ಬಿಡುಗಡೆಗೊಂಡ 2018 ಎಡಿಷನ್ ಸುಜುಕಿ ಜಿಕ್ಸರ್ ಎಸ್‍ಪಿ ಮತ್ತು ಎಸ್ಎಫ್ ಎಸ್‍‍ಪಿ ಬೈಕ್‍ಗಳು..

ಸುಜುಕಿ ಮೋಟಾರ್‍‍ಸೈಕಲ್ ಇಂಡಿಯಾ ತಮ್ಮ ಜಿಕ್ಸರ್ ಬೈಕಿನ ಎಸ್‍‍ಪಿ ಮತ್ತು ಎಸ್‍ಎಫ್ ಎಸ್‍‍ಪಿ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ.

By Rahul Ts

ಸುಜುಕಿ ಮೋಟಾರ್‍‍ಸೈಕಲ್ ಇಂಡಿಯಾ ತಮ್ಮ ಜಿಕ್ಸರ್ ಬೈಕಿನ ಎಸ್‍‍ಪಿ ಮತ್ತು ಎಸ್‍ಎಫ್ ಎಸ್‍‍ಪಿ ಎಡಿಷನ್ ಅನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ಜಿಕ್ಸರ್ ಎಸ್‍‍ಪಿ ಬೈಕಿನ ಬೆಲೆಯನ್ನು ರೂ. 87,250 ಮತ್ತು ಜಿಕ್ಸರ್ ಎಸ್‍ಎಫ್ ಬೈಕಿನ ಬೆಲೆಯನ್ನು ರೂ. 1 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ಬಿಡುಗಡೆಗೊಂಡ 2018 ಎಡಿಷನ್ ಸುಜುಕಿ ಜಿಕ್ಸರ್ ಎಸ್‍ಪಿ ಮತ್ತು ಎಸ್ಎಫ್ ಎಸ್‍‍ಪಿ ಬೈಕ್‍ಗಳು..

2018ರ ಹೊಸ ಸುಜುಕಿ ಜಿಕ್ಸರ್ ಎಸ್‍‍ಪಿ ಎರಡು ಬಣ್ಣಗಳಲ್ಲಿ ಲಭ್ಯವಿದ್ದು, ಅವು ಡ್ಯುಯಲ್ ಟೋನ್ ಮೆಜೆಸ್ಟಿಕ್ ಗೋಲ್ಡ್/ಗ್ಲಾಸ್ ಸ್ಪಾರ್ಕ್ಲ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ. ಸುಜುಕಿ ಜಿಕ್ಸರ್ ಎಸ್‍ಪಿ ಮತ್ತು ಎಸ್‍ಎಫ್ ಎಸ್‍‍ಪಿ ಎಡಿಷನ್ ಬೈಕಿನ ಫ್ಯುಯಲ್ ಟ್ಯಾಂಕ್‍‍ನ ಮೇಲೆ ಮತ್ತು ಮುಂಭಾಗದ ಕೋಲ್‍‍ನ ಮೇಲೆ ಹೊಸ ಗ್ರಾಫಿಕ್ಸ್ ಅನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ 2018 ಎಡಿಷನ್ ಸುಜುಕಿ ಜಿಕ್ಸರ್ ಎಸ್‍ಪಿ ಮತ್ತು ಎಸ್ಎಫ್ ಎಸ್‍‍ಪಿ ಬೈಕ್‍ಗಳು..

ಜಿಕ್ಸರ್ ಎಸ್‍‍ಪಿ ಮತ್ತು ಎಸ್‍ಎಫ್ ಎಸ್‍‍ಪಿ ಎರಡೂ ಬೈಕ್‍‍ಗಳಲ್ಲಿ ಇದೀಗ ಸ್ಟ್ಯಾಂಡರ್ಡ್ ಎಬಿಎಸ್ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಫೀಚರ್ ಅನ್ನು ಅಳವಡಿಸಲಾಗಿದೆ. ಎಸ್‍ಎಫ್ ಎಸ್‍ಪಿ ಮಾಡಲ್ ಬೈಕಿನಲ್ಲಿ ಫ್ಯುಯಲ್ ಎಂಜೆಕ್ಷನ್ ಸಿಸ್ಟಮ್ ಅನ್ನು ಅಳವಡಿಸಲಾಗಿದ್ದು, ರೆಗ್ಯುಲರ್ ಎಸ್‍‍ಪಿ ಮಾಡಲ್ ಬೈಕಿನಲ್ಲಿ ಸ್ಟ್ಯಾಂಡರ್ಡ್ ಕಾರ್ಬೋರೇಟರ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ 2018 ಎಡಿಷನ್ ಸುಜುಕಿ ಜಿಕ್ಸರ್ ಎಸ್‍ಪಿ ಮತ್ತು ಎಸ್ಎಫ್ ಎಸ್‍‍ಪಿ ಬೈಕ್‍ಗಳು..

ವಿನ್ಯಾಸದಲ್ಲಿ ಮತ್ತು ಬ್ರೇಕಿಂಗ್ ಸಿಸ್ಟಮ್ ಅನ್ನು ಹೊರತು ಪಡಿಸಿ ಎಸ್‍‍ಪಿ ಮತ್ತುಎಸ್‍ಎಫ್ ಎಸ್‍ಪಿ ಬೈಕ್‍‍ಗಳಲ್ಲಿ ಬೇರಾವ ಬದಲಾವಣೆಗಳನ್ನು ಪಡೆದಿರುವುದಿಲ್ಲ. 2018 ರ ಜಿಕ್ಸರ್ ಸಿರೀಸ್ ಬೈಕ್‍‍ಗಳಲ್ಲಿ ಬಳಸಲಾದ ಅದೇ 155ಸಿಸಿ ಸಾಮರ್ಥ್ಯವುಳ್ಳ ಸಿಂಗಲ್ ಸಿಲೆಂಡರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ 2018 ಎಡಿಷನ್ ಸುಜುಕಿ ಜಿಕ್ಸರ್ ಎಸ್‍ಪಿ ಮತ್ತು ಎಸ್ಎಫ್ ಎಸ್‍‍ಪಿ ಬೈಕ್‍ಗಳು..

5 ಸ್ಪೀಡ್ ಗೇರ್‍‍ಬಾಕ್ಸ್ ಸಹಾಯದಿಂದ 14.6 ಬಿಹೆಚ್‍‍ಪಿ ಮತ್ತು 14ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎರಡು ಜಿಕ್ಸರ್ ಬೈಕ್‍‍ಗಳಲ್ಲಿ ಸುಜುಕಿ ಸಂಸ್ಥೆಯ ಇಕೊ ಪರ್ಫಾರ್ಮೆನ್ಸ್ ಟೆಕ್ನಾಲಜಿಯನ್ನು ಬಳಸಲಾಗಿದೆ.

ಬಿಡುಗಡೆಗೊಂಡ 2018 ಎಡಿಷನ್ ಸುಜುಕಿ ಜಿಕ್ಸರ್ ಎಸ್‍ಪಿ ಮತ್ತು ಎಸ್ಎಫ್ ಎಸ್‍‍ಪಿ ಬೈಕ್‍ಗಳು..

ಸುಜುಕಿ ಜಿಕ್ಸರ್ 2014ರಲ್ಲಿ ಮೊದಲ ಬಾರಿಗೆ ಬಿದುಗಡೆಗೊಂಡಿತ್ತು. ಅಂದಿನಿಂದಲೆ ಜಿಕ್ಸರ್ ಬ್ರ್ಯಾಂಡ್ ಹೆಸರು ಯುವ ಪೀಳಿಗೆಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಆಧುನಿಕತೆಯನ್ನು ಬಯಸುವ ಗ್ರಾಹಕ್ರಿಗಾಗಿ ಸಮಯಕ್ಕೆ ತಕ್ಕಂತೆ ನಮ್ಮ ವಾಹನವನ್ನು ತಯಾರು ಮಾಡುತ್ತೇವೆ. ಎಂದು ಸುಜುಕಿ ಮೋಟಾರ್‍‍ಸೈಕಲ್ ಇಂಡಿಯಾ ಫ್ರೈವೇಟ್ ಲಿಮಿಟೆಡ್ ಎಕ್ಸಿಕ್ಯೂತಿವ್ ವೈಸ್ ಪ್ರಿಸಿಡೆಂಟ್ ಸಂಜೀವ್ ರಾಜಶೇಖರನ್ ಹೇಳಿದ್ದಾರೆ.

ಬಿಡುಗಡೆಗೊಂಡ 2018 ಎಡಿಷನ್ ಸುಜುಕಿ ಜಿಕ್ಸರ್ ಎಸ್‍ಪಿ ಮತ್ತು ಎಸ್ಎಫ್ ಎಸ್‍‍ಪಿ ಬೈಕ್‍ಗಳು..

ಸುಜುಕಿ ಜಿಕ್ಸರ್ ಎಸ್‍‍ಪಿ ಮತ್ತು ಜಿಕ್ಸರ್ ಎಸ್ಎಫ್ ಎಸ್‍ಪಿ ಎರಡು ಬೈಕ್‍‍ಗಳಲ್ಲಿ ಮಿಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದ್ದು, ಸಸ್ಪೆಂಷನ್‍‍ಗಾಗಿ ಮುಂದಿನ ಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೋನೊಶಾಕ್ ಅಬ್ಸಾರ್ಬರ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ 2018 ಎಡಿಷನ್ ಸುಜುಕಿ ಜಿಕ್ಸರ್ ಎಸ್‍ಪಿ ಮತ್ತು ಎಸ್ಎಫ್ ಎಸ್‍‍ಪಿ ಬೈಕ್‍ಗಳು..

2018ರ ಜಿಕ್ಸರ್ ಎಸ್‍ಪಿ ಮತ್ತು ಜಿಕ್ಸರ್ ಎಸ್ಎಫ್ ಎಸ್‍ಪಿ ಬೈಕ್‍‍ಗಳಾಲ್ಲಿ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಸ್ಪೋರ್ಟಿವ್ ಟ್ವಿನ್ ಪೋರ್ಟ್ ಎಕ್ಸಾಸ್ಟ್ ಮತ್ತು ಎಲ್‍ಇಡಿ ಟೈಲ್ ಲೈಟ್ ಎಂಬ ಆಧುನಿಕ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

Most Read Articles

Kannada
Read more on suzuki new launches
English summary
2018 Suzuki Gixxer SP And Gixxer SF SP Launched In India.
Story first published: Tuesday, July 10, 2018, 10:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X