಲಿದ್ದು, ಕೆಟಿಎಂ ಸಂಸ್ಥೆಯ ಮಾಹಿತಿ ಪ್ರಕಾರ ತನ್ನ ಗ್ರಾಹಕರನ್ನು ಸದ್ಯದಲ್ಲೇ ಕ್ರಮ ಸಂಖ್ಯೆಗೆ ಅನುಗುಣವಾಗಿ ಹೊಸ ತಾಂತ್ರಿಕ ಸೌಲಭ್ಯವನ್ನ ಅಳವಡಿಸಲಿದೆಯೆಂತೆ.

ಸಮಸ್ಯೆಗಳ ಗೂಡಾದ ಹೊಸ ಡ್ಯೂಕ್ 390- ವರ್ಷದಲ್ಲಿ ಎರಡನೇ ಬಾರಿ ಬೈಕ್ ಹಿಂಪಡೆದ ಕೆಟಿಎಂ..!

ಇನ್ನು ಡ್ಯೂಕ್ 390 ಬೈಕ್‌ಗಳಲ್ಲಿ ಈ ಹಿಂದೆ ಸಾಫ್ಟ್‌ವೇರ್ ಫ್ಲ್ಯಾಶ್, ಹೆಡ್‌ಲ್ಯಾಂಪ್ ಟರ್ನಿಂಗ್ ಆಪ್, ಹೆಡ್‌ಲ್ಯಾಂಪ್ ವೈಬ್ರೆಷನ್ ಆಗುವುದು ಮತ್ತು ಮಳೆಗಾಲದ ಸಮಯದಲ್ಲಿ ಹಿಂಬದಿ ಚಕ್ರದಿಂದ ಚಿಮ್ಮುವ ಕೆಸರು ಹಿಂಬದಿಯ ಸವಾರರಿಗೆ ಸಿಡಿಯುತ್ತಿದ್ದಲ್ಲದೇ ಚಾರ್ಸಿ ಕಳಗಿನ ಭಾಗದಲ್ಲೂ ನಿರು ಶೇಖರಣೆಯಾಗುವ ಮೂಲಕ ತಕ್ಕು ಹಿಡಿಯುವ ಸಾಧ್ಯತೆಗಳಿದ್ದವು. ಹೀಗಾಗಿ ಈ ಬಗ್ಗೆ ಬಹಳಷ್ಟು ಗ್ರಾಹಕರು ದೂರು ನೀಡಿದ್ದರು.

ಸಮಸ್ಯೆಗಳ ಗೂಡಾದ ಹೊಸ ಡ್ಯೂಕ್ 390- ವರ್ಷದಲ್ಲಿ ಎರಡನೇ ಬಾರಿ ಬೈಕ್ ಹಿಂಪಡೆದ ಕೆಟಿಎಂ..!

ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಮೇಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದು, ಇದೀಗ ಮಾನ್ಸೂನ್ ಕಿಟ್ ಜೋಡಣೆಗಾಗಿ ಬೈಕ್‌ಗಳನ್ನ ಹಿಂಪಡೆದಿದೆ. ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ ಇದುವರೆಗೆ ಬೈಕ್ ಹಿಂಪಡೆದ ಬೈಕ್‌ಗಳಲ್ಲಿ ಶೇ. 90ರಷ್ಟು ಡ್ಯೂಕ್ 390 ಬೈಕ್‌ಗಳೇ ಅಂದ್ರೆ ನೀವು ನಂಬಲೇಬೇಕು.

ಸಮಸ್ಯೆಗಳ ಗೂಡಾದ ಹೊಸ ಡ್ಯೂಕ್ 390- ವರ್ಷದಲ್ಲಿ ಎರಡನೇ ಬಾರಿ ಬೈಕ್ ಹಿಂಪಡೆದ ಕೆಟಿಎಂ..!

ಕೆಟಿಎಂ ಡ್ಯೂಕ್ 390 ಬೈಕಿನಲ್ಲಿ ಸಾಮಾನ್ಯವಾಗಿ ಟಿಎಫ್‌ಟಿ ಡಿಸ್‌ಫೈ, ಹೆಡ್‌ಲ್ಯಾಂಪ್, ಇಂಧನ ಟ್ಯಾಂಕ್ ಸೋರಿಕೆ, ಬ್ಯಾಟರಿ ಸಮಸ್ಯೆ ಸೇರಿದಂತೆ ಸಾಪ್ಟ್‌ವೇರ್ ಸೌಲಭ್ಯದಲ್ಲಿ ಆಗಾಗ ತಾಂತ್ರಿಕ ಸಮಸ್ಯೆಗಳು ಕಂಡು ಬರುತ್ತಿರುವುದು ಬೈಕ್ ಸವಾರರ ಆಕ್ರೋಶ್ ಕಾರಣವಾಗಿದ್ದು, ಹೀಗಾಗಿ ಕೆಟಿಎಂ ಸಂಸ್ಥೆಯು ಹಲವಾರು ಬಾರಿ ಅಪ್ಡೆಡ್ ವರ್ಷನ್‌ಗಳನ್ನ ಬಿಡುಗಡೆಗೊಳಿದ್ದರು ಸಮಸ್ಯೆ ಮಾತ್ರ ಇನ್ನು ತಪ್ಪಿಲ್ಲ.

ಸಮಸ್ಯೆಗಳ ಗೂಡಾದ ಹೊಸ ಡ್ಯೂಕ್ 390- ವರ್ಷದಲ್ಲಿ ಎರಡನೇ ಬಾರಿ ಬೈಕ್ ಹಿಂಪಡೆದ ಕೆಟಿಎಂ..!

ಎಂಜಿನ್ ಸಾಮರ್ಥ್ಯ

ಡ್ಯೂಕ್ 390 ಬೈಕ್‌ಗಳು 373ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 43.5-ಬಿಎಚ್‌ಪಿ ಮತ್ತು 37-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಸಮಸ್ಯೆಗಳ ಗೂಡಾದ ಹೊಸ ಡ್ಯೂಕ್ 390- ವರ್ಷದಲ್ಲಿ ಎರಡನೇ ಬಾರಿ ಬೈಕ್ ಹಿಂಪಡೆದ ಕೆಟಿಎಂ..!

ಇದರೊಂದಿಗೆ ಬೈಕಿನಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂಭಾಗದ ಚಕ್ರದಲ್ಲಿ 320ಎಂಎಂ ಡಿಸ್ಕ್‌ ಬ್ರೇಕ್ ಮತ್ತು ಹಿಂಭಾಗದ ಚಕ್ರಗಳಲ್ಲಿ 230ಎಂಎಂ ಡಿಸ್ಕ್ ಬ್ರೇಕ್ ಅಳವಡಿಸಲಾಗಿದ್ದರೂ ಬೈಕಿನಲ್ಲಿ ಆಗಾಗಗ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಡ್ಯೂಕ್ 390 ಖರೀದಿಗೆ ಬಹುತೇಕ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.

ಸಮಸ್ಯೆಗಳ ಗೂಡಾದ ಹೊಸ ಡ್ಯೂಕ್ 390- ವರ್ಷದಲ್ಲಿ ಎರಡನೇ ಬಾರಿ ಬೈಕ್ ಹಿಂಪಡೆದ ಕೆಟಿಎಂ..!

ಹೀಗಿರುವಾಗ ಗ್ರಾಹಕರು ದೂರು ಸಲ್ಲಿಸುವ ಮೊದಲೇ ಕೆಟಿಎಂ ಸಂಸ್ಥೆಯೇ 2017 ಮತ್ತು 2018ರ ಅವಧಿಯಲ್ಲಿ ಮಾರಾಟವಾಗಿ ಪ್ರತಿಯೊಂದು ಡ್ಯೂಕ್ 390 ಬೈಕ್‌ಗಳಿಗೂ ಮಾನ್ಸೂನ್ ಕಿಟ್ ಜೋಡಣೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆದಿಸಿದೆ ಎನ್ನಬಹುದು.

Most Read Articles

Kannada
Read more on ktm duke recall
English summary
KTM Duke 390 Recalled In India For A Compulsory Monsoon Kit Fitment.
Story first published: Tuesday, August 7, 2018, 16:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X