ಸಿಬಿ ಹಾರ್ನೆಟ್ 160ಆರ್ v/s ಅಪಾಚೆ ಆರ್‍‍ಟಿಆರ್ 4ವಿ... ಯಾವುದು ಬೆಸ್ಟ್?

ಸಿಬಿ ಹಾರ್ನೆಟ್ 160ಆರ್ ಮತ್ತು ಟಿವಿಎಸ್ ಅಪಾಚೆ ಆರ್‍‍ಟಿಆರ್ 4ವಿ ಬೈಕ್‌ಗಳು ತಮ್ಮದೇ ವಿಶೇಷಗಳ ಲಕ್ಷಣಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದ್ದು, ಯಾವ ರೀತಿ ಭಿನ್ನವಾಗಿವಾಗಿವೆ ಎಂಬುವುದರ ಕುರಿತು ಇಲ್ಲಿ ಚರ್ಚಿಸುತ್ತಿದ್ದೇವೆ.

By Rahul Ts

ಹೋಂಡಾ ದ್ವಿಚಕ್ರ ವಾಹನಗಳ ವಿಭಾಗ ಮತ್ತು ಟಿವಿಎಸ್ ಸಂಸ್ಥೆಗಳು ಕೆಲದಿನಗಳ ಹಿಂದಷ್ಟೆ ತಮ್ಮ ಸಿಬಿ ಹಾರ್ನೆಟ್ 160ಆರ್ ಎಬಿಎಸ್ ಮತ್ತು ಅಪಾಚೆ ಆರ್‍‍ಟಿಆರ್ 4 ವಿ ಬೈಕುಗಳನ್ನು ಬಿಡುಗಡೆಗೊಳಿಸಿದ್ದು, ಹೊಸ ಹೊಸ ವೈಶಿಷ್ಟ್ಯತೆಗಳೊಂದಿಗೆ ಯುವ ಗ್ರಾಹಕರ ನೆಚ್ಚಿನ ಆಯ್ಕೆಯೊಂದಿಗೆ ಮಾರುಕಟ್ಟೆಯಲ್ಲಿ ಸದ್ದುಮಾಡುತ್ತಿವೆ.

ಸಿಬಿ ಹಾರ್ನೆಟ್ 160ಆರ್ v/s ಅಪಾಚೆ ಆರ್‍‍ಟಿಆರ್ 4ವಿ... ಯಾವುದು ಬೆಸ್ಟ್?

ಸಿಬಿ ಹಾರ್ನೆಟ್ 160ಆರ್ ಮತ್ತು ಟಿವಿಎಸ್ ಅಪಾಚೆ ಆರ್‍‍ಟಿಆರ್ 4 ವಿ ಬೈಕ್‌ಗಳು ತಮ್ಮದೇ ವಿಶೇಷಗಳ ಲಕ್ಷಣಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದ್ದು, ಎಂಜಿನ್ ಪರ್ಫಾಮೆನ್ಸ್, ಸುರಕ್ಷಾ ವಿಧಾನಗಳಲ್ಲಿ ಯಾವ ರೀತಿ ಭಿನ್ನವಾಗಿವಾಗಿವೆ ಎಂಬುವುದರ ಕುರಿತು ಇಲ್ಲಿ ಚರ್ಚಿಸುತ್ತಿದ್ದೇವೆ.

ಸಿಬಿ ಹಾರ್ನೆಟ್ 160ಆರ್ v/s ಅಪಾಚೆ ಆರ್‍‍ಟಿಆರ್ 4ವಿ... ಯಾವುದು ಬೆಸ್ಟ್?

ಬೈಕ್ ಡಿಸೈನ್

2018ರ ಹೊಸ ಹೋಂಡಾ ಸಿಬಿ ಹಾರ್ನೆಟ್ 160ಆರ್ ತನ್ನ ಕಳೆದ ಮಾದರಿಗಿಂತ ವಿಭಿನ್ನವಾಗಿದ್ದು, ಹೊಸದಾಗಿ ಅಪ್ ಫ್ರಂಟ್ ಎಲ್ಇಡಿ ಹೆಡ್‍ಲ್ಯಾಂಪ್, ಸ್ಪೋರ್ಟಿ ಲುಕ್ ಮತ್ತು ಸಣ್ಣದಾದ ವಿಂಡ್‍ಸ್ಕ್ರೀನ್, ಆಕ್ರಮಣಕಾರಿ ಶ್ರಾಡ್ಸ್ ಜೊತೆಗೆ ಮಸ್ಕ್ಯುಲರ್ ಫ್ಯುಯಲ್ ಟ್ಯಾಂಕ್ ಮತ್ತು ಇನ್ನು ಈ ಬೈಕಿಗೆ ಬಳಸಲಾಗಿರುವ ಗ್ರಾಫಿಕ್ಸ್‌ಗಳು ಬೈಕ್ ಅಂದವನ್ನು ಹೆಚ್ಚಿಸಿವೆ.

ಸಿಬಿ ಹಾರ್ನೆಟ್ 160ಆರ್ v/s ಅಪಾಚೆ ಆರ್‍‍ಟಿಆರ್ 4ವಿ... ಯಾವುದು ಬೆಸ್ಟ್?

ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕಿನ ಸೈಡ್ ಪ್ಯಾನಲ್‍ಗಳು ಎಕ್ಸ್ ಆಕಾರದಲ್ಲಿರುವ ಎಲ್ಇಡಿ ಟೈಲ್‍ಲೈಟ್, ಸ್ಪೋರ್ಟಿ ಗ್ರಾಬ್ ರೈಲ್ಸ್, ವೈಡ್ ರೀರ್ ಟೈರ್, ಸ್ಟಬ್ಬಿ ಎಕ್ಸಾಸ್ಟ್ ಮಫ್ಲರ್ ಮತ್ತು ರಿಮ್ ಸ್ಟ್ರಿಪ್ಸ್ ಉಪಕರಗಳನ್ನು ಪಡೆದುಕೊಂಡಿದೆ.

ಸಿಬಿ ಹಾರ್ನೆಟ್ 160ಆರ್ v/s ಅಪಾಚೆ ಆರ್‍‍ಟಿಆರ್ 4ವಿ... ಯಾವುದು ಬೆಸ್ಟ್?

ಟಿವಿಎಸ್ ಅಪಾಚೆ ಆರ್‍‍ಟಿಆರ್ 160 4ವಿ ಬೈಕ್ ವಿನ್ಯಾಸವು ಅಪಾಚೆ ಆರ್‍‍ಟಿಆರ್ 200 4ವಿ ಬೈಕ್‍ನಿಂದ ಪ್ರೇರಿತಗೊಂಡಿದ್ದು, ಎಲ್ಇಡಿ ಡಿಆರ್‍ಎಲ್, ಶ್ರಾಡ್ಸ್ ಹೊಂದಿರುವ ಸ್ಕಲ್ಪ್ಟೆಡ್ ಫ್ಯುಯಲ್ ಟ್ಯಾಂಕ್ ಮತ್ತು ಎಂಜಿನ್ ಬೆಲ್ಲಿ ಪ್ಯಾನ್ ಅನ್ನು ಪಡೆದಿದ್ದು, ಫ್ಯುಯಲ್ ಟ್ಯಾಂಕ್ ಮೇಲೆ ಬಳಸಿರುವ ಬಾವುಟದ ಗ್ರಾಫಿಕ್ಸ್ ಬೈಕಿಗೆ ಹೊಸ ಲುಕ್ ಅನ್ನು ನೀಡಿದೆ.

ಸಿಬಿ ಹಾರ್ನೆಟ್ 160ಆರ್ v/s ಅಪಾಚೆ ಆರ್‍‍ಟಿಆರ್ 4ವಿ... ಯಾವುದು ಬೆಸ್ಟ್?

ಇನ್ನು ಅಪಾಚೆ ಆರ್‍‍ಟಿಆರ್ 160 4ವಿ ಬೈಕಿನ ಸೈಡ್ ಪ್ಯಾನಲ್‍‍ಗಳು ಸಿಲ್ವರ್ ಬಣ್ಣದಿಂದ ಸಜ್ಜುಗೊಂಡಿದ್ದು, ಹಿಂಭಾಗದಲ್ಲಿ ಎಲ್ಇಡಿ ಟೈಲ್‍ಲೈಟ್, ಸ್ಪ್ಲಿಟ್ ಗ್ರಾಬ್ ರೈಲ್., ಚಿಕ್ಕದಾದ ಟೈರ್ ಹಗ್ಗರ್, ಮತ್ತು ಡ್ಯುಯಲ್ ಬ್ಯಾರೆಲ್ ಎಕ್ಸಾಸ್ಟ್ ಮಫ್ಲರ್ ಅನ್ನು ಪಡೆದಿದೆ.

ಬೈಕುಗಳ ಒಟ್ಟಾರೆ ವಿನ್ಯಾಸದ ರೇಟಿಂಗ್

2018 ಹೋಂಡಾ ಸಿಬಿ ಹಾರ್ನೆಟ್ 160ಆರ್ - 8/10

2018 ಟಿವಿಎಸ್ ಅಪಾಚೆ ಆರ್‍‍ಟಿಆರ್ 160 ವಿ4-8/10

ಸಿಬಿ ಹಾರ್ನೆಟ್ 160ಆರ್ v/s ಅಪಾಚೆ ಆರ್‍‍ಟಿಆರ್ 4ವಿ... ಯಾವುದು ಬೆಸ್ಟ್?

ಬೈಕ್ ವೈಶಿಷ್ಟ್ಯತೆಗಳು

ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಎಲ್ಇಡಿ ಹೆಡ್‍ಲ್ಯಾಂಪ್, ಎಲ್ಇಡಿ ಟೈಲ್ ಲೈಟ್, ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಅಲಾಯ್ ಚಕ್ರಗಳು ಮತ್ತು ಹೆಜಾರ್ಡ್ ಲೈಟ್ ಸ್ವಿಚ್‍ಗಳನ್ನು ಪಡೆದಿದೆ.

ಸಿಬಿ ಹಾರ್ನೆಟ್ 160ಆರ್ v/s ಅಪಾಚೆ ಆರ್‍‍ಟಿಆರ್ 4ವಿ... ಯಾವುದು ಬೆಸ್ಟ್?

ಇದಲ್ಲದೇ ಟೇಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೋನೊಶಾಕ್ ಸಸ್ಪೆಷನ್ ಹಾಗೆಯೇ ಎರಡೂ ಬದಿಗಳಲ್ಲಿ ಡಿಸ್ಕ್ ಬ್ರೇಕ್ ಮತ್ತು ಮುಂಭಾಗದ ಚಕ್ರಗಳಿಗೆ ಸಿಂಗಲ್ ಚಾನೆಲ್ ಎಬಿಎಸ್ ಬ್ರೇಕಿಂಗ್ ಸಿಸ್ಟಂ ನೊಂದಿಗೆ ಸಜ್ಜುಗೊಂಡಿದೆ.

ಸಿಬಿ ಹಾರ್ನೆಟ್ 160ಆರ್ v/s ಅಪಾಚೆ ಆರ್‍‍ಟಿಆರ್ 4ವಿ... ಯಾವುದು ಬೆಸ್ಟ್?

ಇನ್ನು ಟಿವಿಎಸ್ ಅಪಾಚೆ ಆರ್‍‍ಟಿಆರ್ 160 ಆರ್ ಬೈಕ್ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಎಲ್ಇಡಿ ಡಿಆರ್‍ಎಲ್, ಎಲ್ಇಡಿ ಟೈಲ್ ಲೈಟ್, ಹೊಸ ಸಿಂಗಲ್ ಪೀಸ್ ಹ್ಯಾಂಡಲ್‍‍ಬಾರ್, ರ್ಯಾಮ್ ಏರ್ ಇಂಟೇಕ್ ಮತ್ತು ಅಲಾಯ್ ವೀಲ್‍‍ಗಳನ್ನು ಪಡೆದುಕೊಂಡಿವೆ.

ಸಿಬಿ ಹಾರ್ನೆಟ್ 160ಆರ್ v/s ಅಪಾಚೆ ಆರ್‍‍ಟಿಆರ್ 4ವಿ... ಯಾವುದು ಬೆಸ್ಟ್?

ಜೊತೆಗೆ ಅಪ್ ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೋನೋಶಾಕ್ ಸಸ್ಪೆಷನ್ ಅನ್ನು ಪಡೆದಿದ್ದು, ಸಸ್ಪೆಷನ್ ಅನ್ನು ಶೋವಾನಿಂದ ಟ್ಯೂನ್ ಮಾಡಲಾಗಿದೆ. ಇನ್ನು ಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೇ ಎರಡು ಬದಿಗಳಲ್ಲಿ ಡಿಸ್ಕ್ ಬ್ರೇಕ್‍‍ಗಳನ್ನು ಪಡೆದಿದೆ.

ಒಟ್ಟಾರೆ ವೈಶಿಷ್ಟ್ಯತೆಗಳ ರೇಟಿಂಗ್

2018 ಹೋಂಡಾ ಸಿಬಿ ಹಾರ್ನೆಟ್ 160ಆರ್ - 8/10

2018 ಟಿವಿಎಸ್ ಅಪಾಚೆ ಆರ್‍‍ಟಿಆರ್ 160 ವಿ4-7.5/10

ಸಿಬಿ ಹಾರ್ನೆಟ್ 160ಆರ್ v/s ಅಪಾಚೆ ಆರ್‍‍ಟಿಆರ್ 4ವಿ... ಯಾವುದು ಬೆಸ್ಟ್?

ಎಂಜಿನ್, ಗೇರ್‍‍ಬಾಕ್ಸ್ ಮತ್ತು ಮೈಲೇಜ್

2018 ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ 162.71ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಪಡೆದುಕೊಂಡಿದ್ದು, 14.9ಬಿಹೆಚ್‍ಪಿ ಮತ್ತು 14.5ಎನ್ಎಂ ಟಾರ್ಕ್‍ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಹಾಗೆಯೇ ಈ ಎಂಜಿನ್ ಅನ್ನು 5 ಸ್ಪೀಡ್ ಗೃ‍‍ಬಾಕ್ಸ್ ಜೋಡಿಸಲಾಗಿದ್ದು, ಪ್ರತಿ ಲೀಟರ್‍‍ಗೆ 40-45 ಕಿಲೋಮೀಟರ್ ಮೈಲೇಜ್‍ ನೀಡಲಿದೆ.

ಸಿಬಿ ಹಾರ್ನೆಟ್ 160ಆರ್ v/s ಅಪಾಚೆ ಆರ್‍‍ಟಿಆರ್ 4ವಿ... ಯಾವುದು ಬೆಸ್ಟ್?

2018 ಟಿವಿಎಸ್ ಅಪಾಚೆ ಆರ್‍‍ಟಿಆರ್ 160 ವಿ4 ಬೈಕ್ 15937ಸಿಸಿ ಸಿಂಗಲ್ ಸಿಲಿಂಡರ್, 4 ವೇಲ್ವ್, ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, 16.28-ಬಿಹೆಚ್‍ಪಿ, ಇಎಫ್ಐ ಮಾಡಲ್ 16.56-ಬಿಹೆಚ್‍ಪಿ ಹಾಗು 14.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿವೆ. ಜೊತೆಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಗೆ ಜೋಡಿಸಲಾಗಿದ್ದು, ಪ್ರತೀ ಲೀಟರ್‍‍ಗೆ 40-45 ಕಿಲೋಮೀಟರ್ ಮೈಲೇಜ್‍ ನೀಡಲಿದೆ.

ಎಂಜಿನ್ ಸಾಮರ್ಥ್ಯದ ರೇಟಿಂಗ್

2018 ಹೋಂಡಾ ಸಿಬಿ ಹಾರ್ನೆಟ್ 160ಆರ್ - 8/10

2018 ಟಿವಿಎಸ್ ಅಪಾಚೆ ಆರ್‍‍ಟಿಆರ್ 160 ವಿ4-8/10

ಸಿಬಿ ಹಾರ್ನೆಟ್ 160ಆರ್ v/s ಅಪಾಚೆ ಆರ್‍‍ಟಿಆರ್ 4ವಿ... ಯಾವುದು ಬೆಸ್ಟ್?

ಬೈಕುಗಳ ಬೆಲೆ (ಎಕ್ಸ್ ಶೋರಂ ಪ್ರಕಾರ)

ಹೊಸ ಟಿವಿಎಸ್ ಅಪಾಚೆ ಆರ್‍‍ಟಿಆರ್ 160 4ವಿ ಬೈಕ್ ಕರ್ಬ್ ವಿಥ್ ಡಿಸ್ಕ್ ಬ್ರೇಕ್, ಕರ್ಬ್ ವಿಥ್ ರೀರ್ ಡಿಸ್ಕ್ ಬ್ರೇಕ್ ಮತ್ತು ಇಎಫ್ಐ ಎಂಬ ಮೂರು ಮಾದರಿಗಳಲ್ಲಿ ಲಭ್ಯವಿದ್ದು, ಎಕ್ಸ್ ಶೋರುಂ ಪ್ರಕಾರ ಆರಂಭಿಕವಾಗಿ ರೂ. 81 ರಿಂದ ಟಾಪ್ ಮಾಡೆಲ್ ‌ಗಳು ರೂ. 90 ಸಾವಿರ ಬೆಲೆ ಹೊಂದಿವೆ.

ಸಿಬಿ ಹಾರ್ನೆಟ್ 160ಆರ್ v/s ಅಪಾಚೆ ಆರ್‍‍ಟಿಆರ್ 4ವಿ... ಯಾವುದು ಬೆಸ್ಟ್?

ಇನ್ನು ಹೊಸ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ರೂ 84,675 ಸಾವಿರ ಪ್ರಾಂಭಿಕ ಬೆಲೆಯನ್ನು ಹೊಂದಿದ್ದು, ನಾಲ್ಕು ವೇರಿಯಂಟ್‍ಗಳಲ್ಲಿ ಈ ಬೈಕ್ ಲಭ್ಯವಿವೆ. ಇದರ ಟಾಪ್ ಎಂಡ್ ಎಬಿಎಸ್ ವೇರಿಯಂಟ್ ರೂ.92,675 ಬೆಲೆ ಹೊಂದಿದೆ.

ಸಿಬಿ ಹಾರ್ನೆಟ್ 160ಆರ್ v/s ಅಪಾಚೆ ಆರ್‍‍ಟಿಆರ್ 4ವಿ... ಯಾವುದು ಬೆಸ್ಟ್?

ಎರಡೂ ಬೈಕುಗಳು ಸಹ ಹೊಸ ವಿನ್ಯಾಸ ಹಾಗು ವೈಶಿಷ್ಟ್ಯತೆಗಳನ್ನು ಪಡೆದಿದ್ದರೂ ಸೇಫ್ಟಿ ವಿಚಾರಕ್ಕೆ ಬಂದರೆ ಹೋಂಡಾ ಬೈಕ್ ಸಿಂಗಲ್ ಚಾನಲ್ ಎಬಿಸ್ ಹೊಂದಿರುವುದನ್ನು ಗಮನಿಸಬಹುದಾಗಿದ್ದು, ಪರ್ಫಾರ್ಮೆನ್ಸ್ ರೈಡ್‍ ಅನುಭವಕಾಗಿ ಖರೀದಿಸುವುದಾದರೇ ಅಪಾಚೆ ಆರ್‍‍ಟಿಆರ್ 160 4ವಿ ಬೈಕನ್ನು ಆಯ್ಕೆ ಮಾಡಬಹುದಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...

2. ರಾಜಧಾನಿಯಲ್ಲಿ ಇನ್ಮುಂದೆ ವಾಹನಗಳಿಗೆ ಬಿಎಸ್ 6 ಇಂಧನ ಪೂರೈಕೆ...

3. ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ...

4. ಹೊಂಡಾ ಆಕ್ಟಿವಾ 5ಜಿ V/S ಟಿವಿಎಸ್ ಜೂಪಿಟರ್... ಇವುಗಳಲ್ಲಿ ಯಾವುದು ಬೆಸ್ಟ್.?

5. 2018ರ ಅಪಾಚೆ ಆರ್‍‍ಟಿಆರ್ 160 v/s ಪಲ್ಸರ್ ಎನ್ಎನ್160... ಇವುಗಳಲ್ಲಿ ಯಾವುದು ಬೆಸ್ಟ್.?

Most Read Articles

Kannada
Read more on honda comparison
English summary
2018 Honda CB Hornet 160R Vs 2018 TVS Apache RTR 160 4V Comparison: Specs, Price, Mileage & Features.
Story first published: Thursday, March 29, 2018, 12:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X