ಜ.15ರಿಂದ ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳ ಉತ್ಪಾದನೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ತಡೆಯಲು ತಳಮಟ್ಟದಿಂದಲೇ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರವು ಮೊದಲು ನಕಲಿ ಐಎಸ್ಐ ಹೆಲ್ಮೆಟ್‌ಗಳನ್ನು ಉತ್ಪಾದನೆ ಮಾಡುವವರ ವಿರುದ್ಧ ಕಠಿಣ ಕ್ರಮ ಜಾರಿಗೆ ತರುತ್ತಿದೆ.

ಜ.15ರಿಂದ ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಸದ್ಯ ದೇಶಾದ್ಯಂತ ನಕಲಿ ಐಎಸ್ಐ ಹೆಲ್ಮೆಟ್ ಹಾವಳಿ ಹೆಚ್ಚಿದ್ದು, ರಸ್ತೆ ಬದಿಯಲ್ಲಿ ಅಗ್ಗದ ಬೆಲೆಗೆ ಲಭ್ಯವಿರುವ ಹೆಲ್ಮೆಟ್‌ಗಳು ಬೈಕ್ ಸವಾರರನ್ನು ರಕ್ಷಣೆ ಮಾಡವುದಕ್ಕಿಂತ ಅವುಗಳ ಬಳಕೆಯಿಂದ ಅಪಾಯವೇ ಹೆಚ್ಚಾಗುತ್ತಿದೆ. ಹೀಗಾಗಿಯೇ ನಕಲಿ ಹೆಲ್ಮೆಟ್ ಬಳಸಬೇಡಿ ಎಂದು ಎಷ್ಟೇ ಮನವಿ ಮಾಡಿದ್ರು ಬಹುತೇಕ ಬೈಕ್ ಸವಾರರು ಮಾತ್ರ ಟ್ರಾಫಿಕ್ ಪೊಲೀಸರಿಂದ ದಂಡ ತಪ್ಪಿಸಿಕೊಳ್ಳಲು ಅಗ್ಗದ ಬೆಲೆಗೆ ಲಭ್ಯವಿರುವ ಹೆಲ್ಮೆಟ್‌ಗಳನ್ನೇ ಬಳಕೆ ಮಾಡುತ್ತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ.

ಜ.15ರಿಂದ ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಇದರಿಂದ ಮಹತ್ವದ ನಿರ್ಧಾರಕ್ಕೆ ಬಂದಿರುವ ಕೇಂದ್ರ ಸಾರಿಗೆ ಇಲಾಖೆಯು ನಕಲಿ ಹೆಲ್ಮೆಟ್‌ಗಳನ್ನು ಉತ್ಪಾದನೆ ಮತ್ತು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ನಕಲಿ ಹೆಲ್ಮೆಟ್ ಹಾವಳಿಗೆ ಬ್ರೇಕ್ ಹಾಕಲಿದ್ದು, ತದನಂತರವಷ್ಟೇ ನಕಲಿ ಹೆಲ್ಮೆಟ್ ಬಳಕೆ ಮಾಡುವ ವಾಹನ ಸವಾರರಿಗೆ ಭಾರೀ ದಂಡ ಬೀಳಲಿದೆ.

ಜ.15ರಿಂದ ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಕೇಂದ್ರ ಸಾರಿಗೆ ಇಲಾಖೆಯು ನಕಲಿ ಐಎಸ್ಐ ಹೆಲ್ಮೆಟ್‌ಗಳನ್ನ ಉತ್ಪಾದನೆ ಮತ್ತು ಮಾರಾಟವನ್ನು ಸಂಪೂರ್ಣ ನಿಷೇಧಿಸುವಂತೆ ಈಗಾಗಲೇ ಆದೇಶ ನೀಡಿದ್ದು, ಡೆಡ್‌ಲೈನ್ ನಂತರ ನಕಲಿ ಹೆಲ್ಮೆಟ್ ತಯಾರಿಸುವವರಿಗೆ ಮತ್ತು ಮಾರಾಟ ಮಾಡುವವರಿಗೆ ಭಾರೀ ಪ್ರಮಾಣದ ಶಿಕ್ಷೆ ತಪ್ಪಿದಲ್ಲ.

ಜ.15ರಿಂದ ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

2 ವರ್ಷ ಜೈಲು ಗ್ಯಾರಂಟಿ

ಮುಂದಿನ ವರ್ಷದ ಆರಂಭದಿಂದ ಐಎಸ್ಐ ಮಾನ್ಯತೆ ಇಲ್ಲದೆ ಹೆಲ್ಮೆಟ್ ಮಾರಾಟ ಮಾಡಿದಲ್ಲಿ 2 ವರ್ಷ ಜೈಲು ಅಥವಾ 2 ಲಕ್ಷ ರೂಪಾಯಿ ದಂಡಕ್ಕೆ ಗುರಿಯಾಗಬೇಕಾಗುತ್ತೆ. ಅಲ್ಲದೇ ಅಕ್ರಮ ಹೆಲ್ಮೆಟ್ ತಯಾರಿಕೆ ಮತ್ತು ಮಾರಾಟ ನಡೆಸುತ್ತಿರುವ ಬಗ್ಗೆ ಅನುಮಾನ ಬಂದಲ್ಲಿ ವಾರಂಟ್ ರಹಿತವಾಗಿ ಬಂಧನ ಮಾಡಬಹುದಾಗಿದೆ.

ಜ.15ರಿಂದ ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಇದರೊಂದಿಗೆ ವಾಹನ ಸವಾರರು ಕೂಡಾ ಕಡ್ಡಾಯವಾಗಿ ಐಎಸ್ಐ ಹೆಲ್ಮೆಟ್‌ಗಳನ್ನೇ ಬಳಕೆ ಮಾಡಬೇಕಿದ್ದು, ಕಾಟಾಚಾರಕ್ಕೆ ಕಳಪೆ ಗುಣಮಟ್ಟದ ಹೆಲ್ಮೆಟ್ ಹಾಕಿಕೊಂಡು ದಂಡದಿಂದ ತಪ್ಪಿಸಿಕೊಳ್ಳುತ್ತಿದ್ದ ವಾಹನ ಸವಾರರ ಆಟವು ಇನ್ನು ನಡೆಯುವುದಿಲ್ಲ.

ಜ.15ರಿಂದ ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಬದಲಾಗಲಿದೆ ಐಎಸ್ಐ ಹೆಲ್ಮೆಟ್ ವಿನ್ಯಾಸ.!

ಕೆಲವರಿಗೆ ಹೆಲ್ಮೆಟ್ ಹಾಕಿ ಬೈಕ್ ಓಡಿಸುವುದು ಅಂದ್ರೆ ತುಂಬಾನೇ ಅಲರ್ಜಿ ಅಂತಾ ಕಾಣುತ್ತೆ. ಇದಕ್ಕೆ ಹಲವಾರು ಕಾರಣಗಳನ್ನು ಕೊಡುವ ಕೆಲವು ಬೈಕ್ ಸವಾರರು ಕೆಜಿಗಟ್ಟಲೇ ತೂಕವಿರುವ ಹೆಲ್ಮೆಟ್‌ಗಳಿಂದ ಕೂದಲು ಉದುರುವಿಕೆ ಸೇರಿದಂತೆ ಹಲವು ಕಾರಣಗಳನ್ನು ನೀಡ್ತಾರೆ. ಆದ್ರೆ ಇದಕ್ಕೆಲ್ಲಾ ಇನ್ಮುಂದೆ ಚಿಂತಿಸಬೇಕಿಲ್ಲಾ.

ಜ.15ರಿಂದ ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಹೌದು, ಕಳೆದ ಕೆಲ ತಿಂಗಳಿನಿಂದ ಐಎಸ್ಐ ಮಾನ್ಯತೆಯಿಲ್ಲದ ಹೆಲ್ಮೆಟ್ ಮಾರಾಟಕ್ಕೆ ಸಾಕಷ್ಟು ನಿರ್ಬಂಧಗಳನ್ನು ಹೇರುತ್ತಿದ್ದು, ಇದರ ಬೆನ್ನಲ್ಲೇ ಬೈಕ್ ಸವಾರರಿಗೆ ಅನೂಕಲಕರವಾಗುವ ಹೊಸ ನಮೂನೆಯ ಫುಲ್ ಫೇಸ್ ಹೆಲ್ಮೆಟ್‌ಗಳನ್ನು ಪರಿಚಯಿಸಲು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್(ಬಿಎಸ್ಐ) ಸಂಸ್ಥೆಯು ಒಪ್ಪಿಗೆ ಸೂಚಿಸಿದೆ.

ಜ.15ರಿಂದ ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಸದ್ಯ ಮೋಟಾರ್ ಕಾಯ್ದೆ ಸುರಕ್ಷಾ ನೀತಿ ಅನ್ವಯ ಐಎಸ್ಐ ಮುದ್ರಿತ ಹೆಲ್ಮೆಟ್‌ಗಳು 1.5 ಕೆ.ಜಿ ಸ್ಟ್ಯಾಂಡರ್ಡ್ ತೂಕವನ್ನು ಪಡೆದುಕೊಂಡಿದ್ದು, ಇದರಿಂದ ಕೆಲವು ಬೈಕ್ ಸವಾರರು ನಿಗದಿತ ಮಟ್ಟದಲ್ಲಿ ಹೆಲ್ಮೆಟ್ ಬಳಕೆ ಮಾಡುತ್ತಿಲ್ಲ ಎನ್ನುವ ಆರೋಪಗಳಿವೆ.

MOST READ: ಖರೀದಿಗೆ ಲಭ್ಯವಾದ ವಿಶ್ವದ ಮೊದಲ ಎಸಿ ಹೆಲ್ಮೆಟ್ ವಿಶೇಷತೆಗಳು ಏನು ಗೊತ್ತಾ?

ಜ.15ರಿಂದ ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಇದರಿಂದ ಬೈಕ್ ಸವಾರರು ಹೆಲ್ಮೆಟ್ ಧರಿಸಲು ಅನುಕೂಲಕರವಾಗುವಂತೆ ಹೆಲ್ಮೆಟ್ ತೂಕವನ್ನು 1.2 ಕೆ.ಜಿಗೆ ಇಳಿಕೆ ಮಾಡಿದ್ದು, ಇದರಿಂದ ಬೈಕ್ ಸವಾರರು ಹೆಲ್ಮೆಟ್ ಧರಿಸಲು ಅನುಕೂಲಕರವಾಗುವುದಲ್ಲದೇ ಹೆಲ್ಮೆಟ್ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ ಎನ್ನಲಾಗಿದೆ.

ಜ.15ರಿಂದ ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಈ ಬಗ್ಗೆ ಮಾತನಾಡಿರುವ ಐಎಸ್ಐ ಹೆಲ್ಮೆಟ್ ಮ್ಯಾನುಫ್ಯಾಚ್ಚರ್ ಅಸೋಸಿಯೇಷನ್ ಅಧ್ಯಕ್ಷ ರಾಜೀವ್ ಕಪೂರ್ ಅವರು, ಹೆಲ್ಮೆಟ್ ಇಲ್ಲದೆಯೇ ಬೈಕ್ ಸವಾರಿಯಿಂದ ದೇಶದಲ್ಲಿ ಪ್ರತಿ ವರ್ಷ ಸಾವಿರರು ಜನ ಸಾವನ್ನಪ್ಪುತ್ತಿದ್ದು, ಈ ಹಿನ್ನೆಲೆಯಲ್ಲಿ ಹೆಲ್ಮೆಟ್ ಖರೀದಿಗೆ ಪ್ರೋತ್ಸಾಹಿಸುವ ಸಲುವಾಗಿ ಗ್ರಾಹಕರ ಆಕರ್ಷಣೆ ಮಾಡುವಂತಹ ಗುಣಮಟ್ಟದ ಲೈಟ್ ವೇಟ್ ಹೆಲ್ಮೆಟ್‌ಗಳನ್ನ ವಿನ್ಯಾಸ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ.

MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ಜ.15ರಿಂದ ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಹೊಸ ಯೋಜನೆಯು ಮುಂದಿನ ವರ್ಷ 2019ರ ಜನವರಿ 15ರಿಂದ ಕಡ್ಡಾಯವಾಗಿ ಜಾರಿ ಬರಲಿದ್ದು, ಪ್ರತಿಯೊಬ್ಬರು ಐಎಸ್ಐ ಮುದ್ರಿತ ಅಥವಾ ಅದಕ್ಕೂ ಹೆಚ್ಚಿನ ಗುಣಮಟ್ಟದ ವಿದೇಶಿ ಸಂಸ್ಥೆಗಳಿಂದ ಮಾನ್ಯತೆ ಹೊಂದಿರುವ ಡಾಟ್, ಇಸಿಇ ಮತ್ತು ಎಸ್ಎನ್ಇಎಲ್ಎಲ್ ಹೆಲ್ಮೆಟ್‌ಗಳನ್ನು ಸಹ ಬಳಕೆ ಮಾಡಬಹುದಾಗಿದೆ.

ಜ.15ರಿಂದ ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಇದರಿಂದ ಕಳಪೆ ಗುಣಮಟ್ಟದ ಹೆಲ್ಮೆಟ್ ಮತ್ತು ನಕಲಿ ಐಎಸ್ಐ ಹೆಲ್ಮೆಟ್ ಉತ್ಪಾದನೆ ಮತ್ತು ಮಾರಾಟದ ಮೇಲೆ ಮತ್ತಷ್ಟು ಕಠಿಣ ಕ್ರಮಗಳನ್ನ ಜಾರಿಗೊಳಿಸಲಿದ್ದು, ಬೈಕ್ ಸವಾರರ ಸುರಕ್ಷತೆಗಾಗಿ ಇಂತದೊಂದು ಮಹತ್ವದ ನಿರ್ಧಾರ ಪ್ರಕಟಿಸುತ್ತಿರುವುದು ಸ್ವಾಗತಾರ್ಹ ನಿರ್ಧಾರ ಅಂದ್ರೆ ತಪ್ಪಾಗುದಿಲ್ಲ.

Most Read Articles

Kannada
English summary
Non-ISI Helmet Sale To Be Banned Soon. Read in Kannada.
Story first published: Saturday, December 29, 2018, 16:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X