ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಯುಎಂ ಡ್ಯೂಟಿ 230 ಮೋಟಾರ್‌ಸೈಕಲ್..

By Praveen Sannamani

ಅಮೆರಿಕದ ಪ್ರಸಿದ್ಧ ಬೈಕ್ ಉತ್ಪಾದನಾ ಸಂಸ್ಥೆ ಯುಎಂ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಗಾಗಿ ಸಿದ್ಧಗೊಳಿಸಿರುವ ವಿನೂತನ ಡ್ಯೂಟಿ 230 ಬೈಕ್‌ಗಳನ್ನು ವರ್ಷಾಂತ್ಯಕ್ಕೆ ಬಿಡುಗಡೆಯಾಗುತ್ತಿದ್ದು, ಹೊಸ ಬೈಕಿನ ತಾಂತ್ರಿಕ ಅಂಶಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಯುಎಂ ಡ್ಯೂಟಿ 230 ಮೋಟಾರ್‌ಸೈಕಲ್..

ಕ್ರೂಸರ್ ಬೈಕ್ ಮಾದರಿಗಳಲ್ಲಿ ಅತಿಹೆಚ್ಚು ಬೇಡಿಕೆ ಹೊಂದಿರುವ ಯುಎಂ ಮೋಟಾರ್‌ಸೈಕಲ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಲೋಹಿಯಾ ಆಟೋ ಸಂಸ್ಥೆಯ ಜೊತೆಗೂಡಿ ತನ್ನ ಪ್ರಿಮಿಯಂ ವೈಶಿಷ್ಟ್ಯತೆಯ ಡ್ಯೂಟಿ 230 ಬೈಕ್‌ಗಳನ್ನು ಬಿಡುಗಡೆಗೊಳಿಸುತ್ತಿದ್ದು, ರೆನೆಗಡ್ ಕಮಾಂಡೊ ಕ್ಲಾಸಿಕ್, ಕಮಾಂಡೊ ಮೊಜಾವೆ, ಕಮಾಂಡೊ ಮತ್ತು ಸ್ಪೋರ್ಟ್ ಎಸ್ ಮಾದರಿಗಳಿಂತ ವಿಭಿನ್ನವಾಗಿರುವ ಡ್ಯೂಟಿ 230 ಸಿದ್ದಗೊಳಿಸಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಯುಎಂ ಡ್ಯೂಟಿ 230 ಮೋಟಾರ್‌ಸೈಕಲ್..

ಮುಂಬರುವ ಸೆಪ್ಟೆಂಬರ್ ಇಲ್ಲವೇ ಅಕ್ಟೋಬರ್‌ನಲ್ಲಿ ಹೊಚ್ಚಹೊಸ ಡ್ಯೂಟಿ 230 ಬೈಕ್‌ಗಳು ಖರೀದಿಗೆ ಲಭ್ಯವಾಗಲಿದ್ದು, ಈ ಬಗ್ಗೆ ಲೊಹಿಯಾ ಆಟೋ ರಾಜೀವ್ ಮಿಶ್ರಾ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿದ್ದಾರೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಯುಎಂ ಡ್ಯೂಟಿ 230 ಮೋಟಾರ್‌ಸೈಕಲ್..

ಡ್ಯೂಟಿ 230 ಬೈಕ್ ಬಿಡುಗಡೆಗೂ ಮುನ್ನು ಮತ್ತೆರಡು ಹೊಸ ಬೈಕ್‌ಗಳನ್ನು ಸಹ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿರುವ ಲೊಹಿಯಾ ಆಟೋ ಸಂಸ್ಥೆಯು ಯುಎಂ ಮೋಟಾರ್‌ಸೈಕಲ್ ಜೊತೆಗೆ ಬೃಹತ್ ಯೋಜನೆ ಒಂದನ್ನು ಸಿದ್ದಗೊಳಿಸುತ್ತಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಯುಎಂ ಡ್ಯೂಟಿ 230 ಮೋಟಾರ್‌ಸೈಕಲ್..

ಯುಎಂ ಡ್ಯೂಟಿ ಸೀರಿಸ್ ಬೈಕ್‌ಗಳು ದೆಹಲಿ ಎಕ್ಸ್ ಶೋರಂ ಪ್ರಕಾರ ರೂ. 1.59 ರಿಂದ ರೂ.1.95ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಬಜಾಜ್ ಅವೆಂಜರ್ ಸೀರಿಸ್, ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಮತ್ತು ಸುಜುಕಿ ಇಂಟ್ರೂಡರ್ ಬೈಕ್ ಗಳೊಂದಿಗೆ ಪ್ರತಿ ಸ್ಪರ್ಧಿಸಲಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಯುಎಂ ಡ್ಯೂಟಿ 230 ಮೋಟಾರ್‌ಸೈಕಲ್..

ಈ ಹಿಂದೆ ಇದೇ ಮಾದರಿಗಳನ್ನು 2016ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಿದ್ದ ಯುಎಂ ಮೋಟಾರ್ಸ್, ಇದೀಗ ಪ್ರಸ್ತುತ ಮಾರುಕಟ್ಟೆಯಲ್ಲಿನ ಅನುಗುಣವಾಗಿ ರೆನೆಗೆಡ್ ಕ್ಲಾಸಿಕ್ ಮತ್ತು ಕಮಾಂಡೋ ಮೊಜವೆ ಬೈಕ್‌ಗಳನ್ನ ಸಹ ಪರಿಚಯಿಸುತ್ತಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಯುಎಂ ಡ್ಯೂಟಿ 230 ಮೋಟಾರ್‌ಸೈಕಲ್..

ಎಂಜಿನ್ ಸಾಮರ್ಥ್ಯ

230 ಸಿಸಿ ಫ್ಯೂಲ್ ಇಂಜೆಕ್ಟೆಡ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 17-ಬಿಎಚ್‌ಪಿ ಮತ್ತು 19-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿವೆ ಎನ್ನಲಾಗಿದೆ. ಇದರ ಜೊತೆಗೆ ಮುಂಬರುವ 2020ರ ವೇಳೆಗೆ 450ಸಿಸಿ ಮತ್ತು 650ಸಿಸಿ ಮಾದರಿಯ ಬೈಕ್‌ಗಳನ್ನು ಪರಿಚಯಿಸುವ ಇರಾದೆಯಲ್ಲಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಯುಎಂ ಡ್ಯೂಟಿ 230 ಮೋಟಾರ್‌ಸೈಕಲ್..

ಡ್ಯೂಟಿ 230 ಬೈಕ್‌ಗಳು ಡಿಜಿ ಅನಾಲಾಗ್ ಇಂಸ್ಟ್ರೂಮೆಂಟ್ ಕ್ಲಸ್ಟರ್ ಜೊತೆಗೆ ಗೇರ್ ಪೊಸಿಷನ್ ಇಂಡಿಕೇಟರ್ ಗಳನ್ನು ಹೊಂದಿದ್ದು, ಎಲ್ಇಡಿ ಹೆಡ್ ಲೈಟ್ಸ್ ಮತ್ತು ಟೈಲ್ ಲೈಟ್ ಗಳನ್ನು ಪಡೆದುಕೊಂಡಿವೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಯುಎಂ ಡ್ಯೂಟಿ 230 ಮೋಟಾರ್‌ಸೈಕಲ್..

ಇನ್ನು ಬೈಕ್ ಮುಂಭಾಗದಲ್ಲಿ 41 ಎಂಎಂ ಕನ್ವೆಂಷನಲ್ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಡ್ಯುಯಲ್ ಹೈಡ್ರಾಲಿಕ್ ಸ್ಪ್ರಿಂಗ್ ಅಳವಡಿಕೆ ಇದ್ದು, ಆರಾಮದಾಯಕವಾಗಿ ಬೈಕ್ ಸವಾರಿ ಮಾಡಲು ಅಗಲ ಹ್ಯಾಂಡಲ್‌ಗಳನ್ನು ನೀಡಲಾಗಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಯುಎಂ ಡ್ಯೂಟಿ 230 ಮೋಟಾರ್‌ಸೈಕಲ್..

ಯುಎಂ ಡ್ಯುಟಿ ಸಿರೀಸ್ ಬೈಕ್‌ಗಳಲ್ಲಿ ಮುಂಭಾಗ ಚಕ್ರಗಳು 120/80 ಆರ್17 ಟೈರ್ ಬಳಕೆ ಮಾಡಲಾಗಿದ್ದು, ಹಿಂಭಾಗದಲ್ಲಿ 130/90 ಆರ್15 ಟೈರ್ ಗಳನ್ನು ಪಡೆದುಕೊಂಡಿದೆ. 1360ಎಂಎಂ ವೀಲ್ ಬೇಸ್ ಮತ್ತು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಯುಎಂ ಡ್ಯೂಟಿ 230 ಮೋಟಾರ್‌ಸೈಕಲ್..

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ದೇಶಿಯ ಮಾರುಕಟ್ಟೆಯಲ್ಲಿ ಅಧ್ಯಾಯ ಆರಂಭಿಸಿರುವ ಯುಎಂ ಮೋಟಾರ್‌ಸೈಕಲ್ ಸಂಸ್ಥೆಯು ಲೋಹಿಯಾ ಆಟೋ ಸಂಸ್ಥೆ ಜೊತೆಗೂಡಿ ವಿವಿಧ ಬೈಕ್‌ಗಳನ್ನು ಪರಿಚಯಿಸುತ್ತಿದ್ದು, ಇದಕ್ಕಾಗಿ ಭಾರತದಲ್ಲಿ ಬರೋಬ್ಬರಿ ರೂ. 50 ಕೋಟಿ ಹೂಡಿಕೆ ಮಾಡುತ್ತಿದೆ. ಜೊತೆಗೆ ಬೈಕ್ ಬೆಲೆಗಳನ್ನು ತಗ್ಗಿಸುವ ಉದ್ದೇಶದಿಂದ ಆಮದು ಬದಲಾಗಿ ಇಲ್ಲಿಯೇ ಹೊಸ ಬೈಕ್‌ಗಳನ್ನು ಉತ್ಪಾದನೆ ಮಾಡಲು ಹೈದ್ರಾಬಾದ್ ಬಳಿ ಹೊಸ ಬೈಕ್ ಉತ್ಪಾದನಾ ಘಟಕವನ್ನು ಸಹ ಆರಂಭ ಮಾಡುತ್ತಿದೆ.

Most Read Articles

Kannada
English summary
UM Motorcycles Duty 230 India Launch This Year — To Increase Product Portfolio In The Country.
Story first published: Wednesday, May 23, 2018, 17:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X