ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

By Praveen Sannamani

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಟ್ರಾಫಿಕ್ ಪೊಲೀಸರು ದೇಶಾದ್ಯಂತ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿರುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಆದ್ರೆ ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಟುತ್ತಿರುವ ವಿಡಿಯೋ ಒಂದು ಚರ್ಚೆಗೆ ಕಾರಣವಾಗಿದ್ದು, ತಪಾಸಣೆ ವೇಳೆ ಸೂಪರ್ ಬೈಕ್ ಸವಾರನ ದಾಖಲೆಗಳನ್ನು ಪರಿಶೀಲನೆ ಮಾಡದ ಟ್ರಾಫಿಕ್ ಪೊಲೀಸರು ಕೇವಲ ಬೈಕಿನ ವಿಶೇಷತೆಗಳ ಬಗೆಗೆ ಕೇಳಿ ಹಾಗೆಯೇ ಕಳುಹಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಹೌದು, ಮೊನ್ನೆಯಷ್ಟೇ ಸೂಪರ್ ಬೈಕ್ ಸವಾರನೊಬ್ಬ ತನ್ನ ದುಬಾರಿ ಬೆಲೆಯ ಬೆನೆಲ್ಲಿ 302 ಬೈಕಿನಲ್ಲಿ ರೈಡ್ ಮಾಡುವಾಗ ದೆಹಲಿ ಟು ಶ್ರೀನಗರ ಹೆದ್ದಾರಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಆದ್ರೆ ತಪಾಸಣೆ ವೇಳೆ ದಾಖಲೆ ಪತ್ರಗಳನ್ನ ಪರಿಶೀಲನೆ ಮಾಡಬೇಕಿದ್ದ ಪೊಲೀಸರು ಮಾಡಿದ್ದೇ ಬೇರೆ.

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಬೈಕಿನ ದಾಖಲೆ ಪತ್ರಗಳನ್ನ ಪರಿಶೀಲನೆ ಮಾಡಬೇಕಿದ್ದ ಪೊಲೀಸರು, ಪವರ್ ಫುಲ್ ಎಂಜಿನ್ ಸಾಮರ್ಥ್ಯದ ಬೆನೆಲ್ಲಿ ಬೈಕಿನ ಖದರ್ ಫಿದಾ ಆಗಿದ್ದಾರೆ. ಹೀಗಾಗಿಯೇ ದಾಖಲೆ ಪತ್ರಗಳನ್ನ ಪರಿಶೀಲನೆ ಮಾಡಬೇಕಿದ್ದ ಪೊಲೀಸರು ಬೈಕಿನ ವಿನ್ಯಾಸ ಮತ್ತು ಬೈಕಿನ ಬೆಲೆ ಎಷ್ಟು? ಎನ್ನುವ ಬಗ್ಗೆ ಬೈಕ್ ಸವಾರನ ಬಳಿಯೇ ಮಾಹಿತಿ ಪಡೆದಿದ್ದಾರೆ.

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಬೈಕಿನ ದಾಖಲೆಗಳನ್ನು ತೊರಿಸಲು ಮುಂದಾದರು ಆ ಬಗ್ಗೆ ಮಾತೇ ಆಡದ ಪೊಲೀಸರು ಬೈಕಿನ ಸ್ಪೆಷಾಲಿಟಿ ಏನು? ಎಲ್ಲಿ ಖರೀದಿ ಮಾಡಿದ್ದು? ಬೈಕಿನ ಮೈಲೇಜ್ ಏನು? ಅಂತೆಲ್ಲಾ ಮಾಹಿತಿ ಪಡೆದು ಹಾಗೆಯೇ ಬಿಟ್ಟು ಕಳುಹಿಸಿದ್ದಾರೆ.

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಹೆದ್ದಾರಿ ಹೋಗುತ್ತಿದ್ದ ಬೈಕ್ ಅನ್ನು ಅಡ್ಡಹಾಕಿದ ಪೊಲೀಸರು ನಿಯಮದ ಪ್ರಕಾರ ಬೈಕಿಗೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಪರಿಶೀಲನೆ ಮಾಡಬೇಕಿತ್ತು. ಅದು ಬಿಟ್ಟು ಬೈಕ್ ಚೆನ್ನಾಗಿ ಅಂತಾ ಬೈಕ್ ಸವಾರನ ಯಾವುದೇ ದಾಖಲೆ ಪತ್ರಗಳನ್ನು ಪರಿಶೀಲನೆ ಮಾಡದೇ ಬಿಟ್ಟುಕಳುಹಿಸಿದ್ದು ಯಾವ ನ್ಯಾಯ?

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಈ ಬಗ್ಗೆ ಸ್ವತಃ ಬೈಕ್ ಸವಾರನೇ ವಿಡಿಯೋವೊಂದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಅದೇ ಸಾಮಾನ್ಯ ಬೈಕ್ ಸವಾರನಾಗಿದ್ದರೇ ಇರೋ ಬರೋ ಎಲ್ಲಾ ದಾಖಲೆಗಳನ್ನು ಕೇಳಿ ಕೊನೆಗೆ ಅದು ಇಲ್ಲಾ ಇದು ಇಲ್ಲಾ ಅಂತ ಹೇಳಿ ಕನಿಷ್ಠ 100 ರೂಪಾಯಿ ಆದ್ರು ದಂಡ ಬಿಚ್ಚಿಸುತ್ತಿದ್ದರು.

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಆದ್ರೆ ಸೂಪರ್ ಬೈಕ್ ಚೆನ್ನಾಗಿ ಅಂದ ಮಾತ್ರಕ್ಕೆ ಯಾವುದೇ ದಾಖಲೆಗಳನ್ನು ನೋಡದೇ ಕೇವಲ ಬೈಕ್ ಬಗ್ಗೆ ವರ್ಣನೆ ಮಾಡಿ ಹಾಗೆಯೇ ಬಿಟ್ಟು ಕಳುಹಿಸುವುದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ರೆ ಅದೇನೇ ಇರಲಿ ಕಾನೂನು ಎಲ್ಲರಿಗೂ ಒಂದೇ ಇರುವ ಬೈಕ್ ಎಷ್ಟೇ ಐಷಾರಾಮಿ ಇರಲಿ ದಾಖಲೆಗಳನ್ನು ಪರಿಶೀಲನೆ ಮಾಡಬೇಕಿರುವುದು ಪೊಲೀಸರ ಡ್ಯೂಟಿ ಅಲ್ಲವೇ?

ಬೆನೆಲ್ಲಿ ಬೈಕ್ ಸವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ವಿಡಿಯೋ ಇಲ್ಲಿದೆ ನೋಡಿ..

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಇನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.3.83 ಲಕ್ಷ ಬೆಲೆ ಹೊಂದಿರುವ ಬೆನೆಲ್ಲಿ ಟಿಎನ್‌ಟಿ 300 ಬೈಕ್ ಮಾದರಿಗಳು 300 ಸಿಸಿ ಲಿಕ್ವಿಡ್ ಕೂಲ್ಡ್ ಟ್ವಿನ್ ಸಿಲಿಂಡರ್ ಜೋಡಣೆ ಹೊಂದಿದೆ. ಹೀಗಾಗಿ ಹೊಸ ಬೈಕ್ ಮಾದರಿಯೂ 37-ಬಿಎಚ್‌ಪಿ ಹಾಗೂ 26.5-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಪೂರೈಸಲಾಗಿದೆ.

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಜೊತೆಗೆ ಹೊಸ ಬೈಕ್ ಮಾದರಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್‌ನೊಂದಿಗೆ ಮುಂಬದಿಯ ಚಕ್ರದಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್, ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಹಾಗೂ ಸುಧಾರಿತ ಮಾದರಿಯ ಹ್ಯಾಂಡಲ್ ನೀಡಲಾಗಿದೆ.

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

196 ಕೆಜಿ ಭಾರ ಹೊಂದಿರುವ ಬೆನೆಲ್ಲಿ ಟಿಎನ್‌ಟಿ ಬೈಕ್‌ಗಳು 16 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಮತ್ತು ಗ್ರೀನ್, ವೈಟ್, ರೆಡ್ ಮತ್ತು ಬ್ಲ್ಯಾಕ್ ಬಣ್ಣದಲ್ಲಿ ಖರೀದಿ ಲಭ್ಯವಿದ್ದು, ಕಮ್ಯೂಟರ್ ಬೈಕ್ ಸವಾರರ ನೆಚ್ಚಿನ ಬೈಕ್ ಇದಾಗಿದೆ ಎನ್ನಬಹುದು. ಆದ್ರೆ ಅದೇನೇ ಇರಲಿ ಪೊಲೀಸರು ಮಾತ್ರ ಸಾಮಾನ್ಯ ಬೈಕ್ ಸವಾರರ ಜೊತೆ ಒಂದು ರೀತಿ ನಡೆದುಕೊಂಡರೇ ಸೂಪರ್ ಬೈಕ್ ಸವಾರರ ಜೊತೆ ಒಂದು ರೀತಿ ನಡೆದುಕೊಳ್ಳುವುದು ಅಷ್ಟು ಥರವಲ್ಲ.

Most Read Articles

Kannada
English summary
Police stop Benelli TNT300 but don't ask for papers.
Story first published: Wednesday, August 1, 2018, 18:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X