ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

By Praveen Sannamani

ಕಳಪೆ ಗುುಣಮಟ್ಟದ ಹೆಲ್ಮೆಟ್‌ಗಳ ಉತ್ಪಾದನೆ ಮತ್ತು ಮಾರಾಟವನ್ನು ತಳಮಟ್ಟದಿಂದ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರವು ಮೊದಲು ನಕಲಿ ಐಎಸ್ಐ ಹೆಲ್ಮೆಟ್‌ಗಳನ್ನು ಉತ್ಪಾದನೆ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಹೊಸ ಕಾನೂನು ಜಾರಿಗೆ ತರುತ್ತಿದೆ.

ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಸದ್ಯ ದೇಶಾದ್ಯಂತ ನಕಲಿ ಐಎಸ್ಐ ಹೆಲ್ಮೆಟ್ ಹಾವಳಿ ಹೆಚ್ಚಿದ್ದು, ರಸ್ತೆ ಬದಿಯಲ್ಲಿ ಅಗ್ಗದ ಬೆಲೆಗೆ ಲಭ್ಯವಿರುವ ಹೆಲ್ಮೆಟ್‌ಗಳು ಬೈಕ್ ಸವಾರರನ್ನು ರಕ್ಷಣೆ ಮಾಡವುದಕ್ಕಿಂತ ಅವುಗಳ ಬಳಕೆಯಿಂದ ಅಪಾಯವೇ ಹೆಚ್ಚಾಗುತ್ತಿದೆ. ಹೀಗಾಗಿಯೇ ನಕಲಿ ಹೆಲ್ಮೆಟ್ ಬಳಸಬೇಡಿ ಎಂದು ಎಷ್ಟೇ ಮನವಿ ಮಾಡಿದ್ರು ಬಹುತೇಕ ಬೈಕ್ ಸವಾರರು ಟ್ರಾಫಿಕ್ ಪೊಲೀಸರಿಂದ ದಂಡ ತಪ್ಪಿಸಿಕೊಳ್ಳಲು ಅಗ್ಗದ ಬೆಲೆಗೆ ಲಭ್ಯವಿರುವ ಹೆಲ್ಮೆಟ್‌ಗಳನ್ನೇ ಬಳೆಕೆ ಮಾಡುತ್ತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ.

ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಇದರಿಂದ ಮಹತ್ವದ ನಿರ್ಧಾರಕ್ಕೆ ಬಂದಿರುವ ಕೇಂದ್ರ ಸಾರಿಗೆ ಇಲಾಖೆಯು ನಕಲಿ ಹೆಲ್ಮೆಟ್‌ಗಳನ್ನು ಉತ್ಪಾದನೆ ಮತ್ತು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ನಕಲಿ ಹೆಲ್ಮೆಟ್ ಹಾವಳಿಗೆ ಬ್ರೇಕ್ ಹಾಕಲಿದ್ದು, ತದನಂತರವಷ್ಟೇ ನಕಲಿ ಹೆಲ್ಮೆಟ್ ಬಳಕೆ ಮಾಡುವ ವಾಹನ ಸವಾರರಿಗೆ ಭಾರೀ ದಂಡ ಬೀಳಲಿದೆ.

ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಜೈಲು ಇಲ್ಲವೇ ಭಾರೀ ದಂಡ

ಮುಂದಿನ ಎರಡು ತಿಂಗಳು ಕಾಲ ಡೆಡ್‌ಲೈನ್ ನೀಡಿರುವ ಕೇಂದ್ರ ಸಾರಿಗೆ ಇಲಾಖೆಯು ನಕಲಿ ಐಎಸ್ಐ ಹೆಲ್ಮೆಟ್‌ಗಳನ್ನ ಉತ್ಪಾದನೆ ಮತ್ತು ಮಾರಾಟವನ್ನು ಸಂಪೂರ್ಣ ನಿಷೇಧಿಸುವಂತೆ ಆದೇಶ ನೀಡಿದ್ದು, ಡೆಡ್‌ಲೈನ್ ನಂತರ ನಕಲಿ ಹೆಲ್ಮೆಟ್ ತಯಾರಿಸುವವರಿಗೆ ಮತ್ತು ಮಾರಾಟ ಮಾಡುವವರಿಗೆ ಭಾರೀ ಪ್ರಮಾಣದ ಶಿಕ್ಷೆ ತಪ್ಪಿದಲ್ಲ.

ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ನಕಲಿ ಹೆಲ್ಮೆಟ್ ಉತ್ಪಾದನೆ ಮತ್ತು ಮಾರಾಟ ಮಾಡುವವರಿಗೆ ಬರೋಬ್ಬರಿ 2 ಲಕ್ಷ ರೂಪಾಯಿ ದಂಡ ಇಲ್ಲವೇ 6 ತಿಂಗಳು ಕಾಲ ಕಾರಾಗೃಹ ಶಿಕ್ಷೆ ಖಾಯಂ ಆಗಲಿದ್ದು, ಅಕ್ರಮ ನಡೆಯುತ್ತಿರುವ ಬಗ್ಗೆ ಅನುಮಾನ ಬಂದಲ್ಲಿ ವಾರಂಟ್ ರಹಿತವಾಗಿ ಬಂಧನ ಮಾಡಬಹುದಾಗಿದೆ.

ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಬದಲಾಗಲಿದೆ ಐಎಸ್ಐ ಹೆಲ್ಮೆಟ್ ವಿನ್ಯಾಸ.!

ಕೆಲವರಿಗೆ ಹೆಲ್ಮೆಟ್ ಹಾಕಿ ಬೈಕ್ ಓಡಿಸುವುದು ಅಂದ್ರೆ ತುಂಬಾನೇ ಅಲರ್ಜಿ ಅಂತಾ ಕಾಣುತ್ತೆ. ಇದಕ್ಕೆ ಹಲವಾರು ಕಾರಣಗಳನ್ನು ಕೊಡುವ ಕೆಲವು ಬೈಕ್ ಸವಾರರು ಕೆಜಿಗಷ್ಟಲೇ ತೂಕವಿರುವ ಹೆಲ್ಮೆಟ್‌ಗಳಿಂದ ಕೂದಲು ಉದುರುವಿಕೆ ಸೇರಿದಂತೆ ಹಲವು ಕಾರಣಗಳನ್ನು ನೀಡ್ತಾರೆ. ಆದ್ರೆ ಇದಕ್ಕೆಲ್ಲಾ ಇನ್ಮುಂದೆ ಚಿಂತಿಸಬೇಕಿಲ್ಲಾ.

ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಹೌದು, ಕಳೆದ ಕೆಲ ತಿಂಗಳಿನಿಂದ ಐಎಸ್ಐ ಮಾನ್ಯತೆಯಿಲ್ಲದ ಹೆಲ್ಮೆಟ್ ಮಾರಾಟಕ್ಕೆ ಸಾಕಷ್ಟು ನಿರ್ಬಂಧಗಳನ್ನು ಹೇರುತ್ತಿದ್ದು, ಇದರ ಬೆನ್ನಲ್ಲೇ ಬೈಕ್ ಸವಾರರಿಗೆ ಅನೂಕಲಕರವಾಗುವ ಹೊಸ ನಮೂನೆಯ ಫುಲ್ ಫೇಸ್ ಹೆಲ್ಮೆಟ್‌ಗಳನ್ನು ಪರಿಚಯಿಸಲು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್(ಬಿಎಸ್ಐ) ಸಂಸ್ಥೆಯು ಒಪ್ಪಿಗೆ ಸೂಚಿಸಿದೆ.

ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಸದ್ಯ ಮೋಟಾರ್ ಕಾಯ್ದೆ ಸುರಕ್ಷಾ ನೀತಿ ಅನ್ವಯ ಐಎಸ್ಐ ಮುದ್ರಿತ ಹೆಲ್ಮೆಟ್‌ಗಳು 1.5 ಕೆ.ಜಿ ಸ್ಟ್ಯಾಂಡರ್ಡ್ ತೂಕವನ್ನು ಪಡೆದುಕೊಂಡಿದ್ದು, ಇದರಿಂದ ಕೆಲವು ಬೈಕ್ ಸವಾರರು ನಿಗದಿತ ಮಟ್ಟದಲ್ಲಿ ಹೆಲ್ಮೆಟ್ ಬಳಕೆ ಮಾಡುತ್ತಿಲ್ಲ ಎನ್ನುವ ಆರೋಪಗಳಿವೆ.

ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಇದರಿಂದ ಬೈಕ್ ಸವಾರರು ಹೆಲ್ಮೆಟ್ ಧರಿಸಲು ಅನುಕೂಲಕರವಾಗುವಂತೆ ಹೆಲ್ಮೆಟ್ ತೂಕವನ್ನು 1.2 ಕೆ.ಜಿಗೆ ಇಳಿಕೆ ಮಾಡಿದ್ದು, ಇದರಿಂದ ಬೈಕ್ ಸವಾರರು ಹೆಲ್ಮೆಟ್ ಧರಿಸಲು ಅನುಕೂಲಕರವಾಗುವುದಲ್ಲದೇ ಹೆಲ್ಮೆಟ್ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ ಎನ್ನಲಾಗಿದೆ.

ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಈ ಬಗ್ಗೆ ಮಾತನಾಡಿರುವ ಐಎಸ್ಐ ಹೆಲ್ಮೆಟ್ ಮ್ಯಾನುಫ್ಯಾಚ್ಚರ್ ಅಸೋಸಿಯೇಷನ್ ಅಧ್ಯಕ್ಷ ರಾಜೀವ್ ಕಪೂರ್ ಅವರು, ಹೆಲ್ಮೆಟ್ ಇಲ್ಲದೆಯೇ ಬೈಕ್ ಸವಾರಿಯಿಂದ ದೇಶದಲ್ಲಿ ಪ್ರತಿ ವರ್ಷ ಸಾವಿರರು ಜನ ಸಾವನ್ನಪ್ಪುತ್ತಿದ್ದು, ಈ ಹಿನ್ನೆಲೆಯಲ್ಲಿ ಹೆಲ್ಮೆಟ್ ಖರೀದಿಗೆ ಪ್ರೋತ್ಸಾಹಿಸುವ ಸಲುವಾಗಿ ಗ್ರಾಹಕರ ಆಕರ್ಷಣೆ ಮಾಡುವಂತಹ ಗುಣಮಟ್ಟದ ಲೈಟ್ ವೇಟ್ ಹೆಲ್ಮೆಟ್‌ಗಳನ್ನ ವಿನ್ಯಾಸ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ.

ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಹೊಸ ಯೋಜನೆಯು ಮುಂದಿನ ವರ್ಷ 2019ರ ಜನವರಿ 15ರಿಂದ ಕಡ್ಡಾಯವಾಗಿ ಜಾರಿ ಬರಲಿದ್ದು, ಪ್ರತಿಯೊಬ್ಬರು ಐಎಸ್ಐ ಮುದ್ರಿತ ಅಥವಾ ಅದಕ್ಕೂ ಹೆಚ್ಚಿನ ಗುಣಮಟ್ಟದ ವಿದೇಶಿ ಸಂಸ್ಥೆಗಳಿಂದ ಮಾನ್ಯತೆ ಹೊಂದಿರುವ ಡಾಟ್, ಇಸಿಇ ಮತ್ತು ಎಸ್ಎನ್ಇಎಲ್ಎಲ್ ಹೆಲ್ಮೆಟ್‌ಗಳನ್ನು ಸಹ ಬಳಕೆ ಮಾಡಬಹುದಾಗಿದೆ.

ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಇದರಿಂದ ಕಳಪೆ ಗುಣಮಟ್ಟದ ಹೆಲ್ಮೆಟ್ ಮತ್ತು ನಕಲಿ ಐಎಸ್ಐ ಹೆಲ್ಮೆಟ್ ಉತ್ಪಾದನೆ ಮತ್ತು ಮಾರಾಟದ ಮೇಲೆ ಮತ್ತಷ್ಟು ಕಠಿಣ ಕ್ರಮಗಳನ್ನ ಜಾರಿಗೊಳಿಸಲಿದ್ದು, ಬೈಕ್ ಸವಾರರ ಸುರಕ್ಷತೆಗಾಗಿ ಇಂತದೊಂದು ಮಹತ್ವದ ನಿರ್ಧಾರ ಪ್ರಕಟಿಸುತ್ತಿರುವುದು ಸ್ವಾಗತಾರ್ಹ ನಿರ್ಧಾರ ಅಂದ್ರೆ ತಪ್ಪಾಗುದಿಲ್ಲ.

ನಕಲಿ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ..!

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

'ಒಬ್ಬ ವ್ಯಕ್ತಿಗೆ ಒಂದೇ ವಾಹನ' - ಟ್ರಾಫಿಕ್ ನಿರ್ವಹಣೆಗಾಗಿ ಹೊಸ ರೂಲ್ಸ್

30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

ಏರ್‌ಬ್ಯಾಗ್ ಇದ್ರು ಕೆಲಸ ಮಾಡ್ಲಿಲ್ಲಾ- ಮಹೀಂದ್ರಾ ವಿರುದ್ಧ ಕಾರು ಮಾಲೀಕನ ಆಕ್ರೋಶ

ಮನೆಯಲ್ಲಿ ಸ್ಪೋಟಗೊಂಡ ಎಲೆಕ್ಟ್ರಿಕ್ ಸ್ಕೂಟರ್ : ವೀಡಿಯೊ

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

Most Read Articles

Kannada
English summary
Non-ISI Helmet Sale To Be Banned Soon — Affects Foreign Helmet Brands Too
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X