ವಿನೂತನ ಎಕ್ಸಾಸ್ಟ್ ಸೌಲಭ್ಯದೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಆರ್310

ವಿನೂತನ ಎಕ್ಸಾಸ್ಟ್ ಸೌಲಭ್ಯದೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಆರ್310

By Praveen Sannamani

ದೇಶಿಯ ಮಾರುಕಟ್ಟೆಯಲ್ಲಿನ ಪ್ರವೇಶ ಮಟ್ಟದ ಕ್ರೀಡಾ ಬೈಕ್‌ಗಳ ವಿಭಾಗದಲ್ಲಿ ಭಾರೀ ಸದ್ದು ಮಾಡುತ್ತಿರುವ ಟಿವಿಎಸ್ ಅಪಾಚೆ ಆರ್‌ಆರ್ ಬೈಕ್‌ಗಳು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಅಕ್ರೊಪ್ರೊವಿಕ್ ಎನ್ನುವ ಸಂಸ್ಥೆಯೊಂದುವ ಅಪಾಚೆ ಆರ್‌ಆರ್310 ಬೈಕ್‌ಗಳಿಗಾಗಿಯೇ ವಿನೂತನ ವಿನ್ಯಾಸದ ಎಕ್ಸಾಸ್ಟ್ ಮಾದರಿಗಳನ್ನು ಬಿಡುಗಡೆಗೊಳಿಸಿದೆ.

ವಿನೂತನ ಎಕ್ಸಾಸ್ಟ್ ಸೌಲಭ್ಯದೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಆರ್310

ಅಪಾಚೆ ಆರ್‌ಆರ್310 ಬೈಕ್‌ಗಳು ಎಂಜಿನ್ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಈ ಹೊಸ ಮಾದರಿಯ ಎಕ್ಸಾಸ್ಟ್‌ಗಳನ್ನು ಅಭಿವೃದ್ಧಿ ಮಾಡಿದ್ದು, ಟಿವಿಎಸ್ ಸಂಸ್ಥೆಯು ಬಳಕೆ ಮಾಡಿರುವ ಎಕ್ಸಾಸ್ಟ್‌ಗಳಿಂತಲೂ ತೂಕದಲ್ಲಿ ಹಗುರವಾಗಿರುವ ಅಕ್ರೊಪ್ರೊವಿಕ್ ಎಕ್ಸಾಸ್ಟ್ ಹಾರ್ಸ್ ಪವರ್ ಮತ್ತು ಟಾರ್ಕ್ ಪವರ್ ಹೆಚ್ಚಿಸುವ ಸಹಕಾರಿಯಾಗುತ್ತವೆ.

ವಿನೂತನ ಎಕ್ಸಾಸ್ಟ್ ಸೌಲಭ್ಯದೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಆರ್310

ಅಪಾಚೆ ಆರ್‌ಆರ್310 ಬೈಕ್‌ಗಳಲ್ಲ ಟಿವಿಎಸ್ ಸಂಸ್ಥೆಯು ಬಳಕೆ ಮಾಡಿರುವ ಎಕ್ಸಾಸ್ಟ್ ಮಾದರಿಗಳಿಂತ 3.5 ಕೆ.ಜಿಯಿಂದ 4.5 ಕೆ.ಜಿ ತೂಕ ಕಡಿತಗೊಳ್ಳಲಿದ್ದು, ಅಕ್ರೊಪ್ರೊವಿಕ್ ಸಂಸ್ಥೆಯು ಬಿಡುಗಡೆಗೊಳಿಸಿರುವ ಹೊಸ ಎಕ್ಸಾಸ್ಟ್‌ಗಳು ಕಾರ್ಬನ್ ಮತ್ತು ಸ್ಟೈನ್‌ಲೆಸ್ ಸ್ಟೀಲ್ ವೈಶಿಷ್ಟ್ಯತೆಯೊಂದಿಗೆ ಸಿದ್ದಗೊಳಿಸಲಾಗಿದೆ.

ವಿನೂತನ ಎಕ್ಸಾಸ್ಟ್ ಸೌಲಭ್ಯದೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಆರ್310

ಮಾಹಿತಿಗಳ ಪ್ರಕಾರ ಅಕ್ರೊಪ್ರೊವಿಕ್ ಸಂಸ್ಥೆಯು ಬಿಡುಗಡೆಗೊಳಿಸಿರುವ ಹೊಸ ಎಕ್ಸಾಸ್ಟ್‌ಗಳನ್ನು ಬಳಕೆ ಮಾಡಿದ್ದಲ್ಲಿ ಅಪಾಚೆ ಆರ್‌ಆರ್310 ಬೈಕ್‌ಗಳು 2.4-ಬಿಎಚ್‌ಪಿ ಮತ್ತು 2.7-ಎನ್ಎಂ ಟಾರ್ಕ್ ಹೆಚ್ಚುವರಿಯಾಗಿ ಒದಗಿಬಲ್ಲವು ಎನ್ನಲಾಗಿದೆ.

ವಿನೂತನ ಎಕ್ಸಾಸ್ಟ್ ಸೌಲಭ್ಯದೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಆರ್310

ಬಿಎಂಡಬ್ಲ್ಯು ಇಂಜಿನಿಯರಿಂಗ್‌ನ 313 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್ ಕೋಲ್ಡ್ ಎಂಜಿನ್ ಆಯ್ಕೆಯನ್ನು ಈ ಹೊಸ ಅಪಾಚೆ ಆರ್‌ಆರ್310 ಬೈಕ್ ಹೊಂದಿದ್ದು, ಇದೇ ಎಂಜಿನ್ ಆಯ್ಕೆಯನ್ನು ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕುಗಳಲ್ಲೂ ಸಹ ನೀಡಲಾಗಿದೆ.

ವಿನೂತನ ಎಕ್ಸಾಸ್ಟ್ ಸೌಲಭ್ಯದೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಆರ್310

ಹಿಗಾಗಿಯೇ ಅಪಾಚೆ ಆರ್‌ಆರ್310 ಬೈಕ್ ಕೇವಲ 7.17 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ಪಡೆದುಕೊಳ್ಳುವ ಶಕ್ತಿ ಹೊಂದಿದೆ. ಇನ್ನು ಈ ಬೈಕ್ ಗಂಟೆಗೆ ಗರಿಷ್ಠ 160 ಕಿ.ಮೀ ವೇಗದಲ್ಲಿ ಚಲಾಯಿಸಲಿದೆ. ಈ ಬೈಕ್ 169.5 ಕಿ.ಗ್ರಾಂ ತೂಗುತ್ತದೆ. ಇನ್ನು ಮಿಚೆಲಿನ್ ಪೈಲಟ್ ಸ್ಟ್ರೀಟ್ ರೇಡಿಯಲ್ ಟೈರುಗಳನ್ನು ಅಳವಡಿಸಲಾಗಿದೆ.

ವಿನೂತನ ಎಕ್ಸಾಸ್ಟ್ ಸೌಲಭ್ಯದೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಆರ್310

ಅಪಾಚೆ ಆರ್‌ಆರ್310 ಬೈಕ್ 313 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಆಯ್ಕೆಯೆಯೊಂದಿಗೆ ಬಿಡುಗಡೆಗೊಂಡಿದ್ದು, ಈ ಎಂಜಿನ್ 28 ಎನ್ಎಂ ತಿರುಗುಬಲದಲ್ಲಿ 34 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ ಹಾಗು 6-ಸ್ಪೀಡ್ ಗೇರ್ ಬಾಕ್ಸ್ ಸೌಲಭ್ಯ ಪಡೆದುಕೊಂಡಿದೆ.

ವಿನೂತನ ಎಕ್ಸಾಸ್ಟ್ ಸೌಲಭ್ಯದೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಆರ್310

ಟಿವಿಎಸ್ ಅಪಾಚೆ ಆರ್‌ಆರ್310 ಮೋಟಾರ್ ಸೈಕಲ್ 'ಲೈಟ್ ವೆಯಿಟ್ ಟ್ರೆಲ್ಲಿಸ್ ಫ್ರೇಮ್' ಆಧಾರದ ಮೇಲೆ ನಿರ್ಮಾಣವಾಗಿದೆ ಮತ್ತು ಕಯಾಬಾನಿಂದ ಟ್ಯೂನ್ ಮಾಡಲಾಗಿರುವ ಸಸ್ಪೆಷನ್ ನೋಡಬಹುದಾಗಿದೆ.

ವಿನೂತನ ಎಕ್ಸಾಸ್ಟ್ ಸೌಲಭ್ಯದೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಆರ್310

ಆರ್‌ಟಿಆರ್ ಹೆಸರು ಸ್ಪೋರ್ಟ್ಸ್ ಬೈಕ್ ಪ್ರತಿನಿಧಿಸಲಿದೆ ಮತ್ತು ಆರ್‌ಆರ್ ಹೆಸರು ಸೂಪರ್ ಸ್ಪೋರ್ಟ್ ಪ್ರತಿನಿಧಿಸಲಿದೆ. ಸದ್ಯ ಈ ಟಿವಿಎಸ್‌ನ ಪ್ರೀಮಿಯಂ ಪೋರ್ಟ್‌ಫೋಲಿಯೋ ವಿಭಾಗವು ಸ್ಪೋರ್ಟ್ಸ್, ಟೂರಿಂಗ್ ಮತ್ತು ಹೆರಿಟೇಜ್ ಮಾದರಿಗಳನ್ನು ಒಳಗೊಂಡಿದೆ.

ವಿನೂತನ ಎಕ್ಸಾಸ್ಟ್ ಸೌಲಭ್ಯದೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಆರ್310

ಇನ್ನು ಕಳೆದ ಡಿಸೆಂಬರ್‌ನಲ್ಲಿ ಅಪಾಚೆ ಆರ್‌ಆರ್310 ಬೈಕ್‌ಗಳನ್ನು ಬಿಡುಗಡೆ ಮಾಡಿದ್ದ ಟಿವಿಎಸ್ ಸಂಸ್ಥೆಯು ಇದೀಗ ಹೊಸ ಬೈಕ್‌ಗಳ ಬೆಲೆಯಲ್ಲಿ ಭಾರೀ ಬದಲಾವಣೆ ತಂದಿದೆ. ಈ ಹಿಂದೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.2.05 ಲಕ್ಷ ಬೆಲೆ ಹೊಂದಿದ್ದ ಆರ್‌ಆರ್310 ಬೈಕ್‌ಗಳ ಬೆಲೆಯನ್ನು ಇದೀಗ ಹೆಚ್ಚುವರಿಯಾಗಿ ರೂ.18 ಸಾವಿರ ಏರಿಕೆ ಮಾಡಲಾಗಿದೆ.

ವಿನೂತನ ಎಕ್ಸಾಸ್ಟ್ ಸೌಲಭ್ಯದೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಆರ್310

ಇದಲ್ಲದೇ ಕೆಟಿಎಂ ಆರ್‌ಸಿ390, ನಿಂಜಾ 300, ಬೆನೆಲ್ಲಿ 302 ಆರ್ ಮತ್ತು ಬಜಾಜ್ ಡೊಮಿನಾರ್ 400 ಬೈಕುಗಳಿಗೆ ತೀವ್ರ ಪೈಪೋಟಿ ನೀಡುತ್ತಿದ್ದು, ಇದರ ಮಧ್ಯೆ ಅಕ್ರೊಪ್ರೊವಿಕ್ ಸಂಸ್ಥೆಯು ಆಸಕ್ತ ಗ್ರಾಹಕರಿಗಾಗಿ ಹೊಸ ಮಾದರಿಯ ಎಕ್ಸಾಸ್ಟ್‌ಗಳನ್ನು ಅಭಿವೃದ್ಧಿ ಮಾಡಿರುವುದು ಮತ್ತೊಂದು ವಿಶೇಷ.

Most Read Articles

Kannada
Read more on apache race
English summary
Akrapovic Launches Racing Exhaust System For The TVS Apache RR 310.
Story first published: Monday, July 16, 2018, 13:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X