ಬರಲಿದೆ ಅಪ್ಡೇಟೆಡ್ ವರ್ಷನ್ ಹೋಂಡಾ ನಾವಿ..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಸಂಸ್ಥೆಯು 2016ರಲ್ಲಿ ತನ್ನ ಹೊಸ ಮಾದರಿಯ ನಾವಿ ಸ್ಕೂಟರ್‍‍‍ಗಳನ್ನು ಬಿಡುಗಡೆ ಮಾಡಿತ್ತು.

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಸಂಸ್ಥೆಯು 2016ರಲ್ಲಿ ತನ್ನ ಹೊಸ ಮಾದರಿಯ ನಾವಿ ಸ್ಕೂಟರ್‍‍‍ಗಳನ್ನು ಬಿಡುಗಡೆ ಮಾಡಿದ್ದು, ಕೆಲ ದಿನಗಳ ಹಿಂದೆ ಕಳಪೆ ಮಾರಾಟದ ಸಲುವಾಗಿ ನವಿ ಸ್ಕೂಟರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ ಎಂಬ ಸುದ್ದಿ ಕೇಳಿಬಂದಿತ್ತು.

ಬರಲಿದೆ ಅಪ್ಡೇಟೆಡ್ ವರ್ಷನ್ ಹೋಂಡಾ ನವಿ..

ಆದರೆ ಇದೀಗ ಹೋಂಡಾ ಸಂಸ್ಥೆಯು ನವೀಕರಿಸಲಾದ ನಾವಿ ಸ್ಕೂಟರ್ ಅನ್ನು ತಯಾರಿಸುವ ಯೋಜನೆಯಲ್ಲಿದ್ದು, ಇದೇ ಆಗಸ್ಟ್ ತಿಂಗಳಿನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎನ್ನಲಾಗಿದೆ. ಹೊಸದಾಗಿ ಬರಲಿರುವ ನವಿ ಸ್ಕೂಟರ್‍‍‍ಗಳು ವಿನ್ಯಾಸದಲ್ಲಿ ಮತ್ತು ವೈಶಿಷ್ಟ್ಯತೆಗಳನ್ನು ಪಡೆಯಲಿದೆ.

ಬರಲಿದೆ ಅಪ್ಡೇಟೆಡ್ ವರ್ಷನ್ ಹೋಂಡಾ ನವಿ..

ಮೆಲೆ ಹೇಳಿರುವ ಹಾಗೆ ನಾವಿ ಸ್ಕೂಟರ್‍‍ಗಳು ಹೊಸ ವೈಶಿಷ್ಟ್ಯತೆಗಳು ಮತ್ತು ವಿನ್ಯಾಸದಲ್ಲಿ ಗುರುತರ ಬದಲಾವಣೆಗಳನ್ನು ಪಡೆಯಲಿದ್ದು, ಉತ್ತಮ ಕಾರ್ಯಸಾಧ್ಯತೆಗಾಗಿ ಆಡ್-ಆನ್ ಬಿಡಿಭಾಗಗಳನ್ನು ಪಡೆದುಕೊಳ್ಳಲಿದೆ.

ಬರಲಿದೆ ಅಪ್ಡೇಟೆಡ್ ವರ್ಷನ್ ಹೋಂಡಾ ನಾವಿ..

2016ರ ಆಟೋ ಎಕ್ಸ್ ಪೋ ಮೇಳದಲ್ಲಿ ಬಿಡುಗಡೆಗೊಂಡಿದ್ದ ಹೋಂಡಾ ನವಿ ಹೈಬ್ರಿಡ್ ದ್ವಿಚಕ್ರ ವಾಹನವು ಬಿಡುಗಡೆಗೊಂಡ ಒಂದು ವರ್ಷದಲ್ಲಿ 50,000 ಯೂನಿಟ್ ಸ್ಕೂಟರ್‍‍ಗಳು ಮಾತ್ರ ಮಾರಾಟಗೊಂಡಿದ್ದವು. ನಾವಿ ಸ್ಕೂಟರ್ ಮತ್ತು ಮೋಟಾರ್‍‍‍ಸೈಕಲ್ ಎರಡರ ಗುಣಲಕ್ಷಣಗಳನ್ನು ಸಂಯೋಜಿಸಿದ ಒಂದು ದ್ವಿಚಕ್ರವಾಹನವಾಗಿದೆ.

ಬರಲಿದೆ ಅಪ್ಡೇಟೆಡ್ ವರ್ಷನ್ ಹೋಂಡಾ ನಾವಿ..

ಬಿಡುಗಡೆಗೆ ಸಜ್ಜುಗೊಳ್ಳುತ್ತಿರುವ ಹೋಂಡಾ ನಾವಿ ಇಂಧನದ ವ್ಯಾಪ್ತಿ, ಡಿಜಿಟಲ್ ಅನಾಲಾಗ್‍‍ನೊಂದಿಗೆ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಎಂಬ ವೈಶಿಷ್ಟ್ಯತೆಯನ್ನು ಪಡೆಯಲಿದೆ. ಇದಲ್ಲದೆ ಪೆಯಿಂಟ್ ಸ್ಕೀಮ್ ಮತ್ತು ಹೊಸ ಗ್ರಾಪಿಕ್ಸ್ ನೊಂದಿಗೆ ವಿನ್ಯಾಸದಲ್ಲಿಯೂ ಕೂಡಾ ಅಪ್ಡೇಟ್ ಅನ್ನು ಪಡೆಯಲಿದೆ.

ಬರಲಿದೆ ಅಪ್ಡೇಟೆಡ್ ವರ್ಷನ್ ಹೋಂಡಾ ನಾವಿ..

ಹೋಂಡಾ ನಾವಿ ಸ್ಕೂಟರ್‍‍ಗಳು 110ಸಿಸಿ, ನಾಲ್ಕು ಸ್ಟ್ರೋಕ್, ಸಿಂಗಲ್ ಸಿಲೆಂಡರ್ ಸಹಾಯದಿಂದ 8 ಬಿಹೆಚ್‍ಪಿ ಹಾಗೂ 9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡಿದಿದ್ದು, ಪ್ರತಿ ಲೀಟರ್‍‍ಗೆ 60 ಕಿಲೋ ಮೀಟರ್ ಮೈಲೇಜ್ ಅನ್ನು ನೀಡುತ್ತದೆ.

ಬರಲಿದೆ ಅಪ್ಡೇಟೆಡ್ ವರ್ಷನ್ ಹೋಂಡಾ ನಾವಿ..

ಹೋಂಡಾ ನಾವಿ ಸ್ಕೂಟರ್‍‍ಗಳು ಸ್ಟ್ರೀಟ್, ಅಡ್ವೆಂಚರ್ ಮತ್ತು ಆಫ್ ರೋಡ್ ಎಂಬ ಮೂರಿ ವೇರಿಯೆಂಟ್‍‍ಗಳಲ್ಲಿ ಲಭ್ಯವಿದ್ದು, ರೆಡ್, ಗ್ರೇ, ವೈಟ್, ಆರೆಂಜ್ ಮತ್ತು ಕಪ್ಪು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಬರಲಿದೆ ಅಪ್ಡೇಟೆಡ್ ವರ್ಷನ್ ಹೋಂಡಾ ನಾವಿ..

ಪ್ರಸ್ಥುತ ದೊರೆಯುತ್ತಿರುವ ನವಿ ಸ್ಕೂಟರ್‍‍ಗಳ ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೇ, ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಎಕ್ಸ್ಟರ್ನಲ್ ಫ್ಯುಯಲ್ ಫಿಲ್ಲರ್ ಕ್ಯಾಪ್ ಅನ್ನು ಅಳವಡಿಸಲಾಗಿದ್ದು, ಇದಲ್ಲದೇ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಶಾಕ್ ಸಸ್ಪೆಷನ್ ಅನ್ನು ಕೂಡಾ ಪಡೆದಿವೆ.

ಬರಲಿದೆ ಅಪ್ಡೇಟೆಡ್ ವರ್ಷನ್ ಹೋಂಡಾ ನಾವಿ..

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸ ನಾವಿ ಸ್ಕೂಟರ್ ನವೀಕರಣಗೊಂಡು ಇದೇ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಗೊಳ್ಳಲಿದೆ ಎನ್ನಲಾಗಿದ್ದು, ಪ್ರಸ್ಥುತ ತಲೆಮಾರಿನ ನವಿ ಸ್ಕೂಟರ್‍ ಬೆಲೆಗಿಂತ ಕೊಂಚ ಹೆಚ್ಚಿರಲಿದೆ ಎಂದು ಊಹಿಸಲಾಗಿದೆ.

Most Read Articles

Kannada
Read more on honda navi
English summary
Honda Is Working On An Updated Version Of The Navi.
Story first published: Tuesday, July 3, 2018, 11:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X