ಹೀರೋ ಬೈಕ್ ಜಾಹೀರಾತಿನಲ್ಲಿ ಅಬ್ಬರಿಸಿದ ಕೊಹ್ಲಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಜಗತ್ತಿನ ಅತಿ ದೊಡ್ಡ ಬೈಕ್ ಉತ್ಪಾದನಾ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿರುವ ಹೀರೋ ಮೋಟೋಕಾರ್ಪ್ ಸಂಸ್ಥೆಯು ಕಳೆದ ಜನವರಿಯಲ್ಲಿ ಅನಾವರಣಗೊಳಿಸಿದ್ದ ತನ್ನ ಹೊಚ್ಚ ಹೊಸ ಎಕ್ಸ್‌ಟ್ರಿಮ್ 200ಆರ್ ಬೈಕ್‌ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಉತ್ಪನ್ನಕ್ಕೆ ಅಂಬಾಸಿಡರ್ ಆಗಿ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಹೀರೋ ಬೈಕ್ ಜಾಹೀರಾತಿನಲ್ಲಿ ಅಬ್ಬರಿಸಿದ ಕೊಹ್ಲಿ ವಿರುದ್ಧ ಸಾರ್ವಜನಿಕರ ಆಕ್ರೋಶ

ವಾಹನ ಉತ್ಪಾದನಾ ಸಂಸ್ಥೆಗಳು ಹೆಚ್ಚಾಗಿ ಕ್ರಿಕೆಟ್ ದಿಗ್ಗಜರನ್ನೇ ಆಯ್ಕೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುವ ಯತ್ನ ಮಾಡುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಗ್ರಾಹಕರನ್ನು ಸೆಳೆಯುವ ಒಂದೇ ಉದ್ದೇಶದಿಂದ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ಜಾಹೀರಾತುಗಳ ಹಾವಳಿ ಹೆಚ್ಚುತ್ತಿದ್ದು, ಇದೀಗ ಕೊಹ್ಲಿ ಅವರ ವಿಡಿಯೋ ಕೂಡಾ ಟೀಕೆಗೆ ಗುರಿಯಾಗಿದೆ.

ಹೀರೋ ಬೈಕ್ ಜಾಹೀರಾತಿನಲ್ಲಿ ಅಬ್ಬರಿಸಿದ ಕೊಹ್ಲಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಈ ಹಿಂದೆ ತನ್ನ ಹೊಸ ಬೈಕ್ ಉತ್ಪನ್ನಗಳಿಗಾಗಿ ಕ್ರಿಕೆಟ್ ದಿಗ್ಗಜರಾದ ವಿರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಯುವರಾಜ್ ಸಿಂಗ್ ಮತ್ತು ಜಹೀರ್ ಖಾನ್ ಆಯ್ಕೆ ಮಾಡಿದ್ದ ಹೀರೋ ಮೋಟೋಕಾರ್ಪ್ ಸಂಸ್ಥೆಯು ಈ ಬಾರಿ ತನ್ನ ಹೊಸ ಉತ್ಪನ್ನವಾದ ಎಕ್ಸ್‌ಟ್ರಿಮ್200ಆರ್ ಜಾಹೀರಾತಿಗಾಗಿ ವಿರಾಟ್ ಕೊಹ್ಲಿ ಆಯ್ಕೆ ಮಾಡಿಕೊಂಡಿದೆ.

ಹೀರೋ ಬೈಕ್ ಜಾಹೀರಾತಿನಲ್ಲಿ ಅಬ್ಬರಿಸಿದ ಕೊಹ್ಲಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಎಕ್ಸ್‌ಟ್ರಿಮ್ 200ಆರ್ ಬೈಕಿನ ಟಿವಿ ಜಾಹೀರಾತಿನಲ್ಲಿ ಬೈಕ್ ರೈಡ್ ಮಾಡುತ್ತಿರುವ ವಿರಾಟ್ ಕೊಹ್ಲಿ ಅಪಾಯಕಾರಿ ಸ್ಟಂಟ್ ಮಾಡುವ ಮೂಲಕ ಸಾರ್ವಜನಿಕವಾಗಿ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಅಪಾದನೆ ಮಾಡಲಾಗುತ್ತಿದ್ದು, ಹೀರೋ ಸಂಸ್ಥೆಯ ವಿರುದ್ಧವೂ ಕಿಡಿಕಾರುತ್ತಿದ್ದಾರೆ.

ಹೀರೋ ಬೈಕ್ ಜಾಹೀರಾತಿನಲ್ಲಿ ಅಬ್ಬರಿಸಿದ ಕೊಹ್ಲಿ ವಿರುದ್ಧ ಸಾರ್ವಜನಿಕರ ಆಕ್ರೋಶ

ರ‍್ಯಾಪ್ ಸಾಂಗ್ ಒಂದರ ಮೂಲಕ ಆರಂಭವಾಗುವ ವಿರಾಟ್ ಕೊಹ್ಲಿ ಬೈಕ್ ರೈಡ್ ಜಾಹೀರಾತು ತದನಂತರ ಡ್ರ್ಯಾಗ್ ರೇಸ್ ಮಾಡುವುದಲ್ಲದೇ ಅಪಾಯಕಾರಿ ಸ್ಟಂಟ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದ್ದು, ವಿಡಿಯೋ ಕೊನೆಯ ಭಾಗದಲ್ಲಿ ಟ್ರಕ್‌ಗಳ ಮಧ್ಯೆ ಬೈಕ್ ರೈಡ್ ಮಾಡುವ ದೃಶ್ಯವು ಸಹ ಅಪಾಯಕಾರಿಯಾಗಿದೆ.

ಹೀರೋ ಬೈಕ್ ಜಾಹೀರಾತಿನಲ್ಲಿ ಅಬ್ಬರಿಸಿದ ಕೊಹ್ಲಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಸುರಕ್ಷಿತ ಬೈಕ್ ಚಾಲನೆಗೆ ಪ್ರೋತ್ಸಾಹಿಸಬೇಕಾದ ಸೆಲೆಬ್ರಿಟಿಗಳೇ ಹೀಗೆ ಸ್ಟಂಟ್ ಮಾಡುವುದನ್ನು ಉತ್ತೇಜನೆ ಮಾಡುತ್ತಿರುವುದು ಕಳವಳಕಾರಿ ಎಂದು ಸಾವಿರಾರು ಜನ ಸಾಮಾಜಿಕ ಜಾಲತಾಣ ಮೂಲಕ ಹೀರೋ ಮೋಟಾರ್ ಸಂಸ್ಥೆಯನ್ನು ತರಾಟೆ ತೆಗೆದುಕೊಂಡಿದ್ದಾರೆ.

ಹೀರೋ ಬೈಕ್ ಜಾಹೀರಾತಿನಲ್ಲಿ ಅಬ್ಬರಿಸಿದ ಕೊಹ್ಲಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಕೇವಲ ಹಣದಾಸೆಗಾಗಿ ಅಪಾಯಕಾರಿ ಸ್ಟಂಟ್ ಮಾಡಿ ಜನತೆಗೆ ತಪ್ಪು ಸಂದೇಶ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿರುವ ಹಲವರು, ಇದನ್ನು ಕೂಡಲೇ ಬ್ಯಾನ್ ಮಾಡುವ ಮೂಲಕ ಯುವ ಸಮುದಾಯಕ್ಕೆ ರವಾನೆಯಾಗುತ್ತಿರುವ ತಪ್ಪು ಜಾಹೀರಾತನ್ನು ನಿಲ್ಲಿಸುವಂತೆ ಮನವಿ ಮಾಡಲಾಗಿದೆ.

ಹೀರೋ ಬೈಕ್ ಜಾಹೀರಾತಿನಲ್ಲಿ ಅಬ್ಬರಿಸಿದ ಕೊಹ್ಲಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಆದ್ರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಹೀರೋಕಾರ್ಪ್ ಮೋಟಾರ್ ಸಂಸ್ಥೆಯು ಕೊಹ್ಲಿ ರೈಡ್ ಮಾಡುತ್ತಿರುವ ಎಕ್ಸ್‌ಟ್ರಿಮ್ 200 ಬೈಕ್ ಚಾಲನೆಯ ಜಾಹೀರಾತನ್ನು ಬಿತ್ತರ ಮಾಡುತ್ತಿದ್ದು, ಸಾರ್ವಜನಿಕವಾಗಿ ತಪ್ಪು ಮಾಹಿತಿ ನೀಡುತ್ತಿದೆ.

MOST READ: ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ವಿರಾಟ್ ಕೊಹ್ಲಿ ಎಕ್ಸ್‌ಟ್ರಿಮ್ 200ಆರ್ ಬೈಕ್ ಚಾಲನೆ ಮಾಡುತ್ತಿರುವ ವಿವಾದಾತ್ಮಕ ವಿಡಿಯೋ ಇಲ್ಲಿದೆ ನೋಡಿ.

ಹೀರೋ ಬೈಕ್ ಜಾಹೀರಾತಿನಲ್ಲಿ ಅಬ್ಬರಿಸಿದ ಕೊಹ್ಲಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಇನ್ನು ಹೀರೋ ಮೋಟೋಕಾರ್ಪ್ ಸಂಸ್ಥೆಯು ಕಳೆದ ಜನವರಿಯಲ್ಲಿ ಅನಾವರಣಗೊಳಿಸಿದ್ದ ತನ್ನ ಹೊಚ್ಚ ಹೊಸ ಎಕ್ಸ್‌ಟ್ರಿಮ್ 200ಆರ್ ಬೈಕ್‌ನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ಹೊಸ ಬೈಕಿನ ಬೆಲೆಯನ್ನು ರೂ.89,900ಕ್ಕೆ ನಿಗದಿಪಡಿಸಿದ್ದು, 200 ಸಿಸಿ ಸೆಗ್ಮೆಂಟ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

ಹೀರೋ ಬೈಕ್ ಜಾಹೀರಾತಿನಲ್ಲಿ ಅಬ್ಬರಿಸಿದ ಕೊಹ್ಲಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಹೀರೋ ಸಂಸ್ಥೆಯು ಕಮ್ಯೂಟರ್ ಬೈಕ್ ಪ್ರೇಮಿಗಳನ್ನು ಸೆಳೆಯುವ ಉದ್ದೇಶದೊಂದಿಗೆ ಎಕ್ಸ್‌ಟ್ರಿಮ್ 200ಆರ್ ಬೈಕ್ ಮಾದರಿಯನ್ನು ಅಭಿವೃದ್ಧಿಗೊಳಿಸಲಾಗಿದ್ದು, ಇದು ಹೀರೋ ಸಿಬಿಝೆಡ್ ಎಕ್ಸ್‌ಟ್ರಿಮ್ ಬೈಕಿನ ಮುಂದುವರೆದ ಮಾದರಿಯಾಗಿರಲಿದೆ. ಹೀಗಾಗಿ ಹೊಸ ಬೈಕಿನ ಮೇಲೆ ಭಾರೀ ನೀರಿಕ್ಷೆಗಳಿದ್ದು, 200ಸಿಸಿ ವಿಭಾಗದಲ್ಲಿ ಲಭ್ಯವಿರುವ ಕಡಿಮೆ ಬೆಲೆಯ ಬೈಕ್ ಇದಾಗಿದೆ ಎನ್ನಬಹುದು.

ಹೀರೋ ಬೈಕ್ ಜಾಹೀರಾತಿನಲ್ಲಿ ಅಬ್ಬರಿಸಿದ ಕೊಹ್ಲಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಎಂಜಿನ್ ಸಾಮರ್ಥ್ಯ

199 ಸಿಸಿ ಫೌರ್ ಸ್ಟೋಕ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು 18-ಬಿಎಚ್‌ಪಿ ಮತ್ತು 17.1-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿದೆ.

MOST READ: ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಹೀರೋ ಬೈಕ್ ಜಾಹೀರಾತಿನಲ್ಲಿ ಅಬ್ಬರಿಸಿದ ಕೊಹ್ಲಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಹೊಸ ಬೈಕಿನಲ್ಲಿ ಹೆಡ್‌ಲೈಟ್ಸ್ ಜೊತೆಗೆ ಎಲ್ಇಡಿ ಪೈಲೆಟ್ ಲ್ಯಾಂಪ್ಸ್, ಎಲ್ಇಡಿ ಟೈಲ್ ಲೈಟ್ಸ್, ಡಿಜಿಟಲ್ ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ ಟೋನ್ ಗ್ರಾಫಿಕ್ಸ್ ಮತ್ತು ದೂರದ ಪ್ರಯಾಣದಲ್ಲೂ ಆರಾಮದಾಯಕವಾಗಿ ಕುಳಿತು ಸವಾರಿ ಮಾಡಬಲ್ಲ ಕೌಂಟರ್ಡ್ ಸೀಟುಗಳನ್ನು ಜೋಡಿಸಲಾಗಿದೆ.

ಹೀರೋ ಬೈಕ್ ಜಾಹೀರಾತಿನಲ್ಲಿ ಅಬ್ಬರಿಸಿದ ಕೊಹ್ಲಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಸುರಕ್ಷಾ ಸಾಧನಗಳು

ಬೈಕ್ ಮುಂಭಾಗದಲ್ಲಿ 37-ಎಂಎಂ ಟೆಲಿಸ್ಕೋಪಿಕ್ ಸಸ್ಪೆಷನ್ ಹಾಗೂ 37-ಎಂಎಂ ಎಳು ಹಂತದಲ್ಲಿ ಹೋಂದಾಣಿಕೆ ಮಾಡಿಕೊಳ್ಳಬಹುದಾದ ಮೋನೋಶಾರ್ಕ್ ಸಸ್ಷೆಷನ್, 276-ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 220-ಎಂಎಂ ರಿಯರ್ ಡಿಸ್ಕ್ ಬ್ರೇಕ್ ಹೊಂದಿರುವ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು ಸುರಕ್ಷತೆಗಾಗಿ ಸಿಂಗಲ್ ಚಾನಲ್ ಎಬಿಎಸ್ ಟೆಕ್ನಾಲಜಿ ಅನ್ನು ಸಹ ಹೊಂದಿದೆ.

ಹೀರೋ ಬೈಕ್ ಜಾಹೀರಾತಿನಲ್ಲಿ ಅಬ್ಬರಿಸಿದ ಕೊಹ್ಲಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಈ ಮೂಲಕ 200ಸಿಸಿ ವಿಭಾಗದ ಬೈಕ್‌ಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಹೀರೋ ಹೊಸ ಬೈಕ್‌ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು ಬಜಾಜ್ ಪಲ್ಸರ್ 200ಎನ್ಎಸ್, ಕೆಟಿಎಂ ಡ್ಯೂಕ್ 200 ಮತ್ತು ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ಗಳಿಗೆ ಇದು ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೀರೋ ಬೈಕ್ ಜಾಹೀರಾತಿನಲ್ಲಿ ಅಬ್ಬರಿಸಿದ ಕೊಹ್ಲಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಒಟ್ಟಿನಲ್ಲಿ ಹೊಸ ವಿನ್ಯಾಸ ಮತ್ತು ಬಲಿಷ್ಠ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಹೀರೋ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು ಇದುವರೆಗೆ ಮಾರುಕಟ್ಟೆಯಲ್ಲಿರುವ 200ಸಿಸಿ ಬೈಕ್‌ಗಳಿಂತಲೂ ಹೆಚ್ಚಿನ ಸೌಲಭ್ಯ ಮತ್ತು ಕಡಿಮೆ ಬೆಲೆ ಹೊಂದಿರುವ ಈ ಬೈಕಿನ ವಿಶೇಷ ಎನ್ನಬಹುದಾಗಿದ್ದು, ತಪ್ಪು ಸಂದೇಶ ಸಾರುವ ಜಾಹೀರಾತು ಮಾತ್ರ ಸಾರ್ವಜನಿಕವಾಗಿ ಕೆಂಗಣ್ಣಿಗೆ ಗುರಿಯಾಗಿದೆ.

ವಿನೂತನ ವಿನ್ಯಾಸಗಳ ಮೂಲಕ 200ಸಿಸಿ ಸೆಗ್ಮೆಂಟ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಎಕ್ಸ್‌ಟ್ರಿಮ್ 200ಆರ್ ಬೈಕಿನ ಮತ್ತಷ್ಟು ಚಿತ್ರಗಳಿಗಾಗಿ ಫೋಟೋ ಗ್ಯಾಲರಿ ನೋಡಿ..

Most Read Articles

Kannada
Read more on auto news off beat
English summary
Virat Kohli’s Hero Xtreme 200 R TVC Creates Controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X