ಫಸ್ಟ್ ರೈಡ್ ರಿವ್ಯೂ- ಬ್ಲೂಟೂತ್‌ನೊಂದಿಗೆ ಸ್ಮಾರ್ಟ್ ಆಗಿ ಬಂದ ಟಿವಿಎಸ್ ಎನ್‌ಟಾರ್ಕ್ 125

ಭಾರತೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ನೀರಿಕ್ಷೆ ಹುಟ್ಟುಹಾಕಿದ್ದ ಟಿವಿಎಸ್ 125 ಸಿಸಿ ಹೊಸ ಸ್ಕೂಟರ್ ಎನ್‌ಟಾರ್ಕ್ 125 ಬಿಡುಗಡೆಯಾಗಿದ್ದು, ಸುಧಾರಿತ ತಂತ್ರಜ್ಞಾನ, ಪವರ್ ಫುಲ್ ಎಂಜಿನ್ ಹೊಂದಿರುವ ಹೊಸ ಸ್ಕೂಟರಿನ ಫಸ್ಟ್ ರೈಡ್ ರಿವ್ಯೂ ಇಲ್ಲಿದೆ

By Praveen

ಭಾರತೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ನೀರಿಕ್ಷೆ ಹುಟ್ಟುಹಾಕಿದ್ದ ಟಿವಿಎಸ್ 125 ಸಿಸಿ ಹೊಸ ಸ್ಕೂಟರ್ ಎನ್‌ಟಾರ್ಕ್ 125 ಬಿಡುಗಡೆಯಾಗಿದ್ದು, ಸುಧಾರಿತ ತಂತ್ರಜ್ಞಾನ, ಪವರ್ ಫುಲ್ ಎಂಜಿನ್ ಹೊಂದಿರುವ ಹೊಸ ಸ್ಕೂಟರಿನ ಫಸ್ಟ್ ರೈಡ್ ರಿವ್ಯೂ ಇಲ್ಲಿದೆ ನೋಡಿ.

ಫಸ್ಟ್ ರೈಡ್ ರಿವ್ಯೂ- ಬ್ಲೂಟೂತ್‌ನೊಂದಿಗೆ ಸ್ಮಾರ್ಟ್ ಆಗಿ ಬಂದ ಟಿವಿಎಸ್ ಎನ್‌ಟಾರ್ಕ್ 125

ಈ ಹಿಂದೆ 2014ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಗ್ರಾಫೈಟ್ ಸ್ಪೋರ್ಟಿ ಸ್ಕೂಟರ್ ಕಾನ್ಸೆಪ್ಟ್ ಪ್ರದರ್ಶನ ಮಾಡಿದ್ದ ಟಿವಿಎಸ್ ಸಂಸ್ಥೆಯು ಇದೀಗ ಅದೇ ಮಾದರಿಯನ್ನು ಎನ್‌ಟಾರ್ಕ್ 125 ಹೆಸರಿನಲ್ಲಿ ಬಿಡುಗಡೆಗೊಳಿಸಿದ್ದು, ಅವಧಿಗೂ ಮುನ್ನವೇ ಹೊಸ ಸ್ಕೂಟರ್ ಅನಾವರಣಗೊಳಿಸಿರುವುದು ಹಲವು ವಿಶೇಷಗಳಿಗೆ ಕಾರಣವಾಗಿದೆ.

ಫಸ್ಟ್ ರೈಡ್ ರಿವ್ಯೂ- ಬ್ಲೂಟೂತ್‌ನೊಂದಿಗೆ ಸ್ಮಾರ್ಟ್ ಆಗಿ ಬಂದ ಟಿವಿಎಸ್ ಎನ್‌ಟಾರ್ಕ್ 125

ಹೆಸರಲ್ಲೇ ಸೂಚಿಸಿರುವಂತೆ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್‌ಗಳು ಆಕ್ರಮಣಕಾರಿ ಕ್ರೀಡಾ ವಿನ್ಯಾಸ ಪಡೆದುಕೊಂಡಿದ್ದು, ಇದರ ವಿನ್ಯಾಸವನ್ನು ಯುದ್ಧ ವಿಮಾನಗಳಿಂದ ಸ್ಫೂರ್ತಿ ಪಡೆದು ಹಾಗೂ ಟಿವಿಎಸ್ ರೇಸಿಂಗ್ ತಂಡದ ನೆರವಿನೊಂದಿಗೆ ರಚಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ- ಬ್ಲೂಟೂತ್‌ನೊಂದಿಗೆ ಸ್ಮಾರ್ಟ್ ಆಗಿ ಬಂದ ಟಿವಿಎಸ್ ಎನ್‌ಟಾರ್ಕ್ 125

ಈ ಮೂಲಕ ಹೆಚ್ಚು ಸಾಮರ್ಥ್ಯದ 125ಸಿಸಿ ಸ್ಕೂಟರ್ ವಿಭಾಗದಲ್ಲಿ ಮತ್ತಷ್ಟು ಪೈಪೋಟಿಗೆ ವೇದಿಕೆ ಸೃಷ್ಟಿಸಿದ್ದು, ರೇಸ್ ಟ್ರ್ಯಾಕ್‌ ಕೌಶಲ್ಯಗಳನ್ನು ಹೊಸ ಎನ್‌ಟಾರ್ಕ್ 125 ಸ್ಕೂಟರ್ ಅಭಿವೃದ್ಧಿಯಲ್ಲಿ ಬಳಕೆ ಮಾಡಲಾಗಿದೆ.

ಫಸ್ಟ್ ರೈಡ್ ರಿವ್ಯೂ- ಬ್ಲೂಟೂತ್‌ನೊಂದಿಗೆ ಸ್ಮಾರ್ಟ್ ಆಗಿ ಬಂದ ಟಿವಿಎಸ್ ಎನ್‌ಟಾರ್ಕ್ 125

ಹೀಗಾಗಿ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರಿನ ಪ್ರಮುಖ ಆಕರ್ಷಣೆಯೆಂದರೆ ಇದರ ಆಟೋಮ್ಯಾಟೆಡ್ ಮ್ಯಾನುವಲ್ ಗೇರ್ ಬಾಕ್ಸ್ (ಕ್ಲಚ್ ರಹಿತ ಮ್ಯಾನುವಲ್ ಟ್ರಾನ್ಸ್‌ಮಿಷನ್) ಇದು ಪ್ಯಾಡಲ್ ಶಿಫ್ಟರ್‌ನಿಂದ ನಿರ್ವಹಿಸಲಿದೆ.

ಫಸ್ಟ್ ರೈಡ್ ರಿವ್ಯೂ- ಬ್ಲೂಟೂತ್‌ನೊಂದಿಗೆ ಸ್ಮಾರ್ಟ್ ಆಗಿ ಬಂದ ಟಿವಿಎಸ್ ಎನ್‌ಟಾರ್ಕ್ 125

ಇನ್ನು ಮುಂಭಾಗದಲ್ಲಿ 30 ಎಂಎಂ ಟೆಲಿಸ್ಕಾಪಿಕ್ ಸಸ್ಷೆಷನ್ ಹಾಗೆಯೇ ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಡ್ಯಾಂಪರ್ ಇರಲಿದ್ದು, 22 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೊರೇಜ್ ಪಡೆದುಕೊಂಡಿದೆ.

ಫಸ್ಟ್ ರೈಡ್ ರಿವ್ಯೂ- ಬ್ಲೂಟೂತ್‌ನೊಂದಿಗೆ ಸ್ಮಾರ್ಟ್ ಆಗಿ ಬಂದ ಟಿವಿಎಸ್ ಎನ್‌ಟಾರ್ಕ್ 125

ಎಂಜಿನ್ ಸಾಮರ್ಥ್ಯ

ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯು ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ 124.79 ಸಿವಿಐಟಿ ರೆವ್ ಎಂಜಿನ್ ಹೊಂದಿದ್ದು, 9.27-ಬಿಎಚ್‌ಪಿ ಮತ್ತು 10.4-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಫಸ್ಟ್ ರೈಡ್ ರಿವ್ಯೂ- ಬ್ಲೂಟೂತ್‌ನೊಂದಿಗೆ ಸ್ಮಾರ್ಟ್ ಆಗಿ ಬಂದ ಟಿವಿಎಸ್ ಎನ್‌ಟಾರ್ಕ್ 125

ಟಾಪ್ ಸ್ಪೀಡ್

125 ಸಿಸಿ ಎಂಜಿನ್ ಹೊಂದಿದ್ದರು ಪ್ರತಿ ಗಂಟೆಗೆ 95 ಕಿಮಿ ಟಾಪ್ ಸ್ಪೀಡ್ ಹೊಂದಿರುವ ಎನ್‌ಟಾರ್ಕ್ 125 ಸ್ಕೂಟರ್‌ಗಳು ಪ್ರಸ್ತುತ ಸ್ಕೂಟರ್ ಮಾದರಿಗಳಿಂತ ಅತ್ಯುತ್ತಮ ಇಂಧನ ಕಾರ್ಯಕ್ಷಮತೆ ಕಾಯ್ದುಕೊಂಡಿವೆ.

ಫಸ್ಟ್ ರೈಡ್ ರಿವ್ಯೂ- ಬ್ಲೂಟೂತ್‌ನೊಂದಿಗೆ ಸ್ಮಾರ್ಟ್ ಆಗಿ ಬಂದ ಟಿವಿಎಸ್ ಎನ್‌ಟಾರ್ಕ್ 125

ಮುಂದುಗಡೆ ಆಕರ್ಷಕವಾದ ಡೇ ಟೈಮ್ ರನ್ನಿಂಗ್ ಲೈಟ್ಸ್ ಜತೆಗೆ ಹ್ಯಾಂಡಲ್ ಬಾರ್‌ನಲ್ಲೇ ಇಂಡಿಕೇಟರ್ ಕೊಡಲಾಗಿದೆ. ಹಾಗಿಯೇ ಹಿಂದುಗಡೆಯೂ ಎಲ್‌ಇಡಿ ಟೈಲ್ ಲ್ಯಾಂಪ್ ಸೇವೆಯಿರಲಿದ್ದು, 12 ಇಂಚುಗಳ ಡೈಮಂಡ್ ಕಟ್ ಅಲಾಯ್ ಚಕ್ರಗಳನ್ನು ಜೋಡಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ- ಬ್ಲೂಟೂತ್‌ನೊಂದಿಗೆ ಸ್ಮಾರ್ಟ್ ಆಗಿ ಬಂದ ಟಿವಿಎಸ್ ಎನ್‌ಟಾರ್ಕ್ 125

ಎನ್‌ಟಾರ್ಕ್ 125 ಸ್ಕೂಟರ್‌ಗಳು ಮುಂದುವರಿದ SmartXonnect ತಂತ್ರಜ್ಞಾನ ತಹಳದಿಯಲ್ಲಿ ನಿರ್ಮಾಣವಾಗಿದ್ದು, ಬ್ಲೂಟೂತ್ ಸಂಪರ್ಕ ಹೊಂದಿದ ಮೊದಲ ಸ್ಮಾರ್ಟ್ ಸ್ಕೂಟರ್ ಇದಾಗಿದೆ.

ಫಸ್ಟ್ ರೈಡ್ ರಿವ್ಯೂ- ಬ್ಲೂಟೂತ್‌ನೊಂದಿಗೆ ಸ್ಮಾರ್ಟ್ ಆಗಿ ಬಂದ ಟಿವಿಎಸ್ ಎನ್‌ಟಾರ್ಕ್ 125

ಇವೆಲ್ಲದರ ಜತೆಗೆ ಸಂಪೂರ್ಣ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ನೇವಿಗೇಷನ್ ಅಸಿಸ್ಟ್, ಕಾರ್ ಐಡಿ, ಪಾರ್ಕಿಂಗ್ ಲೋಕೆಷನ್ ಇತ್ಯಾದಿ ಸೇವೆಗಳನ್ನು ಒದಗಿಸಲಿದ್ದು, ಲ್ಯಾಪ್ ಟೈಮರ್, ಟಾಪ್ ಹಾಗೂ ಸರಾಸರಿ ವೇಗದ ಮಾಹಿತಿಯನ್ನು ಕೂಡಾ ನೀಡಲಿದೆ.

ಫಸ್ಟ್ ರೈಡ್ ರಿವ್ಯೂ- ಬ್ಲೂಟೂತ್‌ನೊಂದಿಗೆ ಸ್ಮಾರ್ಟ್ ಆಗಿ ಬಂದ ಟಿವಿಎಸ್ ಎನ್‌ಟಾರ್ಕ್ 125

ಬ್ರೇಕಿಂಗ್ ಸಿಸ್ಟಂ

ನೋಡಲು ಬಲಿಷ್ಠವಾಗಿರುವ ಎನ್‌ಟಾರ್ಕ್ 125 ಸ್ಕೂಟರ್‌ಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ಕೊಡಲಾಗಿದ್ದು, ಪೆಟಲ್ ಡಿಸ್ಕ್ ಬ್ರೇಕ್, ಡ್ಯುಯಲ್ ಸೈಡ್ ಹ್ಯಾಂಡಲ್ ಲಾಕ್, ಪಾರ್ಕಿಂಗ್ ಬ್ರೇಕ್, ಮಲ್ಟಿಪಲ್ ರೈಡಿಂಗ್ ಮೂಡ್‌ಗಳನ್ನು ಅಳವಡಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ- ಬ್ಲೂಟೂತ್‌ನೊಂದಿಗೆ ಸ್ಮಾರ್ಟ್ ಆಗಿ ಬಂದ ಟಿವಿಎಸ್ ಎನ್‌ಟಾರ್ಕ್ 125

ಇದಲ್ಲದೆ ಮುಂದುವರಿದ ಎಲ್‌ಇಡಿ ಪರದೆ ಕೂಡಾ ಹೊಂದಿದ್ದು, ಎಂಜಿನ್ ಹಾಗೂ ಚಾಲನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದೆ. ಪ್ರಸ್ತುತ ಎಲ್‌ಇಡಿ ವ್ಯವಸ್ಥೆಯು ಇತರೆ ಡಿವೈಸ್‌ಗಳಿಗೆ ಸಂಪರ್ಕ ಸೇವೆಯನ್ನು ಒದಗಿಸಲಿದ್ದು, ಮೊಬೈಲ್ ಚಾರ್ಜಿಂಗ್ ಸ್ಲಾಟ್ ಕೂಡಾ ಇರಲಿದೆ.

ಫಸ್ಟ್ ರೈಡ್ ರಿವ್ಯೂ- ಬ್ಲೂಟೂತ್‌ನೊಂದಿಗೆ ಸ್ಮಾರ್ಟ್ ಆಗಿ ಬಂದ ಟಿವಿಎಸ್ ಎನ್‌ಟಾರ್ಕ್ 125

ಲಭ್ಯವಿರುವ ಬಣ್ಣಗಳು

ಮ್ಯಾಟೆ ಯೆಲ್ಲೋ, ಮ್ಯಾಟೆ ಗ್ರೀನ್, ಮ್ಯಾಟೆ ರೆಡ್ ಮತ್ತು ಮ್ಯಾಟೆ ವೈಟ್ ಬಣ್ಣಗಳಲ್ಲಿ ಎನ್‌ಟಾರ್ಕ್ 125 ಆಯ್ಕೆ ಮಾಡಬಹುದಾಗಿದೆ.

ಫಸ್ಟ್ ರೈಡ್ ರಿವ್ಯೂ- ಬ್ಲೂಟೂತ್‌ನೊಂದಿಗೆ ಸ್ಮಾರ್ಟ್ ಆಗಿ ಬಂದ ಟಿವಿಎಸ್ ಎನ್‌ಟಾರ್ಕ್ 125

ಸ್ಕೂಟರ್ ಬೆಲೆಗಳು

ರೂ. 58,750 (ಎಕ್ಸ್ ಶೋ ರೂಂ ದೆಹಲಿ)

ಫಸ್ಟ್ ರೈಡ್ ರಿವ್ಯೂ- ಬ್ಲೂಟೂತ್‌ನೊಂದಿಗೆ ಸ್ಮಾರ್ಟ್ ಆಗಿ ಬಂದ ಟಿವಿಎಸ್ ಎನ್‌ಟಾರ್ಕ್ 125

ಪ್ರತಿಸ್ಪರ್ಧಿಗಳು:

ಹೋಂಡಾ ಗ್ರಾಜಿಯಾ

ಮುಂಬರುವ ಎಪ್ರಿಲಿಯಾ ಎಸ್‌ಆರ್ 125

ಫಸ್ಟ್ ರೈಡ್ ರಿವ್ಯೂ- ಬ್ಲೂಟೂತ್‌ನೊಂದಿಗೆ ಸ್ಮಾರ್ಟ್ ಆಗಿ ಬಂದ ಟಿವಿಎಸ್ ಎನ್‌ಟಾರ್ಕ್ 125

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಭಾರತೀಯ ಆಟೋ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಕೂಟರ್ ಆವೃತ್ತಿಗಳು ಪ್ರದರ್ಶನಗೊಳ್ಳುತ್ತಿದ್ದು, ಈ ಹಿನ್ನೆಲೆ ಜನಪ್ರಿಯ ಸ್ಕೂಟರ್ ಮಾದರಿಗಳಾದ ಹೋಂಡಾ ಗ್ರಾಜಿಯಾ, ಬಿಡುಗಡೆಯಾಗಲಿರುವ ಎಪ್ರಿಲಿಯಾ 125 ಸ್ಕೂಟರ್‌ಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಎನ್‌ಟಾರ್ಕ್ 125 ಹೊಸ ಆವೃತ್ತಿಯನ್ನು ಪರಿಚಯಿಸಲಾಗಿದೆ.

Most Read Articles

Kannada
Read more on scooter review
English summary
TVS NTorq 125 Review: A Feature-Packed Sporty Scooter For The Masses.
Story first published: Tuesday, February 20, 2018, 18:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X