ಬಿಡುಗಡೆಗು ಮುನ್ನವೇ ಬಿಎಮ್‍ಡಬ್ಲ್ಯೂ ಜಿ310 ಬೈಕ್ ಇದೀಗ ಟೆಸ್ಟ್ ಡ್ರೈವ್‍‍ಗೆ ಲಭ್ಯ..

ಬಿಎಮ್‍‍ಡಬ್ಲ್ಯೂ ಮೊಟರ್ರಾಡ್ ಸಂಸ್ಥೆಯು ಬಿಡುಗಡೆಗೊಳಿಸಲಿರುವ ಹೊಸ ಜಿ310 ಆರ್ ಮತ್ತು ಜಿ310 ಜಿಎಸ್‍ ಬೈಕ್‍‍ಗಳ ಖರೀದಿಗಾಗಿ ಮುಂಬೈ, ಅಹ್ಮದಾಬಾದ್, ಪುಣೆ, ನವ ದೆಹಲಿ, ಕೊಚಿ, ಚೆನ್ನೈ ಮತ್ತು ಬೆಂಗಳೂರಿನಲ್ಲಿನ ಡೀಲರ್‍‍ಗಳಲ್ಲಿ ಬುಕ್ಕಿಂಗ್ ಪ್ರ

By Rahul Ts

ಬಿಎಮ್‍‍ಡಬ್ಲ್ಯೂ ಮೊಟರ್ರಾಡ್ ಸಂಸ್ಥೆಯು ಬಿಡುಗಡೆಗೊಳಿಸಲಿರುವ ಹೊಸ ಜಿ310 ಆರ್ ಮತ್ತು ಜಿ310 ಜಿಎಸ್‍ ಬೈಕ್‍‍ಗಳ ಖರೀದಿಗಾಗಿ ಮುಂಬೈ, ಅಹ್ಮದಾಬಾದ್, ಪುಣೆ, ನವ ದೆಹಲಿ, ಕೊಚಿ, ಚೆನ್ನೈ ಮತ್ತು ಬೆಂಗಳೂರಿನಲ್ಲಿನ ಡೀಲರ್‍‍ಗಳಲ್ಲಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಶುರುಮಾಡಲಾಗಿದೆ.

ಬಿಡುಗಡೆಗು ಮುನ್ನವೇ ಬಿಎಮ್‍ಡಬ್ಲ್ಯೂ ಜಿ310 ಬೈಕ್ ಇದೀಗ ಟೆಸ್ಟ್ ಡ್ರೈವ್‍‍ಗೆ ಲಭ್ಯ..

ಇದೇ ಜುಲೈ 18ರಂದು ಬಿಡುಗಡೆಗೊಳ್ಳಲಿರುವ ಹೊಸ ಬೈಕಿನ ಖರೀದಿಗಾಗಿ ಗ್ರಾಹಕರು ಮೇಲೆ ಹೇಳಿರುವ ನಗರಗಳಲ್ಲಿನ ಬಿಎಮ್‍‍ಡಬ್ಲ್ಯೂ ಡೀಲರ್‍‍ಗಳ ಬಳಿ ರೂ. 50,000 ನೀಡಿ ಪ್ರೀ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದ್ದು, ಇದಲ್ಲದೆ ಗ್ರಾಹಕರು ಖರೀದಿಗು ಮುನ್ನವೆ ಬೈಕ್ ಅನ್ನು ಟೆಸ್ಟ್ ಡ್ರೈವ್‍‍ಗೆ ತೆಗೆದುಕೊಳ್ಳಬಹುದಾಗಿದೆ.

ಬಿಡುಗಡೆಗು ಮುನ್ನವೇ ಬಿಎಮ್‍ಡಬ್ಲ್ಯೂ ಜಿ310 ಬೈಕ್ ಇದೀಗ ಟೆಸ್ಟ್ ಡ್ರೈವ್‍‍ಗೆ ಲಭ್ಯ..

ಭಾರತೀಯ ಮೂಲದ ಅತಿ ದೊಡ್ಡ ದ್ವಿಚಕ್ರ ವಾಹನ ಅಭಿವೃದ್ಧಿ ಸಂಸ್ಥೆಯಾಗಿರುವ ಟಿವಿಎಸ್ ಮೋಟಾರ್ಸ್ ಜೊತೆಗಾರಿಕೆಯಲ್ಲಿ ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ಜಿ 310 ಜಿಎಸ್ ಮತ್ತು ಜಿ 310 ಆರ್ ಬೈಕ್‌ಗಳನ್ನು ಅಭಿವೃದ್ಧಿಪಡಿಸಿದೆ.

ಬಿಡುಗಡೆಗು ಮುನ್ನವೇ ಬಿಎಮ್‍ಡಬ್ಲ್ಯೂ ಜಿ310 ಬೈಕ್ ಇದೀಗ ಟೆಸ್ಟ್ ಡ್ರೈವ್‍‍ಗೆ ಲಭ್ಯ..

ತಮಿಳುನಾಡಿನ ಹೊಸೂರುನಲ್ಲಿ ಸ್ಥಿತಗೊಂಡಿರುವ ಟಿವಿಎಸ್ ಮೋಟಾರು ಘಟಕದಲ್ಲೇ ಬಿಎಂಡಬ್ಲ್ಯು ಜಿ 310 ಜಿಎಸ್ ಮತ್ತು ಜಿ 310 ಆರ್ ಬೈಕ್‌ಗಳು ನಿರ್ಮಾಣವಾಗುತ್ತಿದ್ದು, ದೇಶಿಯ ಮಾರುಕಟ್ಟೆಗೆ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗೂ ಇಲ್ಲಿಂದಲೇ ರಫ್ತುಗೊಳ್ಳಲಿವೆ.

ಬಿಡುಗಡೆಗು ಮುನ್ನವೇ ಬಿಎಮ್‍ಡಬ್ಲ್ಯೂ ಜಿ310 ಬೈಕ್ ಇದೀಗ ಟೆಸ್ಟ್ ಡ್ರೈವ್‍‍ಗೆ ಲಭ್ಯ..

ಬಿಎಂಡಬ್ಲ್ಯು ಸಂಸ್ಥೆಯು ತನ್ನ ಶಕ್ತಿಶಾಲಿ ಆರ್ 1200 ಜಿಎಸ್ ಬೈಕ್ ನಿಂದ ಪ್ರೇರಣೆ ಪಡೆದುಕೊಂಡು ಜಿ310 ಜಿಎಸ್ ವಿನ್ಯಾಸವನ್ನು ರಚಿಸಿದ್ದು, ಇದು ಆಫ್ ರೋಡ್ ಸ್ನೇಹಿ ಚಕ್ರಗಳನ್ನು ಜೋಡಿಸಲಾಗಿದೆ. ಹಾಗೆಯೇ ಜಿ 310 ಆರ್ ಕೂಡಾ ಸ್ಪ್ರೀಟ್ ಫೈಟರ್ ಎನ್ನುವ ಟ್ಯಾಗ್ ಪಡೆದುಕೊಂಡಿದೆ.

ಬಿಡುಗಡೆಗು ಮುನ್ನವೇ ಬಿಎಮ್‍ಡಬ್ಲ್ಯೂ ಜಿ310 ಬೈಕ್ ಇದೀಗ ಟೆಸ್ಟ್ ಡ್ರೈವ್‍‍ಗೆ ಲಭ್ಯ..

ಎಂಜಿನ್ ಸಾಮರ್ಥ್ಯ

313 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳು 28 ಎನ್ ಎಂ ತಿರುಗುಬಲದಲ್ಲಿ 33.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಬಿಡುಗಡೆಗು ಮುನ್ನವೇ ಬಿಎಮ್‍ಡಬ್ಲ್ಯೂ ಜಿ310 ಬೈಕ್ ಇದೀಗ ಟೆಸ್ಟ್ ಡ್ರೈವ್‍‍ಗೆ ಲಭ್ಯ..

ಹೊಸ ಬೈಕ್‌ಗಳಲ್ಲಿ ಲಗೆಜ್ ಕ್ಯಾರಿಯರ್, ಟಾಪ್ ಬಾಕ್ಸ್, ಸೆಂಟರ್ ಸ್ಟ್ಯಾಂಡ್, ಎಲ್ ಇಡಿ ಇಂಡಿಕೇಟರ್, ಹೀಟೆಡ್ ಗ್ರಿಪ್, ಟ್ಯಾಂಕ್ ಬ್ಯಾಗ್, ಜಿಪಿಎಸ್ ಸಪೋರ್ಟ್, ಜಿಪಿಎಸ್ ನೇವಿಗೇಟರ್ ಮತ್ತು ಆಫ್ ರೋಡ್ ಚಾಲನೆಗಳನ್ನು ಗಿಟ್ಟಿಸಿಕೊಳ್ಳಲಿದೆ.

ಬಿಡುಗಡೆಗು ಮುನ್ನವೇ ಬಿಎಮ್‍ಡಬ್ಲ್ಯೂ ಜಿ310 ಬೈಕ್ ಇದೀಗ ಟೆಸ್ಟ್ ಡ್ರೈವ್‍‍ಗೆ ಲಭ್ಯ..

ಜೊತೆಗೆ ಹೊಸ ಬೈಕ್‌ಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಸ್ಟ್ಯಾಂಡರ್ಡ್ ಆಗಿ ದೊರಕಲಿದೆ. ಹಾಗೆಯೇ ಬೈಕಿನ ಮುಂಭಾಗದ ಚಕ್ರಗಳಲ್ಲಿ 4 ಪಿಸ್ಟನ್ ಕ್ಯಾಲಿಪರ್ ಜೊತೆ 300ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರಗಳಲ್ಲಿ 240ಎಂಎಂ ಡಿಸ್ಕ್ ಬ್ರೇಕ್ ಸೌಲಭ್ಯ ಹೊಂದಿದೆ.

ಬಿಡುಗಡೆಗು ಮುನ್ನವೇ ಬಿಎಮ್‍ಡಬ್ಲ್ಯೂ ಜಿ310 ಬೈಕ್ ಇದೀಗ ಟೆಸ್ಟ್ ಡ್ರೈವ್‍‍ಗೆ ಲಭ್ಯ..

ಅಂದ ಹಾಗೆ, ನೂತನ ಜಿ310 ಜಿಎಸ್ ಬೈಕ್‌ಗಳು 2075 ಎಂಎಂ ಉದ್ದ, 880 ಎಂಎಂ ಅಗಲ 1230 ಎಂಎಂ ಎತ್ತರ ಮತ್ತು 1420 ಎಂಎಂ ಚಕ್ರಾಂತರವನ್ನು ಪಡೆದಿರುತ್ತದೆ. ಇನ್ನು 169.5 ಕೆ.ಜಿ ತೂಕವನ್ನು ಹೊಂದಿದೆ.

ಬಿಡುಗಡೆಗು ಮುನ್ನವೇ ಬಿಎಮ್‍ಡಬ್ಲ್ಯೂ ಜಿ310 ಬೈಕ್ ಇದೀಗ ಟೆಸ್ಟ್ ಡ್ರೈವ್‍‍ಗೆ ಲಭ್ಯ..

ಇನ್ನು ಹೊಸ ಬೈಕ್‌ಗಳು ಗಂಟೆಗೆ 143 ಕಿ.ಮೀ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿದ್ದು, 12-ಲೀಟರ್ ಫ್ಯೂಲ್ ಟ್ಯಾಂಕ್ ಸಾಮರ್ಥ್ಯದೊಂದಿಗೆ ಪ್ರತಿ ಲೀಟರ್‌‌ಗೆ 30 ಕಿ.ಮಿ ಮೈಲೇಜ್ ಪಡೆದುಕೊಂಡಿರುತ್ತವೆ. ಒಟ್ಟಿನಲ್ಲಿ ಹೊಸತನದೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುತ್ತಿರುವ ಬಿಎಂಡಬ್ಲ್ಯು ಟ್ವಿನ್ ಬೈಕ್‌ಗಳು ಕೆಟಿಎಂ ಡ್ಯೂಕ್ 390, ಯಮಹಾ ವೈಜೆಡ್-ಎಫ್ ಆರ್3 ಮತ್ತು ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕ್‌ಗಳಿಗೆ ಪೈಪೋಟಿ ನೀಡುವ ತವಕದಲ್ಲಿವೆ ಎನ್ನಬಹುದು.

Most Read Articles

Kannada
Read more on bmw dealer auto news
English summary
New BMW G310 GS test ride bike arrives at dealer before launch.
Story first published: Saturday, July 14, 2018, 12:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X