ಜಾವಾ 42 ಬೈಕಿನ ಮೈಲೇಜ್ ಮತ್ತು ಟಾಪ್ ಸ್ಪೀಡ್ ಬಗ್ಗೆ ವಿವರ ಇಲ್ಲಿದೆ ನೋಡಿ..

ಪ್ರಸ್ಥುತ ಮಾರುಕಟ್ಟೆಯಲ್ಲಿ ಅಧಿಕವಾಗಿ ಮಾರಾಟವಾಗುತ್ತಿರುವ ರಾಯಲ್ ಎನ್‍ಫೀಲ್ಡ್ ಬೈಕ್‍ಗಳಿಗೆ ಟಕ್ಕರ್ ನೀಡಲು ಜಾವಾ ಮೋಟಾರ್‍‍ಸೈಕಲ್ಸ್ ಸಂಸ್ಥೆಯು ಮಹೀಂದ್ರಾ ಸಂಸ್ಥೆಯೊಂದಿಗೆ ಕೈ ಜೋಡಿಸಿ, ತಮ್ಮ ಹೊಸ ಜಾವಾ ಮತ್ತು ಜಾವಾ 42 ಎಂಬ ಎರಡು ಬೈಕ್‍ಗಳನ್ನು ಬಿಡುಗಡೆಗೊಳಿಸಿದೆ.

ಜಾವಾ 42 ಬೈಕಿನ ಮೈಲೇಜ್ ಮತ್ತು ಟಾಪ್ ಸ್ಪೀಡ್ ಬಗ್ಗೆ ವಿವರ ಇಲ್ಲಿದೆ ನೋಡಿ..

ಭಾರತದಲ್ಲಿ 80ರ ದಶಕದಲ್ಲಿ ತನ್ನದೇ ಆದ ಜನಪ್ರಿಯತೆ ಸಾಧಿಸಿ ಕ್ಲಾಸಿಕ್ ಬೈಕ್ ಪ್ರಿಯರ ಕ್ರೇಜ್‌ಗೆ ಕಾರಣವಾಗಿದ್ದ ಜಾವಾ ಸಂಸ್ಥೆಯು ತದನಂತರದ ದಿನಗಳಲ್ಲಿ ಭಾರೀ ನಷ್ಟ ಅನುಭವಿಸುವ ಮೂಲಕ ಮಾರುಕಟ್ಟೆಯಿಂದಲೇ ನಿರ್ಗಮಿಸಿತ್ತು.

ಜಾವಾ 42 ಬೈಕಿನ ಮೈಲೇಜ್ ಮತ್ತು ಟಾಪ್ ಸ್ಪೀಡ್ ಬಗ್ಗೆ ವಿವರ ಇಲ್ಲಿದೆ ನೋಡಿ..

ಆ ಬಳಿಕ ಬಿಎಸ್ಎ ಮೋಟಾರ್ ಸೈಕಲ್ ಸಂಸ್ಥೆಯ ಪಾಲಾಗಿದ್ದ ಜಾವಾ ಸಂಸ್ಥೆಯು ವಿವಿಧ ಮಾದರಿಯ ಬೈಕ್‌ಗಳನ್ನು ನಿರ್ಮಿಸಿದ್ದರೂ ಯಾವುದೇ ಸಂಚಲನ ಮೂಡಿಸಲಿಲ್ಲ. ಇದಾದ ನಂತರ 2016ರಲ್ಲಿ ಬಿಎಸ್ಎ ಸಂಸ್ಥೆಯಲ್ಲಿ ಮಹೀಂದ್ರಾ ಸಂಸ್ಥೆಯು ಪಾಲು ಹೊಂದುವ ಮೂಲಕ ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.

ಜಾವಾ 42 ಬೈಕಿನ ಮೈಲೇಜ್ ಮತ್ತು ಟಾಪ್ ಸ್ಪೀಡ್ ಬಗ್ಗೆ ವಿವರ ಇಲ್ಲಿದೆ ನೋಡಿ..

ಮತ್ತೆ ಮಾರುಕಟ್ಟೆಯಲ್ಲಿ ತನ್ನ ಹವಾ ಶುರು ಮಾಡಲು ಬಂದ ಜಾವಾ ಬೈಕ್‍ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಈ ನಿಟ್ಟಿನಲ್ಲಿ ಜಾವಾ ಸಂಸ್ಥೆಯು ಬಿಡುಗಡೆಗೊಳಿಸಿದ ಎರಡು ಬೈಕ್‍ಗಳಲ್ಲಿ ಒಂದಾದ ಜಾವಾ 42 ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಮುಂದಕ್ಕೆ ಓದಿ..

ಜಾವಾ 42 ಬೈಕಿನ ಮೈಲೇಜ್ ಮತ್ತು ಟಾಪ್ ಸ್ಪೀಡ್ ಬಗ್ಗೆ ವಿವರ ಇಲ್ಲಿದೆ ನೋಡಿ..

ಜಾವಾ ಮೋಟಾರ್‌ಸೈಕಲ್ಸ್ ಸಂಸ್ಥೆಯು ಬಿಡುಗಡೆಗೊಳಿಸಿರುವ ಜಾವಾ 42 ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 1.55 ಲಕ್ಷ ಮಾರಾಟದ ಬೆಲೆಯನ್ನು ಪಡೆದುಕೊಂಡಿದ್ದು, ಈಗಾಗಲೇ ಈ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಕೂಡಾ ಶುರುವಾಗಿದೆ. ಆಸಕ್ತ ಗ್ರಾಹಕರು ನಿಮ್ಮ ಹತ್ತಿರದಲ್ಲಿನ ಮಹೀಂದ್ರಾ ಡೀಲರ್‍‍ನ ಬಳಿ ರೂ. 5000 ಮುಂಗಡವಾಗಿ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಜಾವಾ 42 ಬೈಕಿನ ಮೈಲೇಜ್ ಮತ್ತು ಟಾಪ್ ಸ್ಪೀಡ್ ಬಗ್ಗೆ ವಿವರ ಇಲ್ಲಿದೆ ನೋಡಿ..

ಸಾಧಾರಣ ಜಾವಾ ಬೈಕ್‍ಗಳಿಗೆ ಹೋಲಿಸಿದರೆ ಜಾವಾ 42 ಬೈಕ್ ಸ್ಪೋರ್ಟಿಯರ್ ವಿನ್ಯಾಸವನ್ನು ಪಡೆದುಕೊಂಡಿದ್ದು, ಕ್ಲಾಸಿಕ್ ಶೈಲಿಯನ್ನು ಒಳಗೊಂಡಿದೆ. ಇದರಲ್ಲಿ ಬಳಸಲಾದ ಸಿಂಗಲ್ ಪಾಡ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಈ ಬೈಕಿನ ಅಂದವನ್ನು ಇನ್ನಷ್ಟು ಹೆಚ್ಚಿಸಲಾಗಿದೆ.

ಜಾವಾ 42 ಬೈಕಿನ ಮೈಲೇಜ್ ಮತ್ತು ಟಾಪ್ ಸ್ಪೀಡ್ ಬಗ್ಗೆ ವಿವರ ಇಲ್ಲಿದೆ ನೋಡಿ..

ಎಂಜಿನ್ ಮತ್ತು ಟಾಪ್ ಸ್ಪೀಡ್

ಹೊಸ ಜಾವಾ 42 ಬೈಕ್ 293ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಜಾವಾ 42 ಬೈಕಿನ ಮೈಲೇಜ್ ಮತ್ತು ಟಾಪ್ ಸ್ಪೀಡ್ ಬಗ್ಗೆ ವಿವರ ಇಲ್ಲಿದೆ ನೋಡಿ..

ಜಾವಾ ಮೋಟಾರ್‍‍ಸೈಕಲ್ಸ್ ಸಂಸ್ಥೆಯು ಬಿಡುಗಡೆಗೊಳಿಸಿದ ಜಾವಾ ಮತ್ತು ಜಾವಾ 42 ಬೈಕ್‍ಗಳ ಪರ್ಫಾರ್ಮೆನ್ಸ್ ಬಗ್ಗೆ ಯಾವುದೇ ಮಾಹಿತಿಗಳನ್ನು ಇದುವರೆಗೂ ಬಹಿರಂಗಗೊಳಿಸಿಲ್ಲವಾದರೂ, ಮಾಹಿತಿಗಳ ಪ್ರಕಾರ ಜಾವಾ 42 ಬೈಕ್ ಗಂಟೆಗೆ 120 ರಿಂದ 130 ಕಿಲೋಮೀಟರ್‍‍ನ ಟಾಪ್ ಸ್ಪೀಡ್‍ ಅನ್ನು ಪಡೆದುಕೊಳ್ಳಲಿದೆಯೆಂತೆ.

ಜಾವಾ 42 ಬೈಕಿನ ಮೈಲೇಜ್ ಮತ್ತು ಟಾಪ್ ಸ್ಪೀಡ್ ಬಗ್ಗೆ ವಿವರ ಇಲ್ಲಿದೆ ನೋಡಿ..

ಮೈಲೇಜ್ ಮತ್ತು ಫ್ಯುಯಲ್ ಟ್ಯಾಂಕ್

ಇಷ್ಟೆ ಅಲ್ಲದೇ ಜಾವಾ 42 ಬೈಕ್ ಪ್ರತೀ ಲೀಟರ್‍‍ಗೆ 30 ರಿಂದ 35 ಕಿಲೋಮೀಟರ್ ಮೈಲೇಜ್ ನೀಡಬಲ್ಲದು ಎಂದು ಹೇಳಲಾಗುತ್ತಿದ್ದು, 14 ಲೀಟರ್‍‍ನ ಫ್ಯುಯಲ್ ಟ್ಯಾಂಕ್ ಅನ್ನು ಅಳವಡಿಸಲಾಗಿದೆ. ಲೆಕ್ಕ ಹಾಕಿದ್ರೆ ಇದು ರಾಯಲ್ ಎನ್‍ಫೀಲ್ಡ್ 350 ಬೈಕ್‍ಗಳಿಗಿಂತಲೂ ಹೆಚ್ಚಿನ ಮೈಲೇಜ್ ನೀಡಲಿದೆ.

ಜಾವಾ 42 ಬೈಕಿನ ಮೈಲೇಜ್ ಮತ್ತು ಟಾಪ್ ಸ್ಪೀಡ್ ಬಗ್ಗೆ ವಿವರ ಇಲ್ಲಿದೆ ನೋಡಿ..

ಸೀಟ್ ಹೈಟ್ ಮತ್ತು ತೂಕ

ಜಾವಾ 42 ಬೈಕ್‍ನಲ್ಲಿ 765ಎಂಎಂ ಎತ್ತರವಾದ ಸೀಟ್ ನೀಡಿರುವ ಕಾರಣ ಮಧ್ಯಮ ಗಾತ್ರದ ರೈಡರ್‍‍ಗಳು ಅರಾಮಾಗಿ ಚಾಲನೆ ಮಾಡಬಹುದಾಗಿದ್ದು, ಜಾವಾ 42 ಬೈಕ್ 170 ಕಿಲೋಗ್ರಾಂನ ತೂಕವನ್ನು ಪಡುದುಕೊಂಡಿದೆ. ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್‍ಗಳು 192 ಕಿಲೋಗ್ರಾಂ ತೂಕವನ್ನು ಪಡೆದುಕೊಂಡಿದೆ.

ಜಾವಾ 42 ಬೈಕಿನ ಮೈಲೇಜ್ ಮತ್ತು ಟಾಪ್ ಸ್ಪೀಡ್ ಬಗ್ಗೆ ವಿವರ ಇಲ್ಲಿದೆ ನೋಡಿ..

ಟೈರ್‍‍ಗಳು ಮತ್ತು ಬ್ರೆಕ್

ಜಾವಾ 42 ಬೈಕ್ ಮುಂಭಾಗದಲ್ಲಿ 90/90 ಆರ್18 ಟೈರ್ ಮತ್ತು ಹಿಂಭಾಗದಲ್ಲಿ 120/80 ಆರ್17 ಯೂನಿಟ್ ಟೈರ್‍‍ಗಳನ್ನು ಪಡೆದುಕೊಂಡಿದೆ. ಇನ್ನು ರೈಡರ್‍‍ಗಳ ಸುರಕ್ಷತೆಗಾಗಿ ಈ ಬೈಕಿನ ಮುಂಭಾಗದಲ್ಲಿ 280ಎಂಎಂ ಡಿಸ್ಕ್ ಬ್ರೇಕ್ ಹಾಗು ಹಿಂಭಾಗದಲ್ಲಿ 153ಎಂಎಂ ಡಿಸ್ಕ್ ಬೆಕ್ ಅನ್ನು ಅಳವಡಿಸಲಾಗಿದ್ದು, ಜೊತೆಗೆ ಸಿಂಗಲ್ ಚಾನಲ್ ಎಬಿಎಸ್ ಅನ್ನು ಸಹ ನೀಡಲಾಗಿದೆ.

ಜಾವಾ 42 ಬೈಕಿನ ಮೈಲೇಜ್ ಮತ್ತು ಟಾಪ್ ಸ್ಪೀಡ್ ಬಗ್ಗೆ ವಿವರ ಇಲ್ಲಿದೆ ನೋಡಿ..

ಲಭ್ಯವಿರುವ ಬಣ್ಣಗಳು

ಜಾವಾ 42 ಬೈಕ್ ಹಾಲಿಸ್ ಟೀಲ್, ಗ್ಲಾಕ್ಟಿಕ್ ಗ್ರೀನ್, ಸ್ಟಾರ್‍‍ಲೈಟ್ ಬ್ಲೂ, ಲುಮೊಸ್ ಲೈಮ್, ನೆಬ್ಯುಲಾ ಬ್ಲೂ ಮತ್ತು ಕೊಮೆಟ್ ರೆಡ್ ಎಂಬ ಆರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಜಾವಾ 42 ಬೈಕಿನ ಮೈಲೇಜ್ ಮತ್ತು ಟಾಪ್ ಸ್ಪೀಡ್ ಬಗ್ಗೆ ವಿವರ ಇಲ್ಲಿದೆ ನೋಡಿ..

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಮಾರುಕಟ್ಟೆಯಲ್ಲಿ ಮತ್ತೆ ಸದ್ದು ಮಾಡಲು ಬಂದ ಜಾವಾ ಮೋಟಾರ್‍‍ಸೈಕಲ್‍ಗಳು ಈಗಾಗಲ್ ತನ್ನ ವಿನ್ಯಾಸ ಮತ್ತು ಬೆಲೆಯಿಂದಾಗಿ ಹೆಚ್ಚಿನ ಕುತೂಹಲವನ್ನು ಮೂಡಿಸಿದೆ. ಇದಲ್ಲದೇ ಜಾವಾ ಮೋಟಾರ್‍‍ಸೈಕಲ್ಸ್ ಸಂಸ್ಥೆಯು ತಮ್ಮ ಪೆರಾಕ್ ಬೈಕ್ ಅನ್ನು ಸಹ ಶೀಘ್ರವೇ ಬಿಡುಗಡೆಗೊಳಿಸಲಿದ್ದು, ಮಾರುಕಟ್ಟೆಯಲ್ಲಿ ಜಾವಾ 42 ಬೈಕ್ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಯಾವ ರೀತಿ ಟಕ್ಕರ್ ನೀಡಲಿದೆ ಎನ್ನುವುದು ಮುಂದಿನ ಕೆಲವೇ ದಿನಗಳಲ್ಲಿ ತಿಳಿಯಲಿದೆ.

Most Read Articles

Kannada
English summary
New Jawa 42 Motorcycle: Top Speed, Mileage, Seat Height Plus A Lot Else To Know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X