ಹೊಸ ಅವತಾರದಲ್ಲಿ ಕಾಣಿಸಿಕೊಂಡ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500

ತನ್ನ ಎಂಜಿನ್ ಮತ್ತು ಕ್ಲಾಸಿಕ್ ಶೈಲಿ ಬೈಕ್‍‍ಗಳಿಂದ ಜನಪ್ರಿಯತೆಯನ್ನು ಪಡೆದ ರಾಯಲ್ ಎನ್‍ಫೀಲ್ಡ್ ವಿದೇಶದ ಮಾರುಕಟ್ಟೆಯಲ್ಲಿ ತಮ್ಮ ಕ್ಲಾಸಿಕ್ 500 ಬೈಕ್ ಅನ್ನು ಮಾರಾಟ ಮಾಡುತಿದೆ.

By Rahul Ts

ತನ್ನ ಎಂಜಿನ್ ಮತ್ತು ಕ್ಲಾಸಿಕ್ ಶೈಲಿ ಬೈಕ್‍‍ಗಳಿಂದ ಜನಪ್ರಿಯತೆಯನ್ನು ಪಡೆದ ರಾಯಲ್ ಎನ್‍ಫೀಲ್ಡ್ ವಿದೇಶದ ಮಾರುಕಟ್ಟೆಯಲ್ಲಿ ತಮ್ಮ ಕ್ಲಾಸಿಕ್ 500 ಬೈಕ್ ಅನ್ನು ಮಾರಾಟ ಮಾಡುತಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಈ ಬೈಕ್ ಬಿಡುಗಡೆಯ ಬಗ್ಗೆ ಯಾವುದೆ ಮಾಹಿತಿ ನೀಡಿಲ್ಲ. ಆದರೆ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 500 ಆಧಾರಿತ ಸ್ಕ್ರ್ಯಾಂಬ್ಲರ್ ಬೈಕ್ ಭಾರತದಲ್ಲಿನ ಡೀಲರ್‍ ಹತ್ತಿರ ಕಾಣಿಸಿಕೊಂಡಿದೆ.

ಹೊಸ ಅವತಾರದಲ್ಲಿ ಕಾಣಿಸಿಕೊಂಡ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500

ಡೀಲರ್‍‍‍ನ ಹತ್ತಿರ ಕಾಣಿಸಿಕೊಂಡ ಈ ಬೈಕ್, ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 500 ಸ್ಕ್ರ್ಯಾಂಬ್ಲರ್ ಭಾರತದಲ್ಲಿಯೂ ಕೂಡಾ ಬಿಡುಗಡೆಗೊಳ್ಳಬಹುದು ಎಂದು ಊಹಿಸಲಾಗಿದೆ. ಆದರೆ ಈ ಕುರಿತು ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯಿಂದ ಈ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸುದ್ದಿ ಹೊರ ಬಂದಿಲ್ಲ.

ಹೊಸ ಅವತಾರದಲ್ಲಿ ಕಾಣಿಸಿಕೊಂಡ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500

ಚಿತ್ರದಲ್ಲಿ ನೋಡುವುದಾದರೆ ಡೀಲರ್‍‍ನ ಹತ್ತಿರ ಕಂಡುಬಂದ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 500 ಸ್ಕ್ರ್ಯಾಂಬ್ಲರ್ ಬೈಕ್ ಡೀಲರ್‍ ತನಗೆ ಬೇಕಾದಂತೆ ಇದನ್ನು ಮಾಡಿಫೈ ಮಾಡಿದ್ದು, ಅಧಿಕೃತ ರಾಯಲ್ ಎನ್‍‍ಫೀಲ್ಡ್ ಬೈಕ್ ಅಲ್ಲವೆಂದು ತಿಳಿಯುತ್ತದೆ.

ಹೊಸ ಅವತಾರದಲ್ಲಿ ಕಾಣಿಸಿಕೊಂಡ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500

ಗುರುತರ ಬದಲಾವಣೆಗಳನ್ನು ಪಡೆದಿರುವ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 500 ಸ್ಕ್ರ್ಯಾಂಬ್ಲರ್ ಬೈಕ್, ಹೈ ಸೆಟ್ ರಿಯರ್ ಮಡ್‍‍ಗಾರ್ಡ್ ಮತ್ತು ಪಿಲಿಯಾನ್ ಸೀಟ್‍‍ನ ಬದಲು ಲಗ್ಗೇಜ್ ಕ್ಯಾರಿಯರ್ ಅನ್ನು ಪಡೆದುಕೊಂಡಿದ್ದು, ಎಕ್ಸಾಸ್ಟ್ ಅನ್ನು ಕೂಡ ಕೊಂಚ ಮೇಲೆ ಅಳವಡಿಸಲಾಗಿದೆ.

ಹೊಸ ಅವತಾರದಲ್ಲಿ ಕಾಣಿಸಿಕೊಂಡ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500

ಆಫ್ ರೋಡಿಂಗ್ ರೈಡ್‍‍ಗಾಗಿ ಡರ್ಟ್ ಟ್ರೈಲ್ಸ್ ಅನ್ನು ಪಡೆದುಕೊಂಡಿದ್ದು, ಇವುಗಳನ್ನು ಹೊರತು ಪಡಿಸಿ ಮುಸುಗಿರುವ ಈ ಚಿತ್ರದಲ್ಲಿ ಈ ಬೈಕ್‍‍ನ ಬಗ್ಗೆ ಬೇರಾವ ಮಾಹಿತಿಯು ದೊರೆತಿಲ್ಲ. ವಿದೇಶದಲ್ಲಿನ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಸ್ಕ್ರ್ಯಾಂಬ್ಲರ್ ಬೈಕ್ ಡೀಲರ್ ಗ್ರಾಹಕೀಯಗೊಳಿಸಬಹುದಾದ ಕಿಟ್ ರೂಪದಲ್ಲಿ ಮಾರಾಟಗೊಳ್ಳುತ್ತಿದೆ.

ಹೊಸ ಅವತಾರದಲ್ಲಿ ಕಾಣಿಸಿಕೊಂಡ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500

ಪ್ರಸ್ಥುತ ಭಾರತೀಯ ಮಾರುಕಟ್ಟೆಗಾಗಿ ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು ದೊಡ್ಡ ಯೋಜನೆಯನ್ನೆ ಹೊಂದಿದ್ದು, ಮುಂದಿನ ವರ್ಷದಲ್ಲಿ ತಮ್ಮ ಇಂಟರ್‍‍ಸೆಪ್ಟರ್ ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್ ಅನ್ನು ಬಿಡುಗಡೆಗೊಳಿಸಲಿದೆ. ಎರಡು ಬೈಕ್‍‍ಗಳು 650 ಸಿಸಿ ಆಧಾರಿತ ಬೈಕ್ ಆಗಿದ್ದು ಸಂಸ್ಥೆಯು ಹೊಸದಾಗಿ ತಯಾರಿಸಿದ ಟ್ವಿನ್ ಸಿಲೆಂಡರ್ ಅನ್ನು ಪಡೆದುಕೊಂಡಿರಲಿದೆ.

ಹೊಸ ಅವತಾರದಲ್ಲಿ ಕಾಣಿಸಿಕೊಂಡ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500

ಬಿಡುಗಡೆಗೊಳ್ಳಲಿರುವ ಇಂಟರ್‍‍ಸೆಪ್ಟರ್ ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‍‍ಗಳು 650ಸಿಸಿ, ಟ್ವಿನ್ ಸಿಲೆಂಡರ್ ಎಂಜಿನ್ ಸಹಾಯದಿಂದ 47ಬಿಹೆಚ್‍‍ಪಿ ಮತ್ತು 52ಎನ್‍ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಅವತಾರದಲ್ಲಿ ಕಾಣಿಸಿಕೊಂಡ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500

ಪ್ರಯಾಣಿಕರ ಸುರಕ್ಷತೆಗಾಗಿ ಈ ಎರಡು ಬೈಕ್‍‍ಗಳಲ್ಲಿ ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಅಳವಡಿಸಲಾಗಿದ್ದು, ಇಂಟರ್‍‍ಸೆಪ್ಟರ್ ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‍‍ಗಳು ಎಕ್ಸ್ ಶೋರಂ ಪ್ರಕಾರ ರೂ 3 ರಿಂದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿರಲಿದೆ ಎಂದು ಊಹಿಸಲಾಗಿದೆ.

Most Read Articles

Kannada
Read more on royal enfield off road
English summary
Royal Enfield Classic Scrambler spied at dealership in India.
Story first published: Tuesday, June 5, 2018, 9:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X