ಪೆಟ್ರೋಲ್ ಬೇಡಾ ಗುರು.. ವೋಡ್ಕಾ ಇದ್ರೆ ಸಾಕು ಈ ಬೈಕಿಗೆ..!

ದೇಶದಲ್ಲಿ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ವಾಹನ ಸವಾರರು ಕಂಗಾಲಾಗಿ ಹೋಗಿದ್ದಾರೆ. ಹೀಗಿರುವಾಗ ಪರ್ಯಾಯ ಇಂಧನ ಬಳಕೆ ಬಗೆಗೆ ಹತ್ತಾರು ಅಧ್ಯಯನ ನಡೆಯುತ್ತಿದ್ದು, ಇಲ್ಲೊಬ್ಬ ಅಸಾಮಿ ತನ್ನ ಬೈಕಿಗೆ ಪೆಟ್ರೋಲ್‌ಗೆ ಬದಲಾಗಿ ವೋಡ್ಕಾ ಹಾಕಿ ಓಡಿಸುತ್ತಿದ್ದಾನೆ.

ಪೆಟ್ರೋಲ್ ಬೇಡಾ ಗುರು.. ವೋಡ್ಕಾ ಇದ್ರೆ ಸಾಕು ಈ ಬೈಕಿಗೆ..!

ಈ ಸುದ್ದಿ ಕೇಳಲು ಸ್ವಲ್ಪ ವಿಚಿತ್ರ ಅನ್ನಿಸಿದರೂ ಎಲ್ಲರೂ ನಂಬಲೇಬೇಕಾದ ವಿಚಾರ. ಪೆಟ್ರೋಲ್ ಬೆಲೆಗಳು ಗಗನಮುಖಿಯಾಗುತ್ತಿರುವಾಗ ವೋಡ್ಕಾ ಮೂಲಕ ಬೈಕ್ ಓಡಿಸುತ್ತಿರುವ ವಿಚಾರ ಇದೀಗ ಜಗತ್ತಿನಾದ್ಯಂತ ಸಂಚಲನ ಸೃಷ್ಠಿಸಿದೆ. ಹಾಗಾದ್ರೆ ಬೈಕ್ ಎಂಜಿನ್‌ ಚಾಲನೆಗೆ ಪೂರಕವಾದ ಯಾವ ಅಂಶ ವೋಡ್ಕಾದಲ್ಲಿ ಇದೆ ಎನ್ನುವುದೇ ಎಲ್ಲರ ಮನಸ್ಸಿನಲ್ಲೂ ಮೂಡಬಹುದಾದ ಪ್ರಶ್ನೆ.

ಪೆಟ್ರೋಲ್ ಬೇಡಾ ಗುರು.. ವೋಡ್ಕಾ ಇದ್ರೆ ಸಾಕು ಈ ಬೈಕಿಗೆ..!

ಪೆಟ್ರೋಲ್‌ಗಿಂತಾ ವೋಡ್ಕಾ ದುಬಾರಿ..!

ಹೌದು ಅಲ್ವಾ, ವೋಡ್ಕಾದ ಮುಂದೆ ಪೆಟ್ರೋಲ್ ಬೆಲೆಯೇ ಎಷ್ಟೋ ವಾಸಿ ಅಂದ್ರೆ ತಪ್ಪಾಗುದಿಲ್ಲ. ಆದ್ರೆ ನಾವೆಲ್ಲರೂ ಗಮನಿಸಬೇಕಾದ ಪ್ರಮುಖ ವಿಚಾರ ಅಂದ್ರೆ ಪೆಟ್ರೋಲ್‌ಗಿಂತಲೂ ಹೆಚ್ಚಿನ ಮೈಲೇಜ್ ಹೊಂದಿರುವ ವೋಡ್ಕಾ ಇದೀಗ ಪರ್ಯಾಯ ಇಂಧನವಾಗುವ ಲಕ್ಷಣಗಳು ಗೋಚರವಾಗುತ್ತಿದೆ.

ಪೆಟ್ರೋಲ್ ಬೇಡಾ ಗುರು.. ವೋಡ್ಕಾ ಇದ್ರೆ ಸಾಕು ಈ ಬೈಕಿಗೆ..!

ವೋಡ್ಕಾ ತ್ಯಾಜ್ಯದಿಂದ ಇಂಧನ ಸಿದ್ದ.!

ಮೇಲೆ ಹೇಳಿದ ಹಾಗೆ ಪೆಟ್ರೋಲ್‌ಗಿಂತಲೂ ದುಬಾರಿ ಎನ್ನಿಸಲಿರುವ ವೋಡ್ಕಾ ಉತ್ಪನ್ನವು ಬೈಕ್ ಎಂಜಿನ್‌ಗೆ ಪೂರಕವಾಗಿ ಕಾರ್ಯನಿರ್ವಹಣಾ ಶಕ್ತಿ ಹೊಂದಿವೆ ಎನ್ನುವ ಅಂಶಗಳು ಬೆಳಕಿಗೆ ಬಂದಿದ್ದು, ಅಮೆರಿಕಾದ ಮೊಂಟಾನಾ ನಿವಾಸಿಯಾಗಿರುವ ರಯಾನ್​ ಮಾಂಟ್ಗೋಮೆರಿ ಎಂಬುವವರು ವೋಡ್ಕಾ ತಯಾರಿಕೆಗೆ ಬಳಸಲಾದ ತ್ಯಾಜ್ಯದಿಂದ ಈ ಇಂಧನವನ್ನು ಸಿದ್ದಪಡಿಸಿ ಯಶಸ್ವಿಯಾಗಿದ್ದಾರೆ.

ಪೆಟ್ರೋಲ್ ಬೇಡಾ ಗುರು.. ವೋಡ್ಕಾ ಇದ್ರೆ ಸಾಕು ಈ ಬೈಕಿಗೆ..!

ವೃತ್ತಿಯಲ್ಲಿ ಬೈಕ್ ರೇಸರ್ ಆಗಿರುವ 41 ವರ್ಷದ ರಯಾನ್​ ಮಾಂಟ್ಗೋಮೆರಿ ಅವರ ಬಳಿ 1980ರ ಯಮಹಾ ಎಕ್ಸ್ಎಸ್850 ರೇಸ್ ಬೈಕ್ ಆವೃತ್ತಿ ಇದ್ದು, ಇದನ್ನು ಮಾಡಿಫೈ ಮಾಡುವ ಮೂಲಕ ವೋಡ್ಕಾ ತ್ಯಾಜ್ಯದಿಂದ ತೆಗೆಯಲಾದ ಇಂಧನವನ್ನು ಇದರಲ್ಲಿ ಪ್ರಯೋಗಿಸಿ ಯಶಸ್ವಿ ಕಂಡುಕೊಂಡಿದ್ದಾರೆ.

ಪೆಟ್ರೋಲ್ ಬೇಡಾ ಗುರು.. ವೋಡ್ಕಾ ಇದ್ರೆ ಸಾಕು ಈ ಬೈಕಿಗೆ..!

ಪತ್ನಿ ಮಾಡಿದ ಐಡಿಯಾ.!

ಮೊದಮೊದಲು ಪೆಟ್ರೋಲ್ ಮೂಲಕವೇ ಯಮಹಾ ಎಕ್ಸ್ಎಸ್850 ಬೈಕ್ ಚಾಲನೆ ಮಾಡುತ್ತಿದ್ದ ರಯಾನ್​ ಮಾಂಟ್ಗೋಮೆರಿ ಅವರಿಗೆ ಅವರ ಪತ್ನಿ ಮತ್ತು ಗೆಳೆಯರು ವೋಡ್ಕಾ ತ್ಯಾಜ್ಯದಿಂದ ಬೈಕ್ ರನ್ ಮಾಡಬಹುದಾದ ವಿಧಾನ ಬಗ್ಗೆ ಹೇಳಿಕೊಂಡಿದ್ದರಂತೆ.

ಪೆಟ್ರೋಲ್ ಬೇಡಾ ಗುರು.. ವೋಡ್ಕಾ ಇದ್ರೆ ಸಾಕು ಈ ಬೈಕಿಗೆ..!

ಮೊದಮೊದಲು ಈ ಬಗ್ಗೆ ಆಸಕ್ತಿ ಇಲ್ಲವಾದರೂ ತದನಂತರ ಈ ಹೊಸ ಪ್ರಯೋಗವನ್ನು ಮಾಡಲೇಬೇಕೆಂಬ ಹಠದೊಂದಿಗೆ ಈ ಯೋಜನೆಯಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಬೈಕ್ ಎಂಜಿನ್ ಮಾರ್ಪಾಡು ಸೇರಿದಂತೆ ಹಲವು ಬದಲಾವಣೆ ತರುವ ಮೂಲಕ ವೋಡ್ಕಾ ಪ್ರೇರಿತ ಬೈಕ್ ಸಿದ್ದಗೊಳಿಸಿದ್ದಾರೆ.

MOST READ: ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕಥೆ ಏನು.?

ಪೆಟ್ರೋಲ್ ಬೇಡಾ ಗುರು.. ವೋಡ್ಕಾ ಇದ್ರೆ ಸಾಕು ಈ ಬೈಕಿಗೆ..!

ಬೈಕಿಗೊಂದು ಅಂದದ ಹೆಸರು.!

ರಯಾನ್​ ಮಾಂಟ್ಗೋಮೆರಿ ಅವರು ಸಿದ್ದಗೊಳಿಸಿದ ಬೈಕಿಗೆ 'ಸಡನ್ ವಿಜ್‌ಡಮ್' ಎಂದು ನಾಮಕರಣ ಮಾಡಲಾಗಿದ್ದು, ಪೆಟ್ರೋಲ್‌ಗೆ ಬದಲಾಗಿ ವೋಡ್ಕಾ ತ್ಯಾಜ್ಯದಿಂದ ಉತ್ಪತ್ತಿ ಮಾಡಲಾದ ಇಂಧನದಿಂದ ಬೈಕ್ ಚಲಿಸುವಂತೆ ಮಾಡಲು ಸಾಕಷ್ಟು ಶ್ರಮವಹಿಸಿದ್ದಾರೆ.

ಪೆಟ್ರೋಲ್ ಬೇಡಾ ಗುರು.. ವೋಡ್ಕಾ ಇದ್ರೆ ಸಾಕು ಈ ಬೈಕಿಗೆ..!

ಸ್ಪೀಡ್‌ನಲ್ಲೂ ಎತ್ತಿದ ಕೈ.!

ವೋಡ್ಕಾ ತ್ಯಾಜ್ಯ ಪ್ರೇರಿತ ಸಡನ್ ವಿಜ್‌ಡಮ್ ಬೈಕ್ ಸದ್ಯ ಪ್ರತಿ ಗಂಟೆಗೆ 114 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಚಲಿಸಬಲ್ಲ ಸಾಮರ್ಥ್ಯ ಹೊಂದಿದ್ದು, ಇದೇ ಬೈಕ್ ಕಳೆದ ವರ್ಷ ಪ್ರತಿ ಗಂಟೆಗೆ ಕೇವಲ 97 ಕಿ.ಮಿ ಟಾಪ್ ಸ್ಪೀಡ್ ಪಡೆದುಕೊಂಡಿತ್ತು.

ಪೆಟ್ರೋಲ್ ಬೇಡಾ ಗುರು.. ವೋಡ್ಕಾ ಇದ್ರೆ ಸಾಕು ಈ ಬೈಕಿಗೆ..!

ವೋಡ್ಕಾ ತ್ಯಾಜ್ಯದಿಂದ ಸಂಗ್ರಹಿಸಲಾಗುವ ಇಂಧನದಲ್ಲಿ ಸುಧಾರಣೆ ತಂದ ಪರಿಣಾಮ ಕಳೆದ ವರ್ಷಕ್ಕಿಂತ ಈ ವರ್ಷ ಬೈಕ್ ಪರ್ಫಾಮೆನ್ಸ್‌ನಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಇದು ಮುಂಬರುವ ದಿನಗಳಲ್ಲಿ ಮತ್ತಷ್ಟು ಸುಧಾರಣೆಯಾಗಲಿದೆ ಎಂದು ರಯಾನ್​ ಮಾಂಟ್ಗೋಮೆರಿ ಅಭಿಪ್ರಾಯ.

ಪೆಟ್ರೋಲ್ ಬೇಡಾ ಗುರು.. ವೋಡ್ಕಾ ಇದ್ರೆ ಸಾಕು ಈ ಬೈಕಿಗೆ..!

ಎಂಜಿನ್ ಅಭಿವೃದ್ದಿಗೆ 3 ಲಕ್ಷ ಖರ್ಚು.!

ಪೆಟ್ರೋಲ್ ಎಂಜಿನ್ ಅನ್ನು ವೋಡ್ಕಾ ಎಂಜಿನ್ ಆಗಿ ಪರಿವರ್ತನೆ ಮಾಡಲು ವರ್ಷಾನುಗಟ್ಟಲೇ ಶ್ರಮ ವಹಿಸಿರುವ ರಯಾನ್​ ಮಾಂಟ್ಗೋಮೆರಿ ಅವರು, ವೋಡ್ಕಾ ಎಂಜಿನ್‌ಗೆ ಜೀವ ತುಂಬಲು ಬರೋಬ್ಬರಿ 3 ಲಕ್ಷ ಖರ್ಚು ಮಾಡಿದ್ದಲ್ಲೇ ಕೊನೆಗೂ ತಮ್ಮ ಕನಸಿನ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಇದೀಗ ವೋಡ್ಕಾ ಪ್ರೇರಿತ ಬೈಕ್ ವಿಶ್ವಾದ್ಯಂತ ಸುದ್ದಿಯಾಗುವ ಮೂಲಕ ವಾಹನ ಉತ್ಪಾದನಾ ಸಂಸ್ಥೆಗಳಿಗೆಯೇ ಅಚ್ಚರಿ ಉಂಟು ಮಾಡಿದೆ.

ಪೆಟ್ರೋಲ್ ಬೇಡಾ ಗುರು.. ವೋಡ್ಕಾ ಇದ್ರೆ ಸಾಕು ಈ ಬೈಕಿಗೆ..!

ಇದಷ್ಟೇ ಅಲ್ಲದೇ ಬ್ರೆಜಿಲ್ ದೇಶದ ಪ್ರಜೆ ರಿಕಾರ್ಡೊ ಅಜೆವೆಡೊ ಎಂಬಾತ ಕೂಡಾ 1993ರ ಹೋಂಡಾ ಏನ್ಎಕ್ಸ್ 200 ಬೈಕಿನಲ್ಲಿ ಪೆಟ್ರೋಲ್ ಗೆ ಪರ್ಯಾಯವಾಗಿ ನೀರನ್ನು ಬಳಸಿ ಓಡಿಸುವ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಿರುವುದು ಸಹ ಈ ಹಿಂದೆ ಸಾಕಷ್ಟು ಸುದ್ದಿಯಾಗಿತ್ತು.

ಪೆಟ್ರೋಲ್ ಬೇಡಾ ಗುರು.. ವೋಡ್ಕಾ ಇದ್ರೆ ಸಾಕು ಈ ಬೈಕಿಗೆ..!

ಈ ಬೈಕಿನ ವಿಶೇಷತೆ ಏನು ಗೊತ್ತೆ?

ಕೇವಲ ಒಂದೇ ಒಂದು ಲೀಟರ್ ನೀರಿಗೆ ಹೆಚ್ಚು ಕಡಿಮೆ 300 ಮೈಲಿಗಳಷ್ಟು ದೂರ ಕ್ರಮಿಸುವಷ್ಟು ಕ್ಷಮತೆ ಹೊಂದಿದೆಯೆಂತೆ. ಈ ಬಗ್ಗೆ ವರದಿ ಮಾಡಿರುವ ಯುರೋ ನ್ಯೂಸ್, ಅದ್ಭುತ ಸಾಧನೆಯನ್ನು ಹಾಡಿಹೊಗಿದೆ.

MOST READ: ಮದುವೆ ಮನೆಯಲ್ಲಿ ಗೆಳೆಯರ ಸ್ಪೆಷಲ್ ಗಿಫ್ಟ್ ನೋಡಿ ನವದಂಪತಿ ಫುಲ್ ಶಾಕ್.!?

ಪೆಟ್ರೋಲ್ ಬೇಡಾ ಗುರು.. ವೋಡ್ಕಾ ಇದ್ರೆ ಸಾಕು ಈ ಬೈಕಿಗೆ..!

ಪೆಟ್ರೋಲಿನಿಂದ ಹೊರ ಬರುವ ಹೊಗೆ ಈ ಬೈಕಿನಿಂದ ಆಗದು, ಇದೇ ಕಾರಣಕ್ಕೆ ಈ ಮೋಟಾರ್ ಸೈಕಲ್ ವಾಯುಮಾಲಿನ್ಯ ತಡೆಗಟ್ಟುವುದರಲ್ಲಿ ಕೂಡ ಮುಖ್ಯ ಪಾತ್ರ ವಹಿಸುತ್ತದೆ.

ಪೆಟ್ರೋಲ್ ಬೇಡಾ ಗುರು.. ವೋಡ್ಕಾ ಇದ್ರೆ ಸಾಕು ಈ ಬೈಕಿಗೆ..!

ಅಜೆವೆಡೊ ತಾವು ಆವಿಷ್ಕಾರ ಮಾಡಿರುವ ಅತ್ಯದ್ಭುತ ಬೈಕಿನ ವಿಶೇಷತೆಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವುದಲ್ಲದೇ ಇದರಿಂದ ದುಡ್ಡು ಮಾಡುವ ಬದಲು ಹೆಚ್ಚುತ್ತಿರುವ ಮಾಲಿನ್ಯ ತಡೆ ಬಗ್ಗೆ ಅವರಿಗೆ ಹೆಚ್ಚಿನ ಆಸಕ್ತಿಯಿದೆ.

ಪೆಟ್ರೋಲ್ ಬೇಡಾ ಗುರು.. ವೋಡ್ಕಾ ಇದ್ರೆ ಸಾಕು ಈ ಬೈಕಿಗೆ..!

ಬೈಕ್ ಹೇಗೆ ತನ್ನ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಪ್ರಾತ್ಯಕ್ಷಿತೆ ಮಾಡಿ ತೋರಿಸಿದ ಅಜೆವೆಡೊ ಬೈಕಿನ ಬಗ್ಗೆ ಸವಿವರಣೆ ನೀಡಿದ್ದಾರೆ. ಈ ಬೈಕಿನ ಮತ್ತೊಂದು ವಿಶೇಷತೆ ಎಂದರೆ ಈ ಬೈಕ್ ಕುಡಿಯುವ ನೀರಿನಲ್ಲಿ ಮಾತ್ರವಲ್ಲದೆ ಕೊಳೆಯುಕ್ತ ನೀರಿನಲ್ಲಿಯೂ ಕೂಡ ಯಾವುದೇ ತೊಂದರೆ ಇಲ್ಲದೆ ಕ್ರಮಿಸಬಲ್ಲದಂತೆ.

ಪೆಟ್ರೋಲ್ ಬೇಡಾ ಗುರು.. ವೋಡ್ಕಾ ಇದ್ರೆ ಸಾಕು ಈ ಬೈಕಿಗೆ..!

ಈ ಬಗ್ಗೆ ತಮ್ಮ ಅನುಭವ ಹೇಳಿಕೊಂಡಿರುವ ಅವೆಜೊಡೊ, " ಹತ್ತಿರದಲ್ಲೇ ಇದ್ದ ನದಿಯಿಂದ ಕಲುಷಿತ ನೀರು ಸಂಗ್ರಹಿಸಿ ಈ ಬೈಕ್ ಇಂಧನವಾಗಿ ಬಳಸಿದೆ, ಜೊತೆಗೆ ಕುಡಿಯುವ ನೀರಿನ ಬದಲು ಕಲುಷಿತ ನೀರನ್ನು ಇಂಧನವಾಗಿ ಬಳಸಿದಾಗ ಕೂಡ ಕುಡಿಯುವ ನೀರಿನಷ್ಟೇ ಕಾರ್ಯಕ್ಷಮತೆ ನೀಡಿದಾದ ನನಗೆ ತುಂಬಾ ಆಶ್ಚರ್ಯವಾಯ್ತು" ಎಂದಿದ್ದಾರೆ.

ಪೆಟ್ರೋಲ್ ಬೇಡಾ ಗುರು.. ವೋಡ್ಕಾ ಇದ್ರೆ ಸಾಕು ಈ ಬೈಕಿಗೆ..!

ಈ ಬೈಕಿನಲ್ಲಿ ಕಾರಿನ ಬ್ಯಾಟರಿ ಹೊಂದಿದ್ದು, ಬ್ಯಾಟರಿಯ ಎಲೆಕ್ಟ್ರೋಲಿಸಿಸ್ ಸಹಾಯದಿಂದ ನೀರಿನಲ್ಲಿರುವ ಹೈಡ್ರೋಜನ್ ವಿಭಾಗಿಸುವ ಪ್ರಕ್ರಿಯೆಯ ಮೂಲಕ ಬೈಕ್ ಚಾಲನೆ ಮಾಡುವ ಬಗ್ಗೆ ಅವೆಜೊಡೊ ಹೇಳಿಕೊಂಡಿದ್ದಾರೆ.

ಪೆಟ್ರೋಲ್ ಬೇಡಾ ಗುರು.. ವೋಡ್ಕಾ ಇದ್ರೆ ಸಾಕು ಈ ಬೈಕಿಗೆ..!

"ಬೈಕಿನಲ್ಲಿರುವ ಸಾಧನವೊಂದು ನೀರಿನಲ್ಲಿರುವ ಗಾಳಿಯನ್ನು ಮತ್ತು ಜಲ ಜನಕವನ್ನು(ಹೈಡ್ರೋಜನ್) ಬೇರ್ಪಡಿಸುವ ಒಂದು ತಂತ್ರದ ಮೂಲಕ ನಮಗೆ ಬೇಕಾಗಿರುವ ಜಲಜನಕವನ್ನು ನಾನು ಬೈಕಿನ ಮೋಟಾರ್ ಎಂಜಿನ್ ಕಾರ್ಯನಿರ್ವಹಿಸಲು ಪರಿವರ್ತಿಸಿಕೊಂಡೆ" ಎಂಬುವುದು ಅಜೆವೆಡೊ ಅನುಭವದ ಮಾತು.

ಪೆಟ್ರೋಲ್ ಬೇಡಾ ಗುರು.. ವೋಡ್ಕಾ ಇದ್ರೆ ಸಾಕು ಈ ಬೈಕಿಗೆ..!

ಮುಖ್ಯವಾಗಿ ಗ್ಯಾಸೊಲಿನಿಗೂ ಇದಕ್ಕೂ ಸಂಬಂಧವಿಲ್ಲ ಎನ್ನುವ ಅಜೆವೆಡೊ, ಮುಂದೊಂದು ದಿನ ಪ್ರಪಂಚದಲ್ಲಿಯೇ ಪರ್ಯಾಯ ಇಂಧನವನ್ನಾಗಿ ಈ ನೀರು ಬಳಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ದೃಢ ವಿಶ್ವಾಸ ಹೊಂದಿದ್ದಾರೆ.

ಪೆಟ್ರೋಲ್ ಬೇಡಾ ಗುರು.. ವೋಡ್ಕಾ ಇದ್ರೆ ಸಾಕು ಈ ಬೈಕಿಗೆ..!

ಅದೇನೇ ಇರಲಿ ಪೆಟ್ರೋಲ್, ಡೀಸೆಲ್ ಇಂಧನದಿಂದಾಗುತ್ತಿರುವ ವಾಯುಮಾಲಿನ್ಯ ತಡೆಗಟ್ಟುವ ದೃಷ್ಟಿಯಿಂದಾದರೂ ಈ ರೀತಿಯ ಪರ್ಯಾಯ ಇಂಧನ ಕಂಡುಹಿಡಿಯುವ ಅಗತ್ಯವಿದೆ. ಹೀಗಾಗಿ ಅವೆಜೆಡೊ ಸಾಧನೆ ಖಂಡಿತವಾಗಿಯೂ ವಿಶ್ವಮಟ್ಟದಲ್ಲಿ ಹೊಸ ಹೊಸ ಸಂಶೋಧನೆಗಳಿಗೆ ಕಾರಣವಾಗಲಿದೆ.

ಹೆಚ್ಚುತ್ತಿರುವ ಮಾಲಿನ್ಯ ತಡೆಯಲು ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳಿಗೆ ಭಾರೀ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಬೆಂಗಳೂರು ಮೂಲದ ಏಥರ್ ಎನರ್ಜಿ ಸಂಸ್ಥೆಯು ಪರಿಚಯಿಸಿರುವ ಎಲೆಕ್ಟ್ರಿಕ್ ಸ್ಕೂಟರ್ ಇಲ್ಲಿವೆ ನೋಡಿ.

Most Read Articles

Kannada
Read more on auto facts off beat
English summary
Vodka-Powered Yamaha Makes New Bonneville Speed Record.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X