ಬೈಕ್ ಮಾರಾಟದಲ್ಲಿ ಮತ್ತೆ ಮುಂಚೂಣಿ ಸಾಧಿಸಿದ ರಾಯಲ್ ಎನ್‌ಫೀಲ್ಡ್

By Praveen Sannamani

ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಬೇಡಿಕೆಯಲ್ಲಿ ಉತ್ತಮ ದಾಖಲೆ ಕಂಡುಬಂದಿದ್ದು, 2018ರ ಜುಲೈ ಅವಧಿಯಲ್ಲಿ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಬರೋಬ್ಬರಿ 69,063 ಬೈಕ್‌ಗಳನ್ನು ಮಾರಾಟ ಮಾಡುವ ಮೂಲಕ ಶೇ.7ರಷ್ಟು ಪ್ರಗತಿ ಸಾಧಿಸಿದೆ.

ಬೈಕ್ ಮಾರಾಟದಲ್ಲಿ ಮತ್ತೆ ಮುಂಚೂಣಿ ಸಾಧಿಸಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಬೈಕ್‌ಗಳ ಮಾರಾಟ ವಿಭಾಗದಲ್ಲಿ ಹೊಸ ಕ್ರಮಗಳನ್ನು ತೆಗೆದುಕೊಂಡ ಪರಿಣಾಮ ಗ್ರಾಹಕರ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, 2017ರ ಜುಲೈ ಅವಧಿಯಲ್ಲಿ ಮಾರಾಟಗೊಂಡ ಬೈಕ್ ಸಂಖ್ಯೆಗೆ ಹೊಲಿಕೆ ಮಾಡಿದ್ದಲ್ಲಿ ಈ ವರ್ಷದ ಜುಲೈನಲ್ಲಿ 69,063 ಬೈಕ್‌ಗಳನ್ನು ಮಾರಾಟ ಮಾಡುವ ಮೂಲಕ ಶೇ.7ರಷ್ಟು ಹೆಚ್ಚುವರಿ ಬೇಡಿಕೆ ಪಡೆದುಕೊಳ್ಳುವಲ್ಲಿ ಸಫಲವಾಗಿದೆ.

ಬೈಕ್ ಮಾರಾಟದಲ್ಲಿ ಮತ್ತೆ ಮುಂಚೂಣಿ ಸಾಧಿಸಿದ ರಾಯಲ್ ಎನ್‌ಫೀಲ್ಡ್

ಕಳೆದ ನಾಲ್ಕು ವರ್ಷಗಳ ಬೈಕ್ ಮಾರಾಟ ಪ್ರಮಾಣವನ್ನ ಗಮನಿಸಿದಾಗ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಭಾರೀ ಪ್ರಮಾಣ ಮುನ್ನಡೆ ಸಾಧಿಸುತ್ತಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಅಷ್ಟೇ ಅಲ್ಲದೇ ರಫ್ತು ಪ್ರಮಾಣದಲ್ಲೂ ಗಣನೀಯ ಬದಲಾವಣೆ ಕಂಡಿದೆ.

ಬೈಕ್ ಮಾರಾಟದಲ್ಲಿ ಮತ್ತೆ ಮುಂಚೂಣಿ ಸಾಧಿಸಿದ ರಾಯಲ್ ಎನ್‌ಫೀಲ್ಡ್

ಜೊತೆಗೆ 2018-19ರ ಆರ್ಥಿಕ ವರ್ಷದ ಅವಧಿಯಲ್ಲಿ (ಏಪ್ರಿಲ್ ಟು ಜುಲೈ) ಒಟ್ಟು 2,86,726 ಬೈಕ್‌ಗಳನ್ನ ಮಾರಾಟ ಮಾಡಿರುವ ಆರ್‌ಇ ಸಂಸ್ಥೆಯು ಕಳೆದ ವರ್ಷದ ಏಪ್ರಿಲ್ ಟು ಜುಲೈ ಅವಧಿಯಲ್ಲಿ 2,42,039 ಬೈಕ್ ಮಾರಾಟ ಮಾಡಿತ್ತು. ಹೀಗಾಗಿ ಕಳೆದ ಅವಧಿಗಿಂತ ಶೇ.18 ರಷ್ಟು ಪ್ರಗತಿ ಕಂಡುಬಂದಿದ್ದು, ಇದು ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ.

ಬೈಕ್ ಮಾರಾಟದಲ್ಲಿ ಮತ್ತೆ ಮುಂಚೂಣಿ ಸಾಧಿಸಿದ ರಾಯಲ್ ಎನ್‌ಫೀಲ್ಡ್

ಇದರೊಂದಿಗೆ ಬೈಕ್ ರಫ್ತು ಪ್ರಮಾಣದ ಹೆಚ್ಚಿನ ಒತ್ತು ನೀಡುತ್ತಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಭಾರತದಿಂದಲೇ ವಿಶ್ವದ ಪ್ರಮುಖ ಮಾರುಕಟ್ಟೆಗಳಾದ ಆಸ್ಟ್ರೇಲಿಯಾ, ಯುಎಸ್ಎ, ವಿಯೆಟ್ನಾಂಗೂ ಹೆಚ್ಚಿನ ಮಟ್ಟದ ಹೊಸ ಬೈಕ್‌ಗಳನ್ನ ಮಾರಾಟ ಮಾಡುತ್ತಿದೆ.

ಬೈಕ್ ಮಾರಾಟದಲ್ಲಿ ಮತ್ತೆ ಮುಂಚೂಣಿ ಸಾಧಿಸಿದ ರಾಯಲ್ ಎನ್‌ಫೀಲ್ಡ್

ಈ ಬಗ್ಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಫೈನಾನ್ಸಿಲ್ ಅಸಿಸ್ಟಂಟ್ ಸ್ಕೀಮ್ ಬಗ್ಗೆ ಪ್ರಕಟಣೆ ನೀಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು, 350ಸಿಸಿ ಮತ್ತು 500ಸಿಸಿ ಸಾಮರ್ಥ್ಯದ ಎಲ್ಲಾ ಬೈಕ್‌ಗಳ ಮೇಲೂ ಹೊಸ ಯೋಜನೆಯು ಅನ್ವಯವಾಗುವಂತೆ ಜಾರಿ ಮಾಡಿದೆ.

ಬೈಕ್ ಮಾರಾಟದಲ್ಲಿ ಮತ್ತೆ ಮುಂಚೂಣಿ ಸಾಧಿಸಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಹೇಳಿಕೊಂಡಿರುವ ಪ್ರಕಾರ ಗರಿಷ್ಠವಾಗಿ ಸಾಲ ಮರುಪಾವತಿಸಲು 5 ವರ್ಷಗಳ ಕಾಲಾವಕಾಶ ನೀಡಿದ್ದು, ಗ್ರಾಹಕರು ತೆಗೆದುಕೊಳ್ಳುವ ಸಾಲಕ್ಕೆ ರೂ. 10 ಸಾವಿರ ಆಧಾರದ ಮೇಲೆ ಇಎಂಐಗಳನ್ನು ನಿಗದಿಪಡಿಸಿದೆ.

ಬೈಕ್ ಮಾರಾಟದಲ್ಲಿ ಮತ್ತೆ ಮುಂಚೂಣಿ ಸಾಧಿಸಿದ ರಾಯಲ್ ಎನ್‌ಫೀಲ್ಡ್

ಅಂದರೇ, ಒಬ್ಬ ಗ್ರಾಹಕ 350ಸಿಸಿ ಸಾಮರ್ಥ್ಯದ ಬೈಕಿನ ಮೇಲೆ 12 ತಿಂಗಳು ಅವಧಿಗೆ 10 ಸಾವಿರ ಸಾಲ ಪಡೆದಲ್ಲಿ ಶೇ. 8.88ರಷ್ಟು ಬಡ್ಡಿ ದರ ಅನ್ವಯವಾಗಲಿದ್ದು, ಪ್ರತಿ ತಿಂಗಳು ರೂ. 907 ಇಎಂಐ ಪಾವತಿಸಬೇಕಾಗುತ್ತದೆ.

ಬೈಕ್ ಮಾರಾಟದಲ್ಲಿ ಮತ್ತೆ ಮುಂಚೂಣಿ ಸಾಧಿಸಿದ ರಾಯಲ್ ಎನ್‌ಫೀಲ್ಡ್

ಗ್ರಾಹಕರು ಇದೇ ಮೊತ್ತವನ್ನು 5 ವರ್ಷಗಳ ಅವಧಿಗೂ ಕೂಡಾ ತೆಗೆದುಕೊಳ್ಳಬಹುದಾಗಿದ್ದು, ಪ್ರತಿ ತಿಂಗಳು ರೂ. 243 ಇಎಂಐನೊಂದಿಗೆ ಶೇ.9.18ರಷ್ಟು ಬಡ್ಡಿದರಲ್ಲಿ 60 ತಿಂಗಳು ಪಾವತಿಸಬೇಕಾಗುತ್ತದೆ.

ಬೈಕ್ ಮಾರಾಟದಲ್ಲಿ ಮತ್ತೆ ಮುಂಚೂಣಿ ಸಾಧಿಸಿದ ರಾಯಲ್ ಎನ್‌ಫೀಲ್ಡ್

ಇದೇ ರೀತಿ 500ಸಿಸಿ ಸಾಮರ್ಥ್ಯದ ಬೈಕ್‌ಗಳ ಮೇಲೂ ಕಡಿಮೆ ಬಡ್ಡಿದರಲ್ಲಿ ಇಎಂಐ ಪಾವತಿಸಬಹುದಾಗಿದ್ದು, 12 ತಿಂಗಳು ಅವಧಿಗೆ ತೆಗೆದುಕೊಳ್ಳುವ 10 ಸಾವಿರ ಸಾಲದ ಮೇಲೆ ಶೇ.6.76ರಷ್ಟು ಬಡ್ಡಿದರದೊಂದಿಗೆ ಪ್ರತಿ ತಿಂಗಳು ರೂ.890 ಇಎಂಐ ಪಾವತಿಬಹುದಾಗಿದೆ.

ಬೈಕ್ ಮಾರಾಟದಲ್ಲಿ ಮತ್ತೆ ಮುಂಚೂಣಿ ಸಾಧಿಸಿದ ರಾಯಲ್ ಎನ್‌ಫೀಲ್ಡ್

500ಸಿಸಿ ಬೈಕ್ ಖರೀದಿ ಮೇಲೆ ಇದೇ ಮೊತ್ತದ ಸಾಲವನ್ನು 60 ತಿಂಗಳಿಗೆ ಪಡೆದಲ್ಲಿ ಶೇ.6.85ರಷ್ಟು ಬಡ್ಡಿದರದೊಂದಿಗೆ ರೂ.224 ಇಎಂಐ ಪಾವತಿ ಮಾಡಬೇಕಿದ್ದು, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ 12 ತಿಂಗಳು, 24 ತಿಂಗಳು, 36 ತಿಂಗಳು, 48 ತಿಂಗಳು ಮತ್ತು60 ತಿಂಗಳ ಅವಧಿಗೆ ಸಾಲ ಪಡೆಯಬಹುದು.

ಬೈಕ್ ಮಾರಾಟದಲ್ಲಿ ಮತ್ತೆ ಮುಂಚೂಣಿ ಸಾಧಿಸಿದ ರಾಯಲ್ ಎನ್‌ಫೀಲ್ಡ್

ಒಂದು ವೇಳೆ ನೀವು ಕೂಡಾ ಯಾವುದೇ ಡೌನ್‌ಪೇಮೆಂಟ್ ಇಲ್ಲದೇ ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿ ಯೋಜನೆಯಲ್ಲಿದ್ದರೇ ಈ ಕೂಡಲೇ ನಿಮ್ಮ ಹತ್ತಿರದ ಡೀಲರ್ಸ್‌ಗಳನ್ನು ಸಂಪರ್ಕಿಸಬಹುದಾಗಿದ್ದು, ಕಡಿಮೆ ಪ್ರಮಾಣದ ಇಎಂಐನಲ್ಲಿ ಬೈಕ್ ಖರೀದಿಗೆ ಇದೊಂದು ಉತ್ತಮ ಅವಕಾಶ ಎನ್ನಬಹುದು.

Most Read Articles

Kannada
English summary
Royal Enfield July 2018 sales at 69,063 motorcycles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X