ಭಾರತದಲ್ಲಿ ಸುಜುಕಿ ವಿ-ಸ್ಟೋರ್ಮ್ 650 ಬಿಡುಗಡೆಯಾಗುವುದು ಕನ್ಫರ್ಮ್

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಮೋಟರ್‍‍ಸೈಕಲ್ಸ್ ದೇಶಿಯ ಮಾರುಕಟ್ಟೆಗೆ ಮಧ್ಯಮಗಾತ್ರದ ಅಡ್ವೆಂಚರ್ ಬೈಕ್‍‍ಗಳನ್ನು ಪರಿಚಯಿಸುವ ಯೋಜನೆಯಲಿದೆ.

By Praveen Sannamani

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಮೋಟರ್‍‍ಸೈಕಲ್ಸ್ ದೇಶಿಯ ಮಾರುಕಟ್ಟೆಗೆ ಮಧ್ಯಮಗಾತ್ರದ ಅಡ್ವೆಂಚರ್ ಬೈಕ್‍‍ಗಳನ್ನು ಪರಿಚಯಿಸುವ ಯೋಜನೆಯಲಿದ್ದು, ಇದೀಗ ಸಂಸ್ಥೆಯು ತಮ್ಮ ಬಹುನೀರಿಕ್ಷಿತ ವಿ-ಸ್ಟೋರ್ಮ್ 650 ಬೈಕ್ ಮಾದರಿಯನ್ನು ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

ಭಾರತದಲ್ಲಿ ಸುಜುಕಿ ವಿ-ಸ್ಟೋರ್ಮ್ 650 ಬಿಡುಗಡೆಯಾಗುವುದು ಕನ್ಫರ್ಮ್

ಫೆಬ್ರವರಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಮೊದಲ ಬಾರಿಗೆ ವಿ-ಸ್ಟೋರ್ಮ್ 650 ಬೈಕ್ ಮಾದರಿಯನ್ನ ಪ್ರದರ್ಶನ ಮಾಡಿದ್ದ ಸುಜುಕಿ ಸಂಸ್ಥೆಯು, ಮುಂಬರುವ ಆಗಸ್ಟ್ ಇಲ್ಲವೇ ಅಕ್ಟೋಬರ್ ಆರಂಭದಲ್ಲಿ ಹೊಸ ಅಡ್ವೆಂಚರ್ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದೆ.

ಭಾರತದಲ್ಲಿ ಸುಜುಕಿ ವಿ-ಸ್ಟೋರ್ಮ್ 650 ಬಿಡುಗಡೆಯಾಗುವುದು ಕನ್ಫರ್ಮ್

ಇನ್ನೊಂದು ಮುಖ್ಯ ವಿಚಾರ ಅಂದ್ರೆ, ಭಾರತದಲ್ಲಿ ಬಿಡುಗಡೆಯಾಗುವ ವಿ-ಸ್ಟೋರ್ಮ್ 650 ಅಡ್ವೆಂಚರ್ ಬೈಕ್‌ಗಳು ಸಿಕೆಡಿ(ಕಂಪ್ಲಿಟ್ಲಿ ನಾಕ್ಡ್ ಡೌನ್) ಆಧಾರದ ಮೇಲೆ ಭಾರತದಲ್ಲಿ ಮಾರಾಟವಾಗಲಿದ್ದು, ಬಿಡಿಭಾಗಗಳನ್ನು ಜಪಾನ್ ಮಾರುಕಟ್ಟೆಯಿಂದ ಆಮದು ಮಾಡಿಕೊಂಡು ಭಾರತದಲ್ಲಿ ಅಸೆಂಬ್ಲಿ ಮಾಡಿ ಮಾರಾಟ ಮಾಡಲಾಗುತ್ತದೆ.

ಭಾರತದಲ್ಲಿ ಸುಜುಕಿ ವಿ-ಸ್ಟೋರ್ಮ್ 650 ಬಿಡುಗಡೆಯಾಗುವುದು ಕನ್ಫರ್ಮ್

ಸದ್ಯ ವಿದೇಶಿ ಮಾರುಕಟ್ಟೆಗಳಲ್ಲಿ ಸುಜುಕಿ ವಿ-ಸ್ಟೋರ್ಮ್ 650 ಅಡ್ವೆಂಚರ್ ಟೂರರ್ ಬೈಕ್‍‍ಗಳು ಸ್ಟ್ಯಾಂಡರ್ಡ್ ಮತ್ತು ಎಕ್ಸ್‌ಟಿ ಎಂಬ ಎರಡು ಪ್ರಮುಖ ವೆರಿಯೆಂಟ್‍ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಸುಜುಕಿ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ಎಕ್ಸ್‌ಟಿ ವೇರಿಯಂಟ್ ಅನ್ನು ಮಾತ್ರ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಭಾರತದಲ್ಲಿ ಸುಜುಕಿ ವಿ-ಸ್ಟೋರ್ಮ್ 650 ಬಿಡುಗಡೆಯಾಗುವುದು ಕನ್ಫರ್ಮ್

ಹೊಸ ಬೈಕಿನ ವಿನ್ಯಾಸ

ವಿ-ಸ್ಟೋರ್ಮ್ 650 ಎಕ್ಸ್‌ಟಿ ಬೈಕಿನ ವಿನ್ಯಾಸವು ಸಂಸ್ಥೆಯ ಮತ್ತೊಂದು ಬೈಕ್ ಮಾದರಿಯಾದ ವಿ-ಸ್ಟೋರ್ಮ್ 1000 ಎಕ್ಸ್‌ಟಿ ಕೆಲವು ವಿನ್ಯಾಸಗಳನ್ನು ಎರವಲು ಪಡೆದಿದ್ದು, ಪ್ರೀಮಿಯಂ ಅನೊಡೈಸ್ಡ್ ವೈರ್ ಸ್ಪೋಕ್ ರಿಮ್ಸ್ ಮತ್ತು ಬ್ರಿಡ್ಜ್ ಸ್ಟೋನ್ ಬ್ಯಾಟ್ಲಕ್ಸ್ ಎ40 ಅಡ್ವೆಂಚರ್ ಟೈರ್‍‍ಗಳನ್ನು ಪಡೆದುಕೊಂಡಿದೆ.

ಭಾರತದಲ್ಲಿ ಸುಜುಕಿ ವಿ-ಸ್ಟೋರ್ಮ್ 650 ಬಿಡುಗಡೆಯಾಗುವುದು ಕನ್ಫರ್ಮ್

ಇನ್ನು ಬೈಕ್ ಸವಾರರ ಸುರಕ್ಷತೆಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೋನೊಶಾರ್ಕ್ ಸಸ್ಷೆಷನ್ ಅನ್ನು ಅಳವಡಿಸಲಾಗಿದ್ದು, ಮುಂಭಾಗದಲ್ಲಿ 310ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 260ಎಂಎಂ ಸಿಂಗಲ್ ಡಿಸ್ಕ್ ಬ್ರೇಕಿಂಗ್ ಸಿಸ್ಟಂ ಅನ್ನು ಪಡೆದುಕೊಂದಿದೆ. ಇದಲ್ಲದೆ ಈ ಬೈಕಿನಲ್ಲಿ ಎಬಿಎಸ್ ಟೆಕ್ನಾಲಜಿಯನ್ನು ಸಹ ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಭಾರತದಲ್ಲಿ ಸುಜುಕಿ ವಿ-ಸ್ಟೋರ್ಮ್ 650 ಬಿಡುಗಡೆಯಾಗುವುದು ಕನ್ಫರ್ಮ್

ಎಂಜಿನ್ ಸಾಮರ್ಥ್ಯ

ಹೊಸ ಸುಜುಕಿ ವಿ-ಸ್ಟೋರ್ಮ್ 650 ಎಕ್ಸ್‌ಟಿ ಬೈಕ್‌ಗಳು 645-ಸಿಸಿ ವಿ-ಟ್ವಿನ್ ಎಂಜಿನ್ ಸಹಾಯದಿಂದ 70-ಬಿಹೆಚ್‍ಪಿ ಮತ್ತು 62.3-ಎನ್ಎಂ ಟಾರ್ಕ್ ಅನ್ನು ಅಳವಡಿಸಲಾಗಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಸುಜುಕಿ ವಿ-ಸ್ಟೋರ್ಮ್ 650 ಬಿಡುಗಡೆಯಾಗುವುದು ಕನ್ಫರ್ಮ್

ಇದಲ್ಲದೇ ವಿ-ಸ್ಟೋರ್ಮ್ 650 ಎಕ್ಸ್ ಟಿ ಬೈಕ್‍‍ಗಳು ಮೂರು ವಿಧಾನಗಳಲ್ಲಿ ಅಡ್ಜೆಸ್ಟ್ ಮಾಡಬಹುದಾದ ವಿಂಡ್ ಸ್ಕ್ರೀನ್, ಮೂರು ಹಂತದ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಸುಜುಕಿಯ ಈಜಿ ಸ್ಟಾರ್ಟ್ ಸಿಸ್ಟಂ ಮತ್ತು ಡಿಜಿಟಲ್ ಅನಾಲಾಗ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆದುಕೊಂಡಿರಲಿದೆ.

ಭಾರತದಲ್ಲಿ ಸುಜುಕಿ ವಿ-ಸ್ಟೋರ್ಮ್ 650 ಬಿಡುಗಡೆಯಾಗುವುದು ಕನ್ಫರ್ಮ್

ಹೊಸ ಸುಜುಕಿ ವಿ-ಸ್ಟೋರ್ಮ್ 650 ಎಕ್ಸ್‌ಟಿ ಬೈಕ್‍‍‍ನ ಬೆಲೆಯ ಬಗೆಗೆ ಯಾವುದೇ ಮಾಹಿತಿ ಇಲ್ಲವಾದರೂ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 6.50 ಲಕ್ಷದಿಂದ ರೂ. 7 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಕವಾಸಕಿ ವರ್ಸಿಸ್ 650 ಬೈಕ್‍‍ಗಳಿಗೆ ಇದು ತೀವ್ರ ಪೈಪೋಟಿಯನ್ನು ನೀಡಲಿದೆ ಎನ್ನಬಹುದು.

Most Read Articles

Kannada
English summary
New 2018 Suzuki V-Strom 650 India Launch Confirmed — Details Revealed.
Story first published: Friday, July 20, 2018, 13:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X