ಭಾರತಕ್ಕೆ ಜಿಕ್ಸರ್ 250 ಬೈಕ್ ಅನ್ನು ಪರಿಚಯಿಸಲಿರುವ ಸುಜುಕಿ..

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಈ ಹಿಂದೆ ತಮ್ಮ ಜಿಕ್ಸರ್ 150 ಬೈಕ್ ಅನ್ನು ಬಿಡುಗಡೆಗೊಳಿಸಿ 150ಸಿಸಿ ಬೈಕ್‍ ಸರಣಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿತ್ತು. ಆದರೆ ಸಂಸ್ಥೆಯು ಆ ನಂತರ ಯಾವುದೇ ಹೆಚ್ಚು ಸಾಮರ್ಥ್ಯವು

By Rahul Ts

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಈ ಹಿಂದೆ ತಮ್ಮ ಜಿಕ್ಸರ್ 150 ಬೈಕ್ ಅನ್ನು ಬಿಡುಗಡೆಗೊಳಿಸಿ 150ಸಿಸಿ ಬೈಕ್‍ ಸರಣಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿತ್ತು. ಆದರೆ ಸಂಸ್ಥೆಯು ಆ ನಂತರ ಯಾವುದೇ ಹೆಚ್ಚು ಸಾಮರ್ಥ್ಯವುಳ್ಳ ಬೈಕ್ ಅನ್ನು ಬಿಡುಗಡೆಗೊಳಿಸಲಿಲ್ಲ.

ಭಾರತಕ್ಕೆ ಜಿಕ್ಸರ್ 250 ಬೈಕ್ ಅನ್ನು ಪರಿಚಯಿಸಲಿರುವ ಸುಜುಕಿ..

ಈ ನಿಟ್ಟಿನಲ್ಲಿ ಸಂಸ್ಥೆಯು ಇದೀಗ ಜಿಕ್ಸರ್ 250 ಬೈಕ್ ಅನ್ನು ಪರಿಚಯಿಸಲು ಮುಂದಾಗಿದ್ದು, 2019ರಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ. ಸುಜುಕಿ ಹೊಸ 250 ಸಿಸಿ ಬೈಕಿಗಾಗಿ ಜಿಕ್ಸ್ಸರ್ ಮೊನಿಕ್ಕರ್ ಜೊತೆ ಕೈ ಜೋಡಿಸಬಹುದಾಗಿದೆ ಮತ್ತು ಈಗಿರುವ ಜಿಕ್ಸರ್ 150 ಮಾಲೀಕರಿಗೆ ಇದು ಅತ್ಯುತ್ತಮವಾದ ಅಪ್ಗ್ರೇಡ್ ಎಂದು ವರದಿ ಹೇಳುತ್ತದೆ.

ಭಾರತಕ್ಕೆ ಜಿಕ್ಸರ್ 250 ಬೈಕ್ ಅನ್ನು ಪರಿಚಯಿಸಲಿರುವ ಸುಜುಕಿ..

ಮೊದಲಿಗೆ ಸುಜುಕಿ ಸಂಸ್ಥೆಯು ಜಿಕ್ಸರ್ 250 ಬೈಕಿನ ನೇಕೆಡ್ ವರ್ಷನ್ ಅನ್ನು ಬಿಡುಗಡೆಗೊಳಿಸಲಿದ್ದು, ನಂತರದ ದಿನಗಳಲ್ಲಿ ಫೈರ್ಡ್ ವರ್ಷನ್ ಜಿಕ್ಸರ್ 250 ಬೈಕ್ ಅನ್ನು ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಭಾರತಕ್ಕೆ ಜಿಕ್ಸರ್ 250 ಬೈಕ್ ಅನ್ನು ಪರಿಚಯಿಸಲಿರುವ ಸುಜುಕಿ..

ಹೊಸ ಸುಜುಕಿ ಜಿಕ್ಸರ್ 250 ಬೈಕ್ ಜಿಎಸ್‍ಎಕ್ಸ್-ಎಸ್750 ಮತ್ತು ಜಿಎಸ್‍ಎಕ್ಸ್-ಎಸ್750 ಬೈಕ್‍‍ಗಳ ವಿನ್ಯಾಸವನ್ನು ಆಧರಿಸಲಿದೆ. ಆದರೆ ಸುಜುಕಿ ಸಂಸ್ಥೆಯು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಾದರೆ ಭಾರತೀಯ ರಸ್ತೆಗಳಿಗೆ ಸರಿಹೋಗುವಂತೆ ವಿನ್ಯಾಸ ಮಾಡಬೇಕಾಗಿದೆ.

ಭಾರತಕ್ಕೆ ಜಿಕ್ಸರ್ 250 ಬೈಕ್ ಅನ್ನು ಪರಿಚಯಿಸಲಿರುವ ಸುಜುಕಿ..

ಸುಜುಕಿ ಜಿಕ್ಸರ್ 250ಬೈಕ್ 250ಸಿಸಿ ಆಯಿಲ್ ಕೂಲ್ಡ್ ಎಂಜಿನ್ ಸಹಾಯದಿಂದ 22 ಇಂದ 25ಬಿಹೆಚ್‍‍ಪಿ ಹಾರ್ಸ್ ಪವರ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಬಹುದಾಗಿದೆ ಎನ್ನಲಾಗಿದೆ. ಮತ್ತು ಈ ಬೈಕ್ ಸುಜುಕಿ ಸಂಸ್ಥೆಯ ಎಂಟ್ರಿ ಲೆವೆಲ್ ಟೂರಿಂಗ್ ಮೋಟರ್‍‍ಸೈಕಲ್ ಆಗಿರಬಹುದು ಎನ್ನಲಾಗಿದೆ.

ಭಾರತಕ್ಕೆ ಜಿಕ್ಸರ್ 250 ಬೈಕ್ ಅನ್ನು ಪರಿಚಯಿಸಲಿರುವ ಸುಜುಕಿ..

ಜಿಕ್ಸರ್ 150 ಯಂತೆಯೇ ಅದೇ ಚೌಕಟ್ಟಿನಿಂದ ಸುಜುಕಿ ಗಿಕ್ಸ್ಸರ್ 250 ಅನ್ನು ಪುನರ್‍‍ನಿರ್ಮಾಣ ಮಾಡಬಹುದಾಗಿದೆ. ಆದರೆ ದೊಡ್ಡ 250 ಸಿಸಿ ಎಂಜಿನ್‍‍ಗೆ ಸರಿಹೊಂದಿಸಲು ಸುಜುಕಿ ಫ್ರೇಮ್ ಅನ್ನು ಬಲಪಡಿಸಬೇಕಾಗುತ್ತದೆ. ಮೋಟರ್‍‍‍ಸೈಕಲ್ ಮುಂಭಾಗದ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೋನೋಶಾಕ್ ಅಮಾನತು ಹೊಂದಿರಲಿದೆ.

ಭಾರತಕ್ಕೆ ಜಿಕ್ಸರ್ 250 ಬೈಕ್ ಅನ್ನು ಪರಿಚಯಿಸಲಿರುವ ಸುಜುಕಿ..

ಸುಜುಕಿ ಜಿಕ್ಸರ 250 ಬೈಕ್‍‍ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಎರಡು ಚಕ್ರಗಳಿಗೆ ಡಿಸ್ಕ್ ಬ್ರೇಕ್ ಅನ್ನು ಪಡೆದಿರಬಹುದಾಗಿದ್ದು, ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆದಿರಬಹುದಾಗಿದೆ. ಆದರೆ ಸುಜುಕಿ ಸುಜುಕಿ ಸಂಸ್ಥೆಯು ಅಗ್ಗದ ಬೆಲೆಗೆ ಇದನ್ನು ಮಾರಬೇಕಾದರೆ ಸಿಂಗಲ್ ಚಾನಲ್ ಎಬಿಎಸ್ ಅನ್ನು ಅಳವಡಿಸಬೇಕಾಗುತ್ತದೆ.

ಭಾರತಕ್ಕೆ ಜಿಕ್ಸರ್ 250 ಬೈಕ್ ಅನ್ನು ಪರಿಚಯಿಸಲಿರುವ ಸುಜುಕಿ..

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಸುಜುಕಿ ಸಂಸ್ಥೆಯ ಜಿಕ್ಸರ್ 150 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪದೆದಿದ್ದು, ಸಂಸ್ಥೆಯು ಇದೀಗ ಜಿಕ್ಸರ್ 250 ಬೈಕ್ ಅನ್ನು ಬಿಡುಗಡೆಗೊಳಿಸಲಿದೆ. ಸುಜುಕಿ ಜಿಕ್ಸರ್ ಬೈಕಿನ ಬೆಲೆಯು ಸುಮಾರು ರೂ. 1.5 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಮಾರುಕಟ್ಟೆಯಲ್ಲಿ ಯಮಹಾ ಎಫ್‍‍ಜೆಡ್25 ಬೈಕ್‍‍ಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Suzuki To Introduce Gixxer 250 In India.
Story first published: Saturday, July 21, 2018, 13:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X