ಸ್ಟೈಲಿಷ್ ಮತ್ತು ಸ್ಪೋರ್ಟಿ ಲುಕ್ ಹೊಂದಿರುವ ಸುಜುಕಿ ಜಿಕ್ಸರ್ ಯುವಕರ ಪಾಲಿನ ಹಾಟ್ ಫೆವರಿಟ್

ಭಾರತದಲ್ಲಿ ಸುಜುಕಿ ಮೋಟಾರ್ ಸಂಸ್ಥೆಯು 150ಸಿಸಿ ಬೈಕ್ ಮಾರಾಟ ವಿಭಾಗದಲ್ಲಿ ತನ್ನದೇ ಆದ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದ್ದು, ಇದರಲ್ಲಿ ಜಿಕ್ಸರ್ ಸರಣಿ ಬೈಕ್‌ಗಳಂತೂ ಭಾರತೀಯ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವ ಮೂಲಕ ಹೊಸ ಟ್ರೆಂಡ್ ಸೃಷ್ಠಿಸುತ್ತಿವೆ.

ಸ್ಟೈಲಿಷ್ ಮತ್ತು ಸ್ಪೋರ್ಟಿ ಲುಕ್ ಹೊಂದಿರುವ ಸುಜುಕಿ ಜಿಕ್ಸರ್ ಯುವಕರ ಪಾಲಿನ ಹಾಟ್ ಫೆವರಿಟ್

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಸುಜುಕಿ ದ್ವಿಚಕ್ರ ವಾಹನಗಳ ಉತ್ಪಾದನಾ ವಿಭಾಗವು ಎಂಟ್ರಿ ಲೆವಲ್ ಹಯಾಟೆ, ಜಿಕ್ಸರ್ ಸರಣಿ ಪ್ಲಸ್ ಮತ್ತು ಸ್ಕೂಟರ್ ವಿಭಾಗದಲ್ಲಿ ಆಕ್ಸೆಸ್ 125, ಬರ್ಗಮನ್ ಸ್ಟ್ರೀಟ್ ಹಾಗೆಯೇ ಪ್ರೀಮಿಯಂ ಬೈಕ್ ವಿಭಾಗದಲ್ಲಿ ವಿ-ಸ್ಟ್ರೊಮ್ 650, ಹಯಾಬುಸಾ, ಜಿಎಸ್ಎಕ್ಸ್ಎಸ್ 1000 ಮತ್ತು ವಿ-ಸ್ಟ್ರೊಮ್ 1000 ಬೈಕ್ ಮಾರಾಟ ಮಾಡುತ್ತಿದ್ದು, ಇದರಲ್ಲಿ ಜಿಕ್ಸರ್ 150ಸಿಸಿ ಬೈಕ್ ಸದ್ಯ ಅತ್ಯಧಿಕ ಬೇಡಿಕೆಯ ಬೈಕ್ ಮಾದರಿಯಾಗಿ ಮಾರಾಟಗೊಳ್ಳುತ್ತಿದೆ.

ಸ್ಟೈಲಿಷ್ ಮತ್ತು ಸ್ಪೋರ್ಟಿ ಲುಕ್ ಹೊಂದಿರುವ ಸುಜುಕಿ ಜಿಕ್ಸರ್ ಯುವಕರ ಪಾಲಿನ ಹಾಟ್ ಫೆವರಿಟ್

ಸ್ಪೋರ್ಟಿ ಮತ್ತು ಸ್ಟೈಲಿಷ್ ವಿನ್ಯಾಸ ಹೊಂದಿರುವ ಕಾರಣಕ್ಕೆ ಯುವ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಜಿಕ್ಸರ್ 150 ಬೈಕ್, ಪ್ರೀಮಿಯಂ ಬೈಕ್ ಮಾದರಿಯಾದ ಜಿಎಸ್ಎಕ್ಸ್ಎಸ್ 1000 ಡಿಸೈನ್ ಪ್ರೇರಣೆಯೊಂದಿಗೆ ಸಿದ್ದಗೊಂಡಿದೆ.

ಸ್ಟೈಲಿಷ್ ಮತ್ತು ಸ್ಪೋರ್ಟಿ ಲುಕ್ ಹೊಂದಿರುವ ಸುಜುಕಿ ಜಿಕ್ಸರ್ ಯುವಕರ ಪಾಲಿನ ಹಾಟ್ ಫೆವರಿಟ್

ಜಿಕ್ಸರ್ 150 ಬೈಕ್‌ನಲ್ಲಿ ಶಾರ್ಪ್ ಹೆಡ್‌ಲ್ಯಾಂಪ್, ಹೆಡ್‌ಲ್ಯಾಂಪ್ ಮೇಲ್ಪಾಗದಲ್ಲಿ ನೀಡಲಾಗಿರುವ ಸ್ಪೋರ್ಟಿ ಲುಕ್ ಡಿಸೈನ್, ಮಸ್ಕ್ಯೂಲರ್ ಫ್ಯೂಲ್ ಟ್ಯಾಂಕ್, ಅಕ್ರಮಕಾರಿ ಭುಜಬಾಹು, ಎತ್ತರಿಸಿದ ಹಿಂಬದಿಯ ಸೀಟು, ಸ್ಲಿಕ್ ಟೈಲ್ ಸೌಲಭ್ಯ ಮತ್ತು ಡ್ಯುಯಲ್ ಪೋರ್ಟ್ ಸ್ಟಬಿ ಎಕ್ಸಾಸ್ಟ್ ಮಫ್ಲರ್ ಜೋಡಣೆ ಹೊಂದಿದೆ.

ಸ್ಟೈಲಿಷ್ ಮತ್ತು ಸ್ಪೋರ್ಟಿ ಲುಕ್ ಹೊಂದಿರುವ ಸುಜುಕಿ ಜಿಕ್ಸರ್ ಯುವಕರ ಪಾಲಿನ ಹಾಟ್ ಫೆವರಿಟ್

ಎಂಜಿನ್ ಸಾಮರ್ಥ್ಯ

ಸುಜುಕಿ ಜಿಕ್ಸರ್ 150 ಬೈಕ್ ಆವೃತ್ತಿಯು 154.9ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಸಹಾಯದೊಂದಿದೆ 14.5 ಬಿಎಚ್‌ಪಿ ಮತ್ತು 14 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಸ್ಟೈಲಿಷ್ ಮತ್ತು ಸ್ಪೋರ್ಟಿ ಲುಕ್ ಹೊಂದಿರುವ ಸುಜುಕಿ ಜಿಕ್ಸರ್ ಯುವಕರ ಪಾಲಿನ ಹಾಟ್ ಫೆವರಿಟ್

ಜೊತೆಗೆ ಬೈಕ್ ಸವಾರರಿಗೆ ಹೆಚ್ಚಿನ ಮಟ್ಟದಲ್ಲಿ ಅನುಕೂಲಕರವಾಗುವಂತೆ ಜೋಡಣೆ ಮಾಡಲಾಗಿರುವ ವಿನೂತನ ಆಸನ ಸೌಲಭ್ಯವು ದಿನನಿತ್ಯದ ಬಳಕೆಯ ಜೊತೆಗೆ ವಾರಾಂತ್ಯಗಳಲ್ಲಿ ದೂರದ ರೈಡಿಂಗ್ ಉದ್ದೇಶಗಳಿಗೂ ಬಳಕೆಯಾಗುವಂತೆ ಡಿಸೈನ್ ನೀಡಿರುವುದು ಗ್ರಾಹಕರ ಪ್ರಮುಖ ಆಕರ್ಷಣೆ.

ಸ್ಟೈಲಿಷ್ ಮತ್ತು ಸ್ಪೋರ್ಟಿ ಲುಕ್ ಹೊಂದಿರುವ ಸುಜುಕಿ ಜಿಕ್ಸರ್ ಯುವಕರ ಪಾಲಿನ ಹಾಟ್ ಫೆವರಿಟ್

ಇದರಲ್ಲಿ ಇನ್ನೊಂದು ಪ್ರಮುಖ ಆಕರ್ಷಣೆ ಅಂದ್ರೆ, ನಗರಪ್ರದೇಶಗಳ ಪರಿಸ್ಥಿತಿಗೆ ಅನುಗುಣವಾಗಿ ಡಿಸೈನ್ ಹೊಂದಿರುವ ಜಿಕ್ಸರ್ 150 ಬೈಕ್ ಮಾದರಿಯಲ್ಲಿ ಎಸ್‌ಇಪಿ(ಸುಜುಕಿ ಇಕೋ ಪರ್ಫಾಮೆನ್ಸ್) ತಂತ್ರಜ್ಞಾನ ಬಳಕೆ ಮಾಡಿರುವುದು ಬೈಕಿನ ಪರ್ಫಾಮನ್ಸ್ ಹೆಚ್ಚಿಸಿದೆ ಎನ್ನಬಹುದು.

ಸ್ಟೈಲಿಷ್ ಮತ್ತು ಸ್ಪೋರ್ಟಿ ಲುಕ್ ಹೊಂದಿರುವ ಸುಜುಕಿ ಜಿಕ್ಸರ್ ಯುವಕರ ಪಾಲಿನ ಹಾಟ್ ಫೆವರಿಟ್

ಇನ್ನು ಸುಜುಕಿ ಜಿಕ್ಸರ್‌ನಲ್ಲಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸ್ಪೋರ್ಟಿ ಗ್ರಾಫಿಕ್ಸ್, ಡ್ಯುಯಲ್ ಬ್ಯಾರೆಲ್ ಎಕ್ಸಾಸ್ಟ್ ಮತ್ತು ಸ್ಟೈಲಿಷ್ ಎಲ್ಇಡಿ ಟೈಲ್‌ಲೈಟ್‌ ವೈಶಿಷ್ಟ್ಯಗಳೊಂದಿಗೆ ಸವಾರರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಸ್ಟೈಲಿಷ್ ಮತ್ತು ಸ್ಪೋರ್ಟಿ ಲುಕ್ ಹೊಂದಿರುವ ಸುಜುಕಿ ಜಿಕ್ಸರ್ ಯುವಕರ ಪಾಲಿನ ಹಾಟ್ ಫೆವರಿಟ್

ಬೈಕ್ ಮುಂಭಾಗದ ಚಕ್ರದಲ್ಲಿ 41 ಎಂಎಂ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಏಳು ಹಂತದ ಹೊಂದಾಣಿಕೆಯ ಮೊನೋಶಾರ್ಕ್‌ನೊಂದಿಗೆ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಮತ್ತು ಮುಂಭಾಗದ ಚಕ್ರದಲ್ಲಿ ಸಿಂಗಲ್ ಚಾನೆಲ್ ಎಬಿಎಸ್(ಆ್ಯಂಟಿ ಬ್ರೇಕಿಂಗ್ ಸಿಸ್ಟಂ) ಅಳವಡಿಕೆ ಮಾಡಲಾಗಿದೆ.

ಸ್ಟೈಲಿಷ್ ಮತ್ತು ಸ್ಪೋರ್ಟಿ ಲುಕ್ ಹೊಂದಿರುವ ಸುಜುಕಿ ಜಿಕ್ಸರ್ ಯುವಕರ ಪಾಲಿನ ಹಾಟ್ ಫೆವರಿಟ್

ಮೂಲತಃ ಜಿಎಸ್ಎಕ್ಸ್-ಆರ್ ಬೈಕ್ ಡಿಸೈನ್ ಸಿದ್ದಗೊಳಿಸಿದ ಇಂಜನಿಯರ್‌ಗಳಿಂದಲೇ ಜಿಕ್ಸರ್ ಎಂಟ್ರಿ ಲೆವಲ್ ಬೈಕ್ ಸಹ ಸಿದ್ದಗೊಂಡಿದ್ದು, ಇದೇ ಕಾರಣಕ್ಕೆ ಜಿಕ್ಸರ್ ಬೈಕ್ ಮಾದರಿಯು ಸ್ಪೋರ್ಟಿ ಸ್ಟೈಲಿಷ್, ಪರ್ಫಾಮೆನ್ಸ್ ಮತ್ತು ಪ್ರಭಾವ ಶಾಲಿ ಇಂಧನ ದಕ್ಷತೆಯ ಸಮ್ಮಿಶ್ರಣವಾಗಿದೆ.

ಸ್ಟೈಲಿಷ್ ಮತ್ತು ಸ್ಪೋರ್ಟಿ ಲುಕ್ ಹೊಂದಿರುವ ಸುಜುಕಿ ಜಿಕ್ಸರ್ ಯುವಕರ ಪಾಲಿನ ಹಾಟ್ ಫೆವರಿಟ್

ಒಟ್ಟಿನಲ್ಲಿ 150ಸಿಸಿ ಸ್ಪೋರ್ಟಿ ಪ್ರೀಮಿಯಂ ಬೈಕ್ ಖರೀದಿಸುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆಯಾಗಿದ್ದು, ಒಂದು ವೇಳೆ ನೀವು ಕೂಡಾ ಬೈಕ್ ಖರೀದಿಯ ಯೋಜನೆಯಲ್ಲಿದ್ದರೆ ಜಿಕ್ಸರ್ ಆಯ್ಕೆಯು ನಿಮ್ಮ ಎಲ್ಲಾ ಬೇಡಿಕೆಯನ್ನು ಈಡೇರಿಸುವ ಉತ್ತಮ ಆಯ್ಕೆ ಎನ್ನಬಹುದು.

Most Read Articles

Kannada
Read more on suzuki motorcycle
English summary
Suzuki Gixxer — A Sporty And Stylish Motorcycle For The Young Indian.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X