ಬಂಗಾರದ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಬೈಕ್

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳು ಕೇವಲ ಯುವಕರಿಗೆ ಮಾತ್ರವಲ್ಲ ರೆಟ್ರೋ ಸ್ಟೈಲ್ ಬೈಕ್ ಪ್ರಿಯರಿಗು ಕೂಡಾ ಇಷ್ಟ. ಅದಿಕ್ಕೆ ರಾಯಲ್ ಎನ್‍ಫೀಲ್ಡ್ ಬೈಕ್‍‍ಗಳಿಗೆ ಮಾರುಕಟ್ಟೆಯಲ್ಲಿ ಬಹಳ ಕ್ರೇಜ್ ಇದೆ. ಕೇವಲ ಹುಡುಗರಿಗೆ ಮಾತ್ರವಲ್ಲದೆ ಹುಡುಯರಿಗೆ ಕೂಡಾ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳು ಅಂದರೆ ಇಷ್ಟ.

ಬಂಗಾರದ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಬೈಕ್

ಹೀಗಾಗಿ ದೇಶದಲ್ಲಿ ಲಕ್ಷದ ಸಂಖ್ಯೆಯಲ್ಲಿ ರಾಯಲ್ ಎನ್‍‍ಫೀಲ್ಡ್ ಬೈಕ್‍ಗಳು ಕಂಡರೂ ಅವುಗಳಲ್ಲಿ ಕೆಲವು ಮಾತ್ರ ವಿಶೇಷವಾಗಿ ಕಾಣಿಸುತ್ತದೆ. ಈಗಲೂ ಸಹ ಕೆಲವರು ರಾಯಲ್ ಎನ್‍‍ಫೀಲ್ಡ್ ಬೈಕ್‍ಗಳನ್ನು ತಮ್ಮ ಡ್ರೀಮ್ ಬೈಕ್ ಎಂದೇ ಪರಿಗಣಿಸುತ್ತಾರೆ ಮತ್ತು ಇನ್ನು ಕೆಲವರು ಆರ್‍‍ಇ ಬೈಕ್ ಖರೀದಿಸಿ ತಮಗಿಷ್ಟ ಇರುವ ಹಾಗೆ ಮಾಡಿಫೈ ಮಾಡಿಸಿಕೊಳ್ಳುತ್ತಾರೆ.

ಬಂಗಾರದ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಬೈಕ್

ದೇಶದಲ್ಲಿ ನಾವು ಹಲವಾರು ಮಾಡಿಫೈಡ್ ರಾಯಲ್ ಎನ್‍‍ಫೀಲ್ದ್ ಬೈಕ್‍‍ಗಳನ್ನು ಕಾಣಬಹುದಾಗಿದ್ದು, ಕೆಲ ಮಾಡಿಫಿಕೇಷನ್‍‍ಗಳು ವಿವಾದಗಳನ್ನು ಹುಟ್ಟುಹಾಕಿದೆ. ಆದ್ರೆ ಇಲ್ಲೊಬ್ಬ ತನ್ನ ನೆಚ್ಚಿನ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಬೈಕ್‍ ಇನ್ನು ಸುಂದವಾಗಿ ಕಾಣಲು ಬೈಕಿನ ಹಲವಾರು ಭಾಗಗಳನ್ನು ಪೂರ್ಣವಾಗಿ ಬಂಗಾರದ ಹೊದಿಕೆಗಳಿಂದ ಸಜ್ಜುಗೊಳಿಸಿದ್ದಾನೆ.

ಬಂಗಾರದ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಬೈಕ್

ಹೌದು, ಗೋವಾನಲ್ಲಿನ ಯುವಕನೊಬ್ಬ ತನ್ನ ರಾಯಲ್ ಎನ್‍‍ಫೀಲ್ಡ್ ಬೈಕ್ ಅನ್ನು ಬಂಗಾರದ ಫಲಕಗಳಿಂದ ಸುತ್ತುವರೆದಿದ್ದು, ರಸ್ತೆಯಲ್ಲಿ ಪ್ರಯಾಣಿಸುವಾಗ ಹಲವರ ದೃಷ್ಟಿಯನ್ನು ತನ್ನ ಬೈಕಿನ ಮೇಲೆ ತಿರುಗುವ ಹಾಗೆ ವಿನ್ಯಾಸ ಮಾಡಿದ್ದಾನೆ.

ಬಂಗಾರದ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಬೈಕ್

ಗೋಲ್ಡ್ ಫಲಕಗಳಿಂದ ಸುತ್ತುವರೆದ ಈ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಬೈಕ್ ಗೋವಾನಲ್ಲಿ ಕಾಣಿಸಿಕೊಂಡಿದ್ದು, ಬೈಕಿನ ಹೆಡ್‍‍ಲ್ಯಾಂಪ್‍‍ನಿಂದ ಹಿಡಿದು ಸಸ್ಪೆಂಷನ್‍ನ ವರೆಗು ಗೋಲ್ಡ್ ಪೆಯಿಂಟ್‍‍ನಿಂದ ಸಜ್ಜುಗೊಳಿಸಿರುವುದು ನೀವಿಲ್ಲಿ ಕಾಣಬಹುದಾಗಿದೆ. ಅಷ್ಟೆ ಅಲ್ಲಾ ಬೈಕಿನ ವ್ಹೀಲ್ ಸ್ಪೋಕ್‍‍ಗಳಿಗೂ ಈತ ಗೋಲ್ಡ್ ಪೆಯಿಂಟ್ ಅನ್ನು ನೀಡಿದ್ದಾನೆ ನೋಡಿ.

ಬಂಗಾರದ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಬೈಕ್

ಎಂಜಿನ್ ಭಾಗವನ್ನು ಮಾತ್ರ ಗೋಲ್ಡ್ ಶ್ರಾಡ್‍‍ಗಳಿಂದ ಸಜ್ಜುಗೊಳಿಸಿದ್ದು, ಎಂಜಿನ್ ಕವರ್ ಗೋಲ್ಡ್ ಟ್ರೀಟ್ಮೆಂಟ್ ಅನ್ನು ಪಡೆದುಕೊಂಡಿದೆ. ವಿಚಿತ್ರವೆಂದರೆ ಈ ರಾಯಲ್ ಎನ್‍ಫೀಲ್ಡ್ ಬೈಕಿನ ಶಾಕ್ ಅಬ್ಸಾರ್ಬರ್ ಮತ್ತು ಎಂಜಿನ್ ಕವರ್ ಅನ್ನೂ ಸಹ ಗೋಲ್ಡ್ ಬಣ್ಣದಿಂದ ತುಂಬಿರುವುದು.

ಬಂಗಾರದ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಬೈಕ್

ಆದರೆ ಬೈಕಿನ ಹೆಚ್ಚಿನ ಭಾಗಗಳಲ್ಲಿ ಈ ಬಣ್ಣವು ಬಹಳ ದಿನಗಳ ವರೆಗು ಉಳಿಯುವುದಿಲ್ಲ ಮತ್ತು ಇದರ ಸ್ಪೋಕ್ಡ್ ರಿಮ್‍‍ಗಳನ್ನು ಪೆಯಿಂಟ್ ಮಾಡಿರುವುದು ಎಂದು ಸ್ಪಷ್ಟವಾಗಿ ತಿಳಿದುಬರುತ್ತದೆ. ಬೈಕಿನ ಡಿಸ್ಕ್ ಬ್ರೇಕ್ ಮತ್ತು ಹ್ಯಾಂಡಲ್‍‍ಬಾರ್‍‍ಗಳಿಗೆ ಕೂಡಾ ಗೋಲ್ಡ್ ಟ್ರೀಟ್ಮೆಂಟ್ ನೀಡಲಾಗಿದೆ.

MOST READ: ಮಗ ನೀಡಿದ ದುಬಾರಿ ಗಿಫ್ಟ್ ಕಂಡು ಭಾವುಕರಾದ ತಾಯಿ..

ಬಂಗಾರದ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಬೈಕ್

ರಾಯಲ್ ಎನ್‍‍ಫೀಲ್ಡ್ ಲಾಂಛನವನ್ನು ಸಹ ಚಿನ್ನದ ಬಣ್ಣದಲ್ಲಿ ಆವರಿಸಲಾಗಿದೆ. ಚಿನ್ನದ ಬಣ್ಣಕ್ಕೆ ಬದಲಾಗುತ್ತಿರುವ ದೇಶದ ಮಧ್ಯಮ ಪೂರ್ವದಲ್ಲಿನ ದುಬಾರಿ ವಾಹನಗಳು ಶುದ್ಧ ಚಿನ್ನದ ಲೇಪಿತವನ್ನು ಪಡೆದಿರುವ ಮಾಡಿಫಿಕೇಷನ್ ಅನ್ನು ಪಡೆಯುತ್ತವೆ. ಆದಾಗ್ಯೂ, ಭಾರತದಲ್ಲಿ, ಇಂತಹ ಕೆಲವು ವಾಹನಗಳನ್ನು ಮಾತ್ರ ಕಾಣಬಹುದಾಗಿದೆ.

ಬಂಗಾರದ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಬೈಕ್

ಬೈಕಿನ ಬಹುತೇಕ ಭಾಗಗಳನ್ನು ಚಿನ್ನದ ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಜೊತೆಗೆ ಮಾಡಿಫೈ ಆದ ಹೆಡ್‍‍ಲೈಟ್‍‍ಗಳನ್ನು ಸಹ ನೀವು ಗಮನಿಸಬಹುದಾಗಿದೆ. ಈ ಮಾಡಿಫೈ ಮಾಡಲಾದ ಹೆಡ್‍ಲ್ಯಾಂಪ್‍‍ಗಳು ಎಲ್ಇಡಿ‍ಗಳನ್ನು ಪಡೆದುಕೊಂಡಿದೆ. ಇವುಗಳನ್ನು ಹೊರತುಪಡಿಸೆ ಬೇರೆಲ್ಲ ಭಾಗಗಳು ಬೈಕಿನೊಂದಿಗೆ ಬಂದಿದೆ ಎಂಬುದು ತಿಳಿಯಬಹುದು.

ಬಂಗಾರದ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಬೈಕ್

ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಒಂದು ರೆಟ್ರೋ ಮಾದರಿಯ ಬೈಕ್ ಆಗಿದ್ದು, 250ಸಿಸಿ ಎಂಜಿನ್ ಪ್ರೇರಿತ ಬೈಕ್‍ಗಳ ಸರಣಿಯಲ್ಲಿ ತಿಂಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಈ ಬೈಕ್‍‍ಗಳು ಮಾರಾಟವಾಗುತ್ತಿದೆ. ಇದರ ವಿನ್ಯಾಸವನ್ನು ಮೆಚ್ಚಿಕೊಳ್ಳುವ ಜನರು ಇನ್ನೂ ಸಹ ಈ ಬೈಕ್ ಅನ್ನು ಕೊಳ್ಳಲು ಮುಗಿಬೀಳುತ್ತಿದ್ದಾರೆ.

ಬಂಗಾರದ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಬೈಕ್

ಈ ಬೈಕ್ ಅನ್ನು ರೀಪೆಯಿಂಟ್ ಮಾಡಲಾಗಿದ್ದು, ದೇಶದಲ್ಲಿ ಯಾವುದೇ ವಾಹನದ ಬಣ್ಣವನ್ನು ಬದಲಾಯಿಸುವುದು ಕಾನೂನಿನ ಪ್ರಕಾರ ಅಪರಾದ. ವಾಹನವನ್ನು ಕೊಳ್ಳುವಾಗ ನೀಡಲಾಗುವ ನೋಂದಣಿ ಧೃಢಿಕರಣ ಪತ್ರದಲ್ಲಿ ಯಾವ ಬಣ್ಣಗಳನ್ನು ಉಲ್ಲೇಖಿಸಲಾಗಿದೆಯೊ ಅದೇ ಬಣ್ಣಗಳಲ್ಲಿ ಆ ವಾಹನಗಳು ಇರಬೇಕು.

ಬಂಗಾರದ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಬೈಕ್

ನೀವು ನಿಮ್ಮ ನೆಚ್ಚಿನ ಬಣ್ಣವನ್ನು ನೀಡಬೇಕೆಂಬ ಆಸೆ ಇದ್ದರೆ ಆಗ ನಿಮ್ಮ ವಾಹನದ ನೋಂದಣಿ ಪ್ರಮಾಣಪತ್ರದಲ್ಲಿ ಮೂಲ ಬಣ್ಣವನ್ನು ಬದಲಾಯಿಸಲಾಗಿದೆ ಎಂದು ಉಲ್ಲೇಖಿಸಬೇಕಿರುತ್ತದೆ. ಈಗಲೂ ಸಹ ನೂತನವಾದ ಡ್ಯುಯಲ್ ಟೋನ್ ಬಣ್ಣಗಳ ಬಣ್ಣವನ್ನು ಸಹ ನೋಂದಣಿ ಪ್ರಮಾಣ ಪತ್ರದಲ್ಲಿ ಡ್ಯುಯಲ್ ಟೋನ್ ಬಣ್ಣವೆಂದೇ ಉಲ್ಲೇಖಿಸಲಾಗಿರುತ್ತದೆ.

MOST READ: 7 ಸಾವಿರ ಕೋಟಿ ವೆಚ್ಚದಲ್ಲಿ ತಲೆಎತ್ತಿದ ಕಿಯಾ ಮೋಟಾರ್ಸ್ ಮೊದಲ ಕಾರು ಉತ್ಪಾದನಾ ಘಟಕ

ಬಂಗಾರದ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಬೈಕ್

ಅದಾಗ್ಯೂ ಯಾವುದೇ ವಾಹನದ ನಿಜ ಬಣ್ಣ ಮತ್ತು ಹೊಸ ನೋಟವನ್ನು ನೀಡಲು ವಿವಿಧ ಹೊದಿಕೆಗಳನ್ನು ನೀಡಲಾಗುತ್ತದೆ. ವಾಹನಗಳಿಗೆ ವ್ರ್ಯಾಪಿಂಗ್ ಮಾಡುವುದು ಕಾನೂನುಬದ್ದವಾಗುರುತ್ತದೆ. ಅದಲ್ಲದೇ ಈ ವ್ರ್ಯಾಪಿಂಗ್ ಹೊಸ ಲುಕ್ ಅನ್ನು ನೀಡುವಾಗ ಆ ವಾಹನದ ಮೂಲ ಬಣ್ಣವನ್ನು ಕಾಪಾಡುತ್ತದೆ. ಮತ್ತು ವ್ರ್ಯಾಪಿಂಗ್ ಎಂಬುದು ವಾಹನದ ಪೂರ್ಣ ಬಣ್ಣವನು ಬದಲಾಯಿಸುವುದಕ್ಕಿಂತಾ ಸುಲಭವಂತೆ..!!

Source: cartoq

Most Read Articles

Kannada
Read more on royal enfield bullet
English summary
This gold-plated Royal Enfield Classic looks dope.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X