ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಬೈಕ್ ಮಾದರಿಗಳಿವು..

ಭಾರತದಲ್ಲಿ ಆಟೋ ಉದ್ಯಮವು ದಿನದಿಂದ ದಿನಕ್ಕೆ ಹೊಸ ರೂಪ ತಾಳುತ್ತಿದ್ದು, ಗ್ರಾಹಕರ ಆದ್ಯತೆ ಮೆರೆಗೆ ಆಟೋ ಉತ್ಪಾದನಾ ಸಂಸ್ಥೆಗಳು ಸಹ ವಿವಿಧ ಮಾದರಿಯ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದಾರೆ.

By Praveen Sannamani

ಭಾರತದಲ್ಲಿ ಆಟೋ ಉದ್ಯಮವು ದಿನದಿಂದ ದಿನಕ್ಕೆ ಹೊಸ ರೂಪ ತಾಳುತ್ತಿದ್ದು, ಗ್ರಾಹಕರ ಆದ್ಯತೆ ಮೆರೆಗೆ ಆಟೋ ಉತ್ಪಾದನಾ ಸಂಸ್ಥೆಗಳು ಸಹ ವಿವಿಧ ಮಾದರಿಯ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದಾರೆ. ಇದೇ ಕಾರಣಕ್ಕೆ ದಿನಕ್ಕೊಂದು ಹೊಸ ವಾಹನಗಳು ಬಿಡುಗಡೆಯಾಗುತ್ತಿದ್ದು, ಇವುಗಳಲ್ಲಿ ಗ್ರಾಹಕರ ರಂಜಿಸಲು ಬರುತ್ತಿರುವ ಕೆಲವು ಬೈಕ್ ಮಾದರಿಗಳು ಮತ್ತು ಸ್ಕೂಟರ್‌ಗಳು ಭಾರೀ ಆಕರ್ಷಣೆಗೆ ಕಾರಣವಾಗಿವೆ.

ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಬೈಕ್ ಮಾದರಿಗಳಿವು..

ಸದ್ಯ ಭಾರತದಲ್ಲಿ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಪ್ರಮುಖ ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ಮನ್ನ ಗುಣಮಟ್ಟದ ಜೊತೆ ಜೊತೆಗೆ ಮಧ್ಯಮ ವರ್ಗಗಳನ್ನು ಗುರಿಯಾಗಿಸಿ ಯೋಜನೆ ರೂಪಿಸುತ್ತಿದ್ದು, ಇದಕ್ಕೆ ಸ್ಪಷ್ಟ ಉದಾಹರಣೆ ಅಂದ್ರೆ ಬಿಎಂಡಬ್ಲ್ಯು ಮೋಟಾರ್ಡ್ ಮತ್ತು ಸುಜುಕಿ ಸಂಸ್ಥೆಗಳು ಬಿಡುಗಡೆ ಮಾಡುತ್ತಿರುವ ಬೈಕ್ ಮತ್ತು ಸ್ಕೂಟರ್ ಉತ್ಪನ್ನಗಳು.

ಹೌದು, ಬಿಎಂಡಬ್ಲ್ಯು ಮತ್ತು ಸುಜುಕಿ ಬಿಡುಗಡೆ ಮಾಡುತ್ತಿರುವ ಬೈಕ್‌ಗಳು ವಿದೇಶಿ ಮಾರುಕಟ್ಟೆಗಳಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಗಳಲ್ಲಿ ಖರೀದಿಗೆ ಸಿದ್ದವಾಗುತ್ತಿವೆ. ಹಾಗಾದ್ರೆ ಯಾವವು ಬೈಕ್ ಅಂತೀರಾ ಇಲ್ಲಿದೆ ನೋಡಿ ಹೊಸ ಬೈಕ್‌ಗಳ ಸಂಪೂರ್ಣ ಮಾಹಿತಿ.

ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಬೈಕ್ ಮಾದರಿಗಳಿವು..

ಜಿ 310 ಆರ್ ಮತ್ತು ಜಿ 310 ಜಿಎಸ್

ಕಳೆದ ವರ್ಷದಿಂದಲೇ ಡ್ರೈವ್‌ಸ್ಪಾರ್ಕ್ ತಂಡವು ಜಿ310ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳ ಬಗೆಗೆ ಹಲವು ಮಾಹಿತಿಗಳನ್ನು ನೀಡಿದ್ದು, ಸದ್ಯ ಹೊಸ ಬೈಕ್‌ಗಳು ಖರೀದಿಗೆ ಲಭ್ಯವಾಗುತ್ತಿವೆ. ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳನ್ನು ಇದೇ ತಿಂಗಳು 18ರಂದು ಬಿಡುಗಡೆಗೊಳಿಸುವುದು ಖಚಿತವಾಗಿದ್ದು, ಬಿಡುಗಡೆಗೂ ಮುನ್ನವೇ ಹೊಸ ಬೈಕ್‌ಗಳು ಭಾರೀ ನೀರಿಕ್ಷೆ ಹುಟ್ಟುಹಾಕಿವೆ.

ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಬೈಕ್ ಮಾದರಿಗಳಿವು..

ಭಾರತೀಯ ಮೂಲದ ಅತಿ ದೊಡ್ಡ ದ್ವಿಚಕ್ರ ವಾಹನ ಅಭಿವೃದ್ಧಿ ಸಂಸ್ಥೆಯಾಗಿರುವ ಟಿವಿಎಸ್ ಮೋಟಾರ್ಸ್ ಜೊತೆಗಾರಿಕೆಯಲ್ಲಿ ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ಜಿ 310 ಜಿಎಸ್ ಮತ್ತು ಜಿ 310 ಆರ್ ಬೈಕ್‌ಗಳನ್ನು ಅಭಿವೃದ್ಧಿಪಡಿಸಿದೆ.

ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಬೈಕ್ ಮಾದರಿಗಳಿವು..

ತಮಿಳುನಾಡಿನ ಹೊಸೂರುನಲ್ಲಿ ಸ್ಥಿತಗೊಂಡಿರುವ ಟಿವಿಎಸ್ ಮೋಟಾರು ಘಟಕದಲ್ಲೇ ಬಿಎಂಡಬ್ಲ್ಯು ಜಿ 310 ಜಿಎಸ್ ಮತ್ತು ಜಿ 310 ಆರ್ ಬೈಕ್‌ಗಳು ನಿರ್ಮಾಣವಾಗುತ್ತಿದ್ದು, ದೇಶಿಯ ಮಾರುಕಟ್ಟೆಗೆ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗೂ ಇಲ್ಲಿಂದಲೇ ರಫ್ತುಗೊಳ್ಳಲಿವೆ.

ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಬೈಕ್ ಮಾದರಿಗಳಿವು..

ವಿನೂತನ ಬಿಎಂಡಬ್ಲ್ಯು ಜಿ310 ಜಿಎಸ್ ಮತ್ತು ಜಿ 310 ಆರ್ ಬೈಕ್‌ಗಳು ಎರಡರಿಂದ ಮೂರು ಲಕ್ಷ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವುದಾಗಿ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದ್ದು, ಸ್ಥಳೀಯವಾಗಿ ಬಿಡಿಭಾಗಗಳ ಬಳಕೆಯಿಂದಾಗಿ ಬೈಕ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.

ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಬೈಕ್ ಮಾದರಿಗಳಿವು..

ಎಂಜಿನ್ ಸಾಮರ್ಥ್ಯ

313 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸ್ಪಡುವ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳು 28 ಎನ್ ಎಂ ತಿರುಗುಬಲದಲ್ಲಿ 33.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಬೈಕ್ ಮಾದರಿಗಳಿವು..

ಇನ್ನು ಹೊಸ ಬೈಕ್‌ಗಳು ಗಂಟೆಗೆ 143 ಕಿ.ಮೀ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿದ್ದು, 12-ಲೀಟರ್ ಫ್ಯೂಲ್ ಟ್ಯಾಂಕ್ ಸಾಮರ್ಥ್ಯದೊಂದಿಗೆ ಪ್ರತಿ ಲೀಟರ್‌‌ಗೆ 30 ಕಿ.ಮಿ ಮೈಲೇಜ್ ಪಡೆದುಕೊಂಡಿರುತ್ತವೆ. ಒಟ್ಟಿನಲ್ಲಿ ಹೊಸತನದೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುತ್ತಿರುವ ಬಿಎಂಡಬ್ಲ್ಯು ಟ್ವಿನ್ ಬೈಕ್‌ಗಳು ಕೆಟಿಎಂ ಡ್ಯೂಕ್ 390, ಯಮಹಾ ವೈಜೆಡ್-ಎಫ್ ಆರ್3 ಮತ್ತು ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕ್‌ಗಳಿಗೆ ಪೈಪೋಟಿ ನೀಡುವ ತವಕದಲ್ಲಿವೆ ಎನ್ನಬಹುದು.

ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಬೈಕ್ ಮಾದರಿಗಳಿವು..

ಸುಜುಕಿ ಬರ್ಗಮನ್ ಸ್ಪ್ರೀಟ್ ಸ್ಕೂಟರ್

ದೇಶಿಯ ಮಾರುಕಟ್ಟೆಯಲ್ಲಿ ಪ್ರಿಮಿಯಂ ಸ್ಕೂಟರ್ ಮಾದರಿಗಳಿಗೆ ವಿಶೇಷ ಬೇಡಿಕೆ ಸೃಷ್ಠಿಯಾಗುತ್ತಿದೆ. ಇದೇ ಕಾರಣಕ್ಕೆ ಹೊಸ ಯೋಜನೆ ಒಂದನ್ನು ರೂಪಿಸಿರುವ ಸುಜುಕಿ ಇಂಡಿಯಾ ಮೋಟರ್ ಸೈಕಲ್ ವಿಭಾಗವು ವಿನೂತನ ಶೈಲಿಯ ಬರ್ಗಮನ್ ಸ್ಪ್ರೀಟ್ ಸ್ಕೂಟರ್ ಮಾದರಿಯನ್ನು ಇದೇ ತಿಂಗಳು 19ರಂದು ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಬೈಕ್ ಮಾದರಿಗಳಿವು..

150 ಸಿಸಿ ಸಾಮರ್ಥ್ಯದ ಇನ್‌ಟ್ರುಡರ್ 150 ಕ್ರೂಸರ್ ಬೈಕ್ ಪರಿಚಯಿಸಿದ್ದ ಸುಜುಕಿ ಮೋಟಾರ್ ಸೈಕಲ್ ವಿಭಾಗವು ಇದೀಗ ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಅನ್ನು ಅಭಿವೃದ್ದಿಪಡಿಸಿದ್ದು, ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್, ಟೆಲಿ ಸ್ಕೊಪಿಕ್ ಫೋರ್ಕ್, ಮುಂಭಾಗದ ಚಕ್ರದಲ್ಲಿ ಡಿಸ್ಕ್ ಬ್ರೇಕ್, ಮಲ್ಟಿ ಫಂಕ್ಷನ್ ಕೀ ಸ್ಲಾಟ್, ದೊಡ್ಡದಾದ ರೈಡರ್ ಸೀಟ್, 12ವಿ ಚಾರ್ಜಿಂಗ್ ಪಾಯಿಂಟ್, ಟ್ಯೂಬ್ ಟೈರ್ಸ್ ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್ ಹೊಂದಿರಲಿದೆ.

ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಬೈಕ್ ಮಾದರಿಗಳಿವು..

ಭಾರತದಲ್ಲಿ ಬಿಡುಗಡೆಗಾಗಿ ಸಿದ್ಧಗೊಳಿಸಲಾಗಿರುವ ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳು 125ಸಿಸಿ ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಲಿದ್ದು, ಇದು ವಿದೇಶಿ ಮಾರುಕಟ್ಟೆಗಳಲ್ಲಿ 150ಸಿಸಿ, 180ಸಿಸಿ, 220ಸಿಸಿ ಮಾದರಿಯಲ್ಲೂ ಸಹ ಲಭ್ಯವಿವೆ. ಹೀಗಾಗಿ ಹೊಸ ಸ್ಕೂಟರ್‌ಗಳು ಪ್ರಸ್ತುತ ಲಭ್ಯವಿರುವ ಆಕ್ಸೆಸ್ 125ಗಿಂತಲೂ ಹೆಚ್ಚಿನ ಗುಣಮಟ್ಟದ ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳಲಿದೆ.

ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಬೈಕ್ ಮಾದರಿಗಳಿವು..

ಬೆಲೆ (ಅಂದಾಜು)

ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳ ಬೆಲೆಯು ರೂ.65 ಸಾವಿರದಿಂದ ರೂ.70 ಸಾವಿರ ಇರಬಹುದೆಂದು ಅಂದಾಜಿಸಲಾಗಿದ್ದು, ಜುಲೈ 19ರಂದು ಸ್ಕೂಟರ್ ಬೆಲೆ ಜೊತೆಗೆ ಮತ್ತಷ್ಟು ತಾಂತ್ರಿಕ ಅಂಶಗ ನಿಖರ ಮಾಹಿತಿ ದೊರೆಯಲಿದೆ.

ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಬೈಕ್ ಮಾದರಿಗಳಿವು..

ಹೀರೋ ಎಕ್ಸ್‌ಟ್ರಿಮ್ 200ಆರ್

ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆ ಸಾಧಿಸಿರುವ ಹೀರೋ ಮೋಟೋಕಾರ್ಪ್ ಸಂಸ್ಥೆಯು ತನ್ನ ಹೊಸ ಎಕ್ಸ್‌ಟ್ರಿಮ್ 200ಆರ್ ಬೈಕ್‌ನ್ನು ಕಳೆದ ಜನವರಿಯಲ್ಲಿ ಅನಾವರಣಗೊಳಿಸಿದ್ದು, ಮಧ್ಯಮ ಗಾತ್ರದ ಸೂಪರ್ ಬೈಕ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿದೆ.

ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಬೈಕ್ ಮಾದರಿಗಳಿವು..

ಎಕ್ಸ್‌ಟ್ರಿಮ್ 200ಆರ್ ಬೈಕ್ ಹೀರೋ ಸಂಸ್ಥೆಯ ಮೊದಲ 200ಸಿಸಿ ಬೈಕ್ ಮಾದರಿಯಾಗಿದ್ದು, ಯುವಸಮುದಾಯವನ್ನು ಸೆಳೆಯುವ ಉದ್ದೇಶದಿಂದ ಈ ಬೈಕನ್ನು ನಿರ್ಮಿಲಾಗಿದೆ. ಅಲ್ಲದೆ ಈ ಬೈಕ್ ಹೀರೋ ಸಿಬಿಝೆಡ್ ಎಕ್ಸ್‌ಟ್ರಿಮ್ ಬೈಕಿನ ಮುಂದುವರೆದ ಮಾದರಿಯಾಗಿರಲಿದೆ.

ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಬೈಕ್ ಮಾದರಿಗಳಿವು..

ಎಂಜಿನ್ ಸಾಮರ್ಥ್ಯ

200 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಎಕ್ಸ್‌ಟ್ರಿಮ್ 200ಆರ್ ಬೈಕ್ ಮಾದರಿಗಳು 18.1-ಬಿಎಚ್‌ಪಿ ಮತ್ತು 17.2-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿದೆ.

ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಬೈಕ್ ಮಾದರಿಗಳಿವು..

ಇನ್ನು ಈ ಹೊಸ ಇದೇ ತಿಂಗಳು ಅಂತ್ಯಕ್ಕೆ ಇಲ್ಲವೇ ಅಗಸ್ಟ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ 95 ಸಾವಿರದಿಂದ 1.15 ಲಕ್ಷ ಬೆಲೆ ಹೊಂದರಲಿವೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಈ ಬೈಕ್ ಬಜಾಜ್ ಪಲ್ಸರ್ ಎನ್ಎಸ್200, ಟಿವಿಎಸ್ ಅಪಾಚೆ ಆರ್ ಟಿಆರ್ 200 ಮತ್ತು ಕೆಟಿಎಂ ಡ್ಯೂಕ್ ಬೈಕುಗಳಿಗೆ ಪೈಪೋಟಿಯನ್ನು ನೀಡಲಿದೆ.

Most Read Articles

Kannada
Read more on auto news bikes scooter
English summary
Upcoming Two-Wheeler Launches In July, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X