ಫಸ್ಟ್ ಲುಕ್ ರಿವ್ಯೂ- ಹೊಸ ಭರವಸೆ ಹುಟ್ಟುಹಾಕಿದ ಟಿವಿಎಸ್ ಎನ್‌ಟಾರ್ಕ್ 125

ಭಾರತೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ನೀರಿಕ್ಷೆ ಹುಟ್ಟುಹಾಕಿದ್ದ ಟಿವಿಎಸ್ 125 ಸಿಸಿ ಹೊಸ ಸ್ಕೂಟರ್ ಭರ್ಜರಿಯಾಗಿ ಬಿಡುಗಡೆಯಾಗಿದ್ದು, ಟಿವಿಎಸ್ ಬಿಡುಗಡೆ ಮಾಡಿರುವ ಮೊದಲ 125ಸಿಸಿ ಸ್ಕೂಟರ್ ಕುರಿತಾದ ಫಸ್ಟ್ ಲುಕ್ ರಿವ್ಯೂ ಇಲ್ಲಿ ನೀಡಲಾಗಿದೆ.

By Rahul

125ಸಿಸಿ ಸ್ಕೂಟರ್ ಮಾದರಿಗಳಲ್ಲೇ ವಿನೂತನ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಎನ್ ಟಾರ್ಕ್125 ಸ್ಕೂಟರ್‌ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 58,750 ಬೆಲೆ ಪಡೆದುಕೊಂಡಿದ್ದು, ಹೊಸ ಸ್ಕೂಟರ್‌ನಲ್ಲಿ ಸ್ಮಾರ್ಟ್ ಕನೆಕ್ವಿಟಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಫಸ್ಟ್ ಲುಕ್ ರಿವ್ಯೂ- ಹೊಸ ಭರವಸೆ ಹುಟ್ಟುಹಾಕಿದ ಟಿವಿಎಸ್ ಎನ್‌ಟಾರ್ಕ್ 125

ಟಿವಿಎಸ್ ಎನ್‌ಟಾರ್ಕ್ 125 ಮಾದರಿಯು ಗ್ರಾಫೈಟ್ ಪರಿಕಲ್ಪನೆಯ ಉತ್ಪಾದನಾ ಆವೃತ್ತಿಯಾಗಿದ್ದು, 2014 ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿತ್ತು. ಆದರೇ ಕೊನೆಯ ಹಂತದಲ್ಲಿ ಗ್ರಾಫೈಟ್ ಬದಲಾಗಿ ಎನ್‌ಟಾರ್ಕ್ ಪರಿಚಯಿಸಿದೆ.

ಫಸ್ಟ್ ಲುಕ್ ರಿವ್ಯೂ- ಹೊಸ ಭರವಸೆ ಹುಟ್ಟುಹಾಕಿದ ಟಿವಿಎಸ್ ಎನ್‌ಟಾರ್ಕ್ 125

ಟಿವಿಎಸ್ ಎನ್‌ಟಾರ್ಕ್ 125 ದೇಶದಲ್ಲಿ ಯುವ ಜನತೆಯನ್ನು ಗುರಿಯಾಗಿಸಿ ಅಭಿವೃದ್ಧಿಗೊಳಿಸಲಾಗಿದ್ದು, ಆರಾಮದಾಯಕ ಸ್ಕೂಟರ್ ಚಾಲನೆಗಾಗಿ ಸುಲಭ ಮತ್ತು ಸುರಕ್ಷಾ ಸಾಧಾನಗಳನ್ನು ನೀಡಲಾಗಿದೆ.

ಫಸ್ಟ್ ಲುಕ್ ರಿವ್ಯೂ- ಹೊಸ ಭರವಸೆ ಹುಟ್ಟುಹಾಕಿದ ಟಿವಿಎಸ್ ಎನ್‌ಟಾರ್ಕ್ 125

ಎನ್‌ಟಾರ್ಕ್ 125 ವಿನ್ಯಾಸ

ಹೆಸರಲ್ಲೇ ಸೂಚಿಸಿರುವಂತೆ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್‌ಗಳು ಆಕ್ರಮಣಕಾರಿ ಕ್ರೀಡಾ ವಿನ್ಯಾಸ ಪಡೆದುಕೊಂಡಿದ್ದು, ಇದರ ವಿನ್ಯಾಸವನ್ನು ಯುದ್ಧ ವಿಮಾನಗಳಿಂದ ಸ್ಫೂರ್ತಿ ಪಡೆದು ಹಾಗೂ ಟಿವಿಎಸ್ ರೇಸಿಂಗ್ ತಂಡದ ನೆರವಿನೊಂದಿಗೆ ರಚಿಸಲಾಗಿದೆ.

ಫಸ್ಟ್ ಲುಕ್ ರಿವ್ಯೂ- ಹೊಸ ಭರವಸೆ ಹುಟ್ಟುಹಾಕಿದ ಟಿವಿಎಸ್ ಎನ್‌ಟಾರ್ಕ್ 125

ಒಟ್ಟಾರೆ ಸ್ಕೂಟರ್‌ನ ಆಯಾಮಗಳು ಮತ್ತು ಬೇಸಿಕ್ ಡಿಸೈನ್ ಟಿವಿಎಸ್ ಗ್ರಾಫೈಟ್ ಕಾನ್ಸೆಪ್ಟ್ ಆಗಿದ್ದು, ವಿಭಿನ್ನವಾದ ಎಲ್ಇಡಿ ಡೇ ಲೈಟ್, ಎಲ್ಇಡಿ ಟೈಲ್ ಲ್ಯಾಂಪ್ ಡಿಸೈನ್, ಸ್ಟಬ್ಬಿ ಮಫ್ಲರ್ನಿಂದ ಎದ್ದು ಕಾಣುತ್ತದೆ.

ಫಸ್ಟ್ ಲುಕ್ ರಿವ್ಯೂ- ಹೊಸ ಭರವಸೆ ಹುಟ್ಟುಹಾಕಿದ ಟಿವಿಎಸ್ ಎನ್‌ಟಾರ್ಕ್ 125

ಎಂಜಿನ್ ಸಾಮರ್ಥ್ಯ

ಟಿವಿಎಸ್ ಎನ್‌ಟಾರ್ಕ್ 125ಸಿಸಿ ಸಿವಿಟಿಐ ಯುನಿಟ್ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಹೊಂದಿದ್ದು, 9.27 ಬಿಹೆಚ್ ಪಿ ಮತ್ತು 10.4ಎನ್ಎಂ ಟಾರ್ಕ್ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಅಲ್ಲದೆ ಇದು ಗಂಟೆಗೆ 95 ಕಿಲೋಮೀಟರ್ ಚಲಿಸುವ ಟಾಪ್ ಸ್ಪೀಡ್‌ನ್ನು ಹೊಂದಿದೆ.

ಫಸ್ಟ್ ಲುಕ್ ರಿವ್ಯೂ- ಹೊಸ ಭರವಸೆ ಹುಟ್ಟುಹಾಕಿದ ಟಿವಿಎಸ್ ಎನ್‌ಟಾರ್ಕ್ 125

ಜೊತೆಗೆ ಆಟೋ ಚೋಕ್, ಇಂಟೆಲಿಜೆಂಟ್ ಇಗ್ನಿಷನ್ ಸಿಸ್ಟಂ, ಸ್ಪ್ಲಿಟ್ ಟೈಪ್ ಇಂಟೇಕ್ ಡಿಸೈನ್, ಫೋಮ್ ಆನ್ ಪೇಪರ್ ಏರ್ ಫಿಲ್ಟರ್ ಮತ್ತು ವಿಶೇಷವಾದ ಆಯಿಲ್ ಕೂಲಿಂಗ್ ಸಿಸ್ಟಂ, ಕಂಬಿಶನ್ ಚೆಂಬರ್ ಸಿಸ್ಟಂ ಅನ್ನು ಸೇರಿಸಲಾಗಿದೆ.

ಫಸ್ಟ್ ಲುಕ್ ರಿವ್ಯೂ- ಹೊಸ ಭರವಸೆ ಹುಟ್ಟುಹಾಕಿದ ಟಿವಿಎಸ್ ಎನ್‌ಟಾರ್ಕ್ 125

ಟಿವಿಎಸ್ ಎನ್‌ಟಾರ್ಕ್ 125 ಭಾರತದ ಮೊದಲ ಸ್ಮಾರ್ಟ್ ಕನೆಕ್ಟಿವಿಟಿ ಹೊಂದಿರುವ ಸ್ಕೂಟರಾಗಿದ್ದು, ಫೋನಿನೊಂದಿಗೆ ಬ್ಲೂಟೂಥ್ ಕನೆಕ್ಟ್ ಮಾಡಬಹುದಾಗಿದ್ದು, ಹಾಗೆಯೇ ನ್ಯಾವಿಗೇಶನ್ ಅಸಿಸ್ಟ್ ಅನ್ನು ಕೂಡಾ ಹೊಂದಿದೆ.

ಫಸ್ಟ್ ಲುಕ್ ರಿವ್ಯೂ- ಹೊಸ ಭರವಸೆ ಹುಟ್ಟುಹಾಕಿದ ಟಿವಿಎಸ್ ಎನ್‌ಟಾರ್ಕ್ 125

ಇದುವರೆಗೂ ಯಾವುದೇ ಸ್ಕೂಟರ್‌ನಲ್ಲಿಯು ಕಾಣದಂತಹ ಎಲ್ಇಡಿ ಸ್ಕ್ರೀನ್‌ಗಳು ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್‌ನಲ್ಲಿ ಸೇರಿಸಲಾಗಿದ್ದು, 55 ವಿವಿಧ ರೀತಿಯ ಫೀಚರ್ಸ್‌ಗಳನ್ನು ನೀಡಲಾಗಿದೆ.

ಫಸ್ಟ್ ಲುಕ್ ರಿವ್ಯೂ- ಹೊಸ ಭರವಸೆ ಹುಟ್ಟುಹಾಕಿದ ಟಿವಿಎಸ್ ಎನ್‌ಟಾರ್ಕ್ 125

ಸ್ಪೀಡ್ ರೆಕಾರ್ಡರ್, ಲ್ಯಾಪ್ ಟೈಮರ್, ಫೋನ್ ಬ್ಯಾಟರಿ ಶಕ್ತಿ ಸೂಚಕ, ಹಿಂದೆ ಪಾರ್ಕ್ ಮಾಡಿರುವ ಜಾಗ, ಆವೆರೇಜ್ ಸ್ಪೀಡ್ ಹಾಗೆಯೇ ಕ್ರೀಡೆ ಮತ್ತು ಬೀದಿಗಳಂತಹ ಅನೇಕ ಸವಾರಿ ಅಂಕಿ ಅಂಶಗಳ ವಿಧಾನಗಳನ್ನು ಒಳಗೊಂಡಿದೆ.

ಫಸ್ಟ್ ಲುಕ್ ರಿವ್ಯೂ- ಹೊಸ ಭರವಸೆ ಹುಟ್ಟುಹಾಕಿದ ಟಿವಿಎಸ್ ಎನ್‌ಟಾರ್ಕ್ 125

ಅದಾಗ್ಯೂ ಈ ಸ್ಕೂಟರ್ ಬ್ಲೂಟೂಥ್ ನೊಂದಿಗೆ ಕನೆಕ್ಟ್ ಆಗಿರುವುದರಿಂದ Incoming ಕರೆಗಳು ಮತ್ತು ಸಂದೇಶಗಳು ಕೂಡ ಇನ್ಪೋಟೈನ್‌ಮೆಂಟ್ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುವುದಲ್ಲದೇ, Incoming ಕರೆಗಳಿಗೆ ನೀವು ವಾಹನ ಚಾಲನೆಯಲ್ಲಿದ್ದಿರಿ ಎಂಬ ಆಟೋ ರಿಪ್ಲೆ ಸಂದೇಶವನ್ನು ಕೂಡ ಕಳುಹಿಸುತ್ತದೆ.

ಫಸ್ಟ್ ಲುಕ್ ರಿವ್ಯೂ- ಹೊಸ ಭರವಸೆ ಹುಟ್ಟುಹಾಕಿದ ಟಿವಿಎಸ್ ಎನ್‌ಟಾರ್ಕ್ 125

ಹೊರಗಡೆ ಪ್ಯುಯಲ್ ಟ್ಯಾಂಕ್, ಎಂಜಿನ್ ಕಿಲ್ ಸ್ವಿಚ್, ಪಾಸ್ ಬೈ ಸ್ವಿಚ್, ಪಾರ್ಕಿಂಗ್ ಬ್ರೇಕ್ಸ್, ಡ್ಯುಯಲ್ ಸೈಡ್ ಹ್ಯಾಂಡಲ್ ಲಾಕ್, ಯುಎಸ್ ಬಿ ಫೋನ್ ಚಾರ್ಜರ್ ಮತ್ತು 22 ಲೀಟರ್ ಅಂಡರ್ ಸೀಟ್ ಸ್ಪೆಸ್ ಹೊಂದಿದೆ.

ಫಸ್ಟ್ ಲುಕ್ ರಿವ್ಯೂ- ಹೊಸ ಭರವಸೆ ಹುಟ್ಟುಹಾಕಿದ ಟಿವಿಎಸ್ ಎನ್‌ಟಾರ್ಕ್ 125

ಟಿವಿಎಸ್ ಎನ್‌ಟಾರ್ಕ್ 125 ಗ್ರಿಪ್ಪಿ 110/80-12 ಗಾತ್ರದ ಟ್ಯೂಬ್ ಲೆಸ್ ಟೈರ್ 12 ಇಂಚಿನ ಅಲಾಯ್ ಚಕ್ರಗಳನ್ನು ಹೊಂದಿದ್ದು, ಸೆಗ್ಮೆಂಟ್ ಫರ್ಸ್ಟ್ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ಪಡೆದುಕೊಂಡಿದೆ.

ಫಸ್ಟ್ ಲುಕ್ ರಿವ್ಯೂ- ಹೊಸ ಭರವಸೆ ಹುಟ್ಟುಹಾಕಿದ ಟಿವಿಎಸ್ ಎನ್‌ಟಾರ್ಕ್ 125

ಲಭ್ಯವಿರುವ ಬಣ್ಣಗಳು

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್‌ಗಳು ಹಳದಿ, ಹಸಿರು ಮತ್ತು ಬಿಳಿ ಬಣ್ಣಗಳ ಜೊತೆ ಮ್ಯಾಟ್ ಫಿನಿಶ್ ನೊಂದಿಗೆ ಲಭ್ಯವಿರಲಿದೆ.

ಫಸ್ಟ್ ಲುಕ್ ರಿವ್ಯೂ- ಹೊಸ ಭರವಸೆ ಹುಟ್ಟುಹಾಕಿದ ಟಿವಿಎಸ್ ಎನ್‌ಟಾರ್ಕ್ 125

ಭಾರತದಲ್ಲಿ ಟಿವಿಎಸ್ ತನ್ನ ಮೊದಲ ಬಾರಿಗೆ ಹಲವಾರು ವಿಶೇಷ ಮತ್ತು ವೈಶಿಷ್ಟ್ಯಗಳನ್ನು ಹೊಂದಿರುವ 125ಸಿಸಿ ಸ್ಕೂಟರ್‌ನ್ನು ಪರಿಚಯಿಸುವುದರ ಮೂಲಕ 125cc ಸ್ಕೂಟರ್ ವಿಭಾಗದಲ್ಲಿ ಅಗ್ರ ಸ್ಥಾನದತ್ತ ಮುನ್ನುಗ್ಗುತ್ತಿದ್ದು, ಹೊಂಡಾ ಗ್ರಾಜಿಯಾ, ಎಪ್ರಿಲಿಯಾ ಎಸ್ಆರ್ 125, ಹೀರೋ 125 ಮತ್ತು ಮ್ಯಾಸ್ಟ್ರೋ 125 ಸ್ಕೂಟರ್‌ಗಳಿಗೆ ತೀವ್ರ ಪ್ರತಿಸ್ಪರ್ಧಿಯಾಗಲಿದೆ.

Most Read Articles

Kannada
Read more on auto expo 2018 tvs motor
English summary
TVS NTorq 125 First Look Review - A Sporty 125cc Scooter Segment Debut For TVS.
Story first published: Wednesday, February 14, 2018, 16:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X