ಬಹಿರಂಗಗೊಂಡ ಮಿಟ್ಸುಬಿಶಿ ಸಂಸ್ಥೆಯ ಕೊನೆಯ ಪಜೆರೊ ಕಾರು..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಮುಟ್ಸುಬಿಶಿಯ ಪಜೆರೊ ಕಾರು ಯುರೋಪಿಯನ್ ಮಾರುಕಟ್ಟೆಯಲ್ಲಿ ಕಳಪೆ ಮಾರಾಟ ಮತ್ತು ಕಳಪೆ ಗುಣಮಟ್ಟದ ಎಮಿಷನ್ ಅನ್ನು ಹೊಂದಿರುವ ಕಾರಣ ಮಾರಾಟವನ್ನು ಸ್ಥಗಿತಗೊಳಿಸಲಿದೆ ಎನ್ನಲಾಗಿದೆ.

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಮುಟ್ಸುಬಿಶಿಯ ಪಜೆರೊ ಕಾರು ಯುರೋಪಿಯನ್ ಮಾರುಕಟ್ಟೆಯಲ್ಲಿ ಕಳಪೆ ಮಾರಾಟ ಮತ್ತು ಕಳಪೆ ಗುಣಮಟ್ಟದ ಎಮಿಷನ್ ಅನ್ನು ಹೊಂದಿರುವ ಕಾರಣ ಮಾರಾಟವನ್ನು ಸ್ಥಗಿತಗೊಳಿಸಲಿದೆ ಎನ್ನಲಾಗಿದ್ದು, ಇದೀಗ ಪಜೆರೊ ಕಾರುಗಳಿಗೆ ಸಂಪೂರ್ಣ ವಿಧಾಯ ಹೇಳಲು ಕೊನೆಯ ತಲೆಮಾರಿನ ಪಜೆರೊ ಕಾರುಗಳನ್ನು ಬಹಿರಂಗಗೊಳಿಸಿದೆ.

ಬಹಿರಂಗಗೊಂಡ ಮಿಟ್ಸುಬಿಶಿ ಸಂಸ್ಥೆಯ ಕೊನೆಯ ಪಜೆರೊ ಕಾರು..

ಮಿಟ್ಸುಬಿಶಿ ಪಜೆರೊ 1982ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಸಂಸ್ಥೆಯು ಇದೀಗ ತಮ್ಮ ಎಸ್‍ಯುವಿ ಕಾರುಗಳ ಸರಣಿಯಲ್ಲಿ ಇತಿಹಾಸದ ನೆನಪಿಗಾಗಿ ಮಿಟ್ಸುಬಿಶಿ ಪಜೆರೊನ ಅಂತಿಮ ಆವೃತ್ತಿಯ ಮಾದರಿಗಳನ್ನು ಬಹಿರಂಗಪಡಿಸಿದೆ.

ಬಹಿರಂಗಗೊಂಡ ಮಿಟ್ಸುಬಿಶಿ ಸಂಸ್ಥೆಯ ಕೊನೆಯ ಪಜೆರೊ ಕಾರು..

ಪಜೆರೊ ಕೊನೆಯ ಏಡಿಶನ್ ಕಾರುಗಳು ಮೂರು ಮತ್ತು ಐದು ಬಾಗಿಲುಗಳ ವಿನ್ಯಾಸದಲ್ಲಿ ಕಾಣಿಸಿಕೊಳ್ಳಲಿದ್ದು, ಒಟ್ಟು ಸಾವಿರ ಯೂನಿಟ್‍‍ಗಳ ಸ್ಪೆಷಲ್ ಎಡಿಶನ್ ಕಾರುಗಳನ್ನು ಮಾತ್ರ ಮಾರುಕಟ್ಟೆಗೆ ಬಿಡುಗಡೆಗೊಳಿಸಲಿವೆಯಂತೆ.

ಬಹಿರಂಗಗೊಂಡ ಮಿಟ್ಸುಬಿಶಿ ಸಂಸ್ಥೆಯ ಕೊನೆಯ ಪಜೆರೊ ಕಾರು..

ಪಜೆರೊ ಕೊನೆಯ ಎಡಿಶನ್ ಪ್ರತೀ ಕಾರುಗಳು ವಿಶಿಷ್ಟವಾದ ನಂಬರ್‍‍ಗಳನ್ನು ಪಡೆಯಲಿದೆ ಎನ್ನಲಾಗಿದ್ದು, ಮೂರು ಬಾಗಿಲುಗಳುಳ್ಳ ಪಜೆರೊ ಕಾರುಗಳ ಮುಂಭಾಗದಲ್ಲಿ ಫ್ರಂಟ್ ಬಾರ್, 4ಎಂಎಂ ಅಲ್ಯುಮಿನಿಯಂ ಸ್ಕಿಡ್ ಪ್ಲೇಟ್ ವಿಶಿಷ್ಟವಾದ ಟೈರ್‍‍‍ಗಳೊಂದಿಗೆ 18 ಇಂಚಿನ ರಿಮ್ಸ್ ಶಾಡ್ ಅನ್ನು ಪಡೆದುಕೊಂಡಿರಲಿದೆ.

ಬಹಿರಂಗಗೊಂಡ ಮಿಟ್ಸುಬಿಶಿ ಸಂಸ್ಥೆಯ ಕೊನೆಯ ಪಜೆರೊ ಕಾರು..

ಇನ್ನು ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೆ ರೂಪ್ ರೈಲ್ಸ್, ಕ್ರೂಸ್ ಕಂಟ್ರೋಲ್, ಹೀಟೆಡ್ ಫ್ರಂಟ್ ಸೀಟ್ಸ್, ಆಟೋಮ್ಯಾಟಿಕ್ ಹೆಡ್‍‍ಲ್ಯಾಂಪ್ಸ್, ರೈನ್ ಸೆನ್ಸಿಂಗ್ ಹೀಟೆಡ್ ವಿಂಡ್‍ ಸ್ಕ್ರೀನ್, ಬ್ಲೂಟೂತ್ ಕನೆಕ್ಟಿವಿಟಿ ಆಯ್ಕೆಯನ್ನು ಪಡಿರುವ ಇನ್ಫೋಟೈನ್ಮೆಂಟ್ ಸಿಸ್ಟಂ, ಅಲ್ಯೂಮಿನಿಯಂ ಸ್ಕಿಡ್ ಪ್ಲೇಟ್‍‍ಗಳನ್ನು ಅಳವಡಿಸಲಾಗಿದೆ.

ಬಹಿರಂಗಗೊಂಡ ಮಿಟ್ಸುಬಿಶಿ ಸಂಸ್ಥೆಯ ಕೊನೆಯ ಪಜೆರೊ ಕಾರು..

ಮತ್ತೊಂದು ಕಡೆ ಐದು ಬಾಗಿಲುಗಳುಳ್ಳ ಪಜೆರೊ ಕಾರುಗಳು 20 ಇಂಚಿನ ಡ್ಯುಯಲ್ ಟೋನ್ ಅಲಾಯ್ ಚಕ್ರಗಳು, ರೀಯರ್ ಸ್ಪಾಯ್ಲರ್ ಮತ್ತು ಇಲ್ಯುಮಿನೇಟೆಡ್ ಡೋರ್ ಸಿಲ್ಸ್ ಅನ್ನು ಪಡೆದಿದ್ದು, ಕಾರಿನ ಒಳಭಾಗದಲ್ಲಿ ಲೆದರ್ ಸೀಟ್‍‍ಗಳು, ಎಲೆಕ್ಟ್ರಿಕ್ ಸನ್ ರೂಫ್ ಮತ್ತು ನ್ಯಾವಿಗೇಷನ್ ಆಯ್ಕೆ ಪಡೆದಿರುವ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆದುಕೊಂಡಿರಲಿದೆ.

ಬಹಿರಂಗಗೊಂಡ ಮಿಟ್ಸುಬಿಶಿ ಸಂಸ್ಥೆಯ ಕೊನೆಯ ಪಜೆರೊ ಕಾರು..

ಎಂಜಿನ್ ಸಾಮರ್ಥ್ಯ

ಹೊಸ ಮಿಟ್ಸುಬಿಶಿ ಪಜೆರೊ ಕೊನೆಯ ಎಡಿಶನ್ ಮೂರು ಮತ್ತು ಐದು ಬಾಗಿಲುಗಳುಳ್ಳ ಕಾರುಗಳು 3.2 ಲೀಟರ್, 4 ಸಿಲೆಂಡರ್ ಡೀಸೆಲ್ ಅಂಜಿನ್ ಸಹಾಯದಿಂದ 187ಬಿಹೆಚ್‍ಪಿ ಮತ್ತು 441ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, 5 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಹಿರಂಗಗೊಂಡ ಮಿಟ್ಸುಬಿಶಿ ಸಂಸ್ಥೆಯ ಕೊನೆಯ ಪಜೆರೊ ಕಾರು..

ಮಿಟ್ಸುಬಿಶಿ ಸಂಸ್ಥೆಯು ತಮ್ಮ ಪಜೆರೊ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸುವ ಯೋಜನೆಯಲಿದ್ದು, ಕೊನೆಯದಾಗಿ ತಮ್ಮ ಫೈನಲ್ ಎಡಿಶನ್ ಕಾರುಗಳನ್ನು ಪರಿಚಯಿಸಲಿದೆ ಎನ್ನಲಾಗಿದೆ. ಇನ್ನು ಈ ಕಾರುಗಳ 1000 ಯೂನಿಟ್‍‍ಗಳನ್ನು ಮಾತ್ರ ಬಿಡುಗಡೆಗೊಳಿಸಲಿದ್ದು, ಭಾರತದಲ್ಲಿಯೂ ಕೂಡ ಪಜೆರೊ ಫೈನಲ್ ಎಡಿಶನ್ ಕಾರುಗಳು ಕಾಣಿಸಿಕೊಳ್ಳಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಲಂಚಾವತಾರ ಬಿಚ್ಚಿಟ್ಟ ಯುವಕನಿಗೆ ಪೊಲೀಸರಿಂದಲೇ ಲಂಚದ ಆಮೀಷ...

ಬ್ಯಾಡ್ಜ್ ವಿಚಾರದಲ್ಲಿ ಕಾರು ಚಾಲಕರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ....

ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಮಾರುತಿ ಸುಜುಕಿ ಹೊಸ ಡಿಜೈರ್

ಹೊಸ ಎಕ್ಸ್‌ಯುವಿ500 v/s ಜೀಪ್ ಕಂಪಾಸ್ v/s ಹ್ಯುಂಡೈ ಕ್ರೇಟಾ... ಯಾವುದು ಬೆಸ್ಟ್?

ಇನ್ಮುಂದೆ ನಿಮ್ಮ ಹೀರೋ ಬೈಕಿಗೆ ಬೇಕಾದ ಸ್ಪೇರ್‌ಪಾರ್ಟ್‌ಗಳನ್ನು ಇಲ್ಲಿ ಖರೀದಿಸಿ...

Most Read Articles

Kannada
Read more on mitsubishi suv
English summary
Mitsubishi Pajero Final Edition Revealed.
Story first published: Monday, April 23, 2018, 9:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X