ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಹೊಸ ಸಾರಥಿಯಾಗಲಿದ್ದಾರೆ ವಿಮಲ್ ಸಂಬ್ಲಿ...

By Praveen Sannamani

ಭಾರತದಲ್ಲಿ ಟ್ರಯಂಫ್ ಮೋಟಾರ್‌ಸೈಕಲ್ ಸಂಸ್ಥೆಯನ್ನು ಜನಪ್ರಿಯಗೊಳಿಸುವಲ್ಲಿ ಹೊಸ ಹೆಜ್ಜೆಯಿರಿಸಿದ್ದ ವಿಮಲ್ ಸಂಬ್ಲಿಯವರು ಬಹುತೇಕ ಸೂಪರ್ ಬೈಕ್ ಪ್ರಿಯರಿಗೆ ಗೊತ್ತಿರುವ ವ್ಯಕ್ತಿ. ಇಷ್ಟು ದಿನಗಳ ಕಾಲ ಟ್ರಯಂಫ್ ಇಂಡಿಯಾ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ವಿಮಲ್ ಸಂಬ್ಲಿ, ಇನ್ಮುಂದೆ ಜನಪ್ರಿಯ ರಾಯಲ್ ಎನ್‌ಫೀಲ್ಡ್ ಸಂಸ್ಥೆಯನ್ನು ಮುನ್ನಡೆಸುವ ಹೊಸ ಜವಾಬ್ದಾರಿ ಹೊರಲಿದ್ದಾರೆ.

ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಹೊಸ ಸಾರಥಿಯಾಗಲಿದ್ದಾರೆ ವಿಮಲ್ ಸಂಬ್ಲಿ...

ಹೌದು, ಕಳೆದ ಮೂರು ವರ್ಷಗಳಿಂದ ಯುಕೆ ಮೂಲದ ಐಷಾರಾಮಿ ಬೈಕ್ ಉತ್ಪಾದನಾ ಸಂಸ್ಥೆಯಾದ ಟ್ರಯಂಫ್ ಇಂಡಿಯಾ ಸಂಸ್ಥೆಯನ್ನ ಮುನ್ನಡೆಸುತ್ತಿದ್ದ ವಿಮಲ್ ಸಂಬ್ಲಿ ಅವರು ಇನ್ಮುಂದೆ ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಸಾರಥಿಯಾಗಲಿದ್ದು, ಮಾರುಕಟ್ಟೆ ಮತ್ತು ಮಾರಾಟ ವಿಭಾಗವನ್ನ ಮುನ್ನಡೆಸುವ ಸುಳಿವು ನೀಡಿದ್ದಾರೆ.

ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಹೊಸ ಸಾರಥಿಯಾಗಲಿದ್ದಾರೆ ವಿಮಲ್ ಸಂಬ್ಲಿ...

ಸದ್ಯ ಭಾರತದಲ್ಲಿ ಪ್ರಿಮಿಯಂ ಬೈಕ್‌ಗಳ ಮಾರಾಟಕ್ಕೆ ವಿಫುಲ್ ಅವಕಾಶಗಳಿದ್ದು, ಈ ಇದೇ ಅವಕಾಶವನ್ನ ಬಳಸಿಕೊಳ್ಳುತ್ತಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು 650 ಸಿಸಿ ಎಂಜಿನ್ ಆಧಾರಿತ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳ ಬಿಡುಗಡೆಗೆ ಎದುರು ನೋಡುತ್ತಿದೆ.

ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಹೊಸ ಸಾರಥಿಯಾಗಲಿದ್ದಾರೆ ವಿಮಲ್ ಸಂಬ್ಲಿ...

ಈ ವೇಳೆ ಹೊಸ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ವಿಮಲ್ ಸಂಬ್ಲಿ ಅವರಿಗೆ ಹೊಸ ಜವಾಬ್ದಾರಿ ನೀಡುತ್ತಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಮಾರುಕಟ್ಟೆ ವಿಸ್ತರಣೆಗೆ ಬೃಹತ್ ಯೋಜನೆ ರೂಪಿಸುತ್ತಿದೆ.

ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಹೊಸ ಸಾರಥಿಯಾಗಲಿದ್ದಾರೆ ವಿಮಲ್ ಸಂಬ್ಲಿ...

ಮೂಲಗಳ ಪ್ರಕಾರ, ಮುಂದಿನ ತಿಂಗಳು ಸೆಪ್ಟೆಂಬರ್ ಅಂತ್ಯಕ್ಕೆ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳು ಬಿಡುಗಡೆಗೊಳ್ಳುವ ಸಾಧ್ಯತೆಗಳಿದ್ದು, ಇದೇ ವೇಳೆ ಹೊಸ ಬೈಕ್‌ಗಳ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ನೇತೃತ್ವವನ್ನ ವಿಮಲ್ ಸಂಬ್ಲಿ ಅವರಿಗೆ ವಹಿಸಲಾಗುತ್ತೆ ಎನ್ನಲಾಗಿದೆ.

ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಹೊಸ ಸಾರಥಿಯಾಗಲಿದ್ದಾರೆ ವಿಮಲ್ ಸಂಬ್ಲಿ...

ವಿಮಲ್ ಸಂಬ್ಲಿ ಈಗಾಗಲೇ ಪ್ರಿಮಿಯಂ ಬೈಕ್‌ಗಳ ಮಾರುಕಟ್ಟೆ ಕುರಿತು ಉತ್ತಮ ಯೋಜನೆ ರೂಪಿಸಬಲ್ಲ ವ್ಯಕ್ತಿಯಾಗಿದ್ದು, ಬಜಾಜ್ ಮೋಟಾರ್ಸ್ ಮತ್ತು ಟ್ರಯಂಫ್ ಮೋಟಾರ್ ಸೈಕಲ್ ಸಂಸ್ಥೆಗಳಲ್ಲಿನ 12 ವರ್ಷಗಳ ಆಟೋ ಉದ್ಯಮದ ಆಗು ಹೋಗುಗಳ ಬಗೆಗಿನ ಅನುಭವವು ರಾಯಲ್ ಎನ್‌ಫೀಲ್ಡ್ ಸಂಸ್ಥೆಗೆ ಸಹಕಾರಿಯಾಗಲಿದೆ.

ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಹೊಸ ಸಾರಥಿಯಾಗಲಿದ್ದಾರೆ ವಿಮಲ್ ಸಂಬ್ಲಿ...

ಇದಲ್ಲದೇ ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಮಾರುಕಟ್ಟೆ ವಿಭಾಗದ ಹಿರಿಯ ಅಧಿಕಾರಿ ಶಾಜಿ ಕೋಶಿಯವರು ಮುಂದಿನ ತಿಂಗಳು ಸೇವೆಯಿಂದ ನಿವೃತ್ತರಾಗಲಿದ್ದು, ಈ ಹಿನ್ನೆಲೆ ಅವರ ಸ್ಥಾನಕ್ಕೆ ಟ್ರಯಂಫ್ ಮೋಟಾರ್ ಸೈಕಲ್ ಮಾಜಿ ನಿರ್ದೇಶಕ ವಿಮಲ್ ಸಂಬ್ಲಿ ಆಯ್ಕೆ ಮಾಡಲಾಗಿದೆಯೆಂತೆ.

ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಹೊಸ ಸಾರಥಿಯಾಗಲಿದ್ದಾರೆ ವಿಮಲ್ ಸಂಬ್ಲಿ...

ಇನ್ನು ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಭಾರತದಲ್ಲಿ ಮುಂದಿನ 2 ವರ್ಷದೊಳಗಾಗಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಪೈಪೋಟಿ ನೀಡಬಲ್ಲ ಅಗ್ಗದ ಬೆಲೆಯ ಮೋಟಾರ್‌ಸೈಕಲ್‌ಗಳನ್ನ ಪರಿಚಯಿಸುವ ಇರಾದೆಯಲ್ಲಿದ್ದು, ಈ ವೇಳೆ ರಾಯಲ್ ಎನ್‌ಫೀಲ್ಡ್ ಹೊಸ ಪ್ರಿಮಿಯಂ ಬೈಕ್‌ಗಳ ಮಾರಾಟವನ್ನು ಯಶಸ್ವಿಯಾಗಿ ಮುನ್ನಡೆಸುವ ಒಂದು ಸಾರಥಿ ಅವಶ್ಯಕತೆ ಇದ್ದೆ ಇದೆ.

ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಹೊಸ ಸಾರಥಿಯಾಗಲಿದ್ದಾರೆ ವಿಮಲ್ ಸಂಬ್ಲಿ...

ಹೀಗಾಗಿ ತಮ್ಮ ಸ್ಥಾನಕ್ಕೆ ವಿಮಲ್ ಸಂಬ್ಲಿ ಹೆಸರನ್ನ ಸೂಚಿಸಿರುವ ಶಾಜಿ ಕೋಶಿಯವರು ಭಾರತೀಯ ಗ್ರಾಹಕರ ಬೇಡಿಕೆಗಳನ್ನ ಬಲ್ಲ ವಿಮಲ್ ಅವರು ರಾಯಲ್ ಎನ್‌ಫೀಲ್ಡ್ ಹೊಸ ಬೈಕ್‌ಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಅವರ ಅನುಭವ ಸಹಕಾರಿಯಾಗಲಿದೆ ಎಂದಿದ್ದಾರಂತೆ.

ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಹೊಸ ಸಾರಥಿಯಾಗಲಿದ್ದಾರೆ ವಿಮಲ್ ಸಂಬ್ಲಿ...

ಒಟ್ಟಿನಲ್ಲಿ ಇಷ್ಟು ದಿನಕಾಲ ಟ್ರಯಂಫ್ ಸಂಸ್ಥೆಯನ್ನು ಭಾರತದಲ್ಲಿ ಹೊಸ ಬದಲಾಣೆಯತ್ತ ತೆಗೆದುಕೊಂಡು ಹೋಗಲು ಶ್ರಮಿಸಿದ್ದ ವಿಮಲ್ ಸಂಬ್ಲಿಯವರು ಇನ್ಮುಂದೆ ರಾಯಲ್ ಎನ್‌ಫೀಲ್ಡ್ ಸಂಸ್ಥೆಯಲ್ಲಿ ಕಾಣಿಸಿಕೊಳ್ಳಲಿದ್ದು, ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳನ್ನು ಭಾರತದಲ್ಲಿ ಜನಪ್ರಿಯಗೊಳಿಸಲು ವಿಮಲ್ ಸಂಬ್ಲಿ ಹೊಸ ಯೋಜನೆಗಳನ್ನು ರೂಪಿಸಲಿದ್ದಾರೆ.

Most Read Articles

Kannada
Read more on auto news royal enfield
English summary
Vimal Sumbly Might Join Royal Enfield Ahead Of Upcoming 650-Twins India Launch.
Story first published: Monday, August 13, 2018, 16:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X