ಅತಿಹೆಚ್ಚು ಮೈಲೇಜ್ ನೀಡುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‍‍ಗಳು..

ಕಳೆದ ಎರಡು ವಾರಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಏರುತ್ತಲೆಯಿದೆ. ಸುಮಾರು ಎಲ್ಲಾ ನಗರಗಳಲ್ಲಿಯೂ ಕೂಡ ಇಂಧನದ ಬೆಲೆಯು ನಾಲ್ಕು ವರ್ಷಗಳಿಂದ ಎಂದು ಕಾಣದಂತಹ ಬೆಲಯನ್ನು ಕಂಡುಕೊಂಡಿದೆ.

By Rahul Ts

ಕಳೆದ ಎರಡು ವಾರಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಏರುತ್ತಲೆಯಿದೆ. ಸುಮಾರು ಎಲ್ಲಾ ನಗರಗಳಲ್ಲಿಯೂ ಕೂಡ ಇಂಧನದ ಬೆಲೆಯು ನಾಲ್ಕು ವರ್ಷಗಳಿಂದ ಎಂದು ಕಾಣದಂತಹ ಬೆಲಯನ್ನು ಕಂಡುಕೊಂಡಿದೆ. ಬೆಂಗಳೂರು ಮತ್ತು ಮುಂಬೈ‍ನಂತಹ ದೊಡ್ಡ ನಗರಗಳಲ್ಲಿ ಒಂದೇ ಸಮನೆ ರೂ 80ಕ್ಕಿಂತ ಹೆಚ್ಚು ದಾಟಿವೆ.

ಅತಿಹೆಚ್ಚು ಮೈಲೇಜ್ ನೀಡುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‍‍ಗಳು..

ವಿಪರೀತವಾಗಿ ಏರುತ್ತಿರುವ ಇಂಧನದ ಬೆಲೆಗಳು ದೇಶದಲ್ಲಿನ ಸಾಮನ್ಯರ ಮೆಲೆ ಹೆಚ್ಚು ಪ್ರಭಾವ ಬೀರುತ್ತಿದೆ. ಬೈಕ್‍ಗಳು, ಸ್ಕೂಟರ್‍‍ಗಳು ಮತ್ತು ಪೆಟ್ರೋಲ್ ಕಾರುಗಳನ್ನು ಬಳಸುವುದೇ ಬೇಡವೆಂದು ಪಕ್ಕಕಿಡುತ್ತಿದ್ದಾರೆ. ಇಂತಹ ಕಿರಿಕಿರಿಗಳಿಗೆ ಬ್ರೇಕ್ ಹಾಕಲು ಒಂದೇ ಮಾರ್ಗವೆಂದರೆ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದು.

ಅತಿಹೆಚ್ಚು ಮೈಲೇಜ್ ನೀಡುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‍‍ಗಳು..

ಹೌದು, ಎಲೆಕ್ಟ್ರಿಕ್ ವಾಹನಗಳನ್ನು ಬಳಸಿದ್ದಲ್ಲಿ ಇಂಧನದ ಬೆಲೆಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅವಕಾಶವಿರುವುದಿಲ್ಲ. ಅಲ್ಲದೆ ಪರಿಸರ ಮಾಲಿನ್ಯ ಕೂಡ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿನ್ನ ಉತ್ತಮ 5 ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಅತಿಹೆಚ್ಚು ಮೈಲೇಜ್ ನೀಡುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‍‍ಗಳು..

ಒಕಿನಾವ ಪ್ರೈಜ್

ರಾಜಸ್ಥಾನದ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆಯಾದ ಒಕಿನಾವ ಎರಡು ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಪರಿಚಯಿಸಿದೆ. ಅದೇ ಪ್ರೈಜ್ ಮತ್ತುರಿಡ್ಜ್. ಈ ಎರಡು ಸ್ಕೂಟರ್‍‍ಗಳನ್ನು ರೂ. 2000 ಸಾವಿರಕ್ಕೆ ದೇಶದಲ್ಲಿನ 142 ನಗರಗಳಲ್ಲಿರುವ 200 ಒಕಿನಾವ ವಿಕ್ರಿಯ ಕೇಂದ್ರಗಳಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಅತಿಹೆಚ್ಚು ಮೈಲೇಜ್ ನೀಡುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‍‍ಗಳು..

ಒಕಿನಾವ ಪ್ರೈಜ್ ಇನ್ನಿತರೆ ಸ್ಕೂಟರ್‍‍ಗಳೊಂದಿಗೆ ಹೋಲಿಸಿದರೆ ತುಂಬಾ ವಿಭಿನ್ನವಾಗಿದೆ. ಇದರಲ್ಲಿ ವಿ ಆಕಾರದಲ್ಲಿರುವ ಹೆಡ್‍‍ಲ್ಯಾಂಪ್, ಡಿಜಿಟಲ್ ಎಂಸ್ಟ್ರೂಮೆಂಟ್ ಕನ್ಸೋಲ್, ಯಾಂಟಿ ಥೆಫ್ಟ್ ಸೆನ್ಸಾರ್ಸ್, ಕೀ ಲೆಸ್ ಎಂಟ್ರಿ, ಫೈಂಡ್ ಮೈ ಸ್ಕೂಟರ್ ಎಂಬ ವೈಶಿಷ್ಟ್ಯತೆಗಳೊಂದಿಗೆ ಎಕಾನಮಿ, ಸ್ಪೋರ್ಟ್ ಮತು ಟರ್ಬೊ ಎನ್ನುವ ಮೂರು ವಿವಿಧ ರೈಡಿಂಗ್ ಮೋಡ್‍‍ಗಳಿವೆ.

ಅತಿಹೆಚ್ಚು ಮೈಲೇಜ್ ನೀಡುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‍‍ಗಳು..

ತಾಂತ್ರಿಕವಾಗಿ ಒಕಿನಾವ ಪ್ರೈಜ್ ಸ್ಕೂಟರ್‍‍ಗಳಲ್ಲಿ ಲೆಡ್ ಯಾಸಿಡ್ ಬ್ಯಾಟರಿ ಅಥವಾ ಲೀಥಿಯಂ ಐಯಾನ್ ಬ್ಯಾಟರಿಗಳಿಂದ ಚಲಿಸಬಲ್ಲ ಬ್ರಷ್‍ಲೆಸ್ ಡಿಸಿ ಮೋಟಾರ್ ಅನ್ನು ಅಳವಡಿಸಲಾಗಿದೆ. ಲೆಡ್ ಯಾಸಿಡ್ ಬ್ಯಾಟರಿ 6 ರಿಂದ 8 ಗಂಟೆಗಳಲ್ಲಿ, ಲಿಥಿಯಂ ಐಯಾನ್ ಬ್ಯಾಟರಿ 4 ಗಂಟೆಗಳಲ್ಲಿ ಪೂರ್ಣವಾಗಿ ಚಾರ್ಜ್ ಆಗಲಿವೆ ಮತ್ತು ಒಂದು ಬಾರಿ ಚಾರ್ಜ್‍‍ಗೆ 170-200 ಕಿಲೋಮೀಟರ್‍‍ವರೆಗು ಪ್ರಯಾಣಿಸಬಹುದಾಗಿದೆ.

ಒಕಿನಾವ ಪ್ರೈಜ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ - ರೂ. 59,899 (ದೆಹಲಿಯ ಎಕ್ಸ್ ಶೋರಂ)

ಅತಿಹೆಚ್ಚು ಮೈಲೇಜ್ ನೀಡುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‍‍ಗಳು..

ಹೀರೋ ಎಲೆಕ್ಟ್ರಿಕ್ ಫೋಟಾನ್ ಎಲ್ಐ

ದೇಶಿಯ ದಿಗ್ಗಜ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನ ಸಂಸ್ಥೆಯಾದ ಹೀರೋ ಎಲೆಕ್ಟ್ರಿಕ್ ಫೋಟಾನ್ ಎಲ್‍ಐ ಸ್ಕೂಟರ್ ಅನ್ನು ಲೀಥಿಯಂ ಐಯಾನ್ ಮತ್ತು ಎಜಿಎಮ್ ವಿಆರ್‍ಎಲ್‍ಎ ಎನ್ನುವ ಎರಡು ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿರಲಿದೆ. ದೇಸಹದಲ್ಲೆಡೆ 35 ಹೀರೋ ಎಲೆಕ್ಟ್ರಿಕ್ ಡೀಲರ್‍‍ಗಳಿದ್ದಾರೆ.

ಅತಿಹೆಚ್ಚು ಮೈಲೇಜ್ ನೀಡುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‍‍ಗಳು..

ಹೀರೋ ಎಲೆಕ್ಟ್ರಿಕ್ ಫೋಟಾನ್ ಸ್ಕೂಟರ್‍‍ಗಳ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್, ಹಿಂಭಾಗದಲ್ಲಿ ಮೋನೊಶಾಕ್ ಅಬ್ಸಾರ್ಬರ್, ಯಾಂಟಿ ಥೆಫ್ಟ್ ಅಲಾರಮ್, ಅಲ್ಲದೆ ಪವರ್ ಮತ್ತು ಎಕಾನಮಿ ಎಂಬ ಎರಡು ರೈಡಿಂಗ್ ಮೋಡ್‍‍ಗಳಿವೆ.

ಅತಿಹೆಚ್ಚು ಮೈಲೇಜ್ ನೀಡುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‍‍ಗಳು..

ತಾಂತ್ರಿಕವಾಗಿ ಇದರಲ್ಲಿ 1500 ವ್ಯಾಟ್ಸ್ ಎಲೆಕ್ಟ್ರಿಕ್ ಮೋಟಾರ್ ಮತ್ತು ಮಲ್ಟಿ ಜೆಟ್ ಹೆವಿ ಡ್ಯೂಟಿ ಚಾರ್ಜರ್ ಇದ್ದು, ಪವ್ರ್ ಮೋಡ್‍‍ನಲ್ಲಿ ಗಂಟೆಗೆ 45 ಕಿಲೋಮೀಟರ್ ಮತ್ತು ಎಕಾನಮಿ ಮೋಡ್‍‍ನಲ್ಲಿ ಗಂಟೆಗೆ 85 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿವೆ.

ಹೀರೋ ಎಲೆಕ್ಟ್ರಿಕ್ ಫೋಟಾನ್ ಬೆಲೆ : ರೂ. 52,790 (ದೆಹಲಿ ಎಕ್ಸ್ ಶೋರಂ)

ಅತಿಹೆಚ್ಚು ಮೈಲೇಜ್ ನೀಡುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‍‍ಗಳು..

ಹೀರೋ ಎಲೆಕ್ಟ್ರಿಕ್ ನಿಕ್ಸ್ ಇ5

ಹೀರೋ ಎಲೆಕ್ಟ್ರಿಕ್ ಸಂಸ್ಥೆಯು ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಮಾಡಲ್ ಆದ ನಿಕ್ಸ್ ಅನ್ನು ಪರಚಯಿಸಿವೆ. ಇದರಲ್ಲಿ ಲೀಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಸುಮಾರು 4 ಗಂಟೆಯ ಸಮಾಯದಲ್ಲಿ ಬ್ಯಾಟರಿ ಫುಲ್ ಚಾರ್ಜ್ ಆಗಲಿದ್ದು, ಒಂದು ಬಾರಿ ಚಾರ್ಜ್‍ಗೆ 60 ಕಿಲೋಮೀಟರ್‍‍ವರೆಗು ಪ್ರಯಾಣಿಸಬಹುದು.

ಅತಿಹೆಚ್ಚು ಮೈಲೇಜ್ ನೀಡುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‍‍ಗಳು..

ಹೀರೋ ನಿಕ್ಸ್ ಇ5 ಸ್ಕೂಟರ್‍‍ಗಳಲ್ಲಿ ಸ್ಟೋರೇಜ್ ಸ್ಪೇಸ್, ಯಾಂಟೊ ಥೆಫ್ಟ್ ಅಲಾರಮ್, ಎರಡು ವರ್ಷಗಳ ಉಚಿತ ವಾರೆಂಟಿ ಮತ್ತು ಒಂದು ವರ್ಷದ ಉಚಿತ ರೋಡ್ ಸೈಡ್ ಅಸ್ಸಿಸ್ಟೆನ್ಸ್ ಅನ್ನು ಒದಗಿಸುತ್ತಿದೆ. ಮುಂಭಾಗದಿಂದ ನೋಡಲು ಗಾತ್ರದಲ್ಲಿ ಸಣ್ಣದಾಗಿ ಕಂಡರೂ ಇದರಲ್ಲಿ ಇರುವ ವೀಲ್ ಬೇಸ್‍‍ನೊಂದಿಗೆ ಸಾಧಾರಣ ಪೆಟ್ರೋಲ್ ಸ್ಕೂಟರ್‍‍ನಂತೆಹೆ ಕಾಣುತ್ತದೆ.

ಅತಿಹೆಚ್ಚು ಮೈಲೇಜ್ ನೀಡುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‍‍ಗಳು..

ತಾಂತ್ರಿಕವಾಗಿ ಹೀರೋ ಎಲೆಕ್ಟ್ರಿಕ್ ನಿಕ್ ಇ5 ಸ್ಕೂಟರ್‍‍ಗಳಲ್ಲಿ 250 ವ್ಯಾಟ್ಸ್ ಬಿಡಿಎಲ್‍ಸಿ ಮೋಟರ್ ಅನ್ನು ಅಳವಡಿಸಲಾಗಿದ್ದು, ಇದು ಲೀಥಿಯಂ ಬ್ಯಾಟರಿ ಇಂದ ಶಕ್ತಿಯನ್ನು ಪಡೆಯುತ್ತದೆ ಮತ್ತು ಗಂಟೆಗೆ 25 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿದೆ.

ಹೀರೋ ಎಲೆಕ್ಟ್ರಿಕ್ ನಿಕ್ಸ್ ಇ5 ಬೆಲೆ - ರೂ 55,490 ಸಾವಿರ (ದೆಹಲಿ ಎಕ್ಸ್ ಶೋರಂ)

ಅತಿಹೆಚ್ಚು ಮೈಲೇಜ್ ನೀಡುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‍‍ಗಳು..

ಎಥರ್ ಎಸ್340

ಬೆಂಗಳೂರು ಮೂಲದ ಎಥರ್ ಸಂಸ್ಥೆಯು ತಮ್ಮ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದ್ದು, ಎಥರ್ ಎಸ್340 ಸ್ಕೂಟರಿನ ಖರೀದಿಗಾಗಿ ಇದೇ ವರ್ಷದ ಜೂನ್ ತಿಂಗಳಿಂದ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಿದೆ.

ಅತಿಹೆಚ್ಚು ಮೈಲೇಜ್ ನೀಡುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‍‍ಗಳು..

ಎಥರ್ ಬಿಡುಗಡೆಗೊಳಿಸಲಿರುವ ಎಲೆಕ್ಟ್ರಿಕ್ ಸ್ಕೂಟರ್ ಕೇವಲ ಬೆಂಗಳೂರು ಗ್ರಾಹಕರಿಗೆ ಮಾತ್ರ ಖರೀದಿಮಾಡಬಹುದಾಗಿದ್ದು, ಇನ್ನು ಎಥರ್ ಎಲೆಕ್ಟ್ರಿಕ್ ಸ್ಕೂಟರ್‍‍ನಲ್ಲಿ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಒಂದು ಬಾರಿ ಚರ್ಜ್‍‍ಗೆ ಸುಮಾರು 60 ಕಿಲೋಮೀಟರ್ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ ಗಂಟೆಗೆ 72 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಕೂಡ ಪಡೆದುಕೊಂಡಿದೆ.

ಅತಿಹೆಚ್ಚು ಮೈಲೇಜ್ ನೀಡುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‍‍ಗಳು..

ಎಥರ್ ಎಸ್340 ಎಲೆಕ್ಟ್ರಿಕ್ ಸ್ಮಾರ್ಟ್‍ಫೋನ್ ಕನೆಕ್ಟಿವಿಟಿ, ನ್ಯಾವಿಗೇಶನ್ ಅಸ್ಸಿಸ್ಟ್, ಪಾರ್ಕಿಂಗ್ ಅಸ್ಸಿಸ್ಟ್ ಆಯ್ಕೆಯನ್ನು ಪಡೆದಂತ ಸ್ಕೂಟರ್ ಏಳು ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ವೆಹಿಕಲ್ ಚಾರ್ಜಿಂಗ್ ಪಾಯಿಂಟ್ ಟ್ರಾಕರ್, ಎಲ್ಇಡಿ ಲೈಟ್‍‍ನಿಂಗ್, ಸಿಬಿಎಸ್ ಮತ್ತು ಸೀಟ್ ಸ್ಟೊರೇಜ್ ಲೈಟ್ ಎಂಬ ಹತ್ತುಹಲವು ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಎಥರ್ ಎಸ್340 ಸ್ಕೂಟರ್ ಬೆಲೆ - ರೂ. 75,000 ಸಾವಿರ (ಬೆಂಗಳೂರಿನಲ್ಲಿ ಮಾತ್ರ ಲಭ್ಯ)

ಅತಿಹೆಚ್ಚು ಮೈಲೇಜ್ ನೀಡುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‍‍ಗಳು..

ಟ್ವೆಂಟಿ ಟೂ ಮೋಟಾರ್ಸ್ ಪ್ಲೋ

2018ರ ಆಟೋ ಎಕ್ಸ್ ಪೋ ದಲ್ಲಿ ತನ್ನ ಹೊಸ ಮಾದರಿಯ ಸ್ಕೂಟರ್‌ಗಳನ್ನು ಪರಿಚಯಿಸಿ ಬಿಡುಗಡೆಗೊಳಿಸಿದ ಟ್ವಿಂಟಿ ಟು ಸಂಸ್ಥೆಯು ಹೊಸ ಸ್ಕೂಟರಿನ ಬೆಲೆಯನ್ನು ದೆಹಲಿ ಎಕ್ಸ್ ಶೋರಂ ಪ್ರಕಾರ ರೂ. 74,740ಕ್ಕೆ ನಿಗದಿ ಮಾಡಿದೆ.

ಅತಿಹೆಚ್ಚು ಮೈಲೇಜ್ ನೀಡುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‍‍ಗಳು..

ಪ್ರತಿ ಚಾರ್ಜಿಂಗ್‌ಗೆ 80 ಕಿಮಿ ಮೈಲೇಜ್ ನೀಡಬಲ್ಲ ಗುಣಹೊಂದಿರುವ ಫ್ಲೋ ಎಲೆಕ್ಟ್ರಿಕ್ ಸ್ಕೂಟರ್‌ಗಳು, ಬಾಷ್ ನಿರ್ಮಾಣದ ಡಿಸಿ ಮೋಟಾರ್ ಅಳವಡಿಕೆ ಹೊಂದಿರುವುದು ಮತ್ತೊಂದು ವಿಶೇಷ.ಜೊತೆಗೆ ಫ್ಲೋ ಸ್ಕೂಟರ್‌ಗಳ ಮತ್ತೊಂದು ವಿಶೇಷ ಅಂದ್ರೆ, ಹೆಚ್ಚುವರಿ ಬ್ಯಾಟರಿ ನೀಡಲಾಗಿದ್ದು, ಕೇವಲ 1 ಗಂಟೆಯಲ್ಲಿ ಶೇ. 70ರಷ್ಟು ಬ್ಯಾಟರಿ ಸಾಮರ್ಥ್ಯ ಮರಳಿ ಪಡೆಯುವ ಗುಣ ಹೊಂದಿವೆ.

ಅತಿಹೆಚ್ಚು ಮೈಲೇಜ್ ನೀಡುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‍‍ಗಳು..

ಫ್ಲೋ ಸ್ಕೂಟರ್‌ಗಳು 150 ಕೆಜಿ ಭಾರವಿದ್ದು, ಪೂರ್ಣ ಪ್ರಮಾಣದ ಬ್ಯಾಟರಿ ಚಾರ್ಜ್ ಪಡೆಯಲು 2 ಗಂಟೆ ತೆಗದುಕೊಳ್ಳಲಿದೆ. ಈ ಮೂಲಕ 80 ಕಿಮಿ ಮೈಲೇಜ್ ನೀಡುವುದಲ್ಲದೇ 9 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ಅತಿಹೆಚ್ಚು ಮೈಲೇಜ್ ನೀಡುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‍‍ಗಳು..

ಇನ್ನು ಫ್ಲೋ ಸ್ಕೂಟರ್ ಕೂಡಾ ಇತರೆ ಸ್ಕೂಟರ್ ಮಾದರಿಗಳಂತೆ ಸುಧಾರಿತ ಅಂಶಗಳನ್ನು ಹೊಂದಿದ್ದು, ಎಲ್ಇಡಿ ಹೆಡ್‍‌ಲ್ಯಾಂಪ್, ಶಾರ್ಪ್ ಎಡ್ಜ್, ಬಲಿಷ್ಠ ಮುನ್ನೋಟ, ಸ್ಟೈಲಿಷ್ ಸಸ್ಪೆಷನ್ ಮತ್ತು ಡಿಸ್ಕ್ ಬ್ರೇಕ್ ಹೊಂದಿದೆ.

ಟ್ವೆಂಟಿ ಟು ಮೋಟಾರ್ಸ್ ಫ್ಲೋ ಬೆಲೆ - ರೂ 74,740 ಸಾವಿರ (ದೆಹಲಿ ಎಕ್ಸ್ ಶೋರಂ)

Most Read Articles

Kannada
English summary
Top 5 electric scooters.
Story first published: Friday, May 25, 2018, 18:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X