ಆಟೋ ಎಕ್ಸ್ ಪೋ 2018: ಬಿಡುಗಡೆಯಾದ ಯಮಹಾ ವೈಝೆಡ್ಎಫ್-ಆರ್15 ವಿ3.0 ಬೈಕ್

ಯಮಹಾ ತನ್ನ ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ವೈಝೆಡ್ಎಫ್-ಆರ್15 ವಿ3.0 ಬೈಕ್‌ನ್ನು ಬಿಡುಗಡೆಗೊಳಿಸಿದೆ.

By Rahul

ಯಮಹಾ ತನ್ನ ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ವೈಝೆಡ್ಎಫ್-ಆರ್15 ವಿ3.0 ಬೈಕ್‌ನ್ನು ಬಿಡುಗಡೆಗೊಳಿಸಿದ್ದು, ಆರ್15 ಬೈಕ್ ಹೊಸ ಡಿಸೈನ್ ಮತ್ತು ಸುಧಾರಿತ ಎಂಜಿನ್ ಮಾದರಿಯನ್ನು ಹೊಂದಿದ್ದು, ದೆಹಲಿ ಎಕ್ಸ್ ಶೋರಂ ಪ್ರಕಾರ ರೂ.1.25 ಲಕ್ಷ ಬೆಲೆ ಪಡೆದುಕೊಂಡಿದೆ.

ಆಟೋ ಎಕ್ಸ್ ಪೋ 2018: ಬಿಡುಗಡೆಯಾದ ಯಮಹಾ ವೈಝೆಡ್ಎಫ್-ಆರ್15 ವಿ3.0 ಬೈಕ್

ಮೂರನೇ ತಲೆಮಾರಿನ ಯಮಹಾ ವೈಝಡ್‌ಎಫ್-ಆರ್15 ವಿ3.0 ಮಾದರಿಯಲ್ಲಿ ಆಕ್ರಮಣಕಾರಿ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದ್ದು, ಈ ಹಿಂದಿನ ವೈಝೆಡ್ಎಫ್-ಆರ್1 ಮತ್ತು ವೈಝೆಡ್ಎಫ್-ಆರ್ 6ನ ಶೈಲಿಯನ್ನೇ ಹೊಂದಿಕೊಂಡಿವೆ.

ಆಟೋ ಎಕ್ಸ್ ಪೋ 2018: ಬಿಡುಗಡೆಯಾದ ಯಮಹಾ ವೈಝೆಡ್ಎಫ್-ಆರ್15 ವಿ3.0 ಬೈಕ್

ಶಕ್ತಿಶಾಲಿ ಟ್ಯಾಂಕ್, ರೇಸಿಂಗ್ ಮೆಶಿನ್, ಏರೋಡೈನಾಮಿಕ್ ಫೇರಿಂಗ್ ಜತೆಗೆ YZF-R1 ಸೂಪರ್ ಬೈಕ್‌ನಿಂದಲೂ ಕೆಲವೊಂದು ವಿನ್ಯಾಸವನ್ನು ಆಮದು ಮಾಡಲಾಗಿದ್ದು, ಬೈಕಿನ ಮುಂಭಾಗದ ಕೊನೆಯಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಹೆಡ್ ಲೈಟ್ಅನ್ನು ಹೊಂದಿದೆ.

ಆಟೋ ಎಕ್ಸ್ ಪೋ 2018: ಬಿಡುಗಡೆಯಾದ ಯಮಹಾ ವೈಝೆಡ್ಎಫ್-ಆರ್15 ವಿ3.0 ಬೈಕ್

ಹಾಗೆಯೆ ಬೈಕಿನ ಟೈಲ್ ವಿಭಾಗವು ಹೊಸ ಟೈಲ್ ಲೈಟ್ ಮತ್ತು ಟೈರ್ ಹಗ್ಗರ್ ಅನ್ನು ಅಳವಡಿಸಲಾಗಿದ್ದು, ಹೊಸ ವೈಝೆಡ್ಎಫ್-ಆರ್15 ವಿ3.0 ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನೊಂದಿಗೆ ಗೇರ್ ಪೊಸಿಷನ್ ಮತ್ತು 18 ಪಾರಾಮಿಟರ್ ಡಿಸ್‌ಪ್ಲೆಯನ್ನು ಜೋಡಿಸಲಾಗಿದೆ.

ಆಟೋ ಎಕ್ಸ್ ಪೋ 2018: ಬಿಡುಗಡೆಯಾದ ಯಮಹಾ ವೈಝೆಡ್ಎಫ್-ಆರ್15 ವಿ3.0 ಬೈಕ್

ಈ ಹೊಸ ಮಫ್ಲರ್ ಡಿಸೈನ್ ಈ ಬೈಕಿಗೆ ಆಕರ್ಷಕವಾದ ಲುಕ್ ನೀಡಿದ್ದು, ಬೈಕಿನ ಸುರಕ್ಷತೆಗಾಗಿ ಮುಂಭಾಗದ ಫೋರ್ಕ್ ತಲೆಕೆಳಗಾಗಿ ಮತ್ತು ಫ್ರಂಟ್ ಡಿಸ್ಕ್ ಬ್ರೇಕ್ ಸುರಕ್ಷತೆಯ ಫೀಚರ್ ಅನ್ನು ಪಡೆದಿದೆ.

ಆಟೋ ಎಕ್ಸ್ ಪೋ 2018: ಬಿಡುಗಡೆಯಾದ ಯಮಹಾ ವೈಝೆಡ್ಎಫ್-ಆರ್15 ವಿ3.0 ಬೈಕ್

ಎಂಜಿನ್ ಸಾಮರ್ಥ್ಯ

ಹೊಸದಾಗಿ ಬಿಡುಗಡೆಗೊಂಡ 2018ರ ವೈಝೆಡ್ಎಫ್-ಆರ್15 ವಿ3.0 ಬೈಕ್‌ಗಳು 155-ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಮತ್ತು ಆಯ್ಕೆ ರೂಪದಲ್ಲಿ ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಹೊಂದಿರಲಿದೆ. ಇದರಲ್ಲಿ 6-ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದ್ದು, 19.03-ಬಿಹೆಚ್ ಪಿ, 15-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಆಟೋ ಎಕ್ಸ್ ಪೋ 2018: ಬಿಡುಗಡೆಯಾದ ಯಮಹಾ ವೈಝೆಡ್ಎಫ್-ಆರ್15 ವಿ3.0 ಬೈಕ್

ಲಭ್ಯವಿರುವ ಬಣ್ಣಗಳು

ವೈಝೆಡ್ಎಫ್-ಆರ್15 ವಿ3.0 ಬೈಕ್ ರೇಸಿಂಗ್ ಬ್ಲೂ ಮತ್ತು ಥಂಡರ್ ಗ್ರೇ ಎಂಬ ಎರಡು ಬಣ್ಣಗಳಲ್ಲಿ ದೊರೆಯಲಿದ್ದು, ಹೊಸದಾಗಿ ನವೀಕರಿಸಲಾದ ಆರ್15 ಪ್ರಮುಖ ಲಕ್ಷಣವೆಂದರೆ ಆರ್1 ಬೈಕಿಗೆ ಹೋಲುವ ಮುಖಭಾಗ.

ಆಟೋ ಎಕ್ಸ್ ಪೋ 2018: ಬಿಡುಗಡೆಯಾದ ಯಮಹಾ ವೈಝೆಡ್ಎಫ್-ಆರ್15 ವಿ3.0 ಬೈಕ್

ಈ ಬೈಕಿನ ಹಲಾವರು ಫೀಚರ್ಸ್ ಆರ್6 ಮತ್ತು ಆರ್1 ಬೈಕಿಗೆ ಹೋಲಿಕೆ ಇದ್ದು, ವೈಝೆಡ್ಎಫ್-ಆರ್15 ವಿ3.0 ಬೈಕ್‌ನಲ್ಲಿ ಬಳಸಲಾಗಿರುವ 155ಸಿಸಿ ಎಂಜಿನ್ ಇದರಲ್ಲಿ ಗಮನಿಸಬೇಕಾಗಿದೆ.

Most Read Articles

Kannada
English summary
Yamaha YZF-R15 V3.0 Launched At Rs 1.25 Lakh - Specifications, Features & Images.
Story first published: Wednesday, February 7, 2018, 20:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X