ಆರ್‌ಎಕ್ಸ್100 ಬೈಕ್‌ಗಳಿಗೆ ಮರುಜೀವ ನೀಡಲು ಮುಂದಾದ ಯಮಹಾ.!

ಭಾರತದಲ್ಲಿ ಸದ್ಯ ಹಳೆಯ ಬೈಕ್ ಬ್ರಾಂಡ್‌ಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಮರುಬಿಡುಗಡೆಗೊಳಿಸುವ ಹಲವು ಮಹತ್ವದ ಯೋಜನೆಗಳು ಜಾರಿಯಲ್ಲಿದ್ದು, ಇದೀಗ ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಯಾದ ಯಮಹಾ ಕೂಡಾ ತನ್ನ ಅಚ್ಚುಮೆಚ್ಚಿನ ಬೈಕ್ ಮಾದರಿಯಾದ ಆರ್‌ಎಕ್ಸ್100 ಬೈಕಿಗೆ ಮರುಜೀವ ನೀಡುವ ಯೋಜನೆಗೆ ಚಾಲನೆ ನೀಡಲು ಮುಂದಾಗಿದೆ.

ಆರ್‍‌ಎಕ್ಸ್100 ಬೈಕ್‌ಗಳಿಗೆ ಮರುಜೀವ ನೀಡಲು ಮುಂದಾದ ಯಮಹಾ.!

ಬೈಕ್ ಪ್ರಿಯರ ಹಾಟ್ ಫೆವರಿಟ್ ಎಂದೇ ಖ್ಯಾತಿ ಹೊಂದಿರುವ ಯಮಹಾ ಆರ್‌ಎಕ್ಸ್100 ಬೈಕ್‌ಗಳು ಮಾರಾಟಕ್ಕೆ ಲಭ್ಯವಿಲ್ಲವಾದರೂ ಈಗಲೂ ಕೂಡಾ ತನ್ನ ಬೇಡಿಕೆ ಕಳೆದುಕೊಂಡಿಲ್ಲ. ಹೀಗಿರುವಾಗ ಯಮಹಾ ಸಂಸ್ಥೆ ಮಾತ್ರ ಆರ್‌ಎಕ್ಸ್100 ಮರುಬಿಡುಗಡೆಗೆ ಇಷ್ಟು ದಿನಗಳ ಕಾಲ ಹಿಂದೇಟು ಹಾಕುತ್ತಲೇ ಬಂದಿತ್ತು. ಆದ್ರೆ ಬದಲಾದ ಮಾರುಕಟ್ಟೆ ಸನ್ನಿವೇಶದಲ್ಲಿ ಆರ್‌ಎಕ್ಸ್100 ಬೈಕ್‌ಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಮರುಬಿಡುಗಡೆಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ.

ಆರ್‍‌ಎಕ್ಸ್100 ಬೈಕ್‌ಗಳಿಗೆ ಮರುಜೀವ ನೀಡಲು ಮುಂದಾದ ಯಮಹಾ.!

ಆರ್‌ಎಕ್ಸ್100 ಬೈಕ್ ಮರುಬಿಡುಗಡೆಗೊಳಿಸುವ ಕುರಿತಂತೆ ಎಕಾಮಿಕ್ಸ್ ಟೈಮ್ಸ್ ಜೊತೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಯಮಹಾ ಇಂಡಿಯಾ ನೂತನ ಸಾರಥಿಯಾಗಿರುವ ಮೊಟೊಫುಮಿ ಶಿತಾರಾ ಅವರು, ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕೆಲವು ಮಹತ್ತರ ಬದಲಾವಣೆ ಮಾಡುತ್ತಿರುವುದಾಗಿ ಸುಳಿವು ನೀಡಿದ್ದಾರೆ.

ಆರ್‍‌ಎಕ್ಸ್100 ಬೈಕ್‌ಗಳಿಗೆ ಮರುಜೀವ ನೀಡಲು ಮುಂದಾದ ಯಮಹಾ.!

ಇದೇ ವೇಳೆ ಆರ್‌ಎಕ್ಸ್100 ಮರುಬಿಡುಗಡೆ ಕುರಿತಂತೆ ಮಹತ್ವದ ಮಾಹಿತಿ ಹಂಚಿಕೊಂಡ ಮೊಟೊಫುಮಿ ಶಿತಾರಾ ಅವರು, ಯಮಹಾ ಸಂಸ್ಥೆಯು ಬೈಕ್ ವಿಭಾಗದಲ್ಲಿ 150ಸಿಸಿ ಮೇಲ್ಪಟ್ಟ ಉತ್ಪನ್ನಗಳಿಗೆ ಹೆಚ್ಚಿನ ಗಮನಹರಿಸುತ್ತಿದ್ದು, ಮರುಬಿಡುಗಡೆಯ ಪಟ್ಟಿಯಲ್ಲಿರುವ ಆರ್‌ಎಕ್ಸ್100 ಮಾದರಿಯು ಬಿಡುಗಡೆಯಾದ್ರೆ ಪ್ರೀಮಿಯಂ ವೈಶಿಷ್ಟ್ಯತೆಗಳನ್ನು ಹೊಂದಿರಲಿವೆ ಎಂದಿದ್ದಾರೆ.

ಆರ್‍‌ಎಕ್ಸ್100 ಬೈಕ್‌ಗಳಿಗೆ ಮರುಜೀವ ನೀಡಲು ಮುಂದಾದ ಯಮಹಾ.!

ಹಾಗೆಯೇ ಮಾರುಕಟ್ಟೆಯಲ್ಲಿ ಪ್ರೀಮಿಯಂ ಮಾದರಿಯ ಬೈಕ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಆರ್‌ಎಕ್ಸ್100 ಮಾದರಿಯನ್ನು ಈ ಹಿಂದಿನ ಸೌಲಭ್ಯಗಳೊಂದಿಗೆ ಮರುಬಿಡುಗಡೆ ಮಾಡುವುದು ಅಸಾಧ್ಯ ಎನ್ನುವುದು ಎನ್ನುವುದು ಯಮಹಾ ಸಂಸ್ಥೆಯ ಲೆಕ್ಕಾಚಾರ.

ಆರ್‍‌ಎಕ್ಸ್100 ಬೈಕ್‌ಗಳಿಗೆ ಮರುಜೀವ ನೀಡಲು ಮುಂದಾದ ಯಮಹಾ.!

ಇದಕ್ಕೆ ಕಾರಣ, ಈ ಹಿಂದಿನ ಯಮಹಾ ಆರ್‌ಎಕ್ಸ್100 ಬೈಕ್ ಮಾದರಿಯು 2-ಸ್ಟೋಕ್ ಎಂಜಿನ್‌ನೊಂದಿಗೆ ರಸ್ತೆಗಳಲ್ಲಿ ಭಾರೀ ಸದ್ದು ಮಾಡಿದ್ದರು ಸಹ ಇದೀಗ ಅದು ಅಸಾಧ್ಯದ ಮಾತು. ಮಾರುಕಟ್ಟೆಯಲ್ಲಿ ಸದ್ಯ 4-ಸ್ಟೋಕ್ ಎಂಜಿನ್‌ಗಳಿಗೆ ಮಾತ್ರವೇ ಅವಕಾಶವಿದ್ದು, ಒಂದು ವೇಳೆ ಆರ್‌ಎಕ್ಸ್100 ಮರುಬಿಡುಗಡೆಯಾದ್ರು ಈ ಹಿಂದಿನ ಬೈಕ್ ಸೌಂಡ್ ಇನ್ಮುಂದೆ ಕೇಳಲು ಸಾಧ್ಯವಿಲ್ಲ.

ಆರ್‍‌ಎಕ್ಸ್100 ಬೈಕ್‌ಗಳಿಗೆ ಮರುಜೀವ ನೀಡಲು ಮುಂದಾದ ಯಮಹಾ.!

ಇದರಿಂದ ಮರುಬಿಡುಗಡೆಯಾಗಲಿರುವ ಆರ್‌ಎಕ್ಸ್100 ಬೈಕ್ ಎಂಜಿನ್‌ನಲ್ಲಿ ಸಾಕಷ್ಟು ಬದಲಾವಣೆಯಾಗಲಿದ್ದು, ಒಂದು ವೇಳೆ ಹೆಚ್ಚಿನ ಮಟ್ಟದ ಎಂಜಿನ್‌ನೊಂದಿಗೆ ಮರುಬಿಡುಗಡೆಗೊಂಡರು ಸಹ ಬೈಕ್ ಬೆಲೆಗಳಲ್ಲಿ ಮತ್ತಷ್ಟು ಹೆಚ್ಚಳವಾಗಲಿವೆ.

ಆರ್‍‌ಎಕ್ಸ್100 ಬೈಕ್‌ಗಳಿಗೆ ಮರುಜೀವ ನೀಡಲು ಮುಂದಾದ ಯಮಹಾ.!

ಮಾಹಿತಿ ಪ್ರಕಾರ, ಮರುಬಿಡುಗಡೆಗೊಳ್ಳಲಿರುವ ಯಮಹಾ ಆರ್‌ಎಕ್ಸ್ 100 ಬೈಕ್‌ಗಳು ಮೇಲ್ಭಾಗದಲ್ಲಿ ಹಳೆಯ ವಿನ್ಯಾಸಗಳನ್ನು ಹೊಂದಿದರೂ ಸಹ, ಎಂಜಿನ್ ಮತ್ತು ಪರ್ಫಾಮೆನ್ಸ್ ವಿಭಾಗದಲ್ಲಿ ಸಾಕಷ್ಟು ಬದಲಾವಣೆಯಾಗಲಿವೆ.

ಆರ್‍‌ಎಕ್ಸ್100 ಬೈಕ್‌ಗಳಿಗೆ ಮರುಜೀವ ನೀಡಲು ಮುಂದಾದ ಯಮಹಾ.!

ಒಂದು ವೇಳೆ ಹೊಸ ಬೈಕ್ ಮಾದರಿಯು 125ಸಿಸಿ ಅಥವಾ 150ಸಿಸಿ ಎಂಜಿನ್‌ನೊಂದಿಗೆ ಸಾಮಾನ್ಯ ವಿನ್ಯಾಸಗಳೊಂದಿಗೆ ಮರುಬಿಡುಗಡೆಗೊಂಡಿದ್ದೇ ಆದಲ್ಲಿ ಆರ್‌ಎಕ್ಸ್100 ಬೈಕ್‌ಗಳಿಗೆ ಮತ್ತಷ್ಟು ಪೈಪೋಟಿ ಶುರುವಾಗಲಿದ್ದು, ಇದೇ ಕಾರಣಕ್ಕೆ ಬೆಲೆ ದುಬಾರಿಯಾದ್ರು ಚಿಂತೆಯಿಲ್ಲ ಪ್ರೀಮಿಯಂ ಸೌಲಭ್ಯಗಳೊಂದಿಗೆ ಮರುಬಿಡುಗಡೆ ಮಾಡಬೇಕೆಂಬುವುದು ಯಮಹಾ ಯೋಜನೆಯಾಗಿದೆ.

Source: Economictimes

ಆರ್‍‌ಎಕ್ಸ್100 ಬೈಕ್‌ಗಳಿಗೆ ಮರುಜೀವ ನೀಡಲು ಮುಂದಾದ ಯಮಹಾ.!

ಹೀಗಿರುವಾಗ ಆರ್‌ಎಕ್ಸ್100 ಮಾಡಿಫೈಗೆ ಭಾರೀ ಬೇಡಿಕೆಯಿದ್ದು, ಬೈಕ್ ಪ್ರಿಯರ ಬೇಡಿಕೆಯೆಂತೆ ಮಾಡಿಫೈಗೊಳಿಸಲಾದ ಬೈಕ್‌ಗಳಿಗೆ ಇದೀಗ ಹೆಚ್ಚು ಟ್ರೆಂಡ್ ಆಗುತ್ತಿದೆ. ಇದರಲ್ಲಿ ತೆಲಂಗಾಣ ಮೂಲದ ಮಾಡಿಫೈ ಬೈಕ್ ಸಂಸ್ಥೆಯೊಂದು ಸಿದ್ದಗೊಳಿಸಿರುವ ಗನ್‌ಮೆಟಲ್ ಆರ್‌ಎಕ್ಸ್100 ಮಾದರಿಯ ಡಿಸೈನ್‌ ಬೈಕ್ ಪ್ರಿಯರ ಮೆಚ್ಚುಗೆಗೆ ಕಾರಣವಾಗಿದೆ.

MOST READ: ಜಾವಾ ನಂತರ ಯಜ್ಡಿ ಬೈಕ್‌‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!

ಆರ್‍‌ಎಕ್ಸ್100 ಬೈಕ್‌ಗಳಿಗೆ ಮರುಜೀವ ನೀಡಲು ಮುಂದಾದ ಯಮಹಾ.!

ಹೀಗಿರುವಾಗ ಆರ್‌ಎಕ್ಸ್100 ಮಾಡಿಫೈಗೆ ಭಾರೀ ಬೇಡಿಕೆಯಿದ್ದು, ಬೈಕ್ ಪ್ರಿಯರ ಬೇಡಿಕೆಯೆಂತೆ ಮಾಡಿಫೈಗೊಳಿಸಲಾದ ಬೈಕ್‌ಗಳಿಗೆ ಇದೀಗ ಹೆಚ್ಚು ಟ್ರೆಂಡ್ ಆಗುತ್ತಿದೆ. ಇದರಲ್ಲಿ ತೆಲಂಗಾಣ ಮೂಲದ ಮಾಡಿಫೈ ಬೈಕ್ ಸಂಸ್ಥೆಯೊಂದು ಸಿದ್ದಗೊಳಿಸಿರುವ ಗನ್‌ಮೆಟಲ್ ಆರ್‌ಎಕ್ಸ್100 ಮಾದರಿಯ ಡಿಸೈನ್‌ ಬೈಕ್ ಪ್ರಿಯರ ಮೆಚ್ಚುಗೆಗೆ ಕಾರಣವಾಗಿದೆ.

ಆರ್‍‌ಎಕ್ಸ್100 ಬೈಕ್‌ಗಳಿಗೆ ಮರುಜೀವ ನೀಡಲು ಮುಂದಾದ ಯಮಹಾ.!

ಕಂಪ್ಯೂಟರ್ ಪೇಟಿಂಗ್ ಸೌಲಭ್ಯವನ್ನು ಹೊಂದಿರುವ ಈ ಮಾಡಿಫೈ ಬೈಕ್ ಮಾದರಿಯು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಆಸಕ್ತ ಗ್ರಾಹಕರಿಗಾಗಿ ತಮ್ಮಲ್ಲಿರುವ ಆರ್‌ಎಕ್ಸ್100 ಬೈಕ್‌ಗಳಿಗೆ ಹೊಸರೂಪ ನೀಡುತ್ತಿದೆ.

MOST READ: ಕಳೆದ ವರ್ಷ ಕಿಸೆಯಲ್ಲಿ 5 ಸಾವಿರ ಇಲ್ಲ ಎಂದಿದ್ದ ಈ ನಟ ಇವತ್ತು 4 ಕೋಟಿ ಮೌಲ್ಯದ ಕಾರಿನ ಒಡೆಯ

ಆರ್‍‌ಎಕ್ಸ್100 ಬೈಕ್‌ಗಳಿಗೆ ಮರುಜೀವ ನೀಡಲು ಮುಂದಾದ ಯಮಹಾ.!

ಮಾಡಿಫೈಗಾಗಿ 55 ಸಾವಿರ ಖರ್ಚು..!

ಹೌದು, ಗನ್‌ಮೆಟಲ್ ಬಾಡಿ ಕಿಟ್ ಹೊಂದಿರುವ ಈ ಆರ್‌ಎಕ್ಸ್100 ಬೈಕ್ ಮಾದರಿಯ ಮಾಡಿಫೈಗಾಗಿ ಬರೋಬ್ಬರಿ ರೂ. 55 ಸಾವಿರ ಖರ್ಚು ಮಾಡಲಾಗಿದ್ದು, ಬೈಕಿನ ಪ್ರತಿ ತಾಂತ್ರಿಕ ಸೌಲಭ್ಯವನ್ನು ಇಲ್ಲಿ ಬದಲಾವಣೆಗೊಳಿಸಲಾಗುತ್ತೆ.

ಪೇಟಿಂಗ್ ಫ್ರಮ್ ಸಿಎಂ ಎನ್ನುವ ಮಾಡಿಫೈ ಡಿಸೈನ್ ಸಂಸ್ಥೆಯು ಸಿದ್ದಗೊಳಿಸಿರುವ ಮಾಡಿಫೈ ಬೈಕ್ ಇಲ್ಲಿದೆ ನೋಡಿ.

Most Read Articles

Kannada
Read more on yamaha ಯಮಹಾ
English summary
Yamaha RX100 character will be back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X