2019ರ ಕವಾಸಕಿ ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ ಬೈಕ್ ಬಿಡುಗಡೆ

By Praveen Sannamani

ಕವಾಸಕಿ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಸೂಪರ್ ಬೈಕ್ ಮಾದರಿಗಳಾದ ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ 2019ರ ಆವೃತ್ತಿಗಳನ್ನ ಬಿಡುಗಡೆ ಮಾಡಿದ್ದು, ಹತ್ತು ಹಲವು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಬೈಕ್‌ಗಳ ಮಾಹಿತಿ ಇಲ್ಲಿದೆ ನೋಡಿ.

2019ರ ಕವಾಸಕಿ ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ ಬೈಕ್ ಬಿಡುಗಡೆ

ಕಳೆದ 2 ವರ್ಷಗಳ ಹಿಂದೆಯೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಹೊಸ ಆವೃತ್ತಿಗಳನ್ನು ಕಾಣುತ್ತಿರುವ ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ ಬೈಕ್‌ಗಳು ಇದೀಗ ವಿಶ್ವದರ್ಜೆ ಸೌಲಭ್ಯಗಳೊಂದಿಗೆ ಮರು ಬಿಡುಗಡೆಯಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಹೆಚ್2 ಬೈಕಿನ ಬೆಲೆಯನ್ನು ರೂ.34.50 ಲಕ್ಷಕ್ಕೆ, ಹೆಚ್2 ಕಾರ್ಬನ್ ಬೈಕ್ ಬೆಲೆಯನ್ನು ರೂ. 41 ಲಕ್ಷಕ್ಕೆ ಮತ್ತು ಹೆಚ್2ಆರ್ ಬೈಕಿನ ಬೆಲೆಯನ್ನು ರೂ. 72 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ.

2019ರ ಕವಾಸಕಿ ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ ಬೈಕ್ ಬಿಡುಗಡೆ

ಹಳೆಯ ಆವೃತ್ತಿಗಳಿಂತ 2019ರ ಆವೃತ್ತಿಯ ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ ಬೈಕ್‌ಗಳು ತಾಂತ್ರಿಕವಾಗಿ ಯಾವುದೇ ಬದಲಾವಣೆ ಹೊಂದಿಲ್ಲವಾದರೂ, ಸುರಕ್ಷಾ ಸೌಲಭ್ಯ ಮತ್ತು ಬೈಕಿನ ಮುಂಭಾಗದ ವಿನ್ಯಾಸಗಳಲ್ಲಿ ತುಸು ಬದಲಾವಣೆ ಪಡೆದುಕೊಂಡಿವೆ.

2019ರ ಕವಾಸಕಿ ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ ಬೈಕ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ ಬೈಕ್‌ಗಳು 998ಸಿಸಿ ಲಿಕ್ವಿಡ್ ಕೂಲ್ಡ್, ಇನ್‌ಲೈನ್ ಫೌರ್ ಸಿಲಿಂಡರ್, ಸೂಪರ್ ಚಾರ್ಜ್ಡ್ ಎಂಜಿನ್ ಹೊಂದಿದ್ದು, 227-ಬಿಎಚ್‌ಪಿ ಮತ್ತು 141.7 ಟಾರ್ಕ್ ಉತ್ಪಾದನೆ ಮಾಡಬಲ್ಲವು. ಇದು ಈ ಹಿಂದಿಗಿಂತ ಹೊಸ ಬೈಕ್‌ಗಳಲ್ಲಿ 20-ಬಿಎಚ್‌ಪಿ ಹೆಚ್ಚುವರಿ ನೀಡಲಾಗಿದೆ.

2019ರ ಕವಾಸಕಿ ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ ಬೈಕ್ ಬಿಡುಗಡೆ

ಕವಾಸಕಿ ಸಂಸ್ಥೆಯು ನಿಂಜಾ ಹೆಚ್2 ಮತ್ತು ಹೆಚ್2 ಕಾರ್ಬನ್ ಬೈಕ್‌ಗಳಲ್ಲಿ ಹೊಸ ಟಿಪಿಎಫ್ ಕಲರ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೌಲಭ್ಯ ಹೊಂದಿದ್ದು, ‘Rideology The App' ಮುಖಾಂತರ ಬೈಕ್ ಚಾಲನೆಯನ್ನು ಮತ್ತಷ್ಟು ಥ್ರೀಲ್ ಆಗಿರುವಂತೆ ಮಾಡಲಿದೆ.

2019ರ ಕವಾಸಕಿ ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ ಬೈಕ್ ಬಿಡುಗಡೆ

ಕವಾಸಕಿ ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ ಮೂರು ಬೈಕ್‌ಗಳಲ್ಲೂ ಬ್ರಿಂಬೊ ಸ್ಟೈಮಾ ಮೊನೊ ಬ್ಲಾಕ್ ಕ್ಯಾಲಿಪರ್ ಸೌಲಭ್ಯ ಜೋಡಿಸಲಾಗಿದ್ದು, ಪಿಸ್ಟನ್ ಮತ್ತು ಬ್ರೇಕ್ ಪಾಡ್‌ಗಳ ಮಧ್ಯೆ ಇರುವ ಖಾಲಿ ಜಾಗವನ್ನು ತುಂಬವ ಮೂಲಕ ಅತಿ ವೇಗವಾಗಿ ಬ್ರೇಕಿಂಗ್ ಹಿಡಿತಕ್ಕೆ ಸಹಕಾರಿಯಾಗಲಿದೆ.

2019ರ ಕವಾಸಕಿ ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ ಬೈಕ್ ಬಿಡುಗಡೆ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಬೆಲೆಗಳಲ್ಲಿ ದುಬಾರಿ ಎನ್ನಿಸುವ ಕವಾಸಕಿ ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ ಬೈಕ್‌ಗಳಲ್ಲಿ ಹೈ ಡ್ಯುರೆಬಲ್ ಸ್ಪೆಷಲ್ ಪೇಟಿಂಗ್ ಸೌಲಭ್ಯ ಒದಗಿಸಿರುವ ಹಿನ್ನೆಲೆಯಲ್ಲಿ ಬೈಕಿನ ಮೇಲೆ ಆಗುವ ಸಣ್ಣಪುಟ್ಟ ಗೀರುಗಳನ್ನ ತನ್ನಷ್ಟೇ ತಾನೇ ಸರಿಪಡಿಸಿಕೊಳ್ಳಬಹುದಾದ ಗುಣ ವೈಶಿಷ್ಟ್ಯತೆ ಹೊಂದಿದೆ ಅಂದ್ರೆ ನೀವು ನಂಬಲೇಬೇಕು.

2019ರ ಕವಾಸಕಿ ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ ಬೈಕ್ ಬಿಡುಗಡೆ

ಜೊತೆಗೆ ದುಬಾರಿ ಬೆಲೆಯ ಬ್ರಿಡ್ಜ್ ಸ್ಟೋನ್ ಆರ್‌ಎಸ್11 ಟೈರ್ ಪಡೆದುಕೊಂಡಿರುವ ಕವಾಸಕಿ ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ ಬೈಕ್‌ಗಳು, ಸೂಪರ್ ಬೈಕ್ ಎಲ್‌ಇಡಿ ಹೆಡ್‌ಲ್ಯಾಂಪ್, ಟೈಲ್ ಲೈಟ್, ಟರ್ನ್ ಸಿಗ್ನಲ್, ಪೊಷಿಷನ್ ಲ್ಯಾಂಪ್ ಮತ್ತು ಲೈಸೆನ್ಸ್ ಪ್ಲೇಟ್ ಲ್ಯಾಂಪ್‌ನೊಂದಿಗೆ ಐಷಾರಾಮಿ ಗುಣಲಕ್ಷಣ ಹೊಂದಿವೆ.

2019ರ ಕವಾಸಕಿ ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ ಬೈಕ್ ಬಿಡುಗಡೆ

ಇವುಗಳಲ್ಲಿ 72 ಲಕ್ಷ ಮೌಲ್ಯದ ಹೆಚ್2ಆರ್ ಬೈಕ್‌ಗಳು ಜಗತ್ತಿನ ಅತಿ ದುಬಾರಿ ಸೌಲಭ್ಯವಾದ ಅಡ್ವಾನ್ಸ್ ಸೆಲ್ಫ್ ಹಿಲಿಂಗ್ ಪೇಟಿಂಗ್ ಹೊಂದಿದ್ದು, ಮೂರು ಬೈಕ್‌ಗಳು ಸಹ ಸಂಪೂರ್ಣ ವಿದೇಶಿ ಮಾರುಕಟ್ಟೆಗಳಿಂದಲೇ ಆಮದು ಮಾಡಿಕೊಳ್ಳಲಾಗುತ್ತದೆ.

2019ರ ಕವಾಸಕಿ ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ ಬೈಕ್ ಬಿಡುಗಡೆ

ಇದಕ್ಕಾಗಿಯೇ ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ ಹೊಸ ಬೈಕ್‌ಗಳ ಖರೀದಿಗಾಗಿ ಸದ್ಯ ಬುಕ್ಕಿಂಗ್ ಪ್ರಕ್ರಿಯೆಯನ್ನ ಆರಂಭಿಸಲಿರುವ ಕವಾಸಕಿ ಸಂಸ್ಥೆಯು ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 31ರ ತನಕ ಹೊಸ ಬೈಕ್‌ಗಳ ಉತ್ಪಾದನೆಗಾಗಿ ಬುಕ್ಕಿಂಗ್ ಪಡೆಯಲಿದ್ದು, ತದನಂತರವಷ್ಟೇ ಬೈಕಿನ ಉತ್ಪಾದನೆ ಆರಂಭ ಮಾಡುವ ಮೂಲಕ 2019ರ ಆರಂಭದಲ್ಲಿ ಹೊಸ ವಿತರಣೆ ಕೈಗೊಳ್ಳಲಿದೆ.

2019ರ ಕವಾಸಕಿ ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ ಬೈಕ್ ಬಿಡುಗಡೆ

ಸೂಪರ್ ಬೈಕ್‌ಗಳ ಮಾರಾಟದಲ್ಲಿ ಸಾಮಾನ್ಯವಾಗಿ ಇದೇ ಕ್ರಮ ಅನುಸರಿಸಲಿದ್ದು, ಬೈಕಿಗೆ ಸಲ್ಲಿಕೆಯಾಗುವ ಬೇಡಿಕೆ ಆಧಾರ ಮೇಲೆಯೇ ಉತ್ಪಾದನೆ ಆರಂಭಿಸಲಾಗುತ್ತದೆ. ಬುಕ್ಕಿಂಗ್ ಅವಧಿ ಮುಗಿದ ನಂತರ ಸಲ್ಲಿಕೆಯಾಗುವ ಬುಕ್ಕಿಂಗ್‌ಗಳನ್ನು ಪರೀಶಿಲನೆ ಮಾಡಿದ ನಂತರವೇ ಬೈಕ್ ಉತ್ಪಾದನೆ ಮಾಡುವ ಬಗ್ಗೆ ನಿರ್ಧಾರ ಮಾಡಲಾಗುತ್ತೆ. ಇಲ್ಲವಾದ್ರೆ ಸೀಮಿತ ಅವಧಿಯಲ್ಲಿ ಮಾರಾಟಕ್ಕಿರುವ ಬೈಕ್‌ಗಳನ್ನ ಮಾತ್ರವೇ ಖರೀದಿಸಬೇಕಾಗುತ್ತೆ.

Most Read Articles

Kannada
Read more on kawasaki super bike
English summary
2019 Kawasaki Ninja H2, H2 Carbon And H2R Launched In India; Prices Start At 34.50 Lakh.
Story first published: Thursday, August 23, 2018, 19:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X