ಬಿಡುಗಡೆಯಾದ ಕ್ರಾಸ್ ಓವರ್ ಟ್ರಾನ್ಷ್ ಒನ್ ಎಲೆಕ್ಟ್ರಿಕ್ ಬೈಕ್..!!

By Praveen Sannamani

ಸ್ಮಾಟ್ ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯಾಗಿ ಹಲವಾರು ಆಟೋ ಉತ್ಪಾದನಾ ಸಂಸ್ಥೆಗಳು ಬೃಹತ್ ಯೋಜನೆಗಳನ್ನು ರೂಪಿಸಿದ್ದು, ಈ ಮಧ್ಯೆ ಟ್ರಾನ್ಷ್ ಎನ್ನುವ ಸಂಸ್ಥೆಯೊಂದು ಹೊಸ ವಿನ್ಯಾಸದ ಸ್ಮಾರ್ಟ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೊಳಿಸಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಬಿಡುಗಡೆಯಾದ ಕ್ರಾಸ್ ಓವರ್ ಟ್ರಾನ್ಷ್ ಒನ್ ಎಲೆಕ್ಟ್ರಿಕ್ ಬೈಕ್..!!

ದೆಹಲಿ ಮೂಲದ ಟ್ರಾನ್ಷ್ ಸಂಸ್ಥೆಯು ಈಗಾಗಲೇ ಸ್ಮಾರ್ಟ್ ಸೈಕಲ್‌ಗಳ ನಿರ್ಮಾಣದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಇದೀಗ ಗ್ರಾಹಕರ ಬೇಡಿಕೆಯೆಂತೆ ಟ್ರಾನ್ಷ್ ಒನ್ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹತ್ತು ಹಲವು ವಿಶೇಷ ಸೌಲಭ್ಯಗಳನ್ನು ಹೊಂದಿರುವ ಈ ಎಲೆಕ್ಟ್ರಿಕ್ ಬೈಕಿನ ಬೆಲೆಯನ್ನು ಆರಂಭಿಕವಾಗಿ 49,999 ಕ್ಕೆ ನಿಗದಿಪಡಿಸಲಾಗಿದ್ದು, ದೇಶದ ಪ್ರಮುಖ ಮೆಟ್ರೋ ಸಿಟಿಗಳಲ್ಲಿ ಈ ಹೊಸ ಬೈಕ್ ಖರೀದಿಗೆ ಲಭ್ಯವಿದೆ.

ಬಿಡುಗಡೆಯಾದ ಕ್ರಾಸ್ ಓವರ್ ಟ್ರಾನ್ಷ್ ಒನ್ ಎಲೆಕ್ಟ್ರಿಕ್ ಬೈಕ್..!!

ಟ್ರಾನ್ಷ್ ಒನ್ ಇ-ಬೈಕ್‌ಗಳು ಗುಣಮಟ್ಟದಲ್ಲಿ ವಿಶ್ವದರ್ಜೆ ಸೌಲಭ್ಯಗಳನ್ನು ಹೊಂದಿದ್ದು, ಬೈಕ್‌ಗಳಲ್ಲಿ ತುಕ್ಕು ನಿರೋಧಕ ಏರಿಯೋ ಗ್ರೇಡ್ ಅಲಾಯ್ ಫ್ರೇಮ್ ಮಟರಿಯರ್ ಬಳಕೆ ಮಾಡಲಾಗಿದೆ. ಈ ತಂತ್ರಜ್ಞಾನ ಸದ್ಯ ಏರ್‌ಕ್ರಾಫ್ಟ್ ನಿರ್ಮಾಣದಲ್ಲಿ ಮಾತ್ರವೇ ಬಳಕೆ ಮಾಡಲಾಗುತ್ತಿದೆ.

ಬಿಡುಗಡೆಯಾದ ಕ್ರಾಸ್ ಓವರ್ ಟ್ರಾನ್ಷ್ ಒನ್ ಎಲೆಕ್ಟ್ರಿಕ್ ಬೈಕ್..!!

ಜೊತೆಗೆ ಅತ್ಯುತ್ತಮ ಮೈಲೇಜ್ ರೇಂಜ್ ಟ್ರಾನ್ಷ್ ಒನ್ ಇ-ಬೈಕ್‌ಗಳಲ್ಲಿ ಸ್ಯಾಮ್‌ಸಂಗ್ ಸೆಲ್ಸ್ ಪ್ರೇರಿತ ಲೀಥಿಯಂ ಅಯಾನ್ ಬ್ಯಾಟರಿ ಬಳಕೆ ಮಾಡಲಾಗಿದ್ದು, ಪ್ರತಿ ಚಾರ್ಜ್‌ಗೆ ಇವು ಗರಿಷ್ಠ 70 ರಿಂದ 85 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲವು.

ಬಿಡುಗಡೆಯಾದ ಕ್ರಾಸ್ ಓವರ್ ಟ್ರಾನ್ಷ್ ಒನ್ ಎಲೆಕ್ಟ್ರಿಕ್ ಬೈಕ್..!!

ಟ್ರಾನ್ಷ್ ಒನ್ ಎಲೆಕ್ಟ್ರಿಕ್ ಬೈಕ್‌ಗಳಲ್ಲಿ ಒದಗಿಸಲಾಗಿರುವ 'ತ್ರೊಟಲ್' ಮೂಡ್‌ನಲ್ಲಿ ಬೈಕ್ ಚಾಲನೆ ಮಾಡದಲ್ಲಿ ಪ್ರತಿ ಚಾರ್ಜ್‌ಗೆ ಕೇವಲ 50ಕಿ.ಮೀ ಮಾತ್ರ ಮೈಲೇಜ್ ದೊರಲಿದ್ದು, ಅದೇ 'ಗೇರ್ ಅಸಿಸ್ಟ್ ಮೂಡ್‌'ನಲ್ಲಿ ಚಾಲನೆ ಮಾಡಿದಲ್ಲಿ ಗರಿಷ್ಠವಾಗಿ 70ರಿಂದ 85 ಕಿ.ಮೀ ಮೈಲೇಜ್ ಗಿಟ್ಟಿಸಿಕೊಳ್ಳಬಹುದಂತೆ.

ಬಿಡುಗಡೆಯಾದ ಕ್ರಾಸ್ ಓವರ್ ಟ್ರಾನ್ಷ್ ಒನ್ ಎಲೆಕ್ಟ್ರಿಕ್ ಬೈಕ್..!!

ಬ್ಯಾಟರಿ ಸಾಮರ್ಥ್ಯ

ಟ್ರಾನ್ಷ್ ಸಂಸ್ಥೆಯು ಒನ್ ಎಲೆಕ್ಟ್ರಿಕ್ ಬೈಕ್‌ಗಳಲ್ಲಿ 36 ವೊಲ್ಟ್ಸ್ 13.6ಎಹೆಚ್ 500ವ್ಯಾಟ್ಸ್ ಪ್ರೇರಿತ ಲೈಟ್ ವೇಟ್ ಬ್ಯಾಟರಿ ಬಳಕೆ ಮಾಡಲಾಗಿದ್ದು, ಹಿಂಭಾಗದ ಚಕ್ರಕ್ಕೆ ಪ್ರತ್ಯೇಕವಾಗಿ ಎಲೆಕ್ಟ್ರಿಕ್ ಪವರ್ ಒದಗಿಸಲು 250ವ್ಯಾಟ್ಸ್ ಸಾಮರ್ಥ್ಯದ ಬ್ಯಾಟರಿ ಜೋಡಣೆಯಿದೆ.

ಬಿಡುಗಡೆಯಾದ ಕ್ರಾಸ್ ಓವರ್ ಟ್ರಾನ್ಷ್ ಒನ್ ಎಲೆಕ್ಟ್ರಿಕ್ ಬೈಕ್..!!

ಈ ಮೂಲಕ ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಟ್ರಾನ್ಷ್ ಒನ್ ಎಲೆಕ್ಟ್ರಿಕ್ ಬೈಕ್‌ಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಮೂರು ಎಲೆಕ್ಟ್ರಿಕ್ ಗೇರ್ಸ್ ಜೊತೆಗೆ 6-ಸ್ಪೀಡ್ ಶಿಮಾನೊ ಶಿಫ್ಟರ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಬಿಡುಗಡೆಯಾದ ಕ್ರಾಸ್ ಓವರ್ ಟ್ರಾನ್ಷ್ ಒನ್ ಎಲೆಕ್ಟ್ರಿಕ್ ಬೈಕ್..!!

ಸ್ಮಾರ್ಟ್ ಫೋನ್ ಕೆನೆಕ್ಟ್ ಮಾಡಬಹುದು..!

ಹೌದು, ಟ್ರಾನ್ಷ್ ಒನ್ ಇ-ಬೈಕ್‌ಗಳಲ್ಲಿ ಸ್ಮಾರ್ಟ್‌ಫೋನ್ ಕೆನೆಕ್ಟಿವಿಟಿ ಮಾಡಬಹುದಾಗಿದ್ದು, 'ಟಿ ಬೈಕ್' ಆ್ಯಪ್ ಮೂಲಕ ಬೈಕಿನ ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದಾಗಿದೆ. ಜೊತೆಗೆ ರಸ್ಟ್ ಪ್ರೂಫ್ ಟೆಕ್ನಾಲಜಿ ಬಳಕೆ ಇರುವುದು ಬೈಕ್ ದೀರ್ಘಕಾಲದ ಬಾಳಕೆಗೆ ಸಹಕಾರಿಯಾಗುತ್ತೆ.

ಬಿಡುಗಡೆಯಾದ ಕ್ರಾಸ್ ಓವರ್ ಟ್ರಾನ್ಷ್ ಒನ್ ಎಲೆಕ್ಟ್ರಿಕ್ ಬೈಕ್..!!

ಲಭ್ಯವಿರುವ ಬಣ್ಣಗಳು

ಟ್ರಾನ್ಷ್ ಒನ್ ಬೈಕ್‌ಗಳು ಸದ್ಯ ಮ್ಯಾಗ್ಮಾ ರೆಡ್ ಮತ್ತು ಪೆಸಿಫಿಕ್ ಬ್ಲ್ಯೂ ಬಣ್ಣದ ಆಯ್ಕೆಯನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬಣ್ಣಗಳ ಆಯ್ಕೆ ದೊರೆಲಿವೆ.

ಬಿಡುಗಡೆಯಾದ ಕ್ರಾಸ್ ಓವರ್ ಟ್ರಾನ್ಷ್ ಒನ್ ಎಲೆಕ್ಟ್ರಿಕ್ ಬೈಕ್..!!

ಎಲ್ಲೆಲ್ಲಿ ಖರೀದಿಗೆ ಲಭ್ಯ?

ಸದ್ಯ ಅಹಮದಾಬಾದ್, ಮುಂಬೈ, ಪುಣೆ, ಗೋವಾ, ಬೆಂಗಳೂರು, ದೆಹಲಿ, ಚೆನ್ನೈ, ಹೈದ್ರಾಬಾದ್, ಚಂಡೀಘಡ್‌ದಲ್ಲಿ ಮಾರಾಟ ಮಳಿಗೆಗಳನ್ನು ಹೊಂದಿರುವ ಟ್ರಾನ್ಷ್ ಸಂಸ್ಥೆಯು ಆನ್‌ಲೈನ್ ಮೂಲಕ ಎಲೆಕ್ಟ್ರಿಕ್ ಬೈಕ್ ಖರೀದಿಗೆ ಮುಂಗಡ ಬುಕ್ಕಿಂಗ್ ತೆಗೆದುಕೊಳ್ಳುತ್ತಿದೆ.

ಬಿಡುಗಡೆಯಾದ ಕ್ರಾಸ್ ಓವರ್ ಟ್ರಾನ್ಷ್ ಒನ್ ಎಲೆಕ್ಟ್ರಿಕ್ ಬೈಕ್..!!

ಈಗಾಗಲೇ ಟ್ರಾನ್ಷ್ ಒನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೂ ಮುನ್ನಲೇ ಮೊದಲ ಬ್ಯಾಚ್ ಬುಕ್ಕಿಂಗ್ ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಮುಂದಿನ ವಾರದಿಂದಲೇ ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ಹೊಸ ಎಲೆಕ್ಟ್ರಿಕ್ ಬೈಕ್‌ಗಳನ್ನು ವಿತರಣೆ ಆರಂಭವಾಗಲಿದೆ. ನೀವು ಕೂಡಾ ಈ ಬೈಕ್ ಅನ್ನು ಖರೀದಿ ಮಾಡುವುದಾದರೇ ಸ್ಮಾರ್ಟಾನ್ ವೆಬ್‌ಸೈಟ್‌ಗೆ ಭೇಟಿ ನೀಡಿ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.

Most Read Articles

Kannada
Read more on electric bike evergreen
English summary
Tronx One Electric Bike Launched In India; Priced At Rs 49,999.
Story first published: Saturday, July 14, 2018, 13:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X