ಬುಲೆಟ್ ಪ್ರಿಯರಿಗೆ ಸಿಹಿ ಸುದ್ದಿ- ಹೊಸ ಬೈಕ್‌ಗಳಲ್ಲಿ ಸದ್ಯದಲ್ಲೇ ಸಿಂಗಲ್ ಚಾನೆಲ್ ಎಬಿಎಸ್‌

ರಾಯಲ್ ಎನ್‌ಫೀಲ್ಡ್ ತನ್ನ ಬುಲೆಟ್ ಬೈಕುಗಳಿಗೆ ಸಿಂಗಲ್ ಚಾನೆಲ್ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಲು ಮುಂದಾಗಿದ್ದು, ಹೊಸ ಸುರಕ್ಷಾ ವ್ಯವಸ್ಥೆಯನ್ನು ಹೊಂದಿರುವ ಎಬಿಎಸ್ ಬುಲೆಟ್‌ಗಳು ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿವೆ.

By Rahul Ts

ಇದೇ ತಿಂಗಳು 1ರಿಂದಲೇ 125ಸಿಸಿ ಮೇಲ್ಪಟ್ಟ ಬೈಕ್ ಮತ್ತು ಸ್ಕೂಟರ್‍‍‍ಗಳು ಕಡ್ಡಾಯವಾಗಿ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಹೊಂದಿರಲೇಬೆಕೆಂಬ ಆದೇಶವನ್ನು ನೀಡಲಾಗಿದ್ದು, ಇದೀಗ ದ್ವಿಚಕ್ರ ವಾಹನ ಸಂಸ್ಥೆಗಳು ತಾವು ಬಿಡುಗಡೆಗೊಳಿಸುವ ಹೊಸ ಬೈಕ್ ಮತ್ತು ಸ್ಕೂಟರ್‍‍ಗಳಿಗೆ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸುವ ನಿಟ್ಟಿನಲ್ಲಿ ಹೊಸ ಯೋಜನೆ ಹಸಿರು ನಿಶಾನೆ ತೊರಿವೆ.

ಬುಲೆಟ್ ಪ್ರಿಯರಿಗೆ ಸಿಹಿ ಸುದ್ದಿ- ಹೊಸ ಬೈಕ್‌ಗಳಲ್ಲಿ ಸದ್ಯದಲ್ಲೇ ಸಿಂಗಲ್ ಚಾನೆಲ್ ಎಬಿಎಸ್‌

ಈ ನಿಟ್ಟಿನಲ್ಲಿ ರಾಯಲ್ ಎನ್‌ಫೀಲ್ಡ್ ಕೂಡಾ ತನ್ನ ಜನಪ್ರಿಯ ಬುಲೆಟ್ ಬೈಕುಗಳಿಗೆ ಸಿಂಗಲ್ ಚಾನೆಲ್ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಲು ಮುಂದಾಗಿದ್ದು, ಹೊಸ ಸುರಕ್ಷಾ ವ್ಯವಸ್ಥೆಯನ್ನು ಹೊಂದಿರುವ ಎಬಿಎಸ್ ಬುಲೆಟ್‌ಗಳು ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿವೆ.

ಬುಲೆಟ್ ಪ್ರಿಯರಿಗೆ ಸಿಹಿ ಸುದ್ದಿ- ಹೊಸ ಬೈಕ್‌ಗಳಲ್ಲಿ ಸದ್ಯದಲ್ಲೇ ಸಿಂಗಲ್ ಚಾನೆಲ್ ಎಬಿಎಸ್‌

ರಾಯಲ್ ಎನ್‍ಫೀಲ್ಡ್ ಬೈಕ್ ಮಾದರಿಗಳಲ್ಲೇ ಬುಲೆಟ್‍ ಬೈಕ್ ಮೊದಲ ಎಬಿಎಸ್ ತಂತ್ರಜ್ಞಾನವನ್ನು ಪಡೆದುಕೊಳ್ಳುತ್ತಿದ್ದು, ಸಿಂಗಲ್ ಚಾನೆಲ್ ಮೂಲಕ ಮುಂಭಾಗದ ಚಕ್ರಗಳಿಗೆ ಮಾತ್ರ ಈ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ.

ಬುಲೆಟ್ ಪ್ರಿಯರಿಗೆ ಸಿಹಿ ಸುದ್ದಿ- ಹೊಸ ಬೈಕ್‌ಗಳಲ್ಲಿ ಸದ್ಯದಲ್ಲೇ ಸಿಂಗಲ್ ಚಾನೆಲ್ ಎಬಿಎಸ್‌

ತೂಕದಲ್ಲಿ ಹೆಚ್ಚಿರುವ ರಾಯಲ್ ಎನ್‍ಫೀಲ್ಡ್ ಬುಲೆಟ್ ಬೈಕುಗಳಿಗೆ ಎಬಿಎಸ್ ತಂತ್ರಜ್ಞಾನವನ್ನು ಅಳವಡಿಕೆ ಅತ್ಯಾವಶ್ಯಕವಿದೆ. ಜೊತೆಗೆ ಡ್ಯಯಲ್ ಚಾಲೆನ್ ಎಬಿಎಸ್ ಬದಲಾಗಿ ಕೇವಲ ಸಿಂಗಲ್ ಚಾನೆಲ್ ಎಬಿಎಸ್ ತಂತ್ರಜ್ಞಾನವನ್ನು ಬಳಸುತ್ತಿರುವುದು ಅಷ್ಟು ಒಳ್ಳೆಯ ಆಲೋಚನೆಯಲ್ಲ.

ಬುಲೆಟ್ ಪ್ರಿಯರಿಗೆ ಸಿಹಿ ಸುದ್ದಿ- ಹೊಸ ಬೈಕ್‌ಗಳಲ್ಲಿ ಸದ್ಯದಲ್ಲೇ ಸಿಂಗಲ್ ಚಾನೆಲ್ ಎಬಿಎಸ್‌

ಸಿಂಗಲ್ ಚಾನೆಲ್ ಎಬಿಎಸ್ ಬ್ರೇಕಿಂಗ್ ಸಿಸ್ಟಂ ತಯಾರು ಮಾಡಲು ಕಡಿಮೆ ವೆಚ್ಚವಿದ್ದು, ಆದ್ದರಿಂದ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ತಮ್ಮ ಬುಲೆಟ್ ಬೈಕುಗಳಿಗೆ ಸಿಂಗಲ್ ಚಾನೆಲ್ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಮಾತ್ರ ಅಳವಡಿಸುತ್ತಿದೆ.

ಬುಲೆಟ್ ಪ್ರಿಯರಿಗೆ ಸಿಹಿ ಸುದ್ದಿ- ಹೊಸ ಬೈಕ್‌ಗಳಲ್ಲಿ ಸದ್ಯದಲ್ಲೇ ಸಿಂಗಲ್ ಚಾನೆಲ್ ಎಬಿಎಸ್‌

ರಾಯಲ್ ಎನ್‍ಫೀಲ್ಡ್ ಬುಲೆಟ್ ಬೈಕುಗಳಿಗೆ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಿದ ನಂತರ, ನಾನ್ ಎಬಿಎಸ್ ವೇರಿಯಂಟ್‍‍ಗಿಂತ ಸುಮಾರು ರೂ 10 ರಿಂದ 12 ಸಾವಿರ ಅಧಿಕ ಇರಲಿದೆ ಎಂದು ಹೇಳಲಾಗಿದೆ.

ಬುಲೆಟ್ ಪ್ರಿಯರಿಗೆ ಸಿಹಿ ಸುದ್ದಿ- ಹೊಸ ಬೈಕ್‌ಗಳಲ್ಲಿ ಸದ್ಯದಲ್ಲೇ ಸಿಂಗಲ್ ಚಾನೆಲ್ ಎಬಿಎಸ್‌

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಸುರಕ್ಷಾ ತಂತ್ರಜ್ಞಾನ ಹೊಂದಿರುವ ಬುಲೆಚಟ್ ಬೈಕ್‌ಗಳನ್ನು ಏಪ್ರಿಲ್ 1 ಕ್ಕಿಂತ ಮೊದಲೆಯೇ ಬಿಡುಗಡೆಗೊಳ್ಳಬೇಕಾಗಿತ್ತು. ಆದರೇ ಕಾರಣಾಂತರಗಳಿಂದ ಹೊಸ ಬೈಕ್ ಬಿಡುಗಡೆಯಲ್ಲಿ ವಿಳಂಬವಾಗಿದೆ.

ಬುಲೆಟ್ ಪ್ರಿಯರಿಗೆ ಸಿಹಿ ಸುದ್ದಿ- ಹೊಸ ಬೈಕ್‌ಗಳಲ್ಲಿ ಸದ್ಯದಲ್ಲೇ ಸಿಂಗಲ್ ಚಾನೆಲ್ ಎಬಿಎಸ್‌

ಇನ್ನು ಜಾಗತಿಕ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತಿರುವ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕುಗಳಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಬ್ರೇಕಿಂಗ್ ಸಿಸ್ಟಂನೊಂದಿಗೆ ಅಭಿವೃದ್ಧಿಗೊಳಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಭಾರತದಲ್ಲಿಯೂ ಕೂಡ ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿರುವ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕುಗಳು ದೊರೆಯಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಏಪ್ರಿಲ್ 1ರಿಂದಲೇ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಹೊಸ ರೂಲ್ಸ್..!!

2. 30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

3. ನಟ ಸುದೀಪ್ ಹೊಸ ಜೀಪ್ ಕಂಪಾಸ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

4. ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

Most Read Articles

Kannada
Read more on royal enfield bullet
English summary
Royal Enfield Bullet To Get Single-Channel ABS; Launch Date And Expected Price.
Story first published: Monday, April 2, 2018, 10:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X