Just In
- 35 min ago ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- 42 min ago Mahindra Thar: ಸುಲಭವಾಗಿ ಆಫ್ರೋಡ್ ಕಿಂಗ್ ಖರೀದಿಸಬೇಕೆ?: ಆನ್ರೊಡ್ ಬೆಲೆ, EMI ಸಂಪೂರ್ಣ ಮಾಹಿತಿ!
- 54 min ago Mahindra: ಫ್ಯಾಮಿಲಿ ಕಾರು ಮಹೀಂದ್ರಾ ಎಕ್ಸ್ಯುವಿ700 ಖರೀದಿಸುವವರಿಗೆ ಸಿಹಿಸುದ್ದಿ.. ಇನ್ನೂ ತಿಂಗಳೇ ಸಾಕು!
- 2 hrs ago Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
Don't Miss!
- News Lok Sabha Election: ರಾಜಕೀಯ ಅಖಾಡದಲ್ಲಿ ನಕಲಿ ಅಭ್ಯರ್ಥಿಗಳ ಸೌಂಡ್ ಜೋರು: ಅಖಾಡದಲ್ಲಿ ನಕಲಿ ರಾಹುಲ್ ಗಾಂಧಿ, ಪಿಎಸ್ ಯಡಿಯೂರಪ್ಪ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Movies Sathya ; ಸತ್ಯಾ ತವರು ಮನೆಗೆ ಅವಮಾನ ಮಾಡಿದ ಕೀರ್ತನ..!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಟೋ ಎಕ್ಸ್ ಫೋ 2018: ಅವೆಂಜರ್ ಪ್ರತಿಸ್ಪರ್ಧಿ ಯುಎಂ ಡ್ಯೂಟಿ ಸಿರೀಸ್ ಬೈಕ್ಗಳು ಬಿಡುಗಡೆ
ಮೋಟಾರ್ಸ್ ದೆಹಲಿಯಲ್ಲಿ ನಡೆಯುತ್ತಿರುವ 2018ರ ಆಟೋ ಎಕ್ಸ್ ಪೋ ನಲ್ಲಿ ತನ್ನ ಹೊಸ ನಮೂನೆಯ ಯುಎಂ ರೆನೆಗೆಡ್ ಡ್ಯೂಟಿ ಎಸ್ ಮತ್ತು ಡ್ಯೂಟಿ ಏಸ್ ಎಂಬ ಎರಡು ಹೊಸ ಮಾದರಿಯ ಬೈಕುಗಳನ್ನು ಬಿಡುಗಡೆಗೊಳಿಸಿದೆ.
ಅಮೆರಿಕಾ ಮೂಲದ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಯಾದ ಯುನೈಟೆಡ್ ಮೋಟಾರ್ಸ್ ದೆಹಲಿಯಲ್ಲಿ ನಡೆಯುತ್ತಿರುವ 2018ರ ಆಟೋ ಎಕ್ಸ್ ಪೋ ನಲ್ಲಿ ತನ್ನ ಹೊಸ ನಮೂನೆಯ ಯುಎಂ ರೆನೆಗೆಡ್ ಡ್ಯೂಟಿ ಎಸ್ ಮತ್ತು ಡ್ಯೂಟಿ ಏಸ್ ಎಂಬ ಎರಡು ಹೊಸ ಮಾದರಿಯ ಬೈಕುಗಳನ್ನು ಬಿಡುಗಡೆಗೊಳಿಸಿದೆ.
ಯುಎಂ ರೆನೆಗೆಡ್ ಡ್ಯೂಟಿ ಸೀರಿಸ್ ಬೈಕ್ಗಳು ದೆಹಲಿ ಎಕ್ಸ್ ಶೋರಂ ಪ್ರಕಾರ ರೂ. 1.10 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಬಜಾಜ್ ಅವೆಂಜರ್ ಸೀರಿಸ್, ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಮತ್ತು ಸುಜುಕಿ ಇಂಟ್ರೂಡರ್ ಬೈಕ್ ಗಳೊಂದಿಗೆ ಪ್ರತಿಸ್ಪರ್ಧಿಸಲಿದೆ.
ರೆನೆಗೆಡ್ ಡ್ಯೂಟಿ ಬೈಕ್ಗಳು ಡಿಜಿ ಅನಾಲಾಗ್ ಇಂಸ್ಟ್ರೂಮೆಂಟ್ ಕ್ಲಸ್ಟರ್ ಜೊತೆಗೆ ಗೇರ್ ಪೊಸಿಷನ್ ಇಂಡಿಕೇಟರ್ ಗಳನ್ನು ಹೊಂದಿದ್ದು, ಎರಡೂ ಬೈಕುಗಳು ಎಲ್ಇಡಿ ಹೆಡ್ ಲೈಟ್ಸ್ ಮತ್ತು ಟೈಲ್ ಲೈಟ್ ಗಳನ್ನು ಪಡೆದುಕೊಂಡಿವೆ.
ಇನ್ನು ಬೈಕ್ ಮುಂಭಾಗದಲ್ಲಿ 41 ಎಂಎಂ ಕನ್ವೆಂಷನಲ್ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಡ್ಯುಯಲ್ ಹೈಡ್ರಾಲಿಕ್ ಸ್ಪ್ರಿಂಗ್ ಅಳವಡಿಕೆ ಇದ್ದು, ಆರಾಮದಾಯಕವಾಗಿ ಬೈಕ್ ಸವಾರಿ ಮಾಡಲು ಅಗಲ ಹ್ಯಾಂಡಲ್ಗಳನ್ನು ನೀಡಲಾಗಿದೆ.
ಎಂಜಿನ್ ಸಾಮರ್ಥ್ಯ
223 ಸಿಸಿ ಸಿಂಗಲ್ ಸಿಲಿಂಡರ್, ಆಯಿಲ್ ಕೂಲ್ಡ್ ಎಂಜಿನ್ ಹೊಂದಿರುವ ರೆನೆಗೆಡ್ ಡ್ಯೂಟಿ ಸೀರಿಸ್ ಬೈಕ್ಗಳು, 5-ಸ್ಪೀಡ್ ಗೇರ್ ಬಾಕ್ಸ್ ಹೊಂದಿವೆ. ಈ ಮೂಲಕ 16- ಬಿಹೆಚ್ ಪಿ ಮತ್ತು 17-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.
ಜೊತೆಗೆ ರೆನೆಗೆಡ್ ಡ್ಯೂಟಿ ಸೀರಿಸ್ ಬೈಕ್ಗಳು 10 ಲೀಟರ್ ಫ್ಯುಯಲ್ ಟ್ಯಾಂಕ್ ಹೊಂದಿದ್ದು, ಪ್ರತಿ ಲೀಟರ್ಗೆ 41 ಕಿಮಿ ಮೈಲೇಜ್ ನೀಡುತ್ತವೆ ಎಂದು ಯುಎಂ ಮೋಟಾರ್ ಸಂಸ್ಥೆಯು ಹೇಳಿಕೊಂಡಿದೆ.
ಯುಎಂ ಡ್ಯುಟಿ ಸಿರೀಸ್ ಬೈಕ್ಗಳಲ್ಲಿ ಮುಂಭಾಗ ಚಕ್ರಗಳು 120/80 ಆರ್17 ಟೈರ್ ಬಳಕೆ ಮಾಡಲಾಗಿದ್ದು, ಹಿಂಭಾಗದಲ್ಲಿ 130/90 ಆರ್15 ಟೈರ್ ಗಳನ್ನು ಪಡೆದುಕೊಂಡಿದೆ. 1360ಎಂಎಂ ವೀಲ್ ಬೇಸ್ ಮತ್ತು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.
ಯುಎಂ ರೆನೆಗೆಡ್ ಡ್ಯುಟಿ ಎಸ್ ಮತ್ತು ಡ್ಯುಟಿ ಏಸ್ ವೈಶಿಷ್ಟ್ಯತೆಗಳು ಒಂದೇ ಆಗಿದ್ದು, ಬಣ್ಣಗಳಲ್ಲಿ ಮಾತ್ರ ಬೇರೆ ಬೇರೆಯಾಗಿದ್ದು, ಡ್ಯುಟಿ ಎಸ್ ಬೈಕ್ ಮಿಲಿಟರಿ ಇಂಸ್ಪೈರ್ಡ್ ಬಣ್ಣ ಪಡೆದಿದ್ದರೇ ಡ್ಯುಟಿ ಏಸ್ ಸ್ಫೋರ್ಟಿ ಕಲರ್ ಸ್ಕೀಮ್ ಹೊಂದಿದೆ. ಹೀಗಾಗಿ ಹೊಸ ಬೈಕ್ಗಳು ಬಜಾಜ್ ಅವೆಂಜರ್ ಬೈಕಿಗೆ ತೀವ್ರ ಪೈಪೋಟಿ ನೀಡಲಿದೆ.