ಓಕಿನವಾ ಸಂಸ್ಥೆಯಿಂದ ಮತ್ತೊಂದು ಅತಿ ಹೆಚ್ಚು ಮೈಲೇಜ್ ಪ್ರೇರಿತ ಇವಿ ಸ್ಕೂಟರ್ ಬಿಡುಗಡೆ

ದೇಶದ ಅತ್ಯಂತ ವೇಗದ ಎಲೆಕ್ಟ್ರಿಕ್‌ ಸ್ಕೂಟರ್‌ ನಿರ್ಮಾಣದಲ್ಲಿ ಜನಪ್ರಿಯತೆ ಸಾಧಿಸುತ್ತಿರುವ ಓಕಿನವಾ ಸಂಸ್ಥೆಯು ಪ್ರೈಸ್ ಸ್ಕೂಟರ್ ನಂತರ ಇದೀಗ ಮತ್ತೊಂದು ವಿನೂತನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ್ದು, ಉತ್ತಮ ಮೈಲೇಜ್ ರೇಂಜ್ ಪಡೆದುಕೊಂಡಿದೆ.

ಓಕಿನವಾ ಸಂಸ್ಥೆಯಿಂದ ಮತ್ತೊಂದು ಅತಿ ಹೆಚ್ಚು ಮೈಲೇಜ್ ಪ್ರೇರಿತ ಇವಿ ಸ್ಕೂಟರ್ ಬಿಡುಗಡೆ

ಓಕಿನವಾ ಸಂಸ್ಥೆಯು ಬಿಡುಗಡೆ ಮಾಡಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗೆ ರಿಡ್ಜ್ ಪ್ಲಸ್ ಎಂದು ನಾಮಕರಣ ಮಾಡಲಾಗಿದ್ದು, ಎಕ್ಸ್‌ಶೋರೂಂ ಪ್ರಕಾರ ರಿಡ್ಜ್ ಪ್ಲಸ್ ಸ್ಕೂಟರ್ ಬೆಲೆಯನ್ನು ರೂ. 68,988ಕ್ಕೆ ನಿಗದಿಗೊಳಿಸುವ ಮೂಲಕ ಸ್ಕೂಟರ್ ಪ್ರಿಯರಿಗೆ ಹೊಸ ಆಯ್ಕೆ ನೀಡಲಾಗಿದೆ.

ಓಕಿನವಾ ಸಂಸ್ಥೆಯಿಂದ ಮತ್ತೊಂದು ಅತಿ ಹೆಚ್ಚು ಮೈಲೇಜ್ ಪ್ರೇರಿತ ಇವಿ ಸ್ಕೂಟರ್ ಬಿಡುಗಡೆ

ರಿಡ್ಜ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಗುಣಮಟ್ಟದ ಬ್ಯಾಟರಿ ಪ್ರೇರಣೆ ಹೊಂದಿದ್ದು, ಅಧಿಕ ಮೈಲೇಜ್ ನೀಡಬಲ್ಲ ಲೀಥಿಯಂ ಅಯಾನ್ ಬ್ಯಾಟರಿ ಬಳಕೆ ಮಾಡಲಾಗಿದೆ. ಇದರಿಂದಾಗಿಯೇ ಸ್ಕೂಟರ್ ಮೈಲೇಜ್ ಪ್ರಮಾಣದಲ್ಲಿ ಹೆಚ್ಚಳವಾಗಿರುವುದಲ್ಲದೇ ಅತಿ ಕಡಿಮೆ ಅವಧಿಯಲ್ಲಿ ಬ್ಯಾಟರಿ ಚಾರ್ಜ್ ಮಾಡಬಹುದಾಗಿದೆ.

ಓಕಿನವಾ ಸಂಸ್ಥೆಯಿಂದ ಮತ್ತೊಂದು ಅತಿ ಹೆಚ್ಚು ಮೈಲೇಜ್ ಪ್ರೇರಿತ ಇವಿ ಸ್ಕೂಟರ್ ಬಿಡುಗಡೆ

ಇನ್ನೊಂದು ವಿಶೇಷ ಅಂದ್ರೆ, ಓಕಿನವಾ ರಿಡ್ಜ್ ಸ್ಕೂಟರ್‌ಗಳಲ್ಲಿ ಜೋಡಿಸಲಾಗಿರುವ ಲೀಥಿಯಂ ಅಯಾನ್ ಬ್ಯಾಟರಿಯನ್ನು ತೆಗೆದು ಹಾಕಬಹುದಾದ ಸೌಲಭ್ಯವನ್ನು ಹೊಂದಿದ್ದು, ದೂರದ ಪ್ರಯಾಣದ ವೇಳೆಯು ಹೆಚ್ಚುವರಿ ಬ್ಯಾಟರಿ ಚಾರ್ಜಿಂಗ್ ಮಾಡಿಕೊಂಡು ಪ್ರಯಾಣಿಸಲು ಅನುಕೂಲಕವಾಗಿದೆ.

ಓಕಿನವಾ ಸಂಸ್ಥೆಯಿಂದ ಮತ್ತೊಂದು ಅತಿ ಹೆಚ್ಚು ಮೈಲೇಜ್ ಪ್ರೇರಿತ ಇವಿ ಸ್ಕೂಟರ್ ಬಿಡುಗಡೆ

ಜೊತೆಗೆ 800 ವ್ಯಾಟ್ ಬಿಎಲ್‌ಡಿಸಿ ಮೋಟಾರ್(ವಾಟರ್ ಪ್ರೂಫ್) ಹೊಂದಿರುವ ಓಕಿನವಾ ರಿಡ್ಜ್ ಪ್ಲಸ್ ಸ್ಕೂಟರ್‌ಗಳು ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದ್ದಲ್ಲಿ 120 ಕಿ.ಮಿ ಮೈಲೇಜ್ ಹಿಂದಿರುಗಿಸುತ್ತವೆ.

ಓಕಿನವಾ ಸಂಸ್ಥೆಯಿಂದ ಮತ್ತೊಂದು ಅತಿ ಹೆಚ್ಚು ಮೈಲೇಜ್ ಪ್ರೇರಿತ ಇವಿ ಸ್ಕೂಟರ್ ಬಿಡುಗಡೆ

ಗಂಟೆಗೆ 55ಕಿ.ಮಿ ಟಾಪ್ ಸ್ಪೀಡ್ ಹೊಂದಿರುವ ಓಕಿನವಾ ರಿಡ್ಜ್ ಪ್ಲಸ್ ಸ್ಕೂಟರ್‌ಗಳು ಈ ಹಿಂದಿನ ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ಗಿಂತಲೂ ಕಡಿಮೆ ವೇಗ ಹೊಂದಿದ್ದರೂ ಮೈಲೇಜ್ ವಿಚಾರದಲ್ಲಿ ಉತ್ತಮ ಆಯ್ಕೆಯಾಗಲಿದ್ದು, 150 ಕೆ.ಜಿ ತೂಕ ಪಡೆದುಕೊಂಡಿವೆ.

MOST READ: ಹೊಸ ಸ್ಯಾಂಟ್ರೋ ಕಾರು ಖರೀದಿಗೆ ಬುಕ್ಕಿಂಗ್ ಆರಂಭ- ಬೆಲೆ ಎಷ್ಟಿರಲಿದೆ ಗೊತ್ತಾ?

ಓಕಿನವಾ ಸಂಸ್ಥೆಯಿಂದ ಮತ್ತೊಂದು ಅತಿ ಹೆಚ್ಚು ಮೈಲೇಜ್ ಪ್ರೇರಿತ ಇವಿ ಸ್ಕೂಟರ್ ಬಿಡುಗಡೆ

ಸ್ಕೂಟರ್‌ನಲ್ಲಿರುವ ಸುರಕ್ಷಾ ಸಾಧನಗಳು

ಇತ್ತೀಚೆಗೆ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆ ಓಕಿನವಾ ಸಂಸ್ಥೆಯು ತನ್ನ ಸ್ಕೂಟರ್ ಮಾದರಿಗಳಲ್ಲಿ ಗರಿಷ್ಠ ಸುರಕ್ಷಾ ಸೌಲಭ್ಯಗಳನ್ನು ನೀಡುತ್ತಿದೆ. ಸದ್ಯ ಬಿಡುಗಡೆಯಾಗಿರುವ ರಿಡ್ಜ್ ಪ್ಲಸ್ ಸ್ಕೂಟರ್‌ನಲ್ಲೂ ಸಹ ಹಲವು ಸುಧಾರಿತ ಸುರಕ್ಷಾ ಸೌಲಭ್ಯಗಳನ್ನು ಜೋಡಣೆ ಮಾಡಲಾಗಿದೆ.

ಓಕಿನವಾ ಸಂಸ್ಥೆಯಿಂದ ಮತ್ತೊಂದು ಅತಿ ಹೆಚ್ಚು ಮೈಲೇಜ್ ಪ್ರೇರಿತ ಇವಿ ಸ್ಕೂಟರ್ ಬಿಡುಗಡೆ

ಸೆಂಟ್ರಲ್ ಲಾಕಿಂಗ್, ಆ್ಯಂಟಿ ಥೆಪ್ಟ್ ಅಲಾರಾಂ, ಕೀ ಲೆಸ್ ಎಂಟ್ರಿ ಜೊತೆಗೆ ಎಲೆಕ್ಟ್ರಾನಿಕ್ ಅಸಿಸ್ಟ್ ಬ್ರೇಕಿಂಗ್ ಸಿಸ್ಟಂ(ಇ-ಎಬಿಎಸ್) ಸೌಲಭ್ಯವನ್ನು ನೀಡಲಾಗಿದ್ದು, ಎರಡು ಬದಿಯ ಚಕ್ರಗಳಲ್ಲೂ ಡ್ರಮ್ ಬ್ರೇಕ್ ಅಳವಡಿಸಲಾಗಿದೆ.

ಓಕಿನವಾ ಸಂಸ್ಥೆಯಿಂದ ಮತ್ತೊಂದು ಅತಿ ಹೆಚ್ಚು ಮೈಲೇಜ್ ಪ್ರೇರಿತ ಇವಿ ಸ್ಕೂಟರ್ ಬಿಡುಗಡೆ

ಹೀಗಾಗಿ ಅರ್ಬನ್ ಸಂಸ್ಕೃತಿಗೆ ಈ ಸ್ಕೂಟರ್ ಉತ್ತಮ ಆಯ್ಕೆ ಎನ್ನಿಸಲಿದ್ದು, ಇತ್ತೀಚೆಗೆ ಹೆಚ್ಚುತ್ತಿರುವ ಇಂಧನ ಬೆಲೆ ಏರಿಕೆ ಬಿಸಿಯಿಂದ ತಪ್ಪಿಸಿಕೊಳ್ಳಲು ಎಲೆಕ್ಟ್ರಿಕ್ ಸ್ಕೂಟರ್‌ಗಳ ಆಯ್ಕೆ ಎಲ್ಲಾ ರೀತಿಯಿಂದಲೂ ಸಹಕಾರಿಯಾಗಲಿವೆ ಎನ್ನಬಹುದು.

MOST READ: ಪ್ರತಿ ಚಾರ್ಜ್‌ಗೆ 250 ಕಿ.ಮಿ ಮೈಲೇಜ್ ನೀಡಬಲ್ಲ ಕ್ವಿಡ್ ಎಲೆಕ್ಟ್ರಿಕ್ ಕಾರು ಪ್ರದರ್ಶಿಸಿದ ರೆನಾಲ್ಟ್

ಓಕಿನವಾ ಸಂಸ್ಥೆಯಿಂದ ಮತ್ತೊಂದು ಅತಿ ಹೆಚ್ಚು ಮೈಲೇಜ್ ಪ್ರೇರಿತ ಇವಿ ಸ್ಕೂಟರ್ ಬಿಡುಗಡೆ

ಓಕಿನವಾ ಸಂಸ್ಥೆಯು ಸಹ ಇದೇ ನಿಟ್ಟಿನಲ್ಲಿ ಗ್ರಾಹಕರನ್ನು ಸೆಳೆಯಲು ವಿನೂತನ ಪ್ರಯೋಗಗಳನ್ನು ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನು ಅತ್ಯುತ್ತಮ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸುವ ಇರಾದೆಯಲ್ಲಿದೆ.

Most Read Articles

ಬೆಂಗಳೂರಿನಲ್ಲಿ ಸಿದ್ದವಾಗಿರುವ ಏಥೆರ್ ಎನರ್ಜಿ 450 ಎಲೆಕ್ಟ್ರಿಕ್ ಸ್ಕೂಟರ್ ಫೋಟೋ ಗ್ಯಾಲರಿ..!

Kannada
Read more on okinawa electric scooter
English summary
Okinawa Ridge+ Electric Scooter Launched In India; Priced At Rs 64,988.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X